ಕಾಫಿ ಕೃಷಿ ಬೇಸಾಯ ಕ್ರಮಗಳು

ಕಾಫಿ ಬೇಸಾಯ ಕ್ರಮಗಳು

ಸಸಿ ಮಡಿ ತಯಾರಿಕೆ
ಭಾಗಶ: ನೆರಳಿರುವ ಪ್ರದೇಶಗಳಲ್ಲಿ 15 ಮೀ. ಉದ್ದ, 1 ಮೀ. ಅಗಲ ಮತ್ತು 15 ಸೆಂ.ಮೀ. ಎತ್ತರದ ಸಸಿಮಡಿಗಳನ್ನು ತಯಾರಿಸಬೇಕು.
ಡಿಸೆಂಬರ್ / ಜನವರಿ ತಿಂಗಳಿನ ಅವಧಿಯಲ್ಲಿ ಪೂರ್ಣವಾಗಿ ಬಲಿತ ಹಣ್ಣುಗಳನ್ನು ಸಂU್ರಹಿÀ ಸಿ, ಹೊರಗಿನ ಸಿಪ್ಪೆಯನ್ನು ಬೇರ್ಪಡಿಸಿ ಬೀಜಗಳನ್ನು
ಬೀಜೋಪಚಾರ ಮಾಡಿ ನೆರಳಿನಲ್ಲಿ ಒಣಗಿಸಬೇಕು. ಈ ರೀತಿ ಉಪಚರಿಸಿದ ಬೀಜಗಳನ್ನು 7.5 ಸೆಂ.ಮೀ x 2 ಸೆಂ.ಮೀ. ಅಂತರದಲ್ಲಿ ಬಿತ್ತನೆ
ಮಾಡಬೇಕು. ನಂತರ ಸಸಿಮಡಿಗಳನ್ನು ಹುಲ್ಲಿನ ಹೊದಿಕೆಯಿಂದ ಮುಚ್ಚಿ ಪ್ರತಿ ದಿನ ನೀರು ಕೊಡಬೇಕು. ಸುಮಾರು 45 ದಿನಗಳಲ್ಲಿ ಬೀಜಗಳು
ಮೊಳಕೆಯೊಡೆದು, ಸಸಿಗಳು 2 ರಿಂದ 4 ಎಲೆಗಳು ಬಿಡುವಾಗ, ಅವುಗಳನ್ನು ಫಲವತ್ತಾದ ಮಣ್ಣಿನ ಮಿಶ್ರಣದಿಂದ ( 6 ಭಾಗ ಕಾಡು ಮಣ್ಣು, 2 ಭಾಗ
ಕಳಿತ ಕೊಟ್ಟಿಗೆ ಗೊಬ್ಬರ ಮತ್ತು ಒಂದು ಭಾಗ ದಪ್ಪ ಮರಳು) ತುಂಬಿದ ಫಾಲಿಥೀನ್ ಚೀಲಗಳಲ್ಲಿ (20 ಸೆಂ.ಮೀ – 13 ಸೆಂ. ಮೀ ಅಳತೆಯ) ನಾಟಿ
ಮಾಡಬೇಕು.

ಅಭಿಮುಖ
ಉತ್ತರಾಭಿಮುಖ ಹೊಂದಿರುವ 950 ರಿಂದ 1150 ಮೀ. ಎತ್ತರದ ಸ್ಥಳ ಕಾಫಿ ಬೆಳೆಗೆ ಅತ್ಯುತ್ತಮ. ದಕ್ಷಿಣ ಮತ್ತು ಪಶ್ಚಿಮಾಭಿ ಮುಖದ
ತೋಟಗಳು ಹಿಂಗಾರಿನಲ್ಲಿ ಬಹಳ ಕಾಲದವರೆಗೆ ಸೂರ್ಯನ ಕಿರಣಕ್ಕೆ ತುತ್ತಾಗಿ ನಲುಗುತ್ತವೆ.ಆದ್ದರಿಂದ ಅಂತಹ ಸ್ಥಳಗಳಲ್ಲಿ ಮಧ್ಯಾಹ್ನದ ಬಿಸಿಲಿನಿಂದ
ರಕ್ಷಣೆ ಕೊಡಲು ನೆರಳು ಮರಗಳನ್ನು ಬೆಳಸಬೇಕಾಗುತ್ತದೆ.

ನಾಟಿ ಮಾಡುವುದು
ನಾಟಿ ಮಾಡಲು ಒಂದು ತಿಂಗಳು ಮೊದಲು 1.5 ಅಡಿ ಆಳದ ಗುಣಿಗಳನ್ನು ತೆಗೆದು, ಉತ್ತಮ ಮಣ್ಣು ಮತ್ತು ಕೊಟ್ಟಿಗೆ ಗೊಬ್ಬರದಿಂದ
ತುಂಬಬೇಕು. ಜೂನ್ – ಜುಲೈ ತಿಂಗಳುಗಳಲ್ಲಿ ಅರೇಬಿಕಾ ಕಾಫಿûಯನ್ನು 2.0 ರಿಂದ 2.5 ಮಿ. ಮತ್ತು ರೋಬಸ್ಟ ಕಾಫಿûಯನ್ನು 3.0 ರಿಂದ 3.5 ಮಿ.
ಅಂತರದಲ್ಲಿ ನೆಡುವುದು ಸೂಕ್ತ.

ಆಕಾರ ಕೊಡುವುದು ಮತ್ತು ಟೊಂಗೆ ಕತ್ತರಿಸುವುದು
ಫಲ ಬಿಡುವ ರೆಂಬೆ ಹೊಂದಲು ಗಿಡವು ಆರೋಗ್ಯಕರ ಬೆಳವಣಿಗೆಯನ್ನು ಹೊಂದಿರುವುದು ಅತೀ ಅವಶ್ಯಕ. ಸರಿಯಾದ ರೀತಿಯಲ್ಲಿ
ಗಿಡಗಳ ಆಕಾರ ಮತ್ತು ಸರಿಯಾದ ಸಮಯದಲ್ಲಿ ರೆಂಬೆ ಸವರುವುದರಿಂದ ಈ ಉದ್ದೇಶವನ್ನು ಈಡೇರಿಸಬಹುದು. ಪ್ರಾರಂಭದ ವರ್ಷದಲ್ಲಿ
ಗಿಡಗಳನ್ನು ಇಚ್ಚಾನುಸಾರ ಬೆಳೆಯಲು ಬಿಡಬೇಕು. ಗಿಡಗಳು ಸುಮಾರು 2 ಅಡಿ ಎತ್ತರ ಬೆಳೆದಾಗ ಅವುಗಳ ತುದಿಯನ್ನು ಚಿವುಟಿ, ಮುಖ್ಯ
ಕಾಂಡದಿಂದ ಎರಡು ಅಥವಾ ಮೂರು ನೇರವಾದ ಕಾಂಡಗಳು ಚಿಗುರುವಂತೆ ನೋಡಿಕೊಳ್ಳಬೇಕು. ಇವುಗಳಲ್ಲಿ ಒಂದು ಶಕ್ತಿಯುತವಾದ
ಕಾಂಡವನ್ನು ಮಾತ್ರ ಬೆಳೆಯಲು ಬಿಟ್ಟು, ಉಳಿದುವುಗಳನ್ನು ಪ್ರಾರಂಭದಲ್ಲಿಯೇ ತೆಗೆಯಬೇಕು. ಎರಡನೇ ಹಂತದ ಕಾಂಡವು 1.2 ರಿಂದ 1.5 ಮೀ.
ಎತ್ತರವನ್ನು ತಲುಪಿದಾಗ ಅದರ ತುದಿಯನ್ನು ಕತ್ತರಿ ಮಂದಿನ ನೇರವಾದ ಬೆಳೆವಣಿಗೆಯನ್ನು ತಡೆಗಟ್ಟಬೇಕು. ಅಂದರೆ ಬೆಳೆಯನ್ನು ಕೊಯ್ಲು ಮತ್ತು
ಇತರೆ ಕೆಲಸ ಮಾಡಲು ಸುಲಭವಾಗುವಂತೆ ಗಿಡವನ್ನು 1.4 ಮೀ. ಗಿಂತಲು ಕಡಿಮೆ ಎತ್ತರದಲ್ಲಿ ಬೆಳೆಯುವಂತೆ ನಿಯಂತ್ರಿಸಬೇಕು. ಬುಡಭಾಗದಲ್ಲಿ
ಆಗಿಂದಾಗೆ ಬೆಳೆಯುವ ನೀರು ಕಂದುಗಳನ್ನು ತೆಗೆದು ಗಿಡಗಳ ಆಕಾರ ಮತ್ತು ಆರೋಗ್ಯವನ್ನು ಕಾಪಾಡಬೇಕು.

ತುಂತುರು ನೀರಾವರಿಯ ಅಳವಡಿಕೆ
ಕಾಫಿಯಲ್ಲಿ ಹೂ ಮೊಗ್ಗು ಬಲಿತು (ಮಾರ್ಚ್ ರಿಂದ ಏಪ್ರೀಲ್) ಹರಳಲು ಮಳೆ ನೀರಿನ ಅವಶ್ಯಕತೆಯಿದೆ, ಈ ಸಮಯದಲ್ಲಿ ಮಳೆ
ಬೀಳದಿದ್ದರೆ ಹೂಗಳು ಅರಳುವುದಿಲ್ಲ ಮತ್ತು ಇಳುವರಿ ಕಡಿಮೆಯಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಹೂ ಬಿಡುವ ಮತ್ತು ಕಾಯಿ ಕಟ್ಟುವ
ಸಮಯದಲ್ಲಿ ತುಂತುರು ನೀರಾವರಿಯ ಮೂಲಕ ನೀರು ಕೊಡುವುದು ಅತ್ಯವಶ್ಯಕ.

ಗೊಬ್ಬರಗಳ ನಿರ್ವಹಣೆ
ಇಳುವರಿ ಆಧಾರಿತ ಗೊಬ್ಬರದ ಪ್ರಮಾಣವನ್ನು ವರ್ಷದಲ್ಲಿ ಎರಡು ಅಥವಾ ಮೂರು ಕಂತುಗಳಲ್ಲಿ ಅಂದರೆ ಸಾಮಾನ್ಯವಾಗಿ ಹೂ ಮಳೆ
ಮುಂಚೆ (ಮಾರ್ಚ್), ಮುಂಗಾರು ಮಳೆ ಮುಂಚೆ (ಮೇ) ಮತ್ತು ಮುಂಗಾರು ಮಳೆ ನಂತರದಲ್ಲಿ (ಸೆಪ್ಟಂಬರ್) ಕೊಡಬೇಕು.
ಪ್ರತಿ ಎಕರೆಗೆ ಕಿ.ಗ್ರಾಂಗಳಲ್ಲಿ
ಶುದ್ಧ ಕಾಫಿû ಕಿ.ಗ್ರಾಂ ಸಾರಜನಕ ರಂಜಕ ಪೆÇಟ್ಯಾμï ಕೊಟ್ಟಿಗೆ ಗೊಬ್ಬರ
100 30 27 30
2 ರಿಂದ 4 ಟನ್
200 40 34 40
300 50 41 50
400 60 48 60
500 70 55 70
600 80 62 80
700 90 69 90
800 100 76 100
900 110 83 110
1000 120 90 120
ಮೇಲೆ ಸೂಚಿಸಿರುವ ಗೊಬ್ಬರಗಳ ಪ್ರಮಾಣಗಳು ಅರೇಬಿಕಾ ಮತ್ತು ರೋಬಸ್ಟಾಗಳೆರಡಕ್ಕೂ ಅನ್ವಯಿಸುತ್ತದೆ. ರೊಬಸ್ಟಾದಲ್ಲಿ 1 ಟನ್ ಶುದ್ದ ಕಾಫಿ
ತಯಾರಿಸಬೇಕಾದರೆ 10 ರಿಂದ 15 ಕಿ.ಗ್ರಾಂ ಪೊಟ್ಯಾಷಿಯಂನ್ನು ಸೂಚಿಸಿದ ಗೊಬ್ಬರದ ಜೊತೆಗೆ ಹೆಚ್ಚಾಗಿ ಕೊಡಬೇಕಾಗುತ್ತದೆ. ಅರೇಬಿಕಾದಲ್ಲಿ
ಎಳೆಯ ಗಿಡಗಳಿಗೆ ಪ್ರತಿ ಗಿಡಕ್ಕೆ 20 : 10 : 20 ಎನ್.ಪಿ.ಕೆ.ಯನ್ನು ಮೊದಲ ಎರಡು ವರ್ಷಗಳಲ್ಲಿ 3 ರಿಂದ 4 ಕಂತುಗಳಲ್ಲಿ ಕೊಡಬೇಕು. ನಂತರ
ಫಸಲಿಗೆ ಬರುವವರೆಗೆ 25 : 15 : 25 ಗ್ರಾಂ ಪ್ರತಿ ಗಿಡಗಳಿಗೆ ಪ್ರತಿ ವರ್ಷ ಕೊಡಬೇಕು. ರೊಬಸ್ಟಾದಲ್ಲಿ ಮೊದಲ 3 ವರ್ಷಗಳಲ್ಲಿ 38 : 28 : 38 ಗ್ರಾಂ
ಎನ್.ಪಿ.ಕೆ. ಪ್ರತಿ ಗಿಡಕ್ಕೆ 2 ಕಂತುಗಳಲ್ಲಿ ಕೊಡಬೇಕು. ನಂತರ ಫಸಲಿಗೆ ಬರುವವರೆಗೆ 40 : 30 : 40 ಗ್ರಾಂನ್ನು ಪ್ರತಿ ವರ್ಷ ಕೊಡಬೇಕು.
ಗಿಡದಲ್ಲಿ ಫಸಲಿನ ರೆಂಬೆ ಮತ್ತು ಚಿಗುರು ಬೆಳೆಯಲು ಸಾರಜನಕ ಅವಶ್ಯಕವಾದುದ್ದರಿಂದ ವರ್ಷವಿಡಿ 3 ರಿಂದ 4 ಕಂತುಗಳಲ್ಲಿ ಕೊಡಬೇಕು.
ರಂಜಕವು ಗಿಡದ ಬೇರುಗಳ ಬಲಿಷ್ಠ ಬೆಳವಣಿಗೆಗೆ ಅವಶ್ಯಕವಾಗಿದ್ದು ಮಳೆಗಾಲಕ್ಕೆ ಮುಂಚೆ ತಪ್ಪದೇ ಹಾಕಬೇಕು. ಪೊಟ್ಯಾಷಿಯಂನ್ನು
ಸಮತೋಲನದಿಂದ ಹಾಕುವುದರಿಂದ ಹಲವಾರು ಸಸ್ಯ ರೋಗವನ್ನು ತಪ್ಪಿಸಬಹುದು. ಪೊಟ್ಯಾμï ಕೊರತೆಯಾದರೆ ಕಾಯಿಗಳ ಬೆಳವಣಿಗೆಗೆ
ತೊಂದರೆ ಆಗುವುದರಿಂದ ಮಳೆಗಾಲದ ನಂತರದಲ್ಲಿ ಪೊಟ್ಯಾμï ಗೊಬ್ಬರವನ್ನು ಕೊಡಲೇಬೇಕು.

ಸುಣ್ಣದ ಬಳಕೆ
ಕಾಫಿ ಬೆಳೆಯುವ ಬಹುತೇಕ ತೋಟಗಳಲ್ಲಿ ಹುಳಿ ಅಂಶ ಹೆಚ್ಚಾಗಿರುತ್ತದೆ. ಇದರ ಹಾನಿ ತಪ್ಪಿಸಲು 2 ರಿಂದ 3 ವರ್ಷಗಳಿಗೊಮ್ಮೆ
ಸುಣ್ಣವನ್ನು ಮಣ್ಣು ಪರೀಕ್ಷೆಯ ಆಧಾರದ ಮೇಲೆ ಹಾಕಬೇಕು. ಸಾಧಾರಣ 450 ರಿಂದ 500 ಕಿ.ಗ್ರಾಂ ಸುಣ್ಣವನ್ನು ಒಂದು ಎಕರೆಗೆ ಬಳಸಬೇಕಾಗುತ್ತದೆ
(ನವೆÀಂಬರ್ ರಿಂದ ¥sóÉಬ್ರವರಿ).

ತೊಟ್ಟಿಲು ಗುಂಡಿ/ ನೀರುಗಾಲುವೆಗಳ ನಿರ್ಮಾಣ
ಸಾಮಾನ್ಯವಾಗಿ ಇಳಿಜಾರು ಭೂಮಿಯಲ್ಲಿ ತೊಟ್ಟಿಲು ಗುಂಡಿ / ಚರಂಡಿಗಳನ್ನು ಇಳಿಜಾರಿಗೆ ಅಡ್ಡಲಾಗಿ ತೆಗೆಯುವುದರಿಂದ ಮಣ್ಣಿನ
ಕೊರೆತವನ್ನು ತಡೆಯಲು ಸಹಾಯಕವಾಗುವುದಲ್ಲದೆ ಒಣ ಹವೆ ಕಾಲದಲ್ಲಿ ಮಣ್ಣಿನ ತೇವಾಂಶ ರಕ್ಷಣೆಗೂ ಸಹಾಯವಾಗುತ್ತದೆ. ಈ ಗುಂಡಿಗಳನ್ನು
ಜಿಗ್ ಜಾಗ್‍ನಂತೆ ಕಾಫಿ ಸಾಲುಗಳ ನಡುವೆ ಇಳಿಜಾರಿಗೆ ಅಡ್ಡಲಾಗಿ ತೆಗೆಯಬೇಕು. ಈ ರೀತಿಯಲ್ಲಿ ಜಿಗ್ ಜಾಗ್‍ನಲ್ಲಿ ನೀರು ನೆಲದ ಮೇಲೆ
ಹರಿದುಹೋಗುವುದಕ್ಕೆ ತಡೆಯಾಗುವ ಮೂಲಕ ಮಣ್ಣಿನ ಕೊರೆತವನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿಮೆ ಮಾಡುತ್ತದೆ, ಅಲ್ಲದೆ ನೀರು ಮಣ್ಣಿನ ಆಳಕ್ಕೆ
ತೂರಲು ಸಹಾಯಕವಾಗಿ ಅಂತರಜಲದ ಮಟ್ಟ ಹೆಚ್ಚಲು ಸಹಾಯಕವಾಗುತ್ತದೆ. ತೊಟ್ಟಿಲು ಗುಂಡಿಯ ಅಳತೆಯು ಸಾಧಾರಣವಾಗಿ 45 ಸೆಂ.ಮೀ.
ಅಗಲ 30 ಸೆಂ. ಮೀ. ಆಳ ಮತ್ತು ಸುಮಾರು 150 ಸೆಂ.ಮೀ. ಉದ್ದವಿರುತ್ತದೆ. ತೊಟ್ಟಿಲು ಗುಂಡಿಯು ಮಣ್ಣಿನ ತೇವಾಂಶ ರಕ್ಷಣೆ ಮಾಡುವುದರ
ಜೊತೆಗೆ ಉದುರಿದ ಎಲೆ, ಕಳೆ, ಜೀವ ದ್ರವ್ಯ ಮತ್ತು ಹಾಲುವಾಣದ ತುಂಡುಗಳನ್ನು ತುಂಬುವ ಕಾಂಪೋಸ್ಟ್ ಗುಂಡಿಯಂತೆ ಕೆಲಸ ಮಾಡುತ್ತದೆ.
UುÀ ಂಡಿಯಲ್ಲಿ ಸಂU್ರಹ Àವಾದ UೂÉ ಬ್ಬgವ Àನ್ನು ಪ್ರತಿ ವರ್ಷವೂ ಮಳೆಗಾಲದ ಮುಂಚೆ ಸುvಲಿÀ್ತ ನ ಗಿಡಗಳಿU É ಹgಡ Àಬೇಕು. ತೊಟ್ಟಿಲು ಗುಂಡಿ ತೆUಂÉ iÀುಲು
ಅಕ್ಟೋಬರ್ – ನವೆಂಬರ್ ತಿಂಗಳು ಸೂಕ್ತ ಕಾಲವಾಗಿರುತ್ತದೆ. ಮಳೆಗಾಲದಲ್ಲಿ ನೀರು ನಿಲ್ಲುವ ಸ್ಥಳಗಳಲ್ಲಿ ನೀರುಗಾಲುವೆಗನ್ನು (1.5 ಅಡಿ ಅಗಲ
ಮತ್ತು 1 ಅಡಿ ಆಳ) ಗಿಡಗಳ ಸಾಲಿನ ನಡುವೆ ಸೂಕ್ತ ಅಂತರದಲ್ಲಿ ತೆಗೆಯಬೇಕು. ಇಂತಹ ಕಾಲುವೆಗಳನ್ನು ದೂರದಲ್ಲಿ ತೆಗೆದಿರುವ ನೀರು ಗುಂಡಿಗೆ
ಸಂಪರ್ಕಿಸಬೇಕು. ಹೀಗೆ ಮಾಡುವುದರಿಂದ ಮಣ್ಣಿನ ತೇವಾಂಶವನ್ನು ಕಾಪಾಡುತ್ತದೆ.

ಮುಚ್ಚಗತೆ
ಹೊಸ ತೋಟಗಳಲ್ಲಿ ಅಕ್ಟೋಬರ್ ರಿಂದ ನವೆÀಂಬರ್ ಕಾಲದಲ್ಲಿ ಇಡೀ ಜಮೀನಿಗೆ 15 ರಿಂದ 18 ಅಂಗುಲ ಆಳದಲ್ಲಿ ಸಂಪೂರ್ಣ ಅಗೆತ
ಮಾಡಿ ಕಳೆಗಳನ್ನು ಮಣ್ಣಿನಲ್ಲಿ ಮುಚ್ಚಿಹಾಕಿ ಕಾಡು ಗಿಡದ ಬುಡಗಳನೆಲ್ಲಾ ತೆಗೆದು ಹಾಕಬೇಕು. ಇದನ್ನು ಕಾಫಿ ಗಿಡ ನೆಟ್ಟ ಮೊದಲ ವರ್ಷಗಳಲ್ಲಿ ಮಾತ್ರ
ಅನುಸರಿಸಲಾಗುತ್ತದೆ. ಇದರಿಂದ ಮಣ್ಣಿನ ತೇವಾಂಶ ಸಂರಕ್ಷಣೆ ಹಾಗೂ ಕಳೆಯ ನಿಯಂತ್ರಣಕ್ಕೆ ಸಹಾಯವಾಗುತ್ತದೆ.

ನೆರಳು ಮರಗಳು
ಅತ್ತಿ, ಬಿಳಿ ಬಸರಿ, ಬೀಟೆ, ಮತ್ತಿ, ಹಲಸು, ಗಂಧ (ಶಾಶ್ವತ ದೀರ್ಘಾವಧಿ) ಮರಗಳನ್ನು 12 ರಿಂದ 15 ಮೀಟರ್ ಅಂತರದಲ್ಲಿ ಬೆಳಸಬೇಕು.
ಹೆಚ್ಚು ಗಾಳಿ ಹೊಡೆತವಿರುವ ಜಾಗಗಳಲ್ಲಿ ದಟ್ಟವಾಗಿ ತೋಟದ ಸುತ್ತಾ ಸಿಲ್ವರ್ ಮರಗಳನ್ನು ಬೆಳಸಬೇಕು. ಕೆಳಗಿನ ಮಟ್ಟದಲ್ಲಿ ತಾತ್ಕಾಲಿಕ ನೆರಳು
ಕೊಡುವ ಪಾಲುವಾಣ (ಡ್ಯಾಡಪ್) ಮರಗಳನ್ನು ಬೆಳಸಬೇಕು. ನೆರಳು ಮರಗಳನ್ನು ನೆಡಲು ಜೂನ್- ಜುಲೈ ತಿಂಗಳು ಸೂಕ್ತವಾಗಿರುತ್ತದೆ.

ಕಳೆಗಳ ನಿಯಂತ್ರಣ
ಹೊಸದಾಗಿ ತೋಟಗಳನ್ನು ಮಾಡಿದ ಪ್ರದೇಶಗಳಲ್ಲಿ ವರ್ಷಕ್ಕೆ 3 ರಿಂದ 4 ಬಾರಿ ಮತ್ತು ಹಳೆ ತೋಟಗಳಲ್ಲಿ 2 ರಿಂದ 3 ಬಾರಿ ದಬ್ಬೆ
ಮೂಲಕ ಕಳೆಗಳನ್ನು ಕೊಚ್ಚಿ ಮಣ್ಣಿನಲ್ಲೆಯೇ ಕೊಳೆಯಲು ಬಿಡಬೇಕು. ಕಳೆನಾಶಕಗಳಾದ ಪ್ಯಾರಾಕ್ವಾಟ್ ಡೈ ಕ್ಲೋರೈಡ್ (ಗ್ರಾಮಾಕ್ಸೋನ್ 2.5 ಮಿ.ಲೀ)
ಅಥವಾ U್ಲÉ ೈಪೆÇೀಸೇಟ್ ( ರೌಂಡ್‍ಅಪ್, U್ಲÉ ೈಸೆಲ್) 6.0 ಮಿ.ಲಿಯನ್ನು ಪ್ರತಿ ಲೀಟರ್ ನೀರಿನಲ್ಲಿ ಬೆgಸಿÀ ಕಳೆಗಳನ್ನು ನಿಯಂತ್ರಿಸಲು
ಉಪಯೋಗಿಸಬೇಕು.

Leave a Reply

Your email address will not be published. Required fields are marked *