KAMBIBANE ಕಂಬಿಬಾಣೆ

ಕಂಬಿಬಾಣೆ - KAMBIBANE

ಕಂಬಿಬಾಣೆ ಗ್ರಾಮಪಂಚಾಯಿತಿಯು ಕೊಡಗು ಜಿಲ್ಲಾ ಕೇಂದ್ರದಿಂದ 21ಕಿ.ಮೀ, ಸೋಮವಾರಪೇಟೆ ತಾಲ್ಲೊಕು ಕೇಂದ್ರದಿಂದ 42 ಕಿ.ಮೀ, ಸುಂಟಿಕೊಪ್ಪ ಹೋಬಳಿ ಕೇಂದ್ರದಿಂದ 7 ಕಿ.ಮೀ.ಬಿ.ಎಂ.ರಾಜ್ಯ ಹೆದ್ದಾರಿಯ ಕೊಡಗರಹಳ್ಳಿಯಿಂದ ಚಿಕ್ಲಿಹೊಳೆ ಜಲಾಶಯ ರಸ್ತೆಯಲ್ಲಿ 4 ಕಿ.ಮೀ.ಅಂತರದಲ್ಲಿದೆ. ಈ ಗ್ರಾಮ ಪಂಚಾಯಿತಿಯು ಪೂರ್ವಕ್ಕೆ 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ, ಪಶ್ಚಿಮಕ್ಕೆ ಕೆದಕಲ್ ಗ್ರಾಮಪಂಚಾಯಿತಿ,ಉತ್ತರಕ್ಕೆ ಕೊಡಗರಹಳ್ಳಿ ಗ್ರಾಮಪಂಚಾಯಿತಿ, ಹಾಗೂ ದಕ್ಷಿಣಕ್ಕೆ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸರಹದ್ದನ್ನು ಹೊಂದಿದೆ.
ಈ ಗ್ರಾಮಪಂಚಾಯಿತಿಯು 2001ರ ಜನಗಣತಿ ಪ್ರಕಾರ 2925 ಜನಸಂಖ್ಯೆಯನ್ನು ಹೊಂದಿದ್ದು, ಅತ್ತೂರು ನಲ್ಲೂರು 1 ಮತ್ತು 2 ಎಂಬ ಕ್ಷೇತ್ರಗಳಾಗಿ ವಿಂಗಡಣೆಗೊಂಡಿದ್ದು,8 ಮಂದಿ ಚುನಾಯಿತ ಸದಸ್ಯರ ಆಡಳಿತಮಂಡಳಿಯನ್ನು ಹೊಂದಿರುತ್ತದೆ.
ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 3 ಅಂಗನವಾಡಿ ಕೇಂದ್ರಗಳು, 2 ಶಿಶುವಿಹಾರ ಕೇಂದ್ರಗಳು,2 ಹಿರಿಯ ಹಾಗೂ 1 ಕಿರಿಯ ಪ್ರಾಥಮಿಕ ಶಾಲೆಗಳು,2 ಕಿರಿಯ ಆರೋಗ್ಯ ಕೇಂದ್ರಗಳಿದ್ದು ಗ್ರಾಮೀಣ ವಿದ್ಯಾರ್ಥಿಗಳಿಗೆ ಮತ್ತಮ ಶಿಕ್ಷಣ ಕಲ್ಪಿಸಲಾಗುತ್ತಿದೆ.

ಈ ಗ್ರಾಮ ಪಂಚಾಯಿತಿಯು ಸಂಪೂರ್ಣ ಸ್ವಚ್ಚತಾ ಆಂದೋಲನದಡಿಯಲ್ಲಿ ರಾಷ್ಟ್ರಪತಿಗಳ ಪುರುಸ್ಕಾರವನ್ನು ಪಡೆದುಕೊಂಡಿದೆ.

ಈ ಗ್ರಾಮಪಂಚಾಯಿತಿ ವ್ಯಾಪ್ತಿಯು ಅಂದಾಜು 1196.84 ಹೆಕ್ಟೇರು ಪ್ರದೇವನ್ನು ಹೊಂದಿದೆ ಇದರಲ್ಲಿ ಬಹುಬಾಗ ಖಾಸಗಿ ಕಾಫಿತೋಟವನ್ನು ಹೊಂದಿದ್ದು,ಭಾಗಶಃ ಖುಷ್ಕಿ ಜಮೀನನ್ನು ಹೊಂದಿರುತ್ತದೆ.ಇಲ್ಲಿನ ಭೂಮಿಯು ಕಪ್ಪು ಮತ್ತು ಕೆಂಪು ಮಿಶ್ರಿತವಾಗಿದ್ದು ಕಾಫಿ ಬೆಳೆಗೆ ಉತ್ತಮವಾಗಿದೆ, ಕಾಫಿ ತೋಟಗಳಲ್ಲಿ ಕಾಫಿ ಬೆಳೆಯ ಜೊತೆಗೆ ಇತರೆ ಆರ್ಥಿಕ ಬೆಳೆಗಳಾದ ಕರಿಮೆಣಸು,ಏಲಕ್ಕಿ,ಬಾಳೆ,ಕಿತ್ತಳೆ ಹಾಗೂ ಗೆಡ್ಡೆಗೆಣಸುಗಳನ್ನು ಬೆಳೆಯುತ್ತಿರುವರು.ಇಲ್ಲೆ ವಾರ್ಷಿಕವಾಗಿ ಸುಮಾರು 1100ಮಿ.ಮೀ.ನಿಂದ 1900 ಮಿ.ಮೀ ಮಳೆಯಾಗುತ್ತದೆ.
ಈ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬಹುಸಂಖ್ಯಾತ ಹಿಂದುಗಳು, ಅಲ್ಪ ಪ್ರಮಾಣದ ಮುಸ್ಲಿಂ, ಕ್ರಿಶ್ಚಿಯನ್ ಧರ್ಮದವರು ವಾಸಿಸುತ್ತಿದ್ದು,ಎಲ್ಲಾ ಕೋಮಿನ ಜನಾಂಗದವರು ಅನ್ಯೋನ್ಯವಾಗಿ ಕೃಷಿಯ ಆದಾಯದಿಂದಲೇ ಜೀವನ ನಡೆಸುತ್ತಿರುವರು,ಇದಲ್ಲದೆ ಕಾಫಿ ತೋಟಗಳಲ್ಲಿರುವ ಕಾರ್ಮಿಕರು ತೋಟದ ಕಾರ್ಮಿಕರ ವಸತಿಗೃಹಗಳಲ್ಲಿ ವಾಸಿಸುತ್ತಿರುವರು.
ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ನಲ್ಲಿ ನೀರು ಸರಬರಾಜು ಹಾಗೂ ಒಂದು ಕಿರು ನೀರು ಸರಬರಾಜು ವ್ಯವಸ್ಥೆಯಿದೆ.
ಈ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಂಬಿಬಾಣೆಯಲ್ಲಿ ಬಹಳ ಪುರಾತನವಾದ ಶ್ರೀ ರಾಮಮಂದಿರ ಹಾಗೂ ಮತ್ತಿಕಾಡಿನಲ್ಲಿ ದಂಡಿನ ಮಾರಿಯಮ್ಮ ದೇವಾಲಯಗಳಿದ್ದು ಇದರ ಜೀರ್ಣೋದ್ದಾರಕ್ಕೆ ಗ್ರಾಮದ ಎಲ್ಲರೂ ತೊಡಗಿದ್ದಾರೆ,ಗ್ರಾಮ ಪಂಚಾಯಿತಿ ಸದಸ್ಯರು

2021 – 2026

 1. ಮಧು ನಾಗಪ್ಪ President 9449678903
 2. ಎಂ ಎನ್ ಅಶ್ವಿನಿ Vice President 7411537747
 3. ಶಂಕರ ಎನ್ Member 8277133115
 4. ರಾಧ Member 9483323474
 5. ಅರ್ ಅರ್ ಮೋಹನ Member 8277745461
 6. ಕೆ ಬಿ ಕೃಷ್ಣ Member 8277133092

ಪಂಚಾಯ್ತಿ ಸಂಪರ್ಕ

ವಿಳಾಸ:  ಅತ್ತೂರು ನಲ್ಲೂರು ಗ್ರಾಮ ಮತ್ತು ಅಂಚೆ ಸುಂಟಿಕೊಪ್ಪ ಹೋಬಳಿ, ಸೋಮವಾರಪೇಟೆ ತಾಲ್ಲೊಕು ಕೊಡಗು ಜಿಲ್ಲೆ – 571 237
Tel: 08276261602
Pdo:
Mob: 

Email: somkambibane@gmail.com

 

ನಾಪೊಕ್ಲು ನಾಡಕಛೇರಿ
Tel:

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ಗ್ರಾಮ ಪಂಚಾಯಿತಿ ಸದಸ್ಯರು

2015 – 2020

 1. ಕೃಷ್ಣ ಕೆ ಬಿ President 8277133092
 2. ಶೋಭನಾ Vice President 8050211046
 3. ಹೆಚ್.ಕೆ.ಆನಂದ Member 9845345848
 4. ಪಿ.ಮನು Member 9482039200
 5. ಟಿ.ಪಿ.ಅಪ್ಸ Member 9481250662
 6. ಎಂ.ಮಂಜುಳ Member 9591847033

ಶುಭಕೋರುವವರು

 • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.