ಮಡಿಕೇರಿ ದಸರಾ 2024 Madikeri Dasara 2024

Reading Time: 15 minutes

ಪ್ರಾಸ್ತವಿಕ

   ವಿಶ್ವ ವಿಖ್ಯಾತ ಮೈಸೂರು ದಸರಾ ನಾಡಹಬ್ಬದ ನಂತರ ಐತಿಹಾಸಿಕ ಮಡಿಕೇರಿ ದಸರಾ ನಾಡಹಬ್ಬವು ತನ್ನದೇ ಆದ ಮಹತ್ವವನ್ನು ಪಡೆದಿದೆ. ಮಡಿಕೇರಿ ದಸರಾ ವರ್ಷದಿಂದ ವರ್ಷಕ್ಕೆ ತನ್ನ ಆಕರ್ಷಣೆಯನ್ನು ವೃದ್ಧಿಸಿಕೊಂಡೇ ಬರುತ್ತಿದೆ. ಮಡಿಕೇರಿ ದಸರಾ ನಾಡಹಬ್ಬವನ್ನು ಕೊಡಗು ಜಿಲ್ಲೆಯಿಂದಲು, ಇತರ ಜಿಲ್ಲೆಗಳಿಂದಲೂ ಇತರ ರಾಜ್ಯಗಳಿಂದ ಮಾತ್ರವಲ್ಲದೆ, ದೇಶ ವಿದೇಶಗಳಿಂದ ಲಕ್ಷಾಂತರ ಜನರು ವೀಕ್ಷಿಸಲು ಬರುತ್ತಿದ್ದಾರೆ. ಮಹಾಲಯ ಅಮವಾಸೆಯ ಮಾರನೆಯ ದಿನದಿಂದ ನಗರದ ನಾಲ್ಕು ಶಕ್ತಿ ದೇವತೆಗಳ ಕರಗವನ್ನು ಸಿಂಗರಿಸಿ ಮೆರವಣಿಗೆಯ ಮೂಲಕ ಐತಿಹಾಸಿಕ ಮಡಿಕೇರಿ ದಸರಾ ಹಬ್ಬಕ್ಕೆ ಚಾಲನೆ ದೊರೆಯಲ್ಪಡುತ್ತದೆ. ಒಂಬತ್ತು ದಿನಗಳ ನವರಾತ್ರಿ ಉತ್ಸವದೊಂದಿಗೆ ಹತ್ತನೇ ದಿನದ ವಿಜಯದಶಮಿಯಂದು ನಗರದ ದಶದೇಗುಲಗಳ ದಶಮಂಟಪಗಳೊಂದಿಗೆ, ನಾಲ್ಕು ಶಕ್ತಿ ದೇವತೆಗಳ ಕರಗಗಳ ಶೋಭಾಯಾತ್ರೆಯು ನಡೆಯಲ್ಪಡುತ್ತದೆ. 

