KEDAKAL ಕೆದಕಲ್

ಕೆದಕಲ್ - KEDAKAL

ಕೆದಕಲ್ ಗ್ರಾಮಪಂಚಾಯಿತಿಯು ಕೊಡಗು ಜಿಲ್ಲಾ ಕೇಂದ್ರದಿಂದ 10ಕಿ.ಮೀ, ಸೋಮವಾರಪೇಟೆ ತಾಲ್ಲೊಕು ಕೇಂದ್ರದಿಂದ 42 ಕಿ.ಮೀ, ಸುಂಟಿಕೊಪ್ಪ ಹೋಬಳಿ ಕೇಂದ್ರದಿಂದ 4 ಕಿ.ಮೀ.ಬಿ.ಎಂ.ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ಈ ಗ್ರಾಮ ಪಂಚಾಯಿತಿಯು ಪೂರ್ವಕ್ಕೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ, ಪಶ್ಚಿಮಕ್ಕೆ ಮಾದಪುರ ಗ್ರಾಮಪಂಚಾಯಿತಿ,ಉತ್ತರಕ್ಕೆ ಚೆಟ್ಟಳಿಗ್ರಾಮಪಂಚಾಯಿತಿ, ಹಾಗೂ ಕಡಂಗದಾಳು ಗ್ರಾಮ ಪಂಚಾಯಿತಿ ಸರಹದ್ದನ್ನು ಹೊಂದಿದೆ.
ಈ ಗ್ರಾಮಪಂಚಾಯಿತಿಯು 2001ರ ಜನಗಣತಿ ಪ್ರಕಾರ 3601 ಜನಸಂಖ್ಯೆಯನ್ನು ಹೊಂದಿದ್ದು, ಕೆದಕಲ್ ಮತ್ತು ಹಾಲೇರಿ ಎಂಬ ಕಂದಾಯ ಗ್ರಾಮವಾಗಿ ವಿಂಗಡಣೆಗೊಂಡಿದ್ದು,9 ಮಂದಿ ಚುನಾಯಿತ ಸದಸ್ಯರ ಆಡಳಿತಮಂಡಳಿಯನ್ನು ಹೊಂದಿರುತ್ತದೆ.
ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 4 ಅಂಗನವಾಡಿ ಕೇಂದ್ರಗಳು, 3 ಕಿರಿಯ ಪ್ರಾಥಮಿಕ ಶಾಲೆಗಳು,2 ಕಿರಿಯ ಆರೋಗ್ಯ ಕೇಂದ್ರಗಳಿದ್ದು ಗ್ರಾಮೀಣ ವಿದ್ಯಾರ್ಥಿಗಳಿಗೆ ಮತ್ತಮ ಶಿಕ್ಷಣ ಕಲ್ಪಿಸಲಾಗುತ್ತಿದೆ.

ಈ ಗ್ರಾಮ ಪಂಚಾಯಿತಿಯು ಸಂಪೂರ್ಣ ಸ್ವಚ್ಚತಾ ಆಂದೋಲನದಡಿಯಲ್ಲಿ ರಾಷ್ಟ್ರಪತಿಗಳ ಪುರುಸ್ಕಾರವನ್ನು ಪಡೆದುಕೊಂಡಿದೆ.

ಈ ಗ್ರಾಮಪಂಚಾಯಿತಿ ವ್ಯಾಪ್ತಿಯು ಅಂದಾಜು 1196.84 ಹೆಕ್ಟೇರು ಪ್ರದೇವನ್ನು ಹೊಂದಿದೆ ಇದರಲ್ಲಿ ಬಹುಬಾಗ ಖಾಸಗಿ ಕಾಫಿತೋಟವನ್ನು ಹೊಂದಿದ್ದು,ಭಾಗಶಃ ಖುಷ್ಕಿ ಜಮೀನನ್ನು ಹೊಂದಿರುತ್ತದೆ.ಇಲ್ಲಿನ ಭೂಮಿಯು ಕಪ್ಪು ಮತ್ತು ಕೆಂಪು ಮಿಶ್ರಿತವಾಗಿದ್ದು ಕಾಫಿ ಬೆಳೆಗೆ ಉತ್ತಮವಾಗಿದೆ, ಕಾಫಿ ತೋಟಗಳಲ್ಲಿ ಕಾಫಿ ಬೆಳೆಯ ಜೊತೆಗೆ ಇತರೆ ಆರ್ಥಿಕ ಬೆಳೆಗಳಾದ ಕರಿಮೆಣಸು,ಏಲಕ್ಕಿ,ಬಾಳೆ,ಕಿತ್ತಳೆ ಹಾಗೂ ಗೆಡ್ಡೆಗೆಣಸುಗಳನ್ನು ಬೆಳೆಯುತ್ತಿರುವರು.ಇಲ್ಲೆ ವಾರ್ಷಿಕವಾಗಿ ಸುಮಾರು 1100ಮಿ.ಮೀ.ನಿಂದ 1900 ಮಿ.ಮೀ ಮಳೆಯಾಗುತ್ತದೆ.
ಈ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬಹುಸಂಖ್ಯಾತ ಹಿಂದುಗಳು, ಅಲ್ಪ ಪ್ರಮಾಣದ ಮುಸ್ಲಿಂ, ಕ್ರಿಶ್ಚಿಯನ್ ಧರ್ಮದವರು ವಾಸಿಸುತ್ತಿದ್ದು,ಎಲ್ಲಾ ಕೋಮಿನ ಜನಾಂಗದವರು ಅನ್ಯೋನ್ಯವಾಗಿ ಕೃಷಿಯ ಆದಾಯದಿಂದಲೇ ಜೀವನ ನಡೆಸುತ್ತಿರುವರು,ಇದಲ್ಲದೆ ಕಾಫಿ ತೋಟಗಳಲ್ಲಿರುವ ಕಾರ್ಮಿಕರು ತೋಟದ ಕಾರ್ಮಿಕರ ವಸತಿಗೃಹಗಳಲ್ಲಿ ವಾಸಿಸುತ್ತಿರುವರು.
ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ನಲ್ಲಿ ನೀರು ಸರಬರಾಜು ಹಾಗೂ ಎರಡು ಕಿರು ನೀರು ಸರಬರಾಜು ವ್ಯವಸ್ಥೆಯಿದೆ.
ಈ ಗ್ರಾಮಪಂಚಾಯಿತಿ ವ್ಯಾಪ್ತಿಯ ಕೆದಕಲ್ ಮತ್ತು ಹಾಲೇರಿಯಲ್ಲಿ ಬಹಳ ಪುರಾತನವಾದ ಶ್ರೀ ಭದ್ರಕಾಳ್ವೇರಿ ದೇವಸ್ಥಾವಿದೆ

ಗ್ರಾಮ ಪಂಚಾಯಿತಿ ಸದಸ್ಯರು

2021 – 2026

 1. ವಿಸ್ಮಿತ ಬಿ ವಿ President 7760634339
 2. ಪೊನ್ನಪ್ಪ ಎಂ Vice President 9902878767
 3. ಪಾರ್ವತಿ ಯು ಎಸ್ Member 9663170636
 4. ಅಮ್ಮಣಿ Member 9480219894
 5. ಎಂ.ಕೆ. ಬಿದ್ದಪ್ಪ Member 9341629399
 6. ಶಿವಶಂಕರ. ಜಿ ಡಿ Member 9480083272
 7. ಹೆಚ್.ಎ. ಆನಂದ Member 7760312753
 8. ಪುಷ್ಪ ಎಂ .ಕೆ Member 7022150804

ಪಂಚಾಯ್ತಿ ಸಂಪರ್ಕ

ವಿಳಾಸ:  ಕೆದಕಲ್ ಗ್ರಾಮ ಪಂಚಾಯಿತಿ ಕೆದಕಲ್ ಗ್ರಾಮ ಮತ್ತು ಅಂಚೆ ಸೋಮವಾರಪೇಟೆ ತಾಲ್ಲೂಕು ಕೊಡಗು ಜಿಲ್ಲೆ ಪಿನ್ ಕೋಡ್ 571237
Tel: 08272239119
Pdo:
Mob:
Email: omkedakal@gmail.com

ಪಂಚಾಯತಿ ಕಾರ್ಯಾಲಯ

ಆರೋಗ್ಯ ಕೇಂದ್ರ

ಅಂಚೆ ಕಛೇರಿ

ಅಂಗನವಾಡಿ ಕೇಂದ್ರ

ಬ್ಯಾಂಕ್ / ಎ.ಟಿ.ಎಂ

ಸಹಕಾರಿ ಸಂಸ್ಥೆ/ಸಂಘಗಳು

ಎಲ್.ಪಿ.ಜಿ ಡೀಲರ್ಸ್

ಟೆಲಿಫೋನ್ ಎಕ್ಸ್‍ಚೇಂಜ್

ವಿದ್ಯುತ್ ಕಚೇರಿ

ಪಶು ಚಿಕಿತ್ಸಾಲಯ

ಕಾಫೀ ಬೋರ್ಡ್

ರೈತ ಸಂಪರ್ಕ ಕೇಂದ್ರ

ವಿದ್ಯಾ ಸಂಸ್ಥೆಗಳು

ದೇವಾಲಯ / ದೈವಸ್ಥಾನಗಳು

 • ಶ್ರೀ ಭದ್ರಕಾಳೇಶ್ವರಿ ದೇವಾಲಯ

ಪ್ರಮುಖ ಸ್ಥಳಗಳು

 • 7ನೇ ಮೈಲು
 • ಶ್ರೀ ಭದ್ರಕಾಳೇಶ್ವರಿ ದೇವಾಲಯ

ವ್ಯಕ್ತಿ ಪರಿಚಯ

ಗ್ರಾಮ ಪಂಚಾಯಿತಿ ಸದಸ್ಯರು

2015 – 2020

 1. ಬಾಲಕೃಷ್ಣ ರೈ ಬಿ ಎ President 9448720450
 2. ಲೀಲಾ Vice President 8762497136
 3. ರಮೇಶ Member 9482868966
 4. ಕೆ.ಬಿ.ದೇವಿಪ್ರಸಾದ್ Member 9448346106
 5. ಬಿ.ಎಂ.ವೆಂಕಪ್ಪ Member 8762623234
 6. ಪವಿತ್ರ.ಎಂ.ವಿ Member 8762123060
 7. ಕಾವೇರಿ Member 8453459858
 8. ಹರಿಣಿ Member 9481480499

ಶುಭಕೋರುವವರು

ಸಂದರ್ಶನ

 • ನಿಮ್ಮ ಊರಿನ ಬಗ್ಗೆ ಮಾಹಿತಿಗಳು, ಕಾರ್ಯಕ್ರಮಗಳು ಕ್ರೀಡಾ ಚಟುವಟಿಕೆಗಳು, ಧಾರ್ಮಿಕ ಉತ್ಸವಗಳು, ಹಬ್ಬಹರಿದಿನಗಳು, ಸಂಘ-ಸಂಸ್ಥೆಗಳ ಕಾರ್ಯಕ್ರಮಗಳು ಮುಂತಾದ ಹತ್ತು ಹಲವು ವಿಷಯಗಳ ಮಾಹಿತಿಯನ್ನು ಕಳುಹಿಸಲು ಹಾಗೂ ನಿಮ್ಮೂರಿನ ಸಮಸ್ಯೆ, ಅಭಿವೃದ್ಧಿಯ ಬಗ್ಗೆ “ಸರ್ಚ್‍ಕೂರ್ಗ್ ಮೀಡಿಯಾ” ಮೂಲಕ ಚರ್ಚೆ, ಸಂವಾದ, ಪರಿಹಾರ ಕುರಿತು ಇಲ್ಲಿ ಕ್ಲಿಕ್ ಮಾಡಿ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಿ

Comments are closed.