HEBBALE ಹೆಬ್ಬಾಲೆ

ಹೆಬ್ಬಾಲೆ - HEBBALE

ಹೆಬ್ಬಾಲೆ ಗ್ರಾಮ ಪಂಚಾಯಿತಿ ದಕ್ಷಿಣ ಭಾರತದ ಕಾಶ್ಮೀರವೆಂದೇ ಹೆಸರು ವಾಸಿಯಾದ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೋಕಿನ ಕುಶಾಲನಗರ ಹೋಬಳಿಯ ಹಾಸನ ಮುಖ್ಯ ರಸ್ತೆಯಲ್ಲಿದೆ.ಕೊಡಗಿನ ಪಶ್ಚಿಮ ಘಟ್ಟಗಳಿಂದ ಹರಿದು ಬರುವ ಕರ್ನಾಟಕದ ಜೀವನಾಡಿ ಕಾವೇರಿ ನದಿಯ ಮಡಿಲಲ್ಲಿರುವ ಹೆಬ್ಬಾಲೆ ಗ್ರಾಮ ಪಂಚಾಯ್ತಿಯ ಭೌಗೋಳಿಕ ವಿಸ್ತೀರ್ಣ ಸುಮಾರು 3288.66 ಎಕ್ಕರೆ ಹಾಗೂ ಸುಮಾರು 5752 ಸಾವಿರ ಜನಸಂಖ್ಯೆಯನ್ನು ಒಳಗೊಂಡಿದೆ.ಹೆಬ್ಬಾಲೆ ಗ್ರಾಮವು ಕೊಡಗಿನಲ್ಲೇ ಅತಿ ದೊಡ್ಡ ಗ್ರಾಮವಾಗಿದ್ದು ಕೊಡಗಿನ ಗೆಜೆಟೆಯರ್ ನಲ್ಲಿ ದಾಖಲಾಗಿದೆ.
ಈ ಗ್ರಾಮ ಪಂಚಾಯಿತಿಯು 3 ಕಂದಾಯ ಗ್ರಾಮಗಳು ಹಾಗು 6 ಉಪ ಗ್ರಾಮಗಳನ್ನು ಹೊಂದಿದ್ದು ಒಟ್ಟಾರೆಯಾಗಿ 9 ಗ್ರಾಮಗಳನ್ನು ಒಳಗೊಂಡಿದೆ . ಕಂದಾಯ ಗ್ರಾಮಗಳು ಹೆಬ್ಬಾಲೆ, ಮರೂರು, ಹುಲುಸೆ. ಉಪ ಗ್ರಾಮಗಳು ಕಣಿವೆ, ಹಕ್ಕೆ, ಕಾಸಲಗೋಡು, ಚಿನ್ನೇನಹಳ್ಳಿ, ಹಳಗೋಟೆ, 6ನೇ ಹೊಸಕೋಟೆ.
ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಿಂದೂ,ಮುಸ್ಲಿಂ,ಕ್ರಿಶ್ಚಿಯನ್ ರವರು ವಾಸವಾಗಿದ್ದಾರೆ. ಉಪ ಜಾತಿಗಳಾದ ನಾಮಧಾರಿ ಕೋಮಿಗೆ ಸೇರಿದವರ ಸಂಖ್ಯೆ ಅಧಿಕವಾಗಿದ್ದು ಹಾಗೂ 2ನೇ ಸ್ಥಾನದಲ್ಲಿ ಪರಿಶಿಷ್ಠ ಜಾತಿಯವರು ಇರುತ್ತಾರೆ, ಇವರೊಂದಿಗೆ ಲಿಂಗಾಯಿತ, ಒಕ್ಕಲಿಗ, ನಯನಜ ಕ್ಷತ್ರಿಯ, ಮಡಿವಾಳ ಶೆಟ್ಟರು, ಕುಂಬಾರ ಶೆಟ್ಟರು ಮತ್ತು ಪರಿಶಿಷ್ಠ ಪಂಗಡ ಹಾಗೆ ಹಲವಾರು ಕೋಮಿನವರು ಇದ್ದಾರೆ. ಯಾವುದೇ ಭೇದಭಾವವಿಲ್ಲದೆ ಎಲ್ಲ ಧರ್ಮದವರು ಸಹಭಾಳ್ವೆಯಿಂದ ಒಟ್ಟಾಗಿ ವಾಸಿಸುತ್ತಿದ್ದಾರೆ.
ಹೆಬ್ಬಾಲೆ ಗ್ರಾಮದಲ್ಲಿ ವರ್ಷಕ್ಕೊಮ್ಮೆ ಕಾರ್ತಿಕ ಮಾಸದ ಕೊನೆಯ ದಿನದಂದು ನಡೆಯುವ ಬನಶಂಕರಿ ಅಮ್ಮನ ಹಬ್ಬವು ಪ್ರಸಿದ್ಧವಾಗಿದೆ. ಈ ಹಬ್ಬವನ್ನು ಊರಿನ ಗ್ರಾಮಸ್ಥರೆಲ್ಲಾ ಒಟ್ಟಾಗಿ ಶ್ರದ್ಧೆ, ಭಕ್ತಿಯಿಂದ ಆಚರಿಸುತ್ತಾರೆ. ರಾತ್ರಿವೇಳೆ ನಡೆಯುವ ದೇವಿಯ ಉತ್ಸವವು ನಯನ ಮನೋಹರವಾಗಿರುತ್ತದೆ. ದೇವಿಯ ಉತ್ಸವದ ಜೊತೆಯಲ್ಲಿ ಹಲವಾರು ಉತ್ಸವಗಳು ಅಕರ್ಷಣಿಯವಾಗಿರುತ್ತದೆ. ಈ ಹಬ್ಬಕ್ಕೆ ಸುಮಾರು ಲಕ್ಷದಷ್ಟು ಜನಸಂಖ್ಯೆ ಸೇರಿರುತ್ತಾರೆ.
ಇಲ್ಲಿಯ ರೈತರು ತಮ್ಮ ಜಮೀನಿನಲ್ಲಿ ಭತ್ತದ ಜೊತೆಗೆ ರೇಷ್ಮೆ ಕೃಷಿ, ವಿವಿಧ ತರಕಾರಿಗಳು, ದ್ವಿದಳ ಧಾನ್ಯಗಳು ಹಾಗೂ ತೋಟಗಾರಿಕಾ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಹಾಗೆಯೇ ನೀರಾವರಿ ಸೌಲಭ್ಯವಾಗದ ಮಳೆಯಾಶ್ರಿತ ಪ್ರದೇಶದಲ್ಲಿ ತಂಬಾಕು(ಹೊಗೆಸೊಪ್ಪು) ಮುಸುಕಿನ ಜೋಳ, ರಾಗಿ ಹಾಗೂ ಕಾಳುಕಡ್ಡಿಗಳನ್ನು ಬೆಳೆಯುತ್ತಿರುವ ಇದರ ಜೋತೆಗೆ ವಾಣಿಜ್ಯ ಬೆಳೆಯಾದ ಶುಂಠಿ ಕೃಷಿಯಲ್ಲಿ ತೊಡಗಿದ್ದಾರೆ. ಈ ಕೃಷಿಯಿಂದ ರೈತರು ಹೆಚ್ಚಿನ ಇಳುವರಿ ತೆಗೆದು ಆರ್ಥಿಕವಾಗಿ ಮುಂದುವರಿದಿದ್ದಾರೆ.
ಈ ಗ್ರಾಮದಲ್ಲಿ ಜನಸಂಖ್ಯೆ ಹೆಚ್ಚಿದಂತೆ ಜಾನುವಾರುಗಳ ಸಂಖ್ಯೆ ಹೆಚ್ಚಲು ಕಾರಣಕರ್ತರಾದ ರೈತಾಪಿ ವರ್ಗವನ್ನು ನಾವು ಅಭಿನಂದಿಸಲೇ ಬೇಕಾಗುತ್ತದೆ. ಜಿಲ್ಲೆಯಲ್ಲಿಯೇ ಅತಿ ಹೆಚ್ಚಿನ ಜಾನುವಾರುಗಳನ್ನು ಹೊಂದಿರುವ ಗ್ರಾಮವಾಗಿದೆ. ಹಾಲು ಉತ್ಪಾದಿಸಿ ಹಾಲಿನ ಸಂಗ್ರಹ ಕೇಂದ್ರಗಳನ್ನು ಒಳಗೊಂಡಿದೆ ಕೃಷಿಕರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಇವರ ಪಾತ್ರವು ಹಿರಿದಾಗಿದೆ.
ಹೆಬ್ಬಾಲೆ ಗ್ರಾಮವು ಇತರ ಎಲ್ಲಾ ಗ್ರಾಮಗಳು ಬೆಳೆದಂತೆ ಬೆಳೆದು ಅಭಿವೃದ್ಧಿ ಹೊಂದಿದೆ ನಮ್ಮೂರಿನಲ್ಲಿ ಪ್ರಾಥಮಿಕ, ಪ್ರೌಢಶಾಲೆ, ಸಂಯುಕ್ತ ಪದವಿ ಪೂರ್ವ ಕಾಲೇಜು, ಬಾಲಿಕ ಪ್ರೌಢಶಾಲೆ, ಸರ್ಕಾರಿ ಆರೋಗ್ಯ ಕೇಂದ್ರ, ಕೆನರಬ್ಯಾಂಕ್, ಪಶುವೈದ್ಯಶಾಲೆ, ನಾಗರಿಕ ಸೌಲಭ್ಯಗಳನ್ನು ಹೊಂದಿದೆ ಹಾರಂಗಿ ಅಣೆಕಟ್ಟಿನಿಂದ ನಮ್ಮ ಪ್ರಾಂತ್ಯಕ್ಕೆ ಹಿಂದೆ ತರಕಾರಿ ಬೆಳೆಯುತ್ತಿದ್ದ ಹೊಲಗಳು ಈಗ ಭತ್ತ ಬೆಳೆಯುವ ನೀರಾವರಿ ಜಮೀನುಗಳಾಗಿ ಹಳೆ ಮನೆಗಳು ಆಧುನೀಕರಣಗೊಂಡಿವೆ. ಜನಸಂಖ್ಯೆ ಹೆಚ್ಚಿದಂತೆ ಗ್ರಾಮಗಳ ವಿಸ್ತಾರ ಹೆಚ್ಚಿದೆ.
ನಾಗರೀಕತೆ ಛಾಪು ನಮ್ಮ ಗ್ರಾಮದ ಮೇಲೂಬಿದ್ದಿದೆ. ಹಿಂದಿನ ಸಾಮಾಜಿಕ ಬಾಂಧವ್ಯ ಕಡಿಮೆಯಾಗುತ್ತಿದ್ದು ವ್ಯವಹಾರಿಕತೆಗೆ ಒತ್ತು ಕೊಡುತ್ತಿದ್ದಾರೆ. ಕಾನೂನು ಸುಭದ್ರತೆಗಾಗಿ ಆರಕ್ಷರಠಾಣೆ ಪ್ರಾರಂಭವಾಗಿದೆ. ಕೊಡಗು ಜಿಲ್ಲೆಯ ಗಡಿರೇಖೆಯನ್ನೆಳೆಯುತ್ತಾ ಸಾಗಿರುವ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯು ಕೊಡಗು ಹಾಗೂ ಮೈಸೂರು ಜಿಲ್ಲೆಯ ಗಡಿಪ್ರಾಂತ್ಯದವರ ನಡುವಿನ ಸಂಪರ್ಕವನ್ನು ಹೆಚ್ಚಿಸಿದೆ.
ಈ ಗ್ರಾಮದಲ್ಲಿ ವಿದ್ಯಾವಂತರ ಸಂಖ್ಯೆ ಜಿಲ್ಲೆಯ ಇತರ ಗ್ರಾಮಗಳಿಗೆ ಹೋಲಿಸಿದರೆ ಹೆಚ್ಚಿದ್ದು, ಹೆಚ್ಚು ಸರಕಾರಿ ನೌಕರರನ್ನು ಹೊಂದಿರುವ ಗ್ರಾಮವಾಗಿದೆ. ಇಲ್ಲಿ ಮನೆಗೊಬ್ಬರಂತೆ ಇಲ್ಲವೇ ವಠಾರಕ್ಕೊಬ್ಬರಾದರೂ ಶಾಲಾ ಶಿಕ್ಷಕರಾಗಿ ಇರುವುದು ಇಲ್ಲಿನ ವೈಶಿಷ್ಠ್ಯವೇ ಆಗಿರುತ್ತದೆ. ಕೆಲವು ಕುಟುಂಬಗಳಲ್ಲಿ 2-3 ಮಂದಿ ಉಪಾಧ್ಯಾಯರಾಗಿರುವುದು ವಿಶೇಷವೇ ಆಗಿರುತ್ತದೆ.
ಸರಕಾರಿ ನೌಕರರ ಸಂಖ್ಯೆ ಹೆಚ್ಚಿದಂತೆ ಈ ಗ್ರಾಮಗಳಲ್ಲಿ ದೀನದಲಿತರು, ಕೂಲಿಕಾರ್ಮಿಕರು ಹಾಗೂ ದುರ್ಬಲ ವರ್ಗದ ನೌಕರರ ಸಂಖ್ಯೆಯು ಅಷ್ಟು ಪ್ರಮಾಣದಲ್ಲಿರುವುದು. ತಮ್ಮ ಮಕ್ಕಳಿಗೆ ಕನಿಷ್ಠ ಶಿಕ್ಷಣವನ್ನಾದರೂ ಕೊಡಿಸುವಲ್ಲಿ ಇಲ್ಲಿನ ರೈತಾಪಿ ವರ್ಗ ಶಿಕ್ಷಣದಲ್ಲಿ ತೋರಿಸಿರುವ ಕಾಳಜಿಯನ್ನು ಮೆಚ್ಚಬೇಕಾದ್ದೇ.

ಗ್ರಾಮ ಪಂಚಾಯಿತಿ ಸದಸ್ಯರು

2021 – 2026

 1. ಮಂಜುನಾಥ ಹೆಚ್ ಎಸ್ President 9845253223
 2. ಅರುಣಕುಮಾರಿ ಹೆಚ್ ಪಿ Vice President 9480251766
 3. ರತ್ನಮ್ಮ Member 9481824661
 4. ಕವಿತ ಹೆಚ್ ಕೆ Member 9481868735
 5. ಹೆಚ್ ಜೆ ಪರಮೇಶ Member 9731958579
 6. ಹೆಚ್ ಜೆ ನಾರಾಯಣ Member 9740755631
 7. ಪುಟ್ಟಲಕ್ಷ್ಮಿ Member 9108384965
 8. ಶಿವನಂಜಪ್ಪ ಹೆಚ್ ಎನ್ Member 9448448563
 9. ಪವಿತ್ರ ಬಿ ಬಿ Member 7892597445
 10. ಹೆಚ್ ಸಿ ಮಹಾದೇವ Member 9611642142
 11. ತನುಕುಮಾರ್ ಹೆಚ್ ಪಿ Member 7676609396
 12. ಯಶಸ್ವಿನಿ ಹೆಚ್ ವಿ Member 9481242402
 13. ಹೆಚ್ ವಿ ಚಂದ್ರಶೇಖರ ಜೋಗಿ Member 9008605626
 14. ಲತಾ Member 9113956637

ಪಂಚಾಯ್ತಿ ಸಂಪರ್ಕ

ವಿಳಾಸ: ಗ್ರಾಮ ಪಂಚಾಯಿತಿ ಕಾರ್ಯಾಲಯ, ಹೆಬ್ಬಾಲೆ ಗ್ರಾಮ, ಸೋಮವಾರಪೇಟೆ ತಾಲ್ಲೂಕು, ಕೊಡಗು ಜಿಲ್ಲೆ- 571232
Tel: 08276-276310
Pdo:
Mob: 

Email: hebbale.spet.kodg@gmail.com

ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

 • ಪ್ರಾಥಮಿಕ ಆರೋಗ್ಯ ಕೇಂದ್ರ, ಹೆಬ್ಬಾಲೆ: 08276 276266

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ಗ್ರಾಮ ಪಂಚಾಯಿತಿ ಸದಸ್ಯರು

2015 – 2020

 1. ಲತಾ ಕೆ ಎನ್ President 9480721348
 2. ಸರೋಜಮ್ಮ ಹೆಚ್ ಎಂ Vice President
 3. ಮಧುಸೂಧನ ಹೆಚ್ ಎಸ್ Member 9535585100
 4. ವಿಜಯ ಹೆಚ್ ಆರ್ Member 8762110754
 5. ಚೇತನ್ ಹೆಚ್ ಎಸ್ Member 9449275232
 6. ಅಶೋಕ ಹೆಚ್ ಕೆ Member 9591409446
 7. ದಿನೇಶ ಹೆಚ್ ಟಿ Member 9741820092
 8. ದೇವಮ್ಮ Member 9591778085
 9. ಶಿವನಂಜಪ್ಪ Member 9448448563
 10. ವೆಂಕಟೇಶ್ Member 9741935892
 11. ಮಂಜುಳ Member 7090504025
 12. ಪ್ರೇಮ ಜೆ ಡಿ Member 8722433829
 13. ಪ್ರಮೀಳ ಹೆಚ್ ಆರ್ Member 9880499856
 14. ಪದ್ಮ ಹೆಚ್ ಆರ್ Member 7259604507
 • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.