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ವಿಜಯದಶಮಿಯಂದು ರಾತ್ರಿ 10ಗಂಟೆಗೆ ಪ್ರಾರಂಭವಾಗುವ ಶೋಭಾಯಾತ್ರೆಯು ಮಾರನೆಯ ದಿನ ಸಂಜೆಯ ವರೆಗೂ ನಡೆಯುತ್ತದೆ. ಈ ಶೋಭಾಯಾತ್ರೆಯು ಮೈಸೂರು ದಸರೆಯ ಶೋಭಾಯಾತ್ರೆಗಿಂತಲೂ ಭಿನ್ನವಾಗಿರುತ್ತದೆ. ಇದೇ ಮಡಿಕೇರಿ ದಸರಾ ಮಹೋತ್ಸವದ ವಿಶಿಷ್ಟ. ಮಡಿಕೇರಿ ದಸರಾ ನಾಡಹಬ್ಬದ ಬಗ್ಗೆ ವಿವರಗಳನ್ನು ನಿಮಗೆ ತಿಳಿಸುವ ಜೊತೆಯಲ್ಲೆ ಮಡಿಕೇರಿ ದಸರಾ ಪ್ರಾರಂಭವಾದ ಇತಿಹಾಸದ ಬಗ್ಗೆ ಹೇಳಬೇಕಾಗಿದೆ. ಇಲ್ಲಿಯವರೆಗೆ ಮಡಿಕೇರಿ ದಸರಾ ನಾಡಹಬ್ಬ ಪ್ರಾರಂಭವಾದ ಬಗ್ಗೆ ನಿಖರವಾದ ಮಾಹಿತಿ ಲಭ್ಯವಾಗಿಲ್ಲ, ಆದರೆ ಇದರ ಬಗ್ಗೆ ಒಂದು ಅಧ್ಯಯನ ನಡೆಸಿದಾಗ ಕೆಲವು ಮಹತ್ತರವಾದ ಅಂಶಗಳು ಮಡಿಕೇರಿ ದಸರಾ ಪ್ರಾರಂಭದ ಬಗ್ಗೆ ಇತಿಹಾಸದ ಪುಟಗಳಿಂದ ದೊರೆಯುತ್ತದೆ. ಈ ಕುರಿತು ಮಡಿಕೇರಿ ದಸರಾ ಪ್ರಾರಂಭವಾದ ಹಿನ್ನಲೆ, ಇತಿಹಾಸದ ಬಗ್ಗೆ, ಶಕ್ತಿ ದೇವತೆಗಳ ಕರಗಗಳ ಇತಿಹಾಸ, ದಶದೇಗುಲಗಳ, ದಶಮಂಟಪಗಳ ಬಗ್ಗೆ ವಿವರಗಳನ್ನು ಇಲ್ಲಿ ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ.

ತಾ||03-10-2024ರಂದು ಸಂಜೆ 4 ಗಂಟೆಗೆ ಇತಿಹಾಸ ಪ್ರಸಿದ್ದ ಮಡಿಕೇರಿಯ ಗದ್ದುಗೆ ಬಳಿಯಿರುವ ಪಂಪಿನ ಕೆರೆಯ ಬಳಿ ನಗರದ ನಾಲ್ಕು ಶಕ್ತಿದೇವತೆಗಳ ಕರಗಗಳನ್ನು ಸಿಂಗರಿಸಿ ಮಡಿಕೇರಿ ನಗರದ ಮುಖ್ಯ ಬೀದಿಗಳಲ್ಲಿ ಸಂಚರಿಸುವ ಮೂಲಕ ಐತಿಹಾಸಿಕ ಮಡಿಕೇರಿ ದಸರಾ ನಾಡಹಬ್ಬಕ್ಕೆ ಚಾಲನೆ ದೊರೆಯಲಿದೆ.
ಅಲ್ಲಿಂದ 9 ದಿನಗಳ ನವರಾತ್ರಿ ಉತ್ಸವದೊಂದಿಗೆ, ತಾ|| 11-10-2024ರ ಆಯುಧಪೂಜಾ ಮಹೋತ್ಸವ ಹಾಗೂ ತಾ||12-10-2024ರ ರಾತ್ರಿ 10 ಗಂಟೆಯಿಂದ ನಾಲ್ಕು ಶಕ್ತಿದೇವತೆಗಳ ಕರಗ ಗಳೊಂದಿಗೆ ದಶದೇಗುಲಗಳ ದಶಮಂಟಪಗಳ ಭವ್ಯ ಶೋಭಾಯಾತ್ರೆಯು ಮಡಿಕೇರಿ ನಗರದಲ್ಲಿ ವಿಜೃಂಭಣೆಯಿಂದ ನಡೆಯಲಿದೆ. ತಾ||. 13-10-2024 ರಂದು ಬನ್ನಿ ಮಂಟಪದಲ್ಲಿ ಬನ್ನಿ ಕಡೆಯುವ ಮೂಲಕ ಐತಿಹಾಸಿಕ ಮಡಿಕೇರಿ ದಸರಾ ನಾಡ ಹಬ್ಬಕ್ಕೆ ತೆರೆ ಬೀಳಲಿದೆ.

