karavale Bhagavati

karavale Bhagavati
karavale Bhagavati.jgpg

ಮಹಿಷ ಮರ್ಧಿನಿ ದೇವಿಯು ಕೊಡಗಿನಲ್ಲಿಯೇ ಪ್ರಸಿದ್ಧವಾಗಿರುವಂತಹ ದೇವತೆ. ಕುಂದುರು ಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಿಗೂ ಮತ್ತು ಮಹಿಷ ಮರ್ಧಿನಿ ದೇವಿಗೂ ನಿಕಟ ಸಂಬಂಧವಿದೆ ಎಂಬುದು ಪ್ರತೀತಿ. ಮಡಿಕೇರಿಯಿಂದ ಅಬ್ಬಿ ಜಲಪಾತಕ್ಕೆ ಹೋಗುವ ಮಾರ್ಗದಲ್ಲಿರುವ ಭಗವತಿ ನಗರದಲ್ಲಿ ಈ ಪುರಾತನ ದೇಗುಲವಿದೆ. ಶ್ರೀ ಮಹಿಷ ಮರ್ಧಿನಿ ಮತ್ತು ಭಗವತಿ ತಾಯಿ ಇಬ್ಬರು ಜೊತೆಯಲ್ಲಿ ಸ್ಥಾಪಿತರಾಗಿದ್ದಾರೆ. ಇಲ್ಲಿನ ಗ್ರಾಮಸ್ಥರ ಹೇಳಿಕೆ ಪ್ರಕಾರ ಈ ದೇಗುಲದಲ್ಲಿ ಈ ಹಿಂದೆÉ ಮಹಿಷ ಮರ್ಧಿನಿ ದೇವಿ ಮಾತ್ರವಿದ್ದು, 2 ಶತಮಾನಗಳ ಹಿಂದೆ ಕರವಲೆ ಬಾಡಗದ 2 ಕುಟುಂಬಸ್ಥರು ಗಾಳಿಬೀಡು ಎಂಬಲ್ಲಿದ್ದ ಭಗವತಿ ದೇವಿಯನ್ನು ರಾತ್ರಿಯ ವೇಳೆ ತಂದು ಮಹಿಷ ಮರ್ಧಿನಿ ದೇಗುಲದಲ್ಲಿ ಅಂದರೆ ಮಹಿಷ ಮರ್ಧಿನಿ ದೇವಿಯ ವಿಗ್ರಹವಿರುವ ಎಡಭಾಗದಲ್ಲಿ ಭಗವತಿ ದೇವಿಯನ್ನು ಪ್ರತಿಷ್ಠಾಪಿಸಿದರು. ವರ್ಷಂಪ್ರತಿ ಮಾರ್ಚ್ ತಿಂಗಳಿನಲ್ಲಿ ವಾರ್ಷಿಕ ಪೂಜಾ ಮಹೋತ್ಸವವು ನಡೆಯುತ್ತದೆ. ಈ ಸಂದರ್ಭ ದೇವಿಯ ವಿಗ್ರಹವನ್ನು ಬ್ರಾಹ್ಮಣ ಅರ್ಚಕರು ತಲೆಯ ಮೇಲೆ ಹೊತ್ತು ನಾಡಿನವರ ದುಡಿಕೊಟ್ಟ್ ಪಾಟ್ ಹಾಗೂ ಚೆಂಡೆಯೊಂದಿಗೆ ಪ್ರದಕ್ಷಿಣೆ ಬರುತ್ತಾರೆ. ಮಾರನೆಯ ದಿನ ನಾಡಿನ ಭಕ್ತಾಧಿಗಳಿಂದ ಎತ್ತು ಪೋರಾಟದೊಂದಿಗೆ ದೊಡ್ಡ ಹಬ್ಬ ಪ್ರಾರಂಭವಾಗುತ್ತದೆ. ಈ ಸ್ಥಳದ ವಿಶೇಷÀವೆಂದರೆ ಭಗವತಿ ದೇವಿಯು ಗಾಳಿಬೀಡಿನಿಂದ ಬಂದ ಕಾರಣ ಭಗವತಿಯ ಆದಿ ಸ್ಥಳದಿಂದ ಹರಿದುಬರುವಂತಹ ನೀರಿನಿಂದಲೇ ತಾಯಿಯ ಜಳಕ ವಾಗಬೇಕೆಂಬುದು ಪ್ರತೀತಿ. ಇಲ್ಲಿ ವಾರ್ಷಿಕ ಉತ್ಸವದಲ್ಲಿ ಅಯ್ಯಪ್ಪ, ಸುಬ್ರಮಣ್ಯ, ಅಜ್ಜಪ್ಪ, ವಿಷ್ಣು ಮೂರ್ತಿ, ಪಡುಮಟ್ಟೆ ಚಾಮುಂಡಿ, ಭದ್ರಕಾಳಿ, ಮೈತಲಪ್ಪ ಗುಡಿಗಳಿವೆ. ಸುಮಾರು ಹದಿನೆಂಟು ವರ್ಷಗಳಿಂದ ಮಡಿಕೇರಿ ದಸರಾ ಮಹೋತ್ಸವದಲ್ಲಿ ದಶಮಂಟಪಗಳಲ್ಲಿ 10ನೇ ಮಂಟಪವಾಗಿ ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಲಿದೆ.
ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

Comments are closed.