ಭಾರತ ರತ್ನ ಡಾ.ಬಿ.ಸಿ. ರಾಯ್ (ಬಿಧಾನ್ ಚಂದ್ರ ರಾಯ್)

ಭಾರತ ರತ್ನ ಡಾ.ಬಿ.ಸಿ. ರಾಯ್ (ಬಿಧಾನ್ ಚಂದ್ರ ರಾಯ್)
"Whatever thy hands findeth to do, do it with thy might."

ಬಿಧಾನ್ ಚಂದ್ರರಾಯ್ ಅವರು ಜುಲೈ ೧, ೧೮೮೨ರಂದು ಬಿಹಾರದ ಪಾಟ್ನಾದಲ್ಲಿನ ಬಿ.ಎಮ್.ದಾಸ್ ರಸ್ತೆ, ಬಂಕಿಪುರದಲ್ಲಿ ಜನಿಸಿದರು. ಅವರ ತಂದೆ ಪ್ರಕಾಶಚಂದ್ರ ಅವರು ಓರ್ವ ಸುಂಕಾಧಿಕಾರಿಯಾಗಿದ್ದರು. ಬಿಧಾನ್ ಚಂದ್ರರಾಯ್ ಅವರು ಪ್ರಕಾಶಚಂದ್ರ ಅವರ ಐದು ಮಕ್ಕಳಲ್ಲಿ ಕಿರಿಯವರಾಗಿದ್ದು, ತಮ್ಮ ಹದಿನಾಲ್ಕನೇ ವರ್ಷದಲ್ಲಿರುವಾಗ ಅವರ ತಾಯಿಯವರನ್ನು ಕಳೆದುಕೊಂಡರು. ಇವರ ತಂದೆಯವರು ಅವರ ಐದು ಮಕ್ಕಳಿಗೆ ತಾಯಿಯಾಗಿ, ತಂದೆಯಾಗಿ ಕರ್ತವ್ಯ ನಿರ್ವಹಿಸಿದರು. ಅವರು ಯಾರಿಗೂ ಕೆಲಸ ಮಾಡುವಂತೆ ಒತ್ತಾಯಿಸಲಿಲ್ಲ ಆದರೆ ಗುರಿಯನ್ನು ಸಾಧಿಸಲು ದಾರಿಯನ್ನು ಮಾತ್ರ ತೋರಿಸಿಕೊಟ್ಟರು. ಎಲ್ಲ ಐದು ಮಕ್ಕಳೂ ತಮ್ಮ ತಮ್ಮ ಮನೆಕೆಲಸಗಳನ್ನು ತಾವೇ ಮಾಡಿಕೊಳ್ಳಬೇಕಾಗಿತ್ತು. ಅವು ಬಿಧಾನ್ ಅವರ ಕಾಲೇಜು ದಿನಗಳಲ್ಲಿ ಅವರಿಗೆ ತುಂಬ ಸಹಾಯಕವಾದ ಅಂಶಗಳಾದವು.

    ಬಿಧಾನ್ ಚಂದ್ರರಾಯ್ ಅವರು ಪದವಿಯ ನಂತರ ಪ್ರವೇಶಕ್ಕಾಗಿ ಬೆಂಗಾಲ್ ಇಂಜಿನಿಯರಿಂಗ್ ಕಾಲೇಜ್ ಮತ್ತು ಕಲ್ಕತ್ತಾ ವೈದ್ಯಕೀಯ ಕಾಲೇಜಿನಲ್ಲಿ ಅರ್ಜಿ ಸಲ್ಲಿಸಿದರು. ಎರಡೂ ಕಡೆಯಲ್ಲಿಯೂ ಅವಕಾಶಗಳು ದೊರೆಯಿತು ಆದರೆ ಅವರು ವೈದ್ಯಕೀಯ ಕಾಲೇಜಿಗೆ ಹೋಗುವ ಆಯ್ಕೆಯನ್ನೇ ಆಯ್ಕೆ ಮಾಡಿಕೊಂಡರು. ಬಿಧಾನ್ ಅವರು ೧೯೦೧ ಜೂನ್ರಲ್ಲಿ ಕಲ್ಕತ್ತಾಗೆ ಆಗಮಿಸಿದರು. ಅವರು ಅಲ್ಲಿ ಬರೆದ “Whatever thy hands findeth to do, do it with thy might.” ಎಂಬ ವಾಕ್ಯದಿಂದ ತುಂಬ ಪ್ರಭಾವಿತರಾದರು. ಮತ್ತು ಈ ವಾಕ್ಯವು ಅವರ ಜೀವನದ ಪಥದ ಪರಿವರ್ತನೆಗೆ ಮತ್ತು ಜಿವನದುದ್ದಕ್ಕೂ ಅವರು ನಡೆದ ದಾರಿಗೆ ಕಾರಣವಾದ ಮುಖ್ಯ ಅಂಶವಾಯಿತು. ಬಿಧಾನ್ ಅವರ ವೈದ್ಯಕೀಯ ಶಿಕ್ಷಣವನ್ನು ಪಡೆಯುತ್ತಿರುವಾಗಿನ ಜೀವನವು ಅತ್ಯಂತ ಪರಿಶ್ರಮದಯಕವಾಗಿತ್ತು. ಮೊದಲ ವರ್ಷದಲ್ಲಿಯೇ ತಂದೆಯವರು ಉಪ ಜಿಲ್ಲಾಧಿಕಾರಿಯಾಗಿ ನಿವೃತ್ತಿಯನ್ನು ಪಡೆದರು. ಆದ್ದರಿಂದ ಅವರು ಬಿಧಾನ್ ಅವರಿಗೆ ಬಹಳ ದಿನಗಳ ಕಾಲ ಹಣವನ್ನು ಕಳುಹಿಸಿಕೊಡಲು ಅಶಕ್ತರಾದರು. ಬಿಧಾನ್ ಅವರು ಸ್ಕಾಲರ್ಶಿಫ್ಗಳನ್ನು ಪಡೆಯುತ್ತಿದ್ದರು ಮತ್ತು ತಮ್ಮ ಖರ್ಚುವೆಚ್ಚಗಳನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸುತ್ತಿದ್ದರು. ತಮ್ಮ ಪುಸ್ತಕಗಳನ್ನು ಸಹ ಖರೀದಿಸದೇ ಗ್ರಂಥಾಲಯಗಳಿಂದ ಪಡೆಯುವುದು ಮತ್ತು ಕಲಿಸುತ್ತಿರುವಾಗ ಬರೆದುಕೊಳ್ಳುವುದರ ಮೂಲಕ ಉಳಿಸುತ್ತಿದ್ದರು.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

  ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದ ಕೂಡಲೇ, ಬಿ.ಸಿ. ರಾಯ್ ಅವರು ಪ್ರಾಂತೀಯ ಆರೋಗ್ಯ ಸೇವಾ ಕೇಂದ್ರವನ್ನು ಸೇರಿಕೊಂಡರು. ಇವರು ಅಲ್ಲಿ ಪರಿಶ್ರಮದಿಂದ ಅಗಾಧವಾಗಿ ಕೆಲಸಮಾಡಿದರು. ಅಲ್ಲಿ ಔಷಧಗಳನ್ನು ಶಿಫಾರಸು ಮಾಡುವುದನ್ನು ಕಲಿತರು ಕೆಲವು ವೇಳೆ ದಾದಿಯರಂತೆ ಅವಶ್ಯಕತೆ ಇದ್ದಾಗ ಸೇವೆ ಸಲ್ಲಿಸಲು ಹೋಗುತ್ತಿದ್ದರು. ತಮ್ಮ ಬಿಡುವಿನ ವೇಳೆಯಲ್ಲಿ ತಾವು ಸ್ವತಂತ್ರವಾಗಿ ಸೇವೆ ಸಲ್ಲಿಸುತ್ತಿದ್ದರು.