2023ರ ಮಡಿಕೇರಿ ದಸರಾ ಜನೋತ್ಸವ ಮಂಟಪಗಳ ತೀರ್ಪು ನೀಡುವ ನಿಗದಿತ ಸಮಯ ಮತ್ತು ಸ್ಥಳಗಳು

1. ಶ್ರೀ ಪೇಟೆ ಶ್ರೀ ರಾಮ ಮಂದಿರ, ತೀರ್ಪಿನ ಸಮಯ. 10.00 P.M. ಸ್ಥಳ: ಕಾಫಿ ಕೃಪ ಕಟ್ಟಡದ ಬಳಿ, ಗಾಂಧಿ ಮೈದಾನ

2. ಶ್ರೀ ದೇಚೂರು ಶ್ರೀ ರಾಮ ಮಂದಿರ, ತೀರ್ಪಿನ ಸಮಯ: 11.00 P.M. ಸ್ಥಳ: ಆಂಜನೇಯ ದೇವಾಲಯ ಮುಂಭಾಗ

3. ಶ್ರೀ ದಂಡಿನ ಮಾರಿಯಮ್ಮ, ತೀರ್ಪಿನ ಸಮಯ: 3.00 A.M. ಸ್ಥಳ: ನಗರ ಪೋಲಿಸ್‌ ಠಾಣೆ ಮುಂಭಾಗ

4. ಶ್ರೀ ಚೌಡೇಶ್ವರಿ, ತೀರ್ಪಿನ ಸಮಯ: 11.45 P.M. ಸ್ಥಳ: ಹೋಟೆಲ್‌ ಪಾಪ್ಯುಲರ್‌ ಮುಂಭಾಗ 

5. ಶ್ರೀ ಕಂಚಿ ಕಾಮಾಕ್ಷಿ, ತೀರ್ಪಿನ ಸಮಯ: 3.30 A.M. ಸ್ಥಳ: ವಿನೋದ್‌ ಮೆಡಿಕಲ್ಸ್ ಮುಂಭಾಗ‌

6. ಶ್ರೀ ಚೌಟಿ ಮಾರಿಯಮ್ಮ, ತೀರ್ಪಿನ ಸಮಯ: 4.00 A.M. ಸ್ಥಳ: ಕಾವೇರಿ ಕಲಾಕ್ಷೇತ್ರ ಮುಂಭಾಗ

7. ಶ್ರೀ ಕೋಟೆ ಮಾರಿಯಮ್ಮ, ತೀರ್ಪಿನ ಸಮಯ: 01.15 A.M. ಸ್ಥಳ: ಕೆ.ಎಸ್.ಆರ್.ಟಿ.ಸಿ. ಬಸ್‌ ಸ್ಟ್ಯಾಂಡ್ ಮುಂಭಾಗ‌

8. ಶ್ರೀ ಕೋದಂಡ ರಾಮ, ತೀರ್ಪಿನ ಸಮಯ: 01.45 A.M. ಸ್ಥಳ: ಬಾಟಾ ಶೋರೂಂ ಮುಂಭಾಗ

9. ಶ್ರೀ ಕೋಟೆ ಗಣಪತಿ, ತೀರ್ಪಿನ ಸಮಯ: 12.30 A.M. ಸ್ಥಳ: ನಗರ ಪೋಲಿಸ್‌ ಠಾಣೆ ಮುಂಭಾಗ

10. ಶ್ರೀ ಕರವಲೆ ಭಗವತಿ, ತೀರ್ಪಿನ ಸಮಯ: 2.30 A.M. ಸ್ಥಳ: ಸಿಂದೂರು ಬಟ್ಟೆ ಮಳಿಗೆ ಮುಂಭಾಗ

Click on Image to View More

ದಿನಾಂಕ: 15.10.2023 ರಂದು 4 ಶಕ್ತಿ ದೇವತೆಗಳ ಕರಗ ಮೆರವಣಿಗೆ ಆರಂಭ.
ದಿನಾಂಕ: 16.10.2023 ರಂದು ಸಾಂಸ್ಕೖತಿಕ ಕಾಯ೯ಕ್ರಮಗಳ ಉದ್ಘಾಟನೆ – ಗಾಂಧಿ ಮೈದಾನ.
ದಿನಾಂಕ: 17.10.2023 ರಂದು ಸಾಂಸ್ಕೃತಿಕ ಕಾರ್ಯಕ್ರಮ.
ದಿನಾಂಕ: 18.10.2023 ರಂದು ದಸರಾ ಕವಿಗೋಷ್ಟಿ – ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ – ಸಂಜೆ 6 ಗಂಟೆಯಿಂದ ಸಾಂಸ್ಕೖತಿಕ ಕಾಯ೯ಕ್ರಮಗಳು.
ದಿನಾಂಕ: 19.10.2023ರಂದು ಜಾನಪದ ದಸರಾ – ಜಾನಪದ ನೖತ್ಯ ಕಾಯ೯ಕ್ರಮಗಳು – ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ – ಸಂಜೆ 6 ಗಂಟೆಯಿಂದ ಸಾಂಸ್ಕೖತಿಕ ಕಾಯ೯ಕ್ರಮಗಳು.
ದಿನಾಂಕ: 20.10.2023 ಮಕ್ಕಳ ದಸರಾ – ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ – ಮಕ್ಕಳಿಂದ ಸಂತೆ, ಮಕ್ಕಳಿಂದ ಅಂಗಡಿ, ಮಕ್ಕಳಿಂದ ಮಂಟಪ, ಪ್ಯಾನ್ಸಿ ಡ್ರೆಸ್ ಸ್ಪಧೆ೯ಗಳು – ಸಂಜೆ 6 ಗಂಟೆಯಿಂದ ಮಕ್ಕಳಿಂದಲೇ ಸಾಂಸ್ಕೖತಿಕ ಕಾಯ೯ಕ್ರಮಗಳು.
ದಿನಾಂಕ: 21.10.2023 ರಂದು ಯುವದಸರಾ
ದಿನಾಂಕ: 22.10.2023 ರಂದು ಮಹಿಳಾ ದಸರಾ – ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ – ಮಹಿಳೆಯರಿಂದಲೇ ಕಾಯ೯ಕ್ರಮಗಳು – ಸಂಜೆ 6 ಗಂಟೆಯಿಂದ ಮಹಿಳೆಯರಿಂದಲೇ ಸಾಂಸ್ಕೖತಿಕ ಕಾಯ೯ಕ್ರಮಗಳು. –
ದಿನಾಂಕ: 23.10.2023 ರಂದು  ಆಯುಧ ಪೂಜಾ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ
ದಿನಾಂಕ:24.10.2023 ರಂದು ವಿಜಯದಶಮಿಯ ರಾತ್ರಿ ದಶಮಂಟಪಗಳ ಶೋಭಾಯಾತ್ರೆಯಲ್ಲಿ 10 ದೇವಾಲಯಗಳಿಂದ ಅಸುರಿ ಶಕ್ತಿಗಳ ಸಂಹಾರದೊಂದಿಗೆ ವಿವಧ ಭಂಗಿಗಳಲ್ಲಿ ವಿಜಯದ ಸಂದೇಶ ನೀಡುವ ದಶಮಂಟಪಗಳು ಶೋಭಾಯಾತ್ರೆಯಲ್ಲಿ ಇಡೀ ನಗರವನ್ನೆ ಪುಳಕಿತಗೊಳಿಸುತ್ತದೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮಧ್ಯ ರಾತ್ರಿ 12ಗಂಟೆಯಿಂದ ಬೆಳಗ್ಗಿನವರೆಗೆ ವಾದ್ಯಗೋಷ್ಠಿಯೊಂದಿಗೆ 4 ಶಕ್ತಿ ದೇವತೆಗಳ ಕರಗಗಳ ನಗರ ಪ್ರದಕ್ಷಿಣೆ ಇರುತ್ತದೆ.
ದಿನಾಂಕ: 25.10.2023 ರ ಮುಂಜಾನೆ ಸಾಂಪ್ರದಾಯದಂತೆ ಬನ್ನಿ ಕಡಿಯುವುದರ ಮೂಲಕ ದಸರಾ ಮುಕ್ತಾಯವಾಗಲಿದೆ.

