Sri Bhagavathi Temple Napoklu, ನಾಪೋಕ್ಲು ಗ್ರಾಮದ ಶ್ರೀ ಭಗವತಿ ದೇವಸ್ಥಾನ

Sri Bhagavathi Temple Napoklu
ನಾಪೋಕ್ಲು ಗ್ರಾಮದ ಶ್ರೀ ಭಗವತಿ ದೇವಸ್ಥಾನ

ಪ್ರಾಸ್ತಾವಿಕ

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿರುವ ನಾಪೋಕ್ಲು ಗ್ರಾಮ ಒಂದು ಅಭಿವೃದ್ಧಿ ಹೊಂದುತ್ತಿರುವ ಪಟ್ಟಣವಾಗಿದೆ. ಇದೊಂದು ದೊಡ್ಡ ಗ್ರಾಮ ಪಂಚಾಯಿತಿಯೂ ಆಗಿದೆ. ಇಲ್ಲಿನ ಸ್ಥಳೀಯ ಆಡಳಿತವು ಗ್ರಾಮ ಪಂಚಾಯಿತಿಯ ಆಡಳಿತಕ್ಕೊಳಪಟ್ಟಿದೆ. ಈ ಗ್ರಾಮದಲ್ಲಿ ಹಲವಾರು ಧಾರ್ಮಿಕ ಕ್ಷೇತ್ರಗಳಿವೆ. ಇಂತಹ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಅತೀ ಪುರಾತನ ಅಂದರೆ 1000 ವರ್ಷಗಳಷ್ಟು ಹಳೆಯದಾದ ಗ್ರಾಮ ದೇವತೆ ಶ್ರೀ ಭಗವತಿ ದೇವರಾಗಿದೆ. ಶ್ರೀ ಭಗವತಿ ದೇವಾಲಯವು ನಾಪೋಕ್ಲು ಪಟ್ಟಣದಿಂದ ಹಳೆತಾಲೂಕು ಮಾರ್ಗವಾಗಿ, ನೆಲಜಿ, ಬಲ್ಲಾಮಾವಟಿ, ಅಯ್ಯಂಗೇರಿ, ಭಾಗಮಂಡಲ, ಮಾರ್ಗದಲ್ಲಿ ಇದೆ. ನಾಪೋಕ್ಲು ಪಟ್ಟಣದಿಂದ 3 ಕಿ.ಮೀ.ದೂರದಲ್ಲಿದೆ. ಶ್ರೀ ಭಗವತಿ ದೇವಾಲಯವು ನಾಡಿನ ಶಕ್ತಿ ಪೀಠವಾಗಿ ಜನತೆಯ ಆರಾಧ್ಯ ದೈವವಾಗಿದೆ.

ಇತಿಹಾಸ ಹಿನ್ನಲೆ

ಶ್ರೀ ಭಗವತಿ ದೇವಾಲಯವು 2015-16ರಲ್ಲಿ ಜೀರ್ಣೋದ್ಧಾರಗೊಂಡು, ಕಲ್ಲಿನ ಕೆತ್ತನೆ, ಮರದ ಕೆತ್ತನೆ, ತಾಮ್ರದ ಮೇಲ್ಛಾವಣÉಯೊಂದಿಗೆ ಸುಂದರ ರೂಪ ಪಡೆದು ಕಂಗೊಳಿಸುತ್ತಿದೆ. ಈ ದೇವಾಲಯವು 2015-16ವರೆಗೆ ಜೀರ್ಣೊದ್ಧಾರಗೊಳ್ಳುವವರೆಗೂ ಸ್ಥಳೀಯ ಜನರಲ್ಲಿ 400-500ವರ್ಷಗಳ ಹಿತಿಹಾಸ ವಿರಬಹುದೆಂದು ನಂಬಿದ್ದರು. ಆದರೆ ದೇವಾಲಯದ ಜೀರ್ಣೊದ್ಧಾರ ಸಮಯದಲ್ಲಿ ಮಣ್ಣಿನಡಿಯಲ್ಲಿ ದೊರೆತ ಮಲೆಯಾಳಂ ಭಾಷೆಯಲ್ಲಿ ಬರೆದಿರುವ ಒಂದು ಕಲ್ಲಿನ ಶಿಲಾನ್ಯಾಸದಲ್ಲಿ 1000ವರ್ಷಗಳಿಗೂ ಮೀರಿ ಈ ದೇವಾಲಯವು ಸ್ಥಾಪನೆಗೊಂಡ ಬಗ್ಗೆ ವಿವರಗಳು ಲಭ್ಯವಾಗಿದ್ದು, ಈ ಕಾರಣಗಳಿಂದ ನಾಪೋಕ್ಲು ಶ್ರೀ ಭಗವತಿ ದೇವಾಲಯಕ್ಕೆ ಸಾವಿರಾರು ವರ್ಷಗಳ ಇತಿಹಾಸವಿರುವುದು ಧೃಢಪಟ್ಟಿದೆ.
ಶ್ರೀ ಭಗವತಿ ದೇವರ ಅನುಗ್ರಹದಿಂದ ವಾರ್ಷಿಕ ಹಬ್ಬದ ಕೊನೆಯ ದಿನ ವರ್ಷಂಪ್ರತಿ ಇಲ್ಲಿಯವರೆಗೂ, ಮಳೆ ಬಂದು ಭೂಮಿಯನ್ನ ತಂಪಾಗಿಸುವುದು ಒಂದು ದೈವಾನುಗ್ರಹವೆ ಸರಿ, ಎಂದು ದೇವಾಲಯದ ಹಿರಿಯ ಮುಖಂಡರು ತಮ್ಮ ಸಂತಸವನ್ನು ಹೇಳಿಕೊಳ್ಳುತ್ತಾರೆ. ಈ ದೇವಿಯ ಅನುಗ್ರಹದಿಂದ ಮಳೆ-ಬೆಳೆ ಸಮೃದ್ಧಿಗೊಂಡು ನಾಡಿನ ಜನತೆ ಎಷ್ಟೇ ಕಷ್ಟ-ಕಾರ್ಪಣ್ಯಗಳಿದ್ದರೂ, ನೆಮ್ಮದಿಯ ಬಾಳನ್ನು ನಡೆಸುತ್ತಿದ್ದಾರೆ.

