karaga

madikeri karaga dasara

ನಗರದ 4 ಶಕ್ತಿ ದೇವತೆಗಳ ಕುರಿತು ಇತಿಹಾಸದ ಪುಟಗಳಲ್ಲಿ ಉಲ್ಲೇಖವಿದೆ. ಆದರೂ ಸ್ಪಷ್ಟ ಮಾಹಿತಿ ಲಭ್ಯವಿಲ್ಲ, ಲಭ್ಯಮಾಹಿತಿ ಪ್ರಕಾರ ಕೊಡಗನ್ನು ಆಳುತ್ತಿದ್ದಂತಹ ರಾಜ ಮನೆತನದವರು ತಮ್ಮ ಆಡಳಿತ ಸುಸೂತ್ರವಾಗಿ ನಡೆಸಲು ತಮಿಳುನಾಡಿನಿಂದ ಶಕ್ತಿ ದೇವತೆಗಳನ್ನು ಕರೆತಂದು ನಗರದಲ್ಲಿ ಪ್ರತಿಷ್ಠಾಪಿಸಿದರು, ಮಾತ್ರವಲ್ಲದೆ ಈ ದೇವರ ಪೂಜಾ ಕಾರ್ಯ ನೆರವೇರಿಸಲು ಗೌಳಿ(ಯಾದವ ಜನಾಂಗ) ಜನಾಂಗದ ಪೂಜಾರಿ ಕುಟುಂಬದವರಿಗೆ ಅವಕಾಶ ನೀಡಿದರು. ಅದು ಇಂದಿಗೂ ವಂಶಪಾರಂಪರ್ಯವಾಗಿ ಮುಂದುವರಿಯುತ್ತಿದೆ. ಪಾರ್ವತಿ ದೇವಿಯ ಅಂಶವೆನ್ನಲಾಗುವ 4 ಶಕ್ತಿ ದೇವತೆಗಳ ಹಿರಿಯಕ್ಕ ನಗರದ ಮತ್ತು ಪ್ರಜೆಗಳ ರಕ್ಷಣೆ ಮಾಡುವ ಕುಂದುರು ಮೊಟ್ಟೆ ಶ್ರೀ ಚೌಟಿಮಾರಿಯಮ್ಮ, ಇನ್ನೊಂದು ಸಹೋದರಿಯಾದ ದಂಡಿನ ಮಾರಿಯಮ್ಮ ಸೈನಿಕರ ರಕ್ಷಣೆ, ಶಸ್ತ್ರಾಸ್ತ್ರ ರಕ್ಷಣೆ ಮತ್ತು ಜಯ, ಕೋಟೆಯ ರಕ್ಷಣೆಗೆಂದು ಕೋಟೆಮಾರಿಯಮ್ಮ ದೇವಿಯು, ಹಾಗೂ ಐಶ್ವರ್ಯ ಮತ್ತು ಆರೋಗ್ಯವನ್ನು ನೀಡಲು ಕಂಚಿಕಾಮಾಕ್ಷಿ ದೇವಿಯನ್ನು ಪ್ರತಿಷ್ಠಾಪಿಸಲಾಯಿತು.
ಮಹಾಲಯ ಅಮಾವಾಸ್ಯೆ ಮರುದಿನ ಸಾಂಪ್ರದಾಯಿಕ ಕರಗ ಪೂಜೆಯೊಂದಿಗೆ ಮಡಿಕೇರಿ ದಸರಾಕ್ಕೆ ವಿದ್ಯುಕ್ತ ಚಾಲನೆ ದೊರೆಯುತ್ತದೆ. ಅಂದು ನಾಲ್ಕು ಕರಗಗಳು ಪೇಟೆ ಶ್ರೀರಾಮಮಂದಿರಕ್ಕೆ ಬಂದು ಪೂಜೆ ಸಲ್ಲಿಸುತ್ತದೆ. ಕರಗ ದೇವತೆಗಳು ನವರಾತ್ರಿ ಸಂದರ್ಭ 5 ದಿನಗಳ ಕಾಲ ನಗರ ಸಂಚಾರ ಮಾಡುತ್ತವೆ. ಕೊನೆಗೆ ವಿಜಯ ದಶಮಿಯಂದು ದಶಮಂಟಪಗಳ ಜೊತೆಗೂಡಿ ಬನ್ನಿಮಂಟಪಕ್ಕೆ ತೆರಳಿ ಬನ್ನಿ ಕಡಿಯುವ ಮೂಲಕ ದಸರಾ ಉತ್ಸವಕ್ಕೆ ಮಂಗಳ ಹಾಡಲಾಗುವುದು.
ಕರಗವನ್ನು ಸಿಂಗರಿಸುವ ಬಗ್ಗೆ:- ಒಂದು ತಾಮ್ರದ ಬಿಂದಿಗೆಯಲ್ಲಿ ಮೊದಲು ಮರಳನ್ನು ತುಂಬಿಸಲಾಗುತ್ತದೆ. ಮಾತ್ರವಲ್ಲದೆ ದೇವಿಗೆ ಅಗತ್ಯವಾದ ಕಪ್ಪು ಬಳೆ, ಕರಿಮಣಿ, ಅರಿಶಿಣ-ಕುಂಕುಮ, ಎಲೆ ಅಡಿಕೆ, ಕಾಡೋಲೆ ಮತ್ತು ಒಂದು ಕಾಲು ರುಪಾಯಿ ಕಾಣಿಕೆ ಸಹ ಇರುತ್ತದೆ. ಅದರ ಮೇಲೆ ತೆಂಗಿನಕಾಯಿ, ವೀಳ್ಯದೆಲೆ, ಮಾವಿನ ಎಲೆಗಳಿಂದ ಕೂಡಿದ ಕಳಶ, ಮೇಲ್ಭಾಗದಲ್ಲಿ ದೇವಿಯರ ಮುಖವಾಡ ಪ್ರಭಾವಳಿ ಇದ್ದರೆ, ತುದಿಯಲ್ಲಿ ಪುಟ್ಟ ಬೆಳ್ಳಿ ಕೊಡೆ ಇರುತ್ತದೆ. ಕರಗವನ್ನು ಮಲ್ಲಿಗೆ, ಸೇವಂತಿಗೆ, ಕನಕಾಂಬರ ಮತ್ತು ಗುಲಾಬಿ ಹೂವುಗಳಿಂದ ಅಲಂಕರಿಸಲಾಗುತ್ತದೆ. ಕರಗ ಹೊರುವವರ ಕೈಯಲ್ಲಿ ಬೆತ್ತ ಮತ್ತು ಕಠಾರಿ ಇರುತ್ತದೆ. ಬೆತ್ತದಲ್ಲಿ ವಿಶಿಷ್ಟ ಶಕ್ತಿಯಿದ್ದು ಇದರ ಸ್ಪರ್ಶದಿಂದ ಸಂಕಷ್ಟಗಳು ನಿವಾರಣೆಯಾಗುತ್ತದೆÀ ಎಂಬ ನಂಬಿಕೆಯಿದೆ.
ಶ್ರೀ ಕಂಚಿಕಾಮಾಕ್ಷಿ ದೇವಾಲಯದಲ್ಲಿ ಅಪರೂಪದ ಶಕ್ತಿ ಕರಗವಿದೆ. ಈ ಕರಗವು 11 ತಾಮ್ರದ ಬಿಂದಿಗೆಗಳಿಂದ ಕೂಡಿರುತ್ತದೆ. ದೇವಾಲಯದಲ್ಲಿ ಕೆಲ ವರ್ಷಗಳ ಹಿಂದೆ ವಿಶೇಷ ಕರಗೋತ್ಸವದ ಸಂದರ್ಭದಲ್ಲಿ ಈ ಶಕ್ತಿ ಕರಗವನ್ನು ಹೊರುತ್ತಿದ್ದರು. ಈಗ ಈ ಶಕ್ತಿ ಕರಗವನ್ನು ಇತ್ತೀಚಿಗಿನ ಪೀಳಿಗೆಯವರಿಗೆ ಹೊರಲು ಅಸಾಧ್ಯವಾದರಿಂದ ಈ ತಾಮ್ರದ ಶಕ್ತಿ ಕರಗವು ದೇವಾಲಯದಲ್ಲಿದೆ.
ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

Comments are closed.