ಶ್ರೀ ಪೇಟೆ ರಾಮಮಂದಿರ
159
ನೇ ವರ್ಷಾಚರಣೆ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೇಚೂರು ಶ್ರೀರಾಮ ಮಂದಿರ
ದೇಚೂರು ಶ್ರೀರಾಮ ಮಂದಿರದ ದಸರಾ ಸಮಿತಿ
106ನೇ ವರ್ಷಾಚರಣೆ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶ್ರೀ ದಂಡಿನ ಮಾರಿಯಮ್ಮ ದೇವಾಲಯ
ದಂಡಿನ ಮಾರಿಯಮ್ಮ ದಸರಾ ಸಮಿತಿ

94
ನೇ ವರ್ಷಾಚರಣೆ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶ್ರೀ ಚೌಡೇಶ್ವರಿ ದೇವಾಲಯ
ಶ್ರೀ ಚೌಡೇಶ್ವರಿ ಬಾಲಕ ಭಕ್ತ ಮಂಡಳಿ ದಸರಾ ಸಮಿತಿ

62
ನೇ ವರ್ಷಾಚರಣೆ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶ್ರೀ ಕಂಚಿ ಕಾಮಾಕ್ಷಿ ದೇವಾಲಯ
ಕಂಚಿ ಕಾಮಾಕ್ಷಿ ಬಾಲಕ ಮಂಡಳಿ ದಸರಾ ಸಮಿತಿ

61
ನೇ ವರ್ಷಾಚರಣೆ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕುಂದುರು ಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಾಲಯ
ಕುಂದುರುಮೊಟ್ಟೆ ಶ್ರೀ ಚೌಟಿಮಾರಿಯಮ್ಮ ದೇವಸ್ಥಾನ ದಸರಾ ಉತ್ಸವ ಸಮಿತಿ

51
ನೇ  ವರ್ಷಾಚರಣೆ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶ್ರೀ ಕೊದಂಡ ರಾಮ ದೇವಾಲಯ
ಶ್ರೀ ಕೊದಂಡ ರಾಮ ದೇವಾಲಯ ದಸರಾ ಸಮಿತಿ

50
ನೇ ವರ್ಷಾಚರಣೆ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶ್ರೀ ಕೋಟೆ ಮಾರಿಯಮ್ಮ ದೇವಾಲಯ
ಕೋಟೆಮಾರಿಯಮ್ಮ ಯುವಕ ಮಿತ್ರ ಮಂಡಳಿ

49
ನೇ ವರ್ಷಾಚರಣೆ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶ್ರೀ ಕೋಟೆ ಮಹಾ ಗಣಪತಿ ದೇವಾಲಯ
ಶ್ರೀ ಕೋಟೆ ಮಹಾ ಗಣಪತಿ ದಸರಾ ಮಂಟಪ ಸಮಿತಿ

48
ನೇ ವರ್ಷಾಚರಣೆ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶ್ರೀ ಕರವಲೆ ಮಹಿಷಿಮರ್ದಿನಿ ಭಗವತಿ ದೇವಸ್ಥಾನ
ಶ್ರೀ ಕರವಲೆ ಭಗವತಿ ದಸರಾ ಉತ್ಸವ ಸಮಿತಿ

30
ನೇ ವರ್ಷಾಚರಣೆ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments