ಶಾವೊಲಿನ್ ಕುಂಗ್‌ಫು ಕರಾಟೆ ಪರೀಕ್ಷೆಯಲ್ಲಿ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮೇಲುಗೈ
ಮುರ್ನಾಡು : ಚೇರಂಬಾಣೆಯ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಇತ್ತೀಚಿಗೆ ನಡೆದ ಕರಾಟೆ ಪರೀಕ್ಷೆಯಲ್ಲಿ ಪದಕ ಮತ್ತು ಬೆಲ್ಟ್ ಪಡೆದುಕೊಂಡಿದ್ದಾರೆ.
ಅಂತರಾಷ್ಟ್ರೀಯ ಶಾವೊಲಿನ್ ಕುಂಗ್‌ಫು ಕರಾಟೆ ಶಾಲೆಯ ವತಿಯಿಂದ ನಡೆಸಲಾದ ಕರಾಟೆ ಪರೀಕ್ಷೆಯಲ್ಲಿ 54 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕ ಕವನ್ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಪದಕ ಮತ್ತು ಕರಾಟಿ ಬೆಲ್ಟ್‌ಗಳನ್ನು ವಿತರಿಸಿದರು.
ಅಂತರಾಷ್ಟ್ರೀಯ ಶಾವೊಲಿನ್ ಕುಂಪು ಕರಾಟೆ ಶಾಲೆಯ ಭಾರತದ ಮುಖ್ಯ ತರಬೇತುದಾರ ಶಿಪು ಇಂದ್ರಜಿತ ಪರೀಕ್ಷಕರಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ತರಬೇತುದಾರ ನಾಟೋಳಂಡ ನಂಜುಂಡ ಮತ್ತು ಶಾಲಾ ಶಿಕ್ಷಕ ಮನೋಜ್ ಮತ್ತಿತರು ಹಾಜರಿದ್ದರು.
ಚಿತ್ರ-ವರದಿ : ಟಿ. ಸಿ. ನಾಗರಾಜ್,
ಮೂರ್ನಾಡು
https://play.google.com/store/apps/details?id=com.searchcoorg.user.searchcoorg&hl=en_IN&gl=US
Search Coorg Media
Coorg’s Largest Online Media Network