ಜೀರ್ಣೊದ್ಧಾರ

ಶ್ರೀಭಗವತಿ ದೇವಾಲಯವು 2015-16ರಲ್ಲಿ ಜೀರ್ಣೊದ್ಧಾರಗೊಂಡು, ದೇವಾಲಯದ ಕಲ್ಲಿನ ಕೆತ್ತನೆಯನ್ನು ಕಾರ್ಕಳದ ವೇಲುಸ್ವಾಮಿ ಮತ್ತು ತಂಡದವರು ನಿರ್ವಹಿಸಿದ್ದಾರೆ. ಮರದ ಕೆತ್ತನೆಯನ್ನು ಕಾರ್ಕಳದ ರಾಜಶೇಖರ್ ಮತ್ತು ತಂಡದವರು ನಿರ್ವಹಿಸಿದ್ದಾರೆ. ದೇವಾಲಯದ ತಾಮ್ರದ ತಗಡಿನ ಮೇಲ್ಛಾವಣಿಯನ್ನು ಉಜಿರೆಯ ಪದ್ಮನಾಭ ಮತ್ತು ತಂಡದವರು ನಿರ್ವಹಿಸಿದ್ದಾರೆ. ದೇವಾಲಯದ ವಾಸ್ತು ಮತ್ತು ಅಷ್ಟಮಂಗಲ ಪ್ರಶ್ನೆಯನ್ನು ಕೇರಳದ ಪಯ್ಯನ್ನೂರು ಬಳಿಯ ಕಾಳೆಘಾಟುವಿನ ನಾರಾಯಣ ತಂತ್ರಿ ಮತ್ತು ಬಳಗದವರು ನಿರ್ವಹಿಸಿದ್ದಾರೆ. ಹರಕೆಯ ರೂಪದಲ್ಲಿ ಎಣ್ಣೆ, ಕಾಫಿ, ಒಳ್ಳೆಮೆಣಸು, ವಸ್ತು ರೂಪದಲ್ಲಿಯೂ ಧನ ಸಹಾಯವನ್ನು ಜನತೆ ನೀಡುತ್ತಾರೆ. ಈ ದೇವಾಲಯವು 1 ಏಕರೆ 38 ಸೆಂಟ್ ವಿಸ್ತೀರ್ಣದಲ್ಲಿ ನೆಲೆ ನಿಂತಿದೆ. ಇದರಲ್ಲಿ 1 ದೇವರ ಕೆರೆ, 2 ಸಮೂದಾಯ ಭವನಗಳು, ಅರ್ಚಕರ ಮನೆ, ಇದರಲ್ಲಿ ಒಳಗೊಂಡಿದೆ.

 

ವಾರ್ಷಿಕ ಹಬ್ಬ ಜಾತ್ರೆಗಳು

ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ವಾರ್ಷಿಕ ಹಬ್ಬವು 17ರಿಂದ 21ರವರೆಗೆ (5ದಿನ)ಗಳ ಕಾಲ ನಡೆಯುತ್ತದೆ. ( ತಾ. 17 ರಂದು 6 ಗಂಟೆಗೆ ಬಂಡಾರ ತರುವದು, ರಾತ್ರಿ 9 ಗಂಟೆಗೆ ದೀಪಾರಾಧನೆ (ಅಂದಿ ಬೊಳಕ್) ನಂತರ ಬೊಳಕಾಟ್, 10 ಗಂಟೆಗೆ ಶ್ರೀ ಭದ್ರಕಾಳಿ ದೇವರ ಕೋಲ ನಡೆಯಲಿದೆ, ತಾ. 18 ರಂದು ದೇವರ ಮೂರ್ತಿ ಹೊತ್ತು ಊರ ಪ್ರದಕ್ಷಿಣೆ, ತಾ. 19 ರಂದು ಪವಿತ್ರ ಪಟ್ಟಣಿ ಹಬ್ಬ ಎತ್ತು ಪೋರಾಟ ನಂತರ ಅನ್ನದಾನ, ಸಂಜೆ ದೇವರ ಮೂರ್ತಿ ಹೊತ್ತು ದೇವಾಲಯದ ಪ್ರದಕ್ಷಿಣೆ, ತಾ. 20 ರಂದು ಸಾಯಂಕಾಲ ತೆಂಗಿನಕಾಯಿಗೆ ಗುಂಡು ಹೊಡೆಯುವದು, ನಂತರ ಪವಿತ್ರ ಕಾವೇರಿ ನದಿಯಲ್ಲಿ ದೇವರ ಜಳಕ ನಗರದಲ್ಲಿ ಮೆರವಣಿಗೆ ನಂತರ ದೇವಾಲಯದಲ್ಲಿ ನೃತ್ಯ ಬಲಿಯೊಂದಿಗೆ ದೇವಳದ ಪ್ರದಕ್ಷಿಣೆ ನಂತರ ರಾತ್ರಿಯಿಂದ ಬೆಳಗಿನ ಜಾವದ ವರೆಗೆ ವಿವಿಧ ದೇವರ ಕೋಲ ನುಚ್ಚುಟೆ, ನರಿಪೂದ, ಅಂಜಿಕೂಟ್ ಮೂರ್ತಿ ಕೋಲಗಳು ನಡೆಯಲಿದ್ದು ತಾ. 21 ರಂದು 10 ಗಂಟೆಗೆ ಕಲ್ಯಾಟ ಅಜ್ಜಪ್ಪ ದೇವರ ಕೋಲ, ಮಧ್ಯಾಹ್ನ ವಿಷ್ಣು ಮೂರ್ತಿ ದೇವರ ಕೋಲ ದೇವರಿಗೆ ಬಲಿ ಕಾರ್ಯಕ್ರಮ ನಂತರ ಅನ್ನದಾನದೊಂದಿಗೆ ಹಬ್ಬವು ಮುಕ್ತಾಯ ಗೊಳ್ಳಲಿದೆ.) ಏಪ್ರಿಲ್-14 ಬಿಸು ಸಂಕ್ರಮಣ ಪೂಜೆ ನಡೆಯುತ್ತದೆ. ಶುದ್ಧಿಕರಣ ಪೂಜೆ ಮೇ 28ರಂದು ನಡೆಯುತ್ತದೆ. ದುರ್ಗಾಪೂಜೆ ಜೂನ್ ತಿಂಗಳಲ್ಲಿ ನಡೆಯುತ್ತದೆ. ವಿಷ್ಣುಪ್ಪ ದೇವರ ಹಬ್ಬ, ಅಯ್ಯಪ್ಪ ದೇವರ ಹಬ್ಬ, ಬ್ರಹ್ಮರಾಕ್ಷಸ ಪೂಜೆ, ಜನವರಿ-4ಕ್ಕೆ ಪ್ರತಿ ವರ್ಷ ನಡೆಯುತ್ತದೆ.

ಪೂಜಾ ಸಮಯ

ಪ್ರತಿ ದಿನ ಬೆಳಿಗ್ಗೆ 10-00 ಗಂಟೆಯಿಂದ ಮಧ್ಯಾಹ್ನ 12-00 ಗಂಟೆಯವರೆಗೆ ನಡೆಯುತ್ತದೆ.

ಶ್ರೀನಾಪೋಕ್ಲು ಭಗವತಿ ದೇವಾಲಯಕ್ಕೆ ಸಂಬಂಧಪಟ್ಟ ದೇವಾಲಯಗಳು

ಕೇಳೇಟಿರ ಮನೆಯ ಹತ್ತಿರದ ವಿಷ್ಣುಪ್ಪ ದೇವಸ್ಥಾನ, ಕಲ್ಲೇಂಗಡ ಮನೆಯ ಹತ್ತಿರದ ಅಯ್ಯಪ್ಪ ದೇವಾಲಯ ಬಾಳೆಯಡ ಮನೆಯ ಹತ್ತಿರದ ಶಾಸ್ತಾವು ದೇವಸ್ಥಾನ.

ದೇವರಕಾಡು

ನಾಪೋಕ್ಲು ಶ್ರೀ ಭಗವತಿ ದೇವಾಲಯಕ್ಕೆ ಬಾಳೆಯಡ ಮನೆಯ ಹತ್ತಿರ ಸುಮರು 4 ಏಕರೆ ಹಾಗೂ ಕಲ್ಲೆಂಗಡ ಮನೆಯ ಹತ್ತಿರ, ಅಯ್ಯಪ್ಪ ದೇವಾಲಯದ ವ್ಯಾಪ್ತಿಯಲ್ಲಿ 50 ಸೆಂಟು ದೇವರ ಕಾಡು ಅಸ್ತಿತ್ವದಲ್ಲಿದೆ.

ಅರಣ್ಯ ನಾಶ ತಪ್ಪಿಸುವ ನಿಟ್ಟಿನಲ್ಲಿ ಹುಟ್ಟಿಕೊಂಡ ಪರಿಕಲ್ಪನೆ ದೇವರಕಾಡು. ದೇವರಕಾಡು ಕೊಡಗು, ಮಲೆನಾಡು ಪ್ರದೇಶಗಳ ಕಾಡುಗಳಲ್ಲಿ ಅಸ್ಥಿತ್ವದಲ್ಲಿದೆ. ಕಾಡನ್ನೇ ದೇವರೆಂದು ಪೂಜಿಸುವ ಮೂಲಕ ಕಾಡು ನಾಶ ತಪ್ಪಿಸುವ ಉದ್ದೇಶದಿಂದ ಈ ಕಲ್ಪನೆ ಹುಟ್ಟಿಕೊಂಡು ನೂರು ವರ್ಷಗಳೇ ಕಳೆದಿವೆ.
ಕೊಡಗು ಜಿಲ್ಲೆಯ 4104 ಚದರ ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ 1214 ದೇವರಕಾಡುಗಳನ್ನು ಪಟ್ಟಿ ಮಾಡಲಾಗಿದೆ. ಜಗತ್ತಿನ ಯಾವುದೇ ವನಪ್ರದೇಶದಲ್ಲಿ ಇಲ್ಲದಂತಹ ದಟ್ಟ ಅರಣ್ಯ ಇಲ್ಲಿದ್ದು, ವೈವಿಧ್ಯಮಯ ಸಸ್ಯಗಳು, ಗಿಡ – ಮರಗಳು ಮಿಗಿಲಾಗಿ ಪ್ರಾಣಿ ಸಂಕುಲ ಇದೆ. ಈ ಕಾಡುಗಳ ಉಸ್ತುವಾರಿಯನ್ನು ಸ್ಥಳೀಯ ದೇವಾಲಯಗಳೇ ನೋಡಿಕೊಳ್ಳುತ್ತವೆ. ಹೀಗಾಗಿ ದೇವರಕಾಡು ಪರಿಕಲ್ಪನೆಗೆ ಹೆಚ್ಚಿನ ಮಹತ್ವ ಬಂದಿದೆ.

ಚಿತ್ರಶಾಲೆ

ಆಡಳಿತ ಮಂಡಳಿ ಪದಾದಿಕಾರಿಗಳು

ಅಧ್ಯಕ್ಷರು: ಕುಲ್ಲೇಟಿರ ಎಸ್. ಮಾದಪ್ಪ
ಗೌರವ ಕಾರ್ಯದರ್ಶಿಗಳು: ಅರೆಯಡ ಡಿ.ಸೋಮಪ್ಪ
ಕುಲ್ಲೇಟಿರ ಚಂಗಪ್ಪ(ಶಂಕರಿ) ಹಾಗೂ 22 ಜನ ಆಡಳಿತ ಮಂಡಳಿ ಸದಸ್ಯರು
ದೇವತಕ್ಕರು: ನಾಟೋಳಂಡ ಕುಟುಂಬಸ್ಥರು
ತಕ್ಕರು: ಕುಲ್ಲೇಟಿರ, ಕ್ಯಾಲೇಟಿರ, ತಿರೋಡಿರ ಕುಟುಂಬಸ್ಥರು

ಸಂದರ್ಶನ:

admin

0 0 votes
Article Rating
Subscribe
Notify of
guest
0 Comments
Inline Feedbacks
View all comments