ಕೊಡಗು ಸಹಕಾರ 🤝 Kodagu Sahakara
ಕೊಡಗಿನ ಸಹಕಾರ ಚಳುವಳಿಯ ದಾಖಲೆಗೊಂದು ವೇದಿಕೆ
"ಎಲ್ಲರಿಗಾಗಿ ನಾನು; ನನಗಾಗಿ ಎಲ್ಲರೂ" - ಇದು ಸಹಕಾರ ತತ್ವದ ಮುಖ್ಯ ಸಂದೇಶ.
ಸಹಕಾರ ಚಳುವಳಿಯ ಇತಿಹಾಸ 📜
ಏಷಿಯಾ ಖಂಡದಲ್ಲೇ ಮತ್ತು ಭಾರತದ ಎರಡನೇ ಹಾಗೂ ಕೊಡಗು ಜಿಲ್ಲೆಯ ಪ್ರಥಮ ಸಹಕಾರ ಸಂಘವು ಶಾಂತಳ್ಳಿಯ ತಲ್ತರೆ ಶೆಟ್ಟಳ್ಳಿಯಲ್ಲಿ ಸ್ಥಾಪಿಸಲ್ಪಟ್ಟಿತು.
ಸರ್ಚ್ ಕೂರ್ಗ್ ಸುದ್ದಿ ಅಪ್‌ಡೇಟ್ಸ್
ಕೊಡಗಿನ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮೊಂದಿಗೆ ಇರಿ
ಕೊಡಗು ಜಿಲ್ಲೆಯು ಸಹಕಾರಿ ಆಂದೋಲನವನ್ನು ಬೆಳೆಸುವಲ್ಲಿ ಶತಮಾನದಷ್ಟು ಹಳೆಯ ಇತಿಹಾಸವನ್ನು ಹೊಂದಿದೆ. ಕೃಷಿಯು ಕೊಡಗಿನ ಜನರ ಸಾಂಪ್ರದಾಯಿಕ ಉದ್ಯೋಗವಾಗಿರುವುದರಿಂದ ಸಹಕಾರಿ ವಲಯವು ಗ್ರಾಮೀಣ ಸಮುದಾಯದ ಆರ್ಥಿಕ ಉನ್ನತಿಗೆ ಅನುಕೂಲವನ್ನು ಮಾಡಿಕೊಟ್ಟಿದೆ.
ಆಧುನಿಕ ಕೃಷಿ ವಿಧಾನಗಳು, ವೈಜ್ಞಾನಿಕ ಕೃಷಿ ಮತ್ತು ಉತ್ತಮ ಮಾರುಕಟ್ಟೆ ಸಾಮರ್ಥ್ಯದೊಂದಿಗೆ ರೈತರನ್ನು ಸಬಲೀಕರಣಗೊಳಿಸುವಲ್ಲಿಯೂ ಸಹಕಾರ ಕ್ಷೇತ್ರವು ಪ್ರಮುಖ ಪಾತ್ರವನ್ನು ವಹಿಸಿದೆ. ಇಂದು ಕೊಡಗು ಸಹಕಾರಿ ವಲಯದಲ್ಲಿ ದೊಡ್ಡ ದೊಡ್ಡ ಯಶಸ್ವಿ ಸಂಸ್ಥೆಗಳ ನೆಲೆಯಾಗಿದೆ.
🌿 The cooperative sector has played a pivotal role in empowering farmers and boosting the rural economy of Kodagu.
ಸಹಕಾರಿ ಸಂಸ್ಥೆಗಳ ಒಂದು ಸಾಮಾನ್ಯ ವೇದಿಕೆ 🏛️
ಎಲ್ಲಾ ಸಹಕಾರಿ ಸಂಸ್ಥೆಗಳಿಗೆ ಸಾಮಾನ್ಯ ವೇದಿಕೆಯನ್ನು ಒದಗಿಸಲು ಮತ್ತು ಅಂತರ್ಜಾಲದಲ್ಲಿ ತಮ್ಮ ಮಾಹಿತಿಯನ್ನು ದಾಖಲಿಸಲು ಈ ಆನ್‌ಲೈನ್ ಡೈರೆಕ್ಟರಿಯನ್ನು ರಚಿಸಲಾಗಿದೆ. "ಕೊಡಗು ಸಹಕಾರ" ವೇದಿಕೆಯು ವಿವಿಧ ಸಹಕಾರಿ ಸಂಸ್ಥೆಗಳಿಗೆ ಮೀಸಲಾದ ಪುಟಗಳನ್ನು, ಅಧಿಕೃತ ಮತ್ತು ನವೀಕೃತ ಮಾಹಿತಿ ಹಾಗೂ ಸಂಸ್ಥೆಯ ಪ್ರೊಫೈಲ್ ಅನ್ನು ಒಳಗೊಂಡಿದೆ.

