KARMADU ಕಾಮಾಱಡು

ಕಾರ್ಮಾಡು - KARMADU

ಕಾರ್ಮಾಡು ಗ್ರಾಮ ಪಂಚಾಯಿತಿ ಕಾರ್ಯಾಲಯ ಅಮ್ಮತ್ತಿ ಅಂಚೆ,ವಿರಾಜಪೇಟೆ ತಾಲ್ಲೂಕು,ಕೊಡಗು ಜಿಲ್ಲೆ.
ಗ್ರಾಮ ಪಂಚಾಯಿತಿಯ ಆಡಳಿತಾತ್ಮಾಕ ಪರಿಚಯ
ದೋ……… ಎಂದು ಒಂದೇ ಸಮನೆ ಸುರಿಯುವ ನಿರಂತರ ಮಳೆಯ ರಭಸಕ್ಕೆ ಹಳ್ಳ ಕೊಳ್ಳಗಳೆಲ್ಲಾ ತುಂಬಿ.ಎತ್ತರವಾದ ಬೆಟ್ಟ ಗುಡ್ಡಗಳಿಂದ ಬೋರ್ಗರೆಯುತ್ತಾ ಲಲನೆಯರಂತೆ ಕಣ್ಣ ಕುಕ್ಕುವ ಜಲಪಾತಗಳು ,ಪ್ರಕೃತಿ ಸಿರಿಯ ಕೊಡಗಿನಲ್ಲಿ ಇವೇಲ್ಲಾ ಸರ್ವೆ ಸಾಮಾನ್ಯ ಮನೋಹರ ದೃಶ್ಯ ಅಷ್ಟೇ ಅಲ್ಲ ಪ್ರಕೃತಿ ಮಾತೆ ಹಸಿರು ಸೀರೆ ಉಟ್ಟು ಕಂಗೋಳಿಸುತ್ತಾಳೆ.ಬಳಕುತ್ತಾ ಹರಿದಾಡುವ ಹಾವುಗಳಂತೆ ಕಾಣುವ ರಸ್ತೆ ,ಅಂತರ್ ರಾಷ್ಟ್ರೀಯ ಮಟ್ಟದವರೆಗೆ ಹೆಸರು ಮಾಡಿರುವ ಕ್ರೀಡಾಪಟುಗಳು,ಯೋಧರು,ಕಾಫಿ ಈಗೆ ಚಿಕ್ಕದಾದರು ಚೊಕ್ಕವಾಗಿ,ಶಿಸ್ತುಬದ್ಧ ಜೀವನ ನಡೆಸುವ ವಿಶಿಷ್ಟ ಸಂಸ್ಕೃತಿಯ ವಿರಾಧೀ ಯೋಧರು ಈ ಜನರ ಜೀವನ ಶೈಲಿ ಆಚಾರ ವಿಚಾರ ಒಂದು ವಿಸ್ಮಯ ಇದೇ ಕೊಡಗಿನ ಹೆಮ್ಮಯ ವಿಚಾರ ಸದಾ ತುಂಬಿ ತುಳುಕುತ್ತಿರುವ ಕಾವೇರಿ ನದಿಯ ಉಗಮ ಸ್ಥಾನವು ಕೊಡಗಿನಲ್ಲಿಯೇ.
ಇಲ್ಲಿ ಇರುವ ಮೂರು ತಾಲ್ಲೂಕುಗಳಲ್ಲಿ ಅತೀ ದೊಡ್ಡ ತಾಲ್ಲೂಕು ವೀರಾಜಪೇಟೆ.ಮೈಸೂರು ಜಿಲ್ಲೆಯ ಮೇರೆಗಳಿಂದ ಸುತ್ತುವರೆದಿದೆ. ಇಂದಿನ ಕಾಲದಿಂದಲೂ ಕೇರಳಕ್ಕೆ ವ್ಯಾಪಾರ ಕೇಂದ್ರದಿಂದ ಈ ವಿರಾಜಪೇಟೆಯಲ್ಲಿ ವೈವಿಧ್ಯಮಯ ಜನ ಜೀವನ ನಡೆಸುವ ಎಲ್ಲಾ ರೀತಿಯ ಜಾತಿ ಮತ ಧರ್ಮದ ಜನರಿದ್ದಾರೆ.ಜಿಲ್ಲಾ ಪ್ರಖ್ಯಾತಿಗಳಲ್ಲಿ ನಾಗರಹೊಳೆ ಅಭಯ ಅರಣ್ಯ,ಇರ್ಪು ಜಲಪಾತ ಹೊಂದಿರುವ ಹೆಮ್ಮೆಯ ತಾಲ್ಲೂಕು ವಿರಾಜಪೇಟೆ.ಇದು ಜಿಲ್ಲಾ ಕೇಂದ್ರದಿಂದ 35 ಕಿ.ಮೀ.ದೂರದಲ್ಲಿರುವ ತಾಲ್ಲೂಕು.ಇದು 6 ಹೋಬಳಿಗಳು ಹಾಗೂ 36 ಗ್ರಾಮ ಪಂಚಾಯಿತಿಗಳು ,ವಿರಾಜಪೇಟೆ ಕೇಂದ್ರ ಪಟ್ಟಣ್ಣ ಪಂಚಾಯಿತಿ ಆಡಳಿತ ವ್ಯವಸ್ಥೆಯನ್ನು ಒಳಗೊಂಡಿದೆ.
ಕಾರ್ಮಾಡು ಗ್ರಾಮ ಪಂಚಾಯಿತಿಯು ಕಾರ್ಮಾಡು ಗ್ರಾಮದಲ್ಲಿದ್ದು ಇದು ಅಮ್ಮತ್ತಿ ಗ್ರಾಮ ಹಾಗೂ ಹೋಬಳಿಗೆ ಹೊಂದಿಕೊಂಡತೆ ಇರುತ್ತದೆ.ಕಾರ್ಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2 ಕಂದಾಯ ಗ್ರಾಮಗಳನ್ನು ಹೊಂದಿದ್ದು ಇದಕ್ಕೆ ಕಾರ್ಮಾಡು ಹಾಗೂ ಕಾವಾಡಿ ಗ್ರಾಮ ಎಂದು ನಾಮಕರಣ ಮಾಡಲಾಗಿದೆ.ಕಾರ್ಮಾಡು ಗ್ರಾಮ ಪಂಚಾಯಿತಿಯು ಗೋಣಿಕೊಪ್ಪ ಹಾಗೂ ಪಾಲಿಬೆಟ್ಟಕ್ಕೆ ಹೋಗುವ ರಸ್ತೆಯ ಎಡಭಾಗದಲ್ಲಿದೆ.ಇದು ಜಿಲ್ಲಾ ಕೇಂದ್ರ ಮಡಿಕೇರಿಯಿಂದ 35ಕಿ.ಮೀ.ಹಾಗೂ ತಾಲ್ಲೂಕು ಕೇಂದ್ರ ವಿರಾಜಪೇಟೆಯಿಂದ 9 ಕಿ.ಮೀ.ದೂರದಲ್ಲಿದೆ.ಹಾಗೂ ತಾಲ್ಲೂಕು ಪಂಚಾಯಿತಿ ಪೊನ್ನಂಪೇಟೆಯಿಂದ 20 ಕಿ.ಮೀ.ಹೋಬಳಿ ಕೇಂದ್ರ ಅಮ್ಮತ್ತಿ ಯಿಂದ 0.05 ಕಿ.ಮೀ.ದೂರದಲ್ಲಿ ಕಾರ್ಮಾಡು ಗ್ರಾಮ ಪಂಚಾಯಿತಿ ಕಛೇರಿಯನ್ನು ಹೊಂದಿರುತ್ತದೆ. ಇದರ ವ್ಯಾಪ್ತಿಯಲ್ಲಿ 560 ಹೆಕ್ಟೇರ್ ಗಳಷ್ಟು ಭೂ ವಿಸ್ತೀಣ ಹೊಂದಿದ್ದು ಅದರಲ್ಲಿ 380 ಕೃಷಿ ಯೋಗ್ಯ ಭೂಮಿ ಹೊಂದಿದ್ದು ಹಾಗೂ 60 ರಷ್ಟು ಅರಣ್ಯ ಪ್ರದೇಶವನ್ನು ಹೊಂದಿದೆ.ಕಾರ್ಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 873 ಕುಟುಂಬಗಳು ನೆಲಸಿದ್ದು ಅದರಲ್ಲಿ ಪ.ಜಾತಿ 100 ,ಪ.ಪಂ 135,ಅಲ್ಪಸಂಖ್ಯಾತರು 263 ಹಾಗೂ ಇತರರು 375 ಕುಟುಂಬಗಳು ನೆಲಸಿದ್ದಾರೆ.
ಕಾರ್ಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 3919 ಜನ ಸಂಖ್ಯೆಯನ್ನು ಹೊಂದಿದ್ದು (2001ರ ಜನಗಣತಿ ಪ್ರಕಾರ)ಅದರಲ್ಲಿ ಪ.ಜಾತಿ 324,ಪ.ಪಂ 245,ಅಲ್ಪಸಂಖ್ಯಾತರು 1472,ಹಾಗೂ ಇತರರು 1878 ಜನ ಸಂಖ್ಯೆಯನ್ನು ಹೊಂದಿರುತ್ತದೆ.ಇದರಲ್ಲಿ ಪ.ಜಾತಿ ,ಪ.ಪಂಗಡ,ಕೊಡವ ಜನಾಂಗ,ಕುರುಬರು ,ಎರವರು,ಒಕ್ಕಲಿಗರು,ಗೌಡರು,ಮಡಿವಾಳರು,ಐರಿಗಳು,ಮುಸ್ಲಿಂ,ಕ್ರಿಶ್ಚಿಯನ್ ,ಮಲೆಯಾಳಿ,ಬಿಲ್ಲವ,ಪಾಲೆ,ತಮಿಳು ಜನಾಂಗಕ್ಕೆ ಸೇರಿದವರಾಗಿರುತ್ತಾರೆ ಇದರಲ್ಲಿ ಶೇ.40 ರಷ್ಟು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು ಶೇ.46 ರಷ್ಟು ಜನರು ಕೃಷಿ ಕೂಲಿಯನ್ನು ಅವಲಂಭಿಸಿರುತ್ತಾರೆ. ಉಳಿದ ಶೇ. 4 ರಷ್ಟು ಜನರು ಸರಕಾರಿ ನೌಕರಿ ವರ್ಗಕ್ಕೆ ಹಾಗೂ ಇನ್ನಿತರ ಕುಶಲ ಕರ್ಮಿಗಳ ಕುಟುಂಬದವರಾಗಿರುತ್ತಾರೆ.
ಈ ಪಂಚಾಯಿತಿ ವ್ಯಾಪ್ತಿಯಲ್ಲಿ 1ಸ.ಮಾ.ಪ್ರಾ.ಶಾಲೆ ಹಾಗೂ 1ಖಾಸಗಿ ಪ್ರೌಢಶಾಲೆ ,1 ಅನುದಾನಿತ ಪ್ರೌಢಶಾಲೆ,2 ಖಾಸಗಿ ಪ್ರಾಥಮಿಕ ಶಾಲೆಗಳು,7ಅಂಗನವಾಡಿ ಶಾಲೆಗಳು,1 ಪಶು ವೈಧ್ಯ ಆಸ್ಪತ್ರೆ ,ದೂರವಾಣಿ ವಿನಿಮಯ ಕಛೇರಿ ,ಪ್ರಾಥಮಿಕ ಆರೋಗ್ಯ ಕೇಂದ್ರ,ಸರಕಾರಿ ಹಾಗೂ ಖಾಸಗಿ ಬ್ಯಾಂಕ್, ಕಂದಾಯ ನೀರಿಕ್ಷಕರ ಕಛೇರಿ,ಪೋಲಿಸ್ ಉಪಠಾಣೆ,ಹೋಬಳಿ ಮಟ್ಟದ ನೆಮ್ಮದಿ ಕೇಂದ್ರವನ್ನು ಕಾರ್ಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹೊಂದಿರುತ್ತದೆ.ಸದರಿ ಗ್ರಾಮ ಪಂಚಾಯಿತಿಯ ಸರ ಹದ್ದಿನಲ್ಲಿ ಚೆಂಬೆಬೆಳ್ಳೂರು ಗ್ರಾ.ಪಂ.,ಹೋಸೂರು ಗ್ರಾ.ಪಂ.,ಬಿಳುಗುಂದ ಗ್ರಾ.ಪಂ.,ಕಣ್ಣಂಗಾಲ ಗ್ರಾ.ಪಂ.,ಚೆನ್ನಯ್ಯನ ಕೋಟೆ,ಅಮ್ಮತ್ತಿ ,ಹಾಲುಗುಂದು,ಪಾಲಿಬೆಟ್ಟ,ಸಿದ್ದಾಪುರ ಗ್ರಾಮ ಪಂಚಾಯಿತಿಗಳು ಇರುತ್ತದೆ.

ಗ್ರಾಮ ಪಂಚಾಯಿತಿ ಸದಸ್ಯರು

2021 – 2026

 1. ಕೆ.ಬಿ.ನಾಣಯ್ಯ President 9902755756
 2. ಬೋಪಣ್ಣ ಎಂ ಎಂ Vice President 9880997738
 3. ರತ್ನ ಹೆಚ್ ಎಸ್ Member 7337785584
 4. ಅಭಿಜಿತ್ ಹೆಚ್ ಎ Member 9880791624
 5. ಸಮೀರ ಪಿ ಎಂ Member 8197555839
 6. ಸಲೀನ ಡಿಕೋತ್ Member 8971810480
 7. ಕೆ.ಎಂ.ಹಂಸ Member 9480244811
 8. ಯಶೋಧ ಎನ್ ಬಿ Member 9686009084
 9. ಪಾರ್ವತಿ ಎಂ ಪಿ Member 7022380373
 10. ಮಂದಣ್ಣ ಎನ್ ಟಿ Member 9480748135

ಪಂಚಾಯ್ತಿ ಸಂಪರ್ಕ

ವಿಳಾಸ: ಕಾರ್ಮಾಡು ಗ್ರಾಮ ಅಮ್ಮತ್ತಿ ಅಂಚೆ 571211 ವಿರಾಜಪೇಟೆ ತಾಲ್ಲೂಕು ಕೊಡಗು ಜಿಲ್ಲೆ
Tel: 08274 264140
Pdo:
Mob: 

Email: karmadugp@gmail.com

ಪೋಲೀಸ್ ಠಾಣೆ
Tel:

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಪೆಟ್ರೋಲ್ ಪಂಪ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

ಮಸೀದಿ / ದರ್ಗಾಗಳು

ಚರ್ಚ್‍ಗಳು

ವ್ಯಕ್ತಿ ಪರಿಚಯ

ಶುಭಕೋರುವವರು

ಗ್ರಾಮ ಪಂಚಾಯಿತಿ ಸದಸ್ಯರು

2015 – 2020

 1. ಅಕ್ಕಚಿರ ರೋನ ಭೀಮಯ್ಯ President 9481431950
 2. ಬಿ.ಎನ್.ಸುನಿತ Vice President 9741034314
 3. ಎಂ ಎ ಸಂತೋಷ್ Member 9449627356
 4. ಎರವರ ಬೇಬಿ Member 9980694088
 5. ಹೆಚ್.ವಿ.ಜಯ Member 9480084891
 6. ಹೆಚ್.ಎಸ್.ದೇವರಾಜು Member 9964685318
 7. ಹೆಚ್.ಆರ್.ಸರೋಜಿನಿ Member 9480181057
 8. ಕೆ.ಎಂ.ಹಂಸ Member 9480244811
 9. ಸಮೀರ ಸಿ.ಪಿ Member 8123822172
 10. ಕೆ.ಬಿ.ನಾಣಯ್ಯ Member 9482230285
 11. ವಿ.ಎನ್.ಸುರೇಶ Member 9448452502
 12. ಎಂ. ಸುರೇಶ್ ಅಯ್ಯಪ್ಪ ಕಾವಾಡಿ Member 9980694088
 • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.