ಮತ್ತು ಇದಕ್ಕೆ ಪ್ರತಿಯಾಗಿ ರೂ.೨ ಮಾತ್ರ ಚಿಕಿತ್ಸಾ ಶುಲ್ಕವೆಂದು ತೆಗೆದುಕೊಳ್ಳುತ್ತಿದ್ದರು. ಬಿಧಾನ್ ಅವರು ಕೇವಲ ರೂ.೧,೨೦೦ನ್ನು ಮಾತ್ರ ತೆಗೆದುಕೊಂಡು ಫೇಬ್ರುವರಿ ೧೯೦೯ರಲ್ಲಿ ಸೆಂಟ್ ಬಾರ್ಥೊಲೊಮೆವ್ಸ್ ಆಸ್ಪತ್ರೆಗೆ ಮುಂದಿನ ಶಿಕ್ಷಣಕ್ಕಾಗಿ ತನ್ನ ಹೆಸರನ್ನು ನೊಂದಾಯಿಸಲು ತೆರಳಿದರು. ಅಲ್ಲಿನ ಮುಖ್ಯಸ್ಥರು ಏಷ್ಯಾದಿಂದ ಅವರನ್ನು ವಿಧ್ಯಾರ್ಥಿಯಾಗಿ ಆಯ್ಕೆ ಮಾಡುವ ನಿರ್ಧಾರನ್ನು ಕೈಬಿಡುವ ಮೂಲಕ ಬಿಧಾನ್ ಅವರ ಅರ್ಜಿಯನ್ನು ತಿರಸ್ಕರಿಸಲಾಯಿತು. ಡಾ.ರಾಯ್ ಅವರು ಧೃತಿಗೆಡಲಿಲ್ಲ. ಅವರು ಮೇಲಿಂದ ಮೇಲೆ ಮೂವತ್ತು ಬಾರಿ ಅರ್ಜಿಯನ್ನು ಸಲ್ಲಿಸಿದ ನಂತರ ಮುಖ್ಯಾಧಿಕಾರಿಗೆ ಬಿಧಾನ್ ಅವರನ್ನು ಕಾಲೇಜಿಗೆ ವಿಧ್ಯಾರ್ಥಿಯಾಗಿ ತೆಗೆದುಕೊಳ್ಳಲೇ ಬೇಕಾಯಿತು. ಕೇವಲ ಎರಡು ವರ್ಷ ಮೂರು ತಿಂಗಳ ಅವಧಿಯಲ್ಲಿ M.R.C.P ಮತ್ತು F.R.C.S. ನ್ನು ಪೂರೈಸಿ (F.R.C.S. ಮತ್ತು M.R.C.P ಯನ್ನು ಜೊತೆಜೊತೆಯಾಗಿ ಎರಡು ವರ್ಷ ಮೂರು ತಿಂಗಳಲ್ಲಿ ಪೂರೈಸಿದ ಭಾರತದಲ್ಲಿನ ಅತೀ ವಿರಳ ಜನರಲ್ಲಿ ಇವರೂ ಒಬ್ಬರಾಗಿದ್ದಾರೆ.) ಇಂಗ್ಲೆಂಡ್ನಿಂದ ೧೯೧೧ರಲ್ಲಿ ಸ್ವದೇಶಕ್ಕೆ ವಾಪಸಾದರು. ಸ್ವದೇಶಕ್ಕೆ ವಾಪಸಾದ ನಂತರ ಕಲ್ಕತ್ತಾ ಮೆಡಿಕಲ್ ಕಾಲೇಜಿನಲ್ಲಿ ಮತ್ತು ಕ್ಯಾಂಪ್ಬೆಲ್ ಮೆಡಿಕಲ್ ಸ್ಕೂಲ್ ಮತ್ತು ನಂತರ ಕಾರ್ಮಿಕಲ್ ಮೆಡಿಕಲ್ ಕಾಲೇಜಿನಲ್ಲಿ ಕಲಿಸುವ ವೃತ್ತಿಯನ್ನು ಪ್ರಾರಂಭಿಸಿದರು.

  ಡಾ.ರಾಯ್ ಅವರು ಜಾದವಪುರ ಟಿ.ಬಿ ಆಸ್ಪತ್ರೆ, ಚಿತ್ತರಂಜನ್ ಸೇವಾ ಸದನ್, ಆರ್.ಜಿ.ಕರ್ ವೈದ್ಯಕೀಯ ಕಾಲೇಜು. ಕಮಲಾ ನೆಹರು ಆಸ್ಪತ್ರೆ, ವಿಕ್ಟೊರಿಯಾ ಸಂಸ್ಥೆ, ಮತ್ತು ಚಿತ್ತರಂಜನ್ ಕ್ಯಾನ್ಸರ್ ಆಸ್ಪತ್ರೆಗಳನ್ನು ಕಟ್ಟಿಸಿದರು. ಚಿತ್ತರಂಜನ್ ಸೇವಾ ಸದನ್ ಇದು ಮಹಿಳೆಯರಿಗಾಗಿ ಮತ್ತು ಮಕ್ಕಳಿಗಾಗಿ ೧೯೨೬ರಲ್ಲಿ ಪ್ರಾರಂಭವಾಯಿತು. ಹೆಂಗಸರು ಮೊದಮೊದಲು ಆಸ್ಪತ್ರೆಗೆ ಬರಲು ಹಿಂಜರಿಯುತ್ತಿದ್ದರು. ಆದರೆ ಡಾ. ರಾಯ್ ಮತ್ತು ಅವರ ತಂಡದವರ ಪ್ರಯತ್ನದಿಂದ ಎಲ್ಲ ವರ್ಗಗಳ ಮತ್ತು ಜನಾಂಗದ ಮಹಿಳೆಯರು ಆಸ್ಟತ್ರೆಗೆ ಬರತೊಡಗಿದರು. ಅವರು ಮಹಿಳೆಯರಿಗಾಗಿ ನರ್ಸಿಂಗ್ ಮತ್ತು ಸಾಮಾಜಿಕ ಸೇವೆಗಳಿಗಾಗಿನ ಕೇಂದ್ರವನ್ನು ಸ್ಥಾಪಿಸಿ, ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಈ ನಿಟ್ಟಿನಲ್ಲಿ ತಮ್ಮ ಕೊಡುಗೆಯನ್ನು ನೀಡಿದರು.
ಡಾ.ರಾಯ್ ಗಾಂಧೀಜಿಯವರ ಮಿತ್ರರೂ ಮತ್ತು ವೈದ್ಯರೂ ಆಗಿದ್ದರು. ಕ್ವಿಟ್ ಇಂಡಿಯಾ ಚಳುವಳಿಯ ಸಂದರ್ಭದಲ್ಲಿ ಗಾಂಧೀಜಿಯವರು ೧೯೩೩ರಲ್ಲಿ ಪೂನಾದಲ್ಲಿ ಪರ್ಣಕುಟಿವಿನ್ನಲ್ಲಿ ಚಿಕಿತ್ಸೆಗೊಳಗಾಗುತ್ತಿದ್ದಾಗ ಡಾ. ರಾಯ್ ಅವರೇ ಅವರನ್ನು ಆರೈಕೆ ಮಾಡುತ್ತಿದ್ದರು. ಆದರೆ ಗಾಂಧೀಜಿಯವರು ಆ ಔಷಧಗಳು ವಿದೇಶದಲ್ಲಿ ತಯಾರಾದವುಗಳಾಗಿದ್ದರಿಂದ ತೆಗೆದುಕೊಳ್ಳಲು ನಿರಾಕರಿಸಿದರು. ಗಾಂಧೀಜಿಯವರು ಡಾ.ರಾಯ್ ಅವರನ್ನುದ್ದೇಶಿಸಿ “ಡಾ.ರಾಯ್ ಅವರೇ ನಾನೇಕೆ ನಿಮ್ಮ ಸೇವೆಯನ್ನು ಸ್ವೀಕರಿಸಬೇಕು? ನನ್ನ ದೇಶವಾಸಿಗಳಾದ ನಾಲ್ಕು ದಶಲಕ್ಷ ಜನರಿಗೆ ನಿಮ್ಮಿಂದ ಉಚಿತವಾಗಿ ಸೇವೆ ನೀಡಲು ಸಾಧ್ಯವೇ?” ಎಂದು ಕೇಳಿದರು. ಅದಕ್ಕೆ ಡಾ. ರಾಯ್ ಅವರು ಉತ್ತರಿಸುತ್ತಾ” ಇಲ್ಲ ಗಾಂಧೀಜಿಯವರೇ ನಾನು ಮೋಹನದಾಸ ಕರಮಚಂದ ಗಾಂಧಿಯನ್ನು ಉಪಚರಿಸಲು ಬರಲಿಲ್ಲ. ಮತ್ತು ನನ್ನಿಂದ ನಾಲ್ಕು ದಶಲಕ್ಷ ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ಸಾಧ್ಯವೂ ಇಲ್ಲ. ಆದರೆ ನಾನು ಬಂದಿರುವುದು ನಾಲ್ಕು ದಶಲಕ್ಷ ಜನರ ಮುಖಂಡನನ್ನು ಉಪಚರಿಸಲು ಬಂದಿದ್ದೇನಷ್ಟೇ” ಎಂದು ನುಡಿದರು. ಗಾಂಧೀಜಿ ಮರುಮಾತಾಡದೇ ಔಷಧವನ್ನು ತೆಗೆದುಕೊಳ್ಳಲೇಬೇಕಾಯಿತು.

ರಾಜಕೀಯ ಪ್ರವೇಶ:
ಡಾ.ರಾಯ್ ಅವರು ೧೯೨೫ರಲ್ಲಿ ರಾಜಕೀಯವನ್ನು ಪ್ರವೇಶಿಸಿದರು. ಬಂಗಾಳದ ವಿಧಾನ ಸಭೆಗೆ ನಡೆದ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಬಂಗಾಳದ ಅತ್ಯಂತ ಹಿರಿಯ “ಗ್ರ್ಯಾಂಡ್ ಓಲ್ಡ್ ಮ್ಯಾನ್ ಆಫ್ ಬೆಂಗಾಲ್,” ಎಂಬ ಖ್ಯಾತಿಯ ಸುರೇಂದ್ರನಾಥ ಬ್ಯಾನರ್ಜಿ ಅವರನ್ನು ಸೋಲಿಸಿದರು. ಪಕ್ಷೇತರವಾಗಿ ನಿಂತಿದ್ದರೂ ಕೂಡ ಸ್ವರಾಜ್ ಪಾರ್ಟಿ(ಕಾಂಗ್ರೆಸ್ ನ ಒಂದು ಅಂಗಪಕ್ಷ)ದಿಂದ ಬೆಂಬಲಿಸಲ್ಪಟ್ಟವರಾಗಿದ್ದರು. ಡಾ.ರಾಯ್ ಅವರು ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿಗೆ ೧೯೨೮ರಲ್ಲಿ ಆಯ್ಕೆಯಾದರು. ೧೯೨೯ರಲ್ಲಿ ಡಾ.ರಾಯ್ ಅವರು ಬಂಗಾಳದಲ್ಲಿ ಸಾಮಾಜಿಕ ಕ್ರಾಂತಿಯೊಂದನ್ನು ಮಾಡಿದರು ಮತ್ತು ೧೯೩೦ರಲ್ಲಿ ಪಂಡಿತ್ ಮೊತಿಲಾಲ್ ನೆಹರುರವರು (CWC) ಕಾರ್ಯಕಾರಿ ಮಂಡಳಿಯ ಸದಸ್ಯರನ್ನಾಗಿ ನೇಮಕ ಮಾಡಿದರು. ಸಿ.ಡಬ್ಲೂ.ಸಿ.ಯು ವಿಧಾನ ಮಂಡಳವನ್ನು ಕಾನೂನು ಬಾಹಿರವೆಂದು ಜರಿಯಿತು ಮತ್ತು ಇತರ ಸದಸ್ಯರ ಜೊತೆಯಲ್ಲಿಯೇ ಡಾ.ರಾಯ್ ಅವರು ೨೬ ಅಗಸ್ಟ್ ೧೯೩೦ರಂದು ಬಂದನಕ್ಕೊಳಗಾಗಿ ಸೆಂಟ್ರಲ್ ಅಲಿಪುರ್ ಕಾರಾಗೃಹಕ್ಕೆ ತಳ್ಳಲ್ಪಟ್ಟರು. ೧೯೩೧ರಲ್ಲಿ ನಡೆದ ದಂಡಿ ಸತ್ಯಾಗ್ರಹದಲ್ಲಿ ಕಲ್ಕತ್ತಾ ಸಂಘಟನೆಯ ಹಲವಾರು ಕಾರ್ಯಕರ್ತರು ಜೈಲು ಸೇರಿದರು. ಕಾಂಗ್ರೆಸ್ ಡಾ.ರಾಯ್ ಅವರನ್ನು ಜೈಲಿಗೆ ಹೋಗದೇ ಹೊರಗುಳಿದು ಸಂಘದ ಕಾರ್ಯಗಳನ್ನು ನೋಡಿಕೊಳ್ಳುವಂತೆ ಸೂಚಿಸಿತು. ಅವರು ೧೯೩೦–೩೧ರಲ್ಲಿ ಊರ ಪ್ರಮುಖರಾಗಿ ಕಾರ್ಯ ನಿರ್ವಹಿಸಿದರು ಮತ್ತು ೧೯೩೩ರಲ್ಲಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದರು. ಇವರ ಆಳ್ವಿಕೆಯಲ್ಲಿ ಸಂಘಟನೆಯು ಉಚಿತ ಶಿಕ್ಷಣ, ಉಚಿತ ಆರೋಗ್ಯ ವ್ಯವಸ್ತೆ, ಉತ್ತಮ ರಸ್ತೆ ಸೌಲಭ್ಯ, ವಿದ್ಯುತ್ ವ್ಯವಸ್ತೆ, ಮತ್ತು ನೀರು ಸರಬರಾಜುಗಳನ್ನು ಉತ್ತಮಗೊಳಿಸಿತು. ಅವರು ಆಸ್ಪತ್ರೆಗಳಿಗೆ ಮತ್ತು ಉಳಿದ ಸೇವಾ ಉದ್ದೇಶಗಳಿಗೆ ಮಾಡಬೇಕಾದ ಹಣದ ಹಂಚಿಕೆಯ ಯೋಜನೆಗಳನ್ನು ರೂಪಿಸುತ್ತಿದ್ದರು ಮತ್ತು ಆ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.

  ಗಾಂಧೀಜಿಯವರ ಸಲಹೆಯ ಮೇರೆಗೆ ಕಾಂಗ್ರೆಸ್ ಪಾರ್ಟಿಯು ಡಾ.ರಾಯ್ ಅವರ ಹೆಸರನ್ನು ಬಂಗಾಳದ ಮುಖ್ಯಮಂತ್ರಿ ಹುದ್ದೆಗೆ ಶಿಫಾರಸು ಮಾಡಿತು. ಜನವರಿ ೨೩, ೧೯೪೮ರಂದು ಅವರು ತಮ್ಮ ಹುದ್ದೆಯನ್ನಲಂಕರಿಸಿದರು. ಇವರು ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದಾರೆ. ಬಂಗಾಳದಲ್ಲಿ ಆ ಸಂದರ್ಭದಲ್ಲಿ ಕೋಮುಗಲಭೆಗಳು, ಆಹಾರ ಕೊರತೆ, ನಿರುದ್ಯೋಗ, ಮತ್ತು ಪೂರ್ವ ಪಾಕಿಸ್ತಾನದಿಂದ ವಲಸೆ ಬರುತ್ತಿರುವ ನಿರಾಶ್ರಿತರ ಸಮಸ್ಯೆಗಳಿಂದ ತುಂಬಿ ಹೋಗಿತ್ತು. ಡಾ.ರಾಯ್ ಅವರು ತಮ್ಮ ಪಕ್ಷದಲ್ಲಿ ಏಕತೆ ಮತ್ತು ಶಿಸ್ತನ್ನು ತಂದರು. ನಂತರ ಶಿಸ್ತಿನಿಂದ ತಮ್ಮ ಮುಂದಿರುವ ಸವಾಲುಗಳನ್ನು ಎದುರಿಸುತ್ತಾ ಸಾಗಿದರು. ಜುಲೈ ೧, ೧೯೬೨ ರಂದು ಬೆಳಿಗ್ಗೆ ತಮ್ಮ ರೋಗಿಗಳನ್ನು ಶುಶ್ರುಷೆ ಮಾಡಿದ ನಂತರ ರಾಜ್ಯದ ಎಲ್ಲ ಜವಾಬ್ದಾರಿಗಳನ್ನು ಕಳಚಿಕೊಂಡು “ಬ್ರಹ್ಮೋ ಗೀತ್”ದ ಪ್ರತಿಯನ್ನು ಓದುತ್ತಾ ಅದರಲ್ಲಿರುವ ಶಾಂತಿ ಸಂದೇಶವನ್ನು ಪಠಿಸತೊಡಗಿದರು. ಅದಾದ ಹನ್ನೊಂದು ಗಂಟೆಯಲ್ಲಿ ಡಾ.ರಾಯ್ ಅವರು ಇಹಲೋಕವನ್ನು ತ್ಯಜಿಸಿದರು.

ಡಾ.ರಾಯ್ ಅವರು ಅತ್ಯಂತ ಗೌರವಾನ್ವಿತ ವೈದ್ಯರಾಗಿದ್ದರು ಮತ್ತು ಪ್ರಖ್ಯಾತ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಇವರನ್ನು ಪಶ್ಚಿಮ ಬಂಗಾಳದ ಶ್ರೇಷ್ಟ ಶಿಲ್ಪಿಯೆಂದು ಕರೆಯಲಾಗಿದ್ದು ಇವರು ಕಲ್ಯಾಣಿ ಮತ್ತು ಬಿಧಾನ್ ನಗರ ಎಂಬ ಎರಡು ದೊಡ್ಡ ನಗರಗಳ ಹುಟ್ಟಿಗೆ ಕಾರಣರಾಗಿದ್ದಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಪ್ರತಿನಿಧಿಯಾಗಿ ಹದಿನಾಲ್ಕು ವರ್ಷಗಳ ಕಾಲ ೧೯೪೮ ರಿಂದ ೧೯೬೨ರಲ್ಲಿನ ಮರಣದವರೆಗೂ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಇವರ ಹುಟ್ಟಿದ (ಮತ್ತು ಮರಣಿಸಿದ) ದಿನವಾದ ಜುಲೈ ೧ನ್ನು ಪ್ರತೀ ವರ್ಷ ರಾಷ್ಟ್ರೀಯ ವೈದ್ಯರ ದಿನವೆಂದು ಆಚರಿಸಲಾಗುತ್ತದೆ. ಡಾ.ಬಿಧಾನ್ ಚಂದ್ರ ರಾಯ್ ಅವರು ಪಾಟ್ನಾದಲ್ಲಿರುವ ಆಸ್ತಿಯನ್ನು ಆಧಾರಿಸಿ ಒಂದು ಸಂಸ್ಥೆಯನ್ನು(trust) ತಮ್ಮ ಸಾಮಾಜಿಕ ಕೆಲಸಕಾರ್ಯಗಳಿಗಾಗಿ ನಿರ್ಮಿಸಿದ್ದಾರೆ. ತನ್ನ ತಾಯಿಯ ಹೆಸರಾದ ಅಘೋರಕಾಮಿನಿ ದೇವಿ ಹೆಸರಿನ ಆಸ್ಪತ್ರೆಯನ್ನು ನಿರ್ಮಿಸಿದ್ದಾರೆ.ಅವರು ಬ್ರಮ್ಹೋ ಸಮಾಜದ ಓರ್ವ ಸದಸ್ಯರೂ ಆಗಿದ್ದರು.
೧೯೭೬ರಲ್ಲಿ ವೈದ್ಯಕೀಯ, ರಾಜಕೀಯ, ವಿಜ್ಞಾನ, ಮನಶಾಸ್ತ್ರ, ಸಾಹಿತ್ಯ, ಮತ್ತು ಕಲೆಗಳಲ್ಲಿ ಸಾಧನೆ ತೋರಿದವರಿಗಾಗಿ ಬಿ.ಸಿ.ರಾಯ್ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರಕಟಿಸಲಾಯಿತು. ೧೯೬೭ರಲ್ಲಿ ನವದೆಹಲಿಯಲ್ಲಿ ಡಾ.ಬಿ.ಸಿ.ರಾಯ್ ಮೆಮೊರಿಯಲ್ ಲೈಬ್ರರಿ ಮತ್ತು ಚಿಕ್ಕ ಮಕ್ಕಳಿಗಾಗಿನ ಓದುವ ಕೊಟಡಿಯನ್ನು ಚಿಲ್ಡ್ರನ್ಸ್ ಬುಕ್ ಟ್ರಸ್ಟ್ನಡಿಯಲ್ಲಿ ಪ್ರಾರಂಭಮಾಡಲಾಯಿತು. ಇವರು ಭಾರತದ ಅತ್ಯಂತ ಶ್ರೇಷ್ಠ ನಾಗರೀಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಯನ್ನು ೪ ಫೇಬ್ರುವರಿ ೧೯೬೧ರಲ್ಲಿ ಪಡೆದರು.

 

. ಕಾನತ್ತಿಲ್ ರಾಣಿ ಅರುಣ್

ಕಾನತ್ತಿಲ್‌ ರಾಣಿ ಅರುಣ್‌

0 0 votes
Article Rating
Subscribe
Notify of
guest
0 Comments
Inline Feedbacks
View all comments