ಕಡಂಗ.ಸೆ 04: ಸುನ್ನಿ ಸ್ಟೂಡೆಂಟ್ ಫೆಡರೇಷನ್ (ಎಸ್ ಎಸ್ ಎಸ್ ) ಕಡಂಗ ಯೂನಿಟ್ ವತಿಯಿಂದ ಬದ್ರಿಯ ಮದರಸ ಸಭಾಂಗಣದಲ್ಲಿ ನಾವು ಭಾರತೀಯರು ಎಂಬ ದೇಯ ವಾಕ್ಯದಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಎಸ್ ಎಸ್ ಎಫ್ 50 ನೇ ವರ್ಷಚರಣೆಯ ಅಂಗವಾಗಿ ಎಲ್ಲಾ ಯುನಿಟ್ ಗಳಲ್ಲಿ ಆಯೋಜಿಸುವ ಪೀಪಲ್ ಕಾನ್ಫರೆನ್ಸ್ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಎಸ್ ಎಫ್ ಕಡಂಗ ಯೂನಿಟ್ ಅಧ್ಯಕ್ಷ ರಾಫಿ ಝನಿ ವಹಿಸಿದರು.
ಉದ್ಘಾಟನೆಯನ್ನು ಸ್ಥಳೀಯ ಬದ್ರಿಯಾ ಮಸೀದಿ ಖತೀಬ್ ಇಸ್ಮಾಯಿಲ್ ಲತೀಫಿ ನಿರ್ವಹಿಸಿ ಮಾತನಾಡಿದರು.
ಎಸ್ ಎಸ್ ಎಫ್ ರಾಷ್ಟ್ರೀಯ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕೇರಿ ತರಗತಿಗೆ ನೇತೃತ್ವ ವಹಿಸಿ ಮಾತನಾಡಿ ಸಂಘಟನೆಯ ಉದ್ದೇಶ, ಸ್ವಾತಂತ್ರಕ್ಕೆ ಮುಸ್ಲಿಂಮರ ಕೊಡುಗೆಯ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ಈ ಸಂದರ್ಭ ಬದ್ರಿಯಾ ಜಮಾಅತ್ ಅಧ್ಯಕ್ಷ ಅಬ್ದುಲ್ ರೆಹಮಾನ್ ಅರಫಾ,ಕಾರ್ಯದರ್ಶಿ ರಾಶೀದ್,ಎಸ್ ವೈ ಎಸ್ ಕಡಂಗ ಅಧ್ಯಕ್ಷ ಅಶ್ರಫ್ ಸಿ.ಎ,ಕರ್ನಾಟಕ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಅಬ್ದುಲ್ ಸಲಾಂ,ಎಸ್ ಎಸ್ ಎಫ್ ವಿರಾಜಪೇಟೆ ಡಿವಿಷನ್ ಕೋಶಾಧಿಕಾರಿ ಇಸ್ಮಾಯಿಲ್ ಅಹಸನಿ, ಕಡಂಗ ಎಸ್ ಎಸ್ ಎಫ್ ಪ್ರಧಾನ ಕಾರ್ಯದರ್ಶಿ ರಾಝಿಕ್, ಅಪ್ನಾಜ್,ಸಮೀರ್,ಮುರ್ಸಿದ್, ಅಜ್ಮಲ್, ಆಫ್ಜಲ್ ಮತಿತ್ತರರು ಉಪಸ್ಥಿತರಿದ್ದರು.
ವರದಿ: ನೌಫಲ್ ಕಡಂಗ