ಹಣ್ಣಿನ ಉತ್ಪಾದನೆಯಲ್ಲಿ ಪ್ರಭಾವ ಬೀರುವ ಅಂಶಗಳು Horticulture in Coorg Factors affecting fruit production

ಹಣ್ಣಿನ ಉತ್ಪಾದನೆಯಲ್ಲಿ ಪ್ರಭಾವ ಬೀರುವ ಅಂಶಗಳು

ಹವಾಗುಣ, ಮಣ್ಣು, ತಾಪಮಾನ, ಮಳೆಯ ಪ್ರಮಾಣ ಮತ್ತಿತ್ತರ ಅಂಶಗಳು ಹಣ್ಣಿನ ಕೃಷಿಯಲ್ಲಿ ತಮ್ಮ ಪ್ರಭಾವವನ್ನು ಬೀರುತ್ತದೆ. ಈ ಎಲ್ಲಾ ಆಂಶಗಳು ಒಂದು ಪ್ರದೇಶದಲ್ಲಿ ಬೆಳೆಯುವ ಹಣ್ಣಿನ ಉತ್ಪಾದನೆ, ಮತ್ತು ವಲಯಕೊಪ್ಪುವ ತಳಿಯನ್ನು ನಿರ್ಧರಿಸುತ್ತದೆ. ಹೀಗಾಗಿ ವಿವಿಧ ಹವಾಗುಣದಲ್ಲಿ ಬೆಳೆಯುವ ಗಿಡದ ಬೆಳವಣಿಗೆ, ಉತ್ಪಾದನೆ, ಗುಣಮಟ್ಟ ಮತ್ತು ಉತ್ಪತ್ತಿಯಲ್ಲಿ ವ್ಯತ್ಯಾಸ ಹೊಂದಿರುತ್ತದೆ. ಹಣ್ಣಿನ ಬೇಸಾಯದ ಯಶಸ್ಸು ಹವಾಗುಣಕ್ಕೊಪ್ಪುವ ತಳಿಗಳನ್ನು ಬೆಳೆಸುವುದರಲ್ಲಡಗಿದೆ. ಹವಾಗುಣದ ಅಗತ್ಯತೆಗೆ ಅನುಗುಣವಾಗಿ ಹಣ್ಣಿನ ಬೆಳೆಗಳನ್ನು ಈ ಕೆಳಗಿನಂತೆ ವರ್ಗೀಕರಿಸಬಹುದು.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

1 ಉಷ್ಣವಲಯದ ಹಣ್ಣುಗಳು:
ಈ ಹಣ್ಣುಗಳು ಬೇಸಿಗೆ ಮತ್ತು ಚಳಿಗಾಲದಲ್ಲಿ ಉಷ್ಣತೆ ಮತ್ತು ಆದ್ರ್ರತೆಯನ್ನು ಬಯಸುತ್ತದೆ. ಚಳಿಯನ್ನು ಸಹಿಸುವುದಿಲ್ಲ. ಮಾವು, ಬಾಳೆ, ಗೇರು, ಸಪೋಟ, ಪಪಾಯ, ಹಲಸು, ಅನನಾಸ್ ಉಷ್ಣವಲಯಕ್ಕೆ ಸೇರಿದ ಹಣ್ಣುಗಳು. ಉಷ್ಣವಲಯದ ಹಣ್ಣುಗಳನ್ನು ಹೆಚ್ಚಾಗಿ ಆಂಧ್ರಪ್ರದೇಶ, ಕರ್ನಾಟಕ, ಒರಿಸಾ,್ಸ ತಮಿಳುನಾಡು, ಕೇರಳ ಮುಂತಾದ ರಾಜ್ಯಗಳಲ್ಲಿ ಬೆಳೆಯುತ್ತಾರೆ.

2 ಅರೆ ಉಷ್ಣವಲಯದ ಹಣ್ಣುಗಳು:
ಅರೆ ಉಷ್ಣವಲಯದ ಹಣ್ಣುಗಳು ಒಣ ಮತ್ತು ಉಷ್ಣತೆಯ ಹವಾಗುಣವನ್ನು ಬೇಸಿಗೆಯಲ್ಲಿ ಬಯಸುತ್ತದೆ ಮತ್ತು ಚಳಿಗಾಲದಲ್ಲಿ ಸೌಮ್ಯ ಹವಾಗುಣ ಅಗತ್ಯವಾಗಿದೆ. ಈ ವಲಯದ ಕೆಲವೊಂದು ಹಣ್ಣುಗಳೆಂದರೆ ಗ್ರೇಪ್ ಫ್ರುಟ್, ಕಿತ್ತಳೆ, ಲಿಚ್ಚಿ, ದ್ರಾಕಿ,್ಷ ದಾಳಿಂಬೆ, ಅಂಜೂರ ಮೊದಲಾದವು. ಅರೆ ಉಷ್ಣವಲಯದ ಹಣ್ಣುಗಳನ್ನು ಉಷ್ಣವಲಯದಲ್ಲೂ ಬೆಳೆಯಬಹುದು. ಪಂಜಾಬ್, ಹರಿಯಾಣ, ಉತ್ತರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ರಾಜಸ್ಥಾನ್, ಅಸ್ಸಾಂ ಇವು ಅರೆ ಉಷ್ಣವಲಯಕ್ಕೆ ಸೇರಿದ ರಾಜ್ಯಗಳು.

3 ಸಮಶೀತೋಷ್ಣ ವಲಯದ ಹಣ್ಣುಗಳು:
ಬೇಸಿಗೆಯಲ್ಲಿ ಈ ವಲಯದ ಹವಾಗುಣ ಅಹ್ಲಾದಕರವಾಗಿದ್ದು ಚಳಿ ಅತೀ ಹೆಚ್ಚಿರುತ್ತದೆ. ಮುಖ್ಯ ಬೆಳೆಗಳೆಂದರೆ ಸೇಬು, ಪ್ಲಮ್, ಮರಸೇಬು, ಎಪ್ರಿಕಾಟ್, ವಾಲ್‍ನಟ್ ಮುಂತಾದವು. ಭಾರತದಲ್ಲಿ ಇವುಗಳನ್ನು ಬೆಳೆಯುವ ಪ್ರಮುಖ ರಾಜ್ಯಗಳೆಂದರೆ ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಖಾಂಡ ಮತ್ತು ಅರುಣಾಚಲ ಪ್ರದೇಶ.
ಇದಲ್ಲದೆ ಇನ್ನೂ ಅನೇಕ ಅಂಶಗಳು ಸಸಿಗಳ ಬೆಳವಣಿಗೆಯಲ್ಲಿ ಪ್ರಭಾವ ಬೀರುತ್ತದೆ.

ತಾಪಮಾನ : ಹಣ್ಣು ಕೃಷಿಯಲ್ಲಿ ತಾಪಮಾನ ತನ್ನ ಪ್ರಭಾವವನ್ನು ಬೀರುತ್ತದೆ. ಪ್ರತಿಯೊಂದು ಹಣ್ಣುಗಳು ನಿಗದಿತ ಉಷ್ಣತೆಯನ್ನು ಬೆಳವಣಿಗೆ ಮತ್ತು ವೃದ್ಧಿಗೊಳ್ಳಲು ಬಯಸುತ್ತದೆ. ಉಷ್ಣತೆಯಲ್ಲಿ ವ್ಯತ್ಯಾಸವಾದರೆ ಬೆಳವಣಿಗೆ ಮತ್ತು ಇಳುವರಿ ಮೇಲೆ ಪರಿಣಾಮ ಬೀರುತ್ತದೆ. ಮಾವನ್ನು ಚಳಿ ಪ್ರದೇಶದಲ್ಲಿ ಬೆಳೆಸಿದರೆ ಕಡಿಮೆ ತಾಪಮಾನ ಮತ್ತು ಹಿಮದಿಂದ ಗಿಡ ಸತ್ತು ಹೋಗುತ್ತದೆ. ಹಾಗೆಯೇ ಚಳಿ ಪ್ರದೇಶದ ಹಣ್ಣಿನ ಗಿಡಗಳನ್ನು ಉಷ್ಣವಲಯದಲ್ಲಿ ಬೆಳೆದರೆ ಅವುಗಳಿಗೆ ಸಾಕಷ್ಟು ಚಳಿ ದೊರೆಯುವುದಿಲ್ಲ. ಮತ್ತು ಹಣ್ಣುಗಳನ್ನು ಉತ್ಪಾದಿಸಲಾರವು. ತಾಪಮಾನದ ವ್ಯತ್ಯಾಸದಿಂದ ಹಣ್ಣಿನ ಗುಣಮಟ್ಟ, ಗಾತ್ರದಲ್ಲಿ ವ್ಯತ್ಯಾಸವಾಗುತ್ತದೆ ಮತ್ತು ರೋಗ ಹಾಗು ಕೀಟಗಳು ಬಾಧಿಸುತ್ತದೆ.

ಮಳೆ : ಒಂದು ಪ್ರದೇಶದಲ್ಲಿ ಬೀಳುವ ಮಳೆ ಮತ್ತು ಮಳೆಯ ಪ್ರಮಾಣ ಸಹ ಹಣ್ಣಿನ ಬೆಳೆಯನ್ನು ನಿರ್ಧರಿಸುತ್ತದೆ. ಹೂ ಬಿಡುವ ಸಮಯದಲ್ಲಿ ಹೆಚ್ಚು ಮಳೆಯಾದರೆ ಮಿಡಿ ಕಚ್ಚುವುದು ಮತ್ತು ಇಳುವರಿಯ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಗಿಡದ ಬುಡದಲ್ಲಿ ನೀರು ನಿಂತು ಬೇರು ಕೊಳೆರೋಗ ಉಂಟಾಗುತ್ತದೆ. ಅದೇ ರೀತಿ ಒಣ ಪ್ರದೇಶದಲ್ಲಿ ನೀರಾವರಿಯ ಅಗತ್ಯತೆ ಇದೆ. ವರ್ಷವಿಡೀ ಹಂಚಿಕೆಯಾದ 100 ಸೆ.ಮೀ ಮಳೆ ಹಣ್ಣಿನ ಬೇಸಾಯಕ್ಕೆ ಅತ್ಯಂತ ಅನುಕೂಲಕರ.

ತೇವಾಂಶ : ವಾತಾವರಣದ ತೇವಾಂಶ ಸಹ ಹಣ್ಣಿನ ಗಿಡಗಳ ಬೆಳವಣಿಗೆ ಮತ್ತು ಇಳುವರಿಯಲ್ಲಿ ಪ್ರಭಾವ ಬೀರುತ್ತದೆ. ಬಿಸಿ ಮತ್ತು ಒಣ ವಾತಾವರಣದಲ್ಲಿ ಭಾಸ್ಪೀಕರಣದಲ್ಲಿ ವ್ಯತ್ಯಾಸವಾಗುತ್ತದೆ. ಮಾವು ಬಸಳೆ ಮತ್ತು ಅನಾನಸ್ ಬೆಳೆಗೆ ಉಷ್ಣತೆಯಿಂದ ಕೂಡಿದ ತೇವಾಂಶ ಉತ್ತಮ. ಅತೀಯಾದ ತೇವಾಂಶದಿಂದ ಹಣ್ಣಿನ ಗುಣಮಟ್ಟ ಕಡಿಮೆಯಾಗುತ್ತದೆ ಮತ್ತು ಕೀಟ ಹಾಗು ರೋಗ ಬಾಧೆ ಜಾಸ್ತಿಯಿರುತ್ತದೆ.

ಗಾಳಿ : ಅತೀ ವೇಗವಾಗಿ ಬೀಸುವ ಗಾಳಿಯಿರುವ ಪ್ರದೇಶ ಹಣ್ಣಿನ ಬೇಸಾಯಕ್ಕೆ ಯೋಗ್ಯವಲ್ಲ. ಹಣ್ಣು ಮತ್ತು ಹೂ ಗಾಳಿಯ ಹೊಡೆತದಿಂದ ಕಳಚಿ ಬೀಳುತ್ತದೆ. ಮರ ಮತ್ತು ಕೊಂಬೆಗಳಿಗೆ ಆಗಾಗ್ಗೆ ಹಾನಿಯುಂಟಾಗುತ್ತದೆ.

ಬೆಳಕು : ಬೆಳವಣಿಗೆ ಮತ್ತು ಹಣ್ಣಿನ ಆಕರ್ಷಕ ಬಣ್ಣಕ್ಕೆ ಬೆಳಕು ಅತ್ಯಾವಶ್ಯವಾಗಿದೆ. ಮೋಡ ಕವಿದ ಮತ್ತು ಮಂಜಿನ ವಾತಾವರಣದಿಂದ ಹಣ್ಣು ಆಕರ್ಷಕ ಬಣ್ಣ ಪಡೆಯಲಾರದು ಮತ್ತು ಕೆಲವೊಮ್ಮೆ ಕಪ್ಪು ಚುಕ್ಕೆ ಆವರಿಸುವುದರಿಂದ ಮಾರುಕಟ್ಟೆಯಲ್ಲಿ ಹಣ್ಣಿಗೆ ಉತ್ತಮ ಬೆಲೆ ದೊರೆಯವುದಿಲ್ಲ.

