ಬಾಳೋಪಾಟ್’ರ ಬಂಬಂಗ ಕೊಡವ ಕೊಡವ ಕೌಟುಂಬಿಕ ಎರಡನೇ ವರ್ಷದ ಬಾಳೋಪಾಟ್ ಸ್ಪರ್ಧೆ

Reading Time: 2 minutes

ಬಾಳೋಪಾಟ್’ರ ಬಂಬಂಗ ಕೊಡವ ಕೊಡವ  ಕೌಟುಂಬಿಕ  ಎರಡನೇ ವರ್ಷದ ಬಾಳೋಪಾಟ್ ಸ್ಪರ್ಧೆ

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಕೊಡವಾಮರ ಕೊಂಡಾಟ (ರಿ) ಸಂಘಟನೆ ನಡೆಸುವ ಕೊಡವ ಅಂತರ್ ಕುಟುಂಬಗಳ ನಡುವಿನ ಬಾಳೋ ಪಾಟ್’ರ ಬಂಬಂಗ ಪೈಪೋಟಿಯ  ಎರಡನೇ ವರ್ಷದ ಸ್ಪರ್ಧೆಗೆ ಹೆಸರು ನೋಂದಾಯಿಸಲು ಸಂಘಟನೆಯು ಮನವಿ ಮಾಡಿದೆ.

ಈಗಾಗಲೇ ಪ್ರಥಮ ವರ್ಷದ ಸ್ಪರ್ಧೆಯನ್ನು ಯಶಸ್ವಿಯಾಗಿ ನಡೆಸಿ ಎರಡನೆಯ ವರ್ಷದ ಸ್ಪರ್ಧೆಯ ತಯಾರಿಯಲ್ಲಿರು ಸಂಘಟನೆಯು, ಆಸಕ್ತ ಕುಟುಂಬಗಳು ಮುಂದಿನ ಮಾರ್ಚ್ 10ರ ಒಳಗಾಗಿ ತಮ್ಮ ಕುಟುಂಬದ ಹೆಸರನ್ನು ನೋಂದಾಯಿಸಿಕೊಳ್ಳಬೇಕು, ನಂತರ ಏಪ್ರಿಲ್ 20ರ ಒಳಗಾಗಿ 20 ನಿಮಿಷಕ್ಕೆ ಮೀರದಂತೆ ಕಾವೇರಮ್ಮೆಯ ಪಾಟನ್ನು, ಒಂದೇ ಒಕ್ಕದ ನಾಲ್ವರು, ಒಂದೇ ಬಣ್ಣದ ಕುತ್ಯಾಚಾಲೆ ಮತ್ತು ದುಡಿಕೊಟ್ಟಿನೊಂದಿಗೆ ಹಾಡಿ, ವಿಡಿಯೋವನ್ನು ಸಂಚಾಲಕ ಕುಂಞಿರ ಗಿರೀಶ್ ಭೀಮಯ್ಯ ಅವರ 9483534481 ಸಂಖ್ಯೆಗೆ ಕಳುಹಿಸಬೇಕು.

ವಿಜೇತ ಕುಟುಂಬಕ್ಕೆ ಪ್ರಥಮ 10,000 ನಗದು ಮತ್ತು ಟ್ರೋಫಿ, ದ್ವಿತೀಯ 8000 ನಗದು ಮತ್ತು ಟ್ರೋಫಿ, ತೃತೀಯ 6,000 ನಗದು ಮತ್ತು ಟ್ರೋಫಿ ಹಾಗೂ ಇನ್ನಿತರ ವಿಶೇಷ ಬಹುಮಾನಗಳನ್ನು ನೀಡಲಾಗುವುದು. ಪ್ರಥಮ ಬಹುಮಾನವನ್ನು, ಉದ್ಯಮಿ ಸರ್ಕಂಡ ದೊರೆಮಣಿ ಸೋಮಯ್ಯ, ದ್ವಿತೀಯ ಬಹುಮಾನವನ್ನು ಉದ್ಯಮಿ ಮಲ್ಲೇಂಗಡ ಸುಧಾಮುತ್ತಣ್ಣ, ತೃತೀಯ ಬಹುಮಾನವನ್ನು ಉದ್ಯಮಿ ಅಂಜಪರವಂಡ ರಂಜು ಮುತ್ತಪ್ಪ ಅವರು ಪ್ರಾಯೋಜಿಸಲಿದ್ದಾರೆ

ಕೊಡವ ಇತಿಹಾಸದ ಅಲಿಖಿತ ಸಂವಿಧಾನ ಮತ್ತು ಸಂಪ್ರದಾಯ ಪರಂಪರೆಯ ದಾರಿದೀಪದಂತಿರುವ ಜಾನಪದ ಆಧಾರದ ಬಾಳೋ ಪಾಟ್ ಅನ್ನು ಜನ ಮಾನಸದಲ್ಲಿ ಮತ್ತೊಮ್ಮೆ ವಿಜೃಂಭಿಸುವಂತೆ ಮಾಡುವ ನಿಟ್ಟಿನಲ್ಲಿ ಸಂಘಟನೆಯು ನಡೆಸುತ್ತಿರುವ ಕೌಟುಂಬಿಕ ಬಾಳೋ ಪಾಟ್ ಸ್ಪರ್ಧೆಯಲ್ಲಿ ಎಲ್ಲಾ ಕೊಡವ ಒಕ್ಕಗಳು ಪಾಲ್ಗೊಳ್ಳುವ ಮೂಲಕ, ಜಾನಪದ ಪರಂಪರೆಯ ಬೇರನ್ನು ಮತ್ತಷ್ಟು ಗಟ್ಟಿಗೊಳಿಸುವುದರೊಂದಿಗೆ ವಿಶ್ವದಗಲ ಪಸರಿಸಲು ಕೈಜೋಡಿಸಬೇಕೆಂದು ಸಂಘಟನೆ ಕೋರಿದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments