ಚೆಯ್ಯ0ಡಾಣೆ, ಸೆ 8: ನರಿಯಂದಡ ಗ್ರಾಮ ಪಂಚಾಯಿತಿಯ 2023-24 ನೇ ಸಾಲಿನ ನರಿಯಂದಡ, ಅರಪಟ್ಟು ಗ್ರಾಮದ (1)ಹಾಗೂ (2), ಕರಡ, ಕೊಕೇರಿ, ಚೇಲಾವರ, ಗ್ರಾಮಗಳ ವಾರ್ಡ್ ಸಭೆಯನ್ನು ಆಯಾಯ ವಾರ್ಡ್ ನ ಸದಸ್ಯರ ಅಧ್ಯಕ್ಷತೆಯಲ್ಲಿ ದಿನಾಂಕ 11.09.2023 ರಿಂದ 13.09.2023 ವರೆಗೆ ಮತ್ತು ಗ್ರಾಮ ಸಭೆಯನ್ನು 16.09.2023 ರಂದು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪೆಮ್ಮಂಡ ಕೌಶಿ ಕಾವೇರಮ್ಮ ಅಧ್ಯಕ್ಷೆಯಲ್ಲಿ ಹಾಗೂ ನೋಡೆಲ್ ಅಧಿಕಾರಿಗಳಾದ ಶ್ರೀಮತಿ ಸೀತಾಲಕ್ಷ್ಮಿ ಟಿ.ಎಸ್. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಉಪಸ್ಥಿತಿಯಲ್ಲಿ ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರ ಸಮುಖದಲ್ಲಿ ನಡೆಯಲಿದೆ.
ದಿನಾಂಕ 11.09.2023ರ ಸೋಮವಾರ ಪೂರ್ವಾಹ್ನ 11 ಗಂಟೆಗೆ ಮಹಿಳಾ ಸಮಾಜ ಕೊಕೇರಿಯಲ್ಲಿ ಗ್ರಾ.ಪಂ.ಸದಸ್ಯ ಎಚ್.ಎಂ.ರಾಜು ಅಧ್ಯಕ್ಷೆತೆಯಲ್ಲಿ, ಅಪರಾಹ್ನ 2 ಗಂಟೆಗೆ ಸ.ಕಿ.ಪ್ರಾ. ಶಾಲೆ ಪೊನ್ನೋಲ ಚೇಲಾವರದಲ್ಲಿ ಗ್ರಾ.ಪಂ. ಸದಸ್ಯೆ ಮಂಜುಳಾ ಬಿ. ಎಚ್. ಅಧ್ಯಕ್ಷತೆಯಲ್ಲಿ,12.09.2023 ಮಂಗಳವಾರ ಪೂರ್ವಾಹ್ನ 11 ಗಂಟೆಗೆ ಸ.ಹಿ.ಪ್ರಾ.ಶಾಲೆ ಕಡಂಗದಲ್ಲಿ ಗ್ರಾ.ಪಂ.ಸದಸ್ಯರಾದ ಸುಬೀರ್ ಸಿ.ಇ. ಅಧ್ಯಕ್ಷತೆಯಲ್ಲಿ, ಅಪರಾಹ್ನ 12 ಗಂಟೆಗೆ ಸ.ಹಿ.ಪ್ರಾ ಶಾಲೆ ಕರಡದಲ್ಲಿ ಗ್ರಾ.ಪಂ ಸದಸ್ಯರಾದ ವಿಲಿನ್ ಬೇಪುಡಿಯಂಡ ಅಧ್ಯಕ್ಷತೆಯಲ್ಲಿ,13.09.2023 ಬುಧವಾರ ಪೂರ್ವಾಹ್ನ 10.30 ಕ್ಕೆ ನರಿಯಂದಡ ಬ್ಲಾಕ್ (1)ರ ವಾರ್ಡ್ ಸಭೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಗ್ರಾ.ಪಂ. ಸದಸ್ಯರಾದ ಬಿದ್ದಂಡ ರಾಜೇಶ್ ಅಚ್ಚಯ್ಯ ಅಧ್ಯಕ್ಷತೆಯಲ್ಲಿ, ಅಪರಾಹ್ನ 3 ಗಂಟೆಗೆ ನರಿಯಂದಡ ಬ್ಲಾಕ್ (2)ರ ವಾರ್ಡ್ ಸಭೆ ಸ.ಹಿ.ಪ್ರಾ. ಶಾಲೆ ಎಡಪಾಲದಲ್ಲಿ ಗ್ರಾ. ಪಂ.ಸದಸ್ಯ ಕೆ.ಇ. ಮಮ್ಮದ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಗ್ರಾಮ ಸಭೆ
16.09.2023 ಶನಿವಾರ ಪೂರ್ವಾಹ್ನ 11 ಗಂಟೆಗೆ ಚೆಯ್ಯ0ಡಾಣೆ ಲಕ್ಷ್ಮಿ ಮಹಿಳಾ ಸಮಾಜದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ ಅಧ್ಯಕ್ಷತೆಯಲ್ಲಿ ಗ್ರಾಮ ಸಭೆ ನಡೆಯಲಿದೆ. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ವಾರ್ಡ್ ಹಾಗೂ ಗ್ರಾಮ ಸಭೆಗೆ ಹಾಜರಾಗಿ ಸಭೆಯನ್ನು ಯಶಸ್ವಿ ಗೊಳಿಸಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ ಪತ್ರಿಕಾ ಪ್ರಕಟಣೆಯಲ್ಲಿ ಕೊರಿದ್ದಾರೆ.
ವರದಿ: ಸಿ.ಎ. ಅಶ್ರಫ್, ಚೆಯ್ಯಂಡಾಣೆ