ಹಿಮ ಮತ್ತು ಆಲಿಕಲ್ಲು : ಹಿಮ, ಆಲಿಕಲ್ಲು ಮತ್ತು ಬಿರುಗಾಳಿಯಿಂದ ಮರ ಮತ್ತು ಹಣ್ಣುಗಳು ಕೆಳಗೆ ಬಿದ್ದು ನಷ್ಟವಾಗುತ್ತದೆ. ಚಿಕ್ಕ ಸಸಿಗಳು ಸತ್ತು ಹೋಗುತ್ತವೆ. ಉಷ್ಣವಲಯದ ಸಸ್ಯಗಳು ಹೆಚ್ಚಾಗಿ ಹಿಮಪಾತಕ್ಕೆ ತುತ್ತಾಗುತ್ತವೆ. ಆಲಿಕಲ್ಲಿನಿಂದ ಕೂಡಿದ ಬಿರುಗಾಳಿಯಿಂದ ಹಣ್ಣು ಮತ್ತು ಎಲೆಗಳಿಗೆ ಹಾನಿಯಾಗಿ ಇಡೀ ತೋಟವೇ ಹಾಳಾಗಬಹುದು.

ಅನಾವೃಷ್ಟಿ ಮತ್ತು ನೆರೆಹಾವಳಿ : ಬರ ಮತ್ತು ನೆರೆ ಕಡಿಮೆ ಅವಧಿಯದ್ದಾದರೆ ಹಣ್ಣಿನ ಮರಗಳಿಗೆ ಅಷ್ಟೇನು ನಷ್ಟ ಉಂಟು ಮಾಡುವುದಿಲ್ಲ. ಆದರೆ ಎಳೆಯ ಸಸಿಗಳಿಗೆ ಹಾನಿಯಾಗುತ್ತದೆ. ಅಥವಾ ನಾಶವಾಗುತ್ತದೆ. ಬರದಿಂದ ಹೂ ಮೂಡುವುದು ಮತ್ತು ಮಿಡಿ ಕಚ್ಚುವುದರ ಮೇಲೆ ಪರಿಣಾಮ ಬೀರುತ್ತದೆ. ನೆರೆಯಿಂದ ಬೇರು ಹಾಳಾಗಿ ಬೆಳವಣಿಗೆ ಕುಂಠಿತವಾಗುತ್ತದೆ.

ಹಣ್ಣಿನ ಮರಗಳ ಸಂರಕ್ಷಣೆ
1. ಹಣ್ಣಿನ ತೋಟದ ಪಶ್ಚಿಮ ಮತ್ತು ಉತ್ತರ ದಿಕ್ಕಿನಲ್ಲಿ ಗಾಳಿ ತಡೆ ಮರಗಳನ್ನು ನೆಡಬೇಕು. ಇವು ಬಿಸಿ ಮತ್ತು ತಣ್ಣನೆ ಗಾಳಿಯಿಂದ ಮರಗಳನ್ನು ರಕ್ಷಿಸುತ್ತದೆ. ಸಿಲ್ವರ್, ನೀಲಗಿರಿ, ಮಹ್ವ, ಬೀಜದಿಂದ ಬೆಳೆಸಿದ ಮಾವಿನ ಗಿಡಗಳನ್ನು ಗಾಳಿ ತಡೆಯಾಗಿ ಬೆಳೆಸಬಹುದು.
2. ರೋಗ ನಿರೋಧಕ ಸಸಿಗಳನ್ನು ರೋಗ ಬಾಧೆಯಿರುವ ಪ್ರದೇಶದಲ್ಲಿ ನಾಟಿ ಮಾಡಬೇಕು.
3. ನೀರಾವರಿಯಿಂದ ಗಿಡಗಳನ್ನು ಹಿಮ ಮತ್ತು ಚಳಿಯಿಂದ ರಕ್ಷಿಸಬಹುದು.
4. ಹೊಗೆಯಾಡುವುದರಿಂದ ಸಹ ಹಿಮದಿಂದ ರಕ್ಷಣೆ ದೊರೆಯುವುದು.
5. ಆಸರೆಯೊದಗಿಸುವುದರ ಮೂಲಕ ಚಳಿಗಾಳಿದಲ್ಲಿ ಗಿಡಗಳಿಗೆ ರಕ್ಷಣೆಯೊದಗಿಸಬಹುದು

ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments