ಸಮಗ್ರ ಪೀಡೆ ನಿರ್ವಹಣೆ
ಅವಶ್ಯಕತೆಗನುಗುಣವಾಗಿ ಪೀಡೆ ಬೆಳವಣಿಗೆಯ ವಿವಿಧ ಹಂತಗಳನ್ನು ಅರಿತು ಅವುಗಳ ಸಂಖ್ಯೆ, ಆರ್ಥಿಕ ಹಾನಿಯ ಪ್ರಮಾಣ ಮಿತಿಗಿಂತ ಹೆಚ್ಚಾಗಿದ್ದಲ್ಲಿ, ಅವುಗಳನ್ನು ನಿಯಂತ್ರಿಸಲು ಸಾಧ್ಯವಿರುವ ಎಲ್ಲಾ ನಿರ್ವಹಣಾ ವಿಧಾನಗಳನ್ನು ಸೂಕ್ತ ರೀತಿಯಲ್ಲಿ ಸಂಧರ್ಭಕ್ಕನುಸಾರವಾಗಿ ಅಳವಡಿಸಿ ನಿಸರ್ಗದಲ್ಲಿನ ಇತರೆ ಕ್ರ್ರಿಯೆಗಳಿಗೆ ಹಾನಿಯಾಗದಂತೆ ಪೀಡೆಗಳನ್ನು ಹತೋಟಿ ಮಾಡುವುದನ್ನು “ಸಮಗ್ರ ಪೀಡೆ ನಿರ್ವಹಣೆ” ಎನ್ನುವರು.
ಸಮಗ್ರ ಪೀಡೆ ನಿರ್ವಹಣೆ ಈ ಕೆಳಗಿನ ಅಂಶಗಳನ್ನು ಒಳಗೊಂಡಿರುತ್ತದೆ
• ಬೇಸಾಯ ಕ್ರಮ
• ಯಾಂತ್ರಿಕ ಕ್ರಮ
• ಜೈವಿಕ ಕ್ರಮ
• ರಾಸಾಯನಿಕ ಕ್ರಮ
II. ಬೇಸಾಯ ಕ್ರಮ
ಪೀಡೆ ನಿರ್ವಹಣೆಯ ಹಲವಾರು ಕ್ರಮಗಳಲ್ಲಿ ಬೇಸಾಯ ಪದ್ಧತಿಯು ಮುಖ್ಯ ಪಾತ್ರವಹಿಸುತ್ತದೆ. ಏಕೆಂದರೆ ಪ್ರತಿಯೊಬ್ಬರು ಅನುಸರಿಸಬಹುದಾದ ಈ ಕ್ರಮಗಳು ಅತಿ ಕಡಿಮೆ ವೆಚ್ಚದಲ್ಲಿ ವಾತಾವರಣವನ್ನು ಮಾಲಿನ್ಯಗೊಳಿಸದೆ ಸಮರ್ಪಕ ರೀತಿಯಲ್ಲಿ ಪೀಡೆಗಳನ್ನು ಹತೋಟಿ ಮಾಡುತ್ತದೆ. ಆದ್ದರಿಂದ ಸರಿಯಾದ ಸಮಯದಲ್ಲಿ ಸೂಕ್ತ ಪದ್ಧತಿಯನ್ನು ಅನುಸರಿಸುವುದು ನಾವು ಗಮನದಲ್ಲಿಡಬೇಕಾದ ಅತೀ ಮುಖ್ಯವಾದ ಅಂಶವಾಗಿದೆ.
1. ಮಾಗಿ ಉಳುಮೆ
ಬೇಸಿಗೆಯಲ್ಲಿ ಆಳವಾಗಿ ಮಾಗಿ ಉಳುಮೆ ಮಾಡುವುದರಿಂದ ಭೂಮಿಯಲ್ಲಿರುವ ವಿವಿಧ ಪೀಡೆಗಳು (ಕೀಟಗಳು ಮತ್ತು ರೋಗಾಣುಗಳು) ಸೂರ್ಯನ ಕಿರಣಗಳಿಂದಾಗಿ, ಇಲ್ಲವೆ ಅನೇಕ ಪಕ್ಷಿಗಳಿಗೆ ಆಹಾರವಾಗಿ ನಾಶ ಹೊಂದುತ್ತವೆ. ಅಲ್ಲದೆ ಕಳೆಗಳು ಕೂಡ ನಾಶವಾಗಿ ಭೂಮಿಯು ಹೆಚ್ಚಿನ ತೇವಾಂಶವನ್ನು ಹಿಡಿದುಕೊಳ್ಳುವಂತಾಗುತ್ತದೆ.
2. ಪೀಡೆ ನಿರೋಧಕ ತಳಿಗಳು
ಪೀಡೆ ಬಾಧೆಯ ಸಂಭವನೀಯತೆ ಹೆಚ್ಚಿರುವ ಪ್ರದೇಶಗಳಲ್ಲಿ ಪೀಡೆ ನಿರೋಧಕ ಅಥವಾ ಪೀಡೆ ಬಾಧೆಯನ್ನು ತಪ್ಪಿಸಿಕೊಂಡು ಬೇಗ ಮಾಗುವ ತಳಿಗಳನ್ನು ಬಳಸುವುದು ಸೂಕ್ತ
3. ಹಂಗಾಮಿಗೆ ಸೂಕ್ತ ತಳಿ ಮತ್ತು ಕಾಲಮಾನಕ್ಕೆ ತಕ್ಕಂತೆ ಬಿತ್ತನೆ ಮಾಡುವುದು
ಕೆಲವು ಕೀಟ/ರೋಗಗಳನ್ನು ದೂರವಿಡಲು ನಾಟಿ/ಬಿತ್ತನೆ ಮತ್ತು ಅಂತರ ಹಾಗೂ ಕಟಾವಿನ ಸಮಯಗಳ ನಡುವೆ ನಿರ್ದಿಷ್ಟ ಸುಸಂಘಟಿತ ಸಂಬಂಧ ಅವಶ್ಯಕ. ಇಲ್ಲವಾದಲ್ಲಿ ಕೆಲವು ಪೀಡೆಗಳು ನಿರ್ಧಿಷ್ಟ ಬೆಳವಣಿಗೆಯ ಹಂತಗಳಲ್ಲಿ ಧಾಳಿಮಾಡುತ್ತವೆ. ಆದ್ದರಿಂದ ಸೂಕ್ತತಳಿಗಳನ್ನು ಸೂಕ್ತ ಸಮಯ ಮತ್ತು ಅಂತರದಲ್ಲಿ ನಾಟಿ ಮಾಡಬೇಕು. ಇದ್ದರಿಂದ ರೋಗಗಳ ಹರಡುವಿಕೆ ಕ್ಷೀಣಿಸುವುದಲ್ಲದೆ. ಸಸ್ಯಗಳ ನಡುವೆ ಉತ್ತಮವಾಗಿ ಗಾಳಿಯಾಡುವುದರಿಂದ ಎಲೆಗಳಲ್ಲಿ ತೇವಾಂಶವು ಶೀಘ್ರವಾಗಿ ಒಣಗಿ ರೋಗಾಣುಗಳ ಬೆಳವಣಿಗೆಗೆ ಅಡಚಣೆಯನ್ನುಂಟು ಮಾಡಿ ಸೋಂಕು ಇಲ್ಲದಂತೆ ಮಾಡುತ್ತದೆ.
4. ಬೆಳೆ ಮತ್ತು ಭೂಮಿಯ ಸ್ವಚ್ಛತೆಯನ್ನು ಕಾಪಾಡುವುದು
ಬೆಳೆಯುವ ಬೆಳೆಯಲ್ಲಿ ಹಾಗೂ ಬದುಗಳಲ್ಲಿ ಬೆಳೆಯುವ ಕಳೆ, ಹುಲ್ಲು ಮತ್ತು ಇತರೆ ಗಿಡಗಳಲ್ಲಿ ಪೀಡೆಗಳು ಆಶ್ರಯ ಪಡೆದು ಸೊಂಕನ್ನು ಹರಡುವುದರಿಂದ ಅವುಗಳನ್ನು ತೆಗೆದು ಸ್ವಚ್ಚವಾಗಿಡಬೇಕು. ಇದರಿಂದ ಕೀಟ ಮತ್ತು ರೋಗಗಳನ್ನು ಹರಡದಂತೆ ತಡೆಗಟ್ಟಬಹುದು.
5. ಬೆಳೆ ಪರಿವರ್ತನೆಯ ಪದ್ದತಿಯನ್ನು ಅನುಸರಿಸುವುದು
ಪ್ರತೀ ವರ್ಷ ಒಂದೇ ಬೆಳೆಯನ್ನು ಬೆಳೆಯುವುದರಿಂದ ಕೀಟ ಮತ್ತು ರೋಗಗಳ ಸಂಖ್ಯೆ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಹೊಂದಲು ಅನುಕೂಲ ಮಾಡಿದಂತಾಗುತ್ತದೆ. ಆದರಿಂದ ಕೀಟ ಮತ್ತು ರೋಗಗಳ ಬಾಧೆ ಇರುವ ಕಡೆ ಭತ್ತದ ನಂತರ ದ್ವಿದಳ ಧಾನ್ಯಗಳನ್ನು ಬೆಳೆಯುವುದರಿಂದ ಪೀಡೆಗಳ ಸಂಖ್ಯೆಯನ್ನು ಕಡಿಮೆ ಮಾಡಬಹುದು.
6. ಪೆÇೀಷಕಾಂಶ ನಿರ್ವಹಣೆ
ಪೆÇೀಷಕಾಂಶ ವಿವಿಧ ಕೀಟ ಮತ್ತು ರೋಗಗಳಿಗೆ ವಿವಿಧ ತೆರನಾದ ಪರಿಣಾಮ ಬೀರುತ್ತವೆ. ಸಾಮಾನ್ಯವಾಗಿ ಸಾರಜನಕಯುಕ್ತ ರಾಸಾಯನಿಕ ಗೊಬ್ಬರವನ್ನು ಶಿಫಾರಸ್ಸಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಉಪಯೋೀಗಿಸುವುದರಿಂದ ರೋಗ ಮತ್ತು ಕೀಟ ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿಸಲ್ಪಡುತ್ತದೆ. ಅದೇ ಪೆÇಟ್ಯಾಷ್ ಮತ್ತು ರಂಜಕಯುಕ್ತ ಗೊಬ್ಬರಗಳನ್ನು ಸಾರಜನಕಯುಕ್ತ ಗೊಬ್ಬರದ ಜೊತೆ ಸಮತೋಲನ ಪ್ರಮಾಣದಲ್ಲಿ ಹಾಕಿದಾಗ ಬೆಳೆಗಳು ಆರೋಗ್ಯವಾಗಿ ಪೀಡೆ ರಹಿತವಾಗಿ ಬೆಳೆಯುತ್ತವೆ. ಶಿಫಾರಸ್ಸಿನ ಪ್ರಮಾಣದ ಪೆÇೀಟ್ಯಾಷ್ ಗೊಬ್ಬರವನ್ನು ಹಾಕುವುದರಿಂದ ಗಿಡಗಳಲ್ಲಿಪೆÇ್ರೀಟಿನ್ ಉತ್ಪತ್ತಿ ಕಡಿಮೆಯಾಗಿ ಎಲೆಗಳ ರಸದಲ್ಲಿ ಅಮೈನೋ ಆಮ್ಲಗಳು ಕಡಿಮೆಯಾಗಿ ರಸಹೀರುವ ಕೀಟಗಳ ಅಭಿವೃದ್ಧಿಗೆ ಮಾರಕವಾಗುತ್ತದೆ. ಆದ್ದರಿಂದ ಬೆಳೆಗಳಲ್ಲಿ ಸಮಗ್ರ ಪೆÇೀಷಕಾಂಶಗಳ ನಿರ್ವಹಣೆಯೂ ಕೂಡ ಸಮಗ್ರ ಪೀಡೆ ನಿರ್ವಹಣೆಯ ಒಂದು ಅವಿಭಾಜ್ಯ ಅಂಗವೆನ್ನಬಹುದು.
III. ಯಾಂತ್ರಿಕ ಕ್ರಮ
1. ಬೀಜೋಪಚಾರ
ಬೀಜ ಬಿತ್ತುವ ಮೊದಲು ಬೀಜೋಪಚಾರ ಮಾಡಿ ಬಿತ್ತಿದರೆ ಬೆಳೆಯ ಪ್ರಾರಂಭದಲ್ಲಿ ಬರುವ ಅನೇಕ ರೋಗಗಳನ್ನು ತಡೆಗಟ್ಟಬಹುದು.
2. ಲಿಂಗಾರ್ಷಕ/ಮೊಹಕ ಬಲೆಗಳ ಬಳಕೆ
ಕೀಟ ಬರುವಿಕೆ ಮುನ್ಸೂಚನೆ ತಿಳಿದುಕೊಳ್ಳಲು ಲಿಂಗಾಕರ್ಷಕ ಬಲೆಗಳನ್ನು ಬೆಳೆಯ ಮೇಲೆ 1.5 ಅಡಿ ಎತ್ತರದಲ್ಲಿ ಕಟ್ಟಿ ಪೀಡೆಯ ತೀವ್ರತೆಯನ್ನು ಗಮನಿಸಿ ಕೀಟದ ಹಂತಕ್ಕೆ ಅನುಗುಣವಾಗಿ ಕೀಟ ನಾಶಕಗಳನ್ನು ಬಳಸುವುದು ಸೂಕ್ತ. ಲಿಂಗಾರ್ಷಕ ರಾಸಾಯನಿಕವು ಒಂದೇ ಪ್ರಭೇದದ ಕೀಟಗಳನ್ನು ಮಾತ್ರ ಆಕರ್ಷಿಸುತ್ತದೆ. ಇದರಿಂದ ಕೀಟಗಳ ವರ್ಗೀಕರಣ ಮತ್ತು ಗುರುತಿಸುವಿಕೆ ತುಂಬಾ ಸರಳವಾಗುತ್ತದೆ. ಈ ಬಲೆಗಳ ಉಪಯೋಗದಿಂದ ಬಂದ ಮಾಹಿತಿಯನ್ನು ಆಧರಿಸಿ ಕೀಟ ಬಾಧೆಯ ಮೂನ್ಸೂಚನೆ ಮತ್ತು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಬೇಕಾದ ನಿರ್ವಹಣಾ ಕ್ರಮಗಳ ಬಗ್ಗೆ ನಿರ್ಧರಿಸಬಹುದಾಗಿದೆ.
3. ಬೆಳಕಿನ ದೀಪದ ಬಲೆಗಳ ಬಳಕೆ
200 ವ್ಯಾಟ್ ಬಲ್ಬನ್ನು ಭೂಮಿಯಿಂದ 1.5 ಅಡಿ ಎತ್ತರದಲ್ಲಿ ಇರಿಸಿ ಅದರ ಕೆಳಗೆ ಬಕೇಟಿನಲ್ಲಿ ಸ್ವಲ್ಪ ಸೀಮೆ ಎಣ್ಣೆ ಹಾಗೂ ನೀರನ್ನು ಹಾಕಿಡುವುದರಿಂದ ಆಕರ್ಷಿತ ಕೀಟಗಳು ನೀರಿರುವ ಬಕೆಟಿನಲ್ಲಿ ಬಿದ್ದು ಸಾವನ್ನಪ್ಪುತ್ತವೆ.
Iಗಿ. ಜೈವಿಕ ಕ್ರಮ
1. ಪೀಡೆ ನಿರ್ವಹಣೆಯಲ್ಲಿ ಪರೋಪ ಜೀವಿಗಳ ಬಳಕೆ
ಬೆಳೆಯ ಹಲವು ಕೀಟ ಪ್ರಭೇದಗಳಲ್ಲಿ ಕೀಟ ತಿಂದುಬದುಕುವ ಅಸಂಖ್ಯ ಪರೊಪ ಜೀವಿಗಳು ಪ್ರಕೃತಿಯಲ್ಲಿವೆ. ಇವು ಬೆಳೆಯಲ್ಲಿಯೇ ವಾಸಿಸುತ್ತವೆ. ಈ ಪರೊಪ ಜೀವಿಗಳು ಬೆಳೆಯನ್ನು ಬಾಧಿಸುವ ಕೀಟಗಳಿಗೆ ವ್ಶೆರಿಗಳೆ ಆದರೂ, ಬೆಳೆಗಾರನಿಗೆ ಪ್ರಯೋೀಜನಕಾರಿಯೆನ್ನುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಈ ಕ್ಭಿಟಗಳಿಗೆ ರೈತ ಮಿತ್ರ ಪರೋಪಜೀವಿಗಳೆಂಬ ಹೆಸರು ಅನ್ವರ್ಥಕವಾಗಿದೆ. ಆದ್ದರಿಂದ ಈ ಮಿತ್ರ ಪರೋಪಜೀವಿಗಳಿಗೆ ಹಾನಿಯಾಗದಂತೆ ನೋಡಿಕೊಂಡು ಸಾಧ್ಯವಿರುವಲ್ಲಿ ಇವುಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಲ್ಲಿ ಪಸರಿಸಿದರೆ ಹಲವು ಹಾನಿಕಾರಕ ಕೀಟಗಳನ್ನು ಹತೋಟಿಯಲ್ಲಿಡಬಹುದು.
2. ಸಸ್ಯ ಜನ್ಯ ಪೀಡೆನಾಶಕಗಳ ಬಳಕೆ
ನಿಸರ್ಗದಲ್ಲಿ ಹಲವಾರು ಸಸ್ಯಗಳು ಪೀಡೆನಾಶಕ ಗುಣವನ್ನು ಹೊಂದಿವೆ. ಈ ಪೀಡೆನಾಶಕ ಗುಣಗಳುಳ್ಳ ಗಿಡವು ತನ್ನನ್ನು ಕಾಪಾಡಿಕೊಳ್ಳಲು ಉಪಯುಕ್ತವಾಗುವುದಲ್ಲದೆ, ಅಂತಹ ಪೀಡೆನಾಶಕ ವಸ್ತುವನ್ನು ಇತರ ಸಸ್ಯಗಳನ್ನು ಬಾಧಿಸುವ ಕೀಟಗಳ ಹತೋಟಿಗಾಗಿ ಉಪಯೋಗಿಸಿಕೊಳ್ಳಲು ಸಹಕಾರಿಯಾಗಿದೆ.
ಸಸ್ಯಜನ್ಯ ವಸ್ತುಗಳು ಒಟ್ಟಾರೆ ಕೀಟನಾಶಕ ಗುಣವನ್ನು ಹೊಂದಿರುವುದಲ್ಲದೆ ಇನ್ನಿತರ ಗುಣಗಳಾದ ತಿನ್ನದಂತೆ ಹಿಮ್ಮೆಟ್ಟಿಸುವ ಅಥವಾ ದೂರವಿರಿಸುವ (ವಿಕರ್ಷಕ), ಕೀಟ ಬೆಳವಣಿಗೆಯನ್ನು ಏರುಪೇರು ಮಾಡುವ, ಮೊಟ್ಟೆಗಳ ಉತ್ಪಾದನೆ ಕುಂಠಿತವಾಗುವ ಮತ್ತು ಮೊಟ್ಟೆಗಳಿಡದಂತೆ ಮಾಡುವ (ಬಂಜೆತನ) ಮತ್ತು ಕೀಟಗಳ ವರ್ತನೆಯಲ್ಲಿ ಬದಲಾವಣೆ ಮಾಡಿ ಜೈವಿಕ ಕ್ರಿಯೆಯಲ್ಲಿನ ಆಡಚಣೆಯಿಂದಾಗಿ ಜೀವಕ್ಕೆ ಕುತ್ತುಂಟುಮಾಡುವ ಗುಣಗಳನ್ನು ಹೊಂದಿರುತ್ತವೆ. ಸಾಮಾನ್ಯವಾಗಿ ಅಂತಹ ಸಸ್ಯಗಳ ಅಥವಾ ಸಸ್ಯಜನ್ಯ ವಸ್ತುಗಳ ಉಪಯೋಗವು ಇತರ ಉಪಕಾರಿ ಜೀವಿಗಳಿಗಲ್ಲ್ಲದೇ ಮಾನವ, ಸಾಕು ಪ್ರಾಣಿ ಮತ್ತು ನೈಸರ್ಗಿಕಕ್ಕೆ ಮಾರಕವಾಗಿರುವುದಿಲ್ಲ. ಈ ವಸ್ತುಗಳು ಶೀಘ್ರವಾಗಿ ಉಪಯೋಗವಾಗುವುದರಿಂದ ವಾತಾವರಣದಲ್ಲಿ ಇವುಗಳ ಉಳಿಕೆಯ ಅಂಶ ತೀರಾ ಕಡಿಮೆ ಇರುತ್ತದೆ. ಆದ್ದರಿಂದ ಕೀಟಗಳಲ್ಲಿ ವಸ್ತುಗಳಿಗೆ ಪ್ರತಿರೋಧಕ ಶಕ್ತಿಯು ಸುಲಭವಾಗಿ ವೃದ್ಧಿಯಾಗುವುದಿಲ್ಲ. ಈ ಸಸ್ಯಗಳು ಹೇರಳವಾಗಿ ದೊರೆಯುವುದರಿಂದ ಸಸ್ಯಧಾರಿತ ಕೀಟನಾಶಕಗಳ ಬಳಕೆಯು ಆರ್ಥಿಕವಾಗಿ ಪ್ರಯೋಜನೀಯವಾಗಿದೆ. ಸಾಮಾನ್ಯವಾಗಿ ಕೀಟ ನಿರ್ವಹಣೆಯಲ್ಲಿ ಪರಿಣಾಮಕಾರಿಯಾಗಿ ಹೆಚ್ಚಾಗಿ ಬಳಕೆಯಾಗುತ್ತಿರುವ ಕೆಲವೊಂದು ಸಸ್ಯಜನ್ಯ ಕೀಟನಾಶಕಗಳೆಂದರೆ ಬೇವು, ಹೊಗೆಸೊಪ್ಪು, ಹೊಂಗೆ, ಬೆಳ್ಳುಳ್ಳಿ, ಸೀತಾಫಲ ಇತ್ಯಾದಿ.
ಶೇ. 4 ರ ಬೇವಿನ ಬೀಜದ ಕಷಾಯ ತಯಾರಿಸುವ ವಿಧಾನ (100 ಲೀ)
ಕಷಾಯ ತಯಾರಿಸಲು ಉತ್ತಮ ಗುಣಮಟ್ಟದ ಬೀಜಗಳನ್ನು ಉಪಯೋಗಿಸಬೇಕು. ಜುಲೈ-ಆಗಸ್ಟ್ ತಿಂಗಳುಗಳಲ್ಲಿ ಮರದ ಕೆಳಗೆ ಬಿದ್ದ ಮಾಗಿದ ಹಣ್ಣುಗಳನ್ನು ಆಯ್ದು ಬೀಜಗಳನ್ನು ಬೇರ್ಪಡಿಸಿ ನೆರಳಿನಲ್ಲಿ ಚೆನ್ನಾಗಿ ಒಣಗಿಸಿ ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಬೀಜದ ಮೇಲೆ ಬೂಷ್ಟು ಬೆಳೆಯದ ಹಾಗೆ ನೋಡಿಕೊಳ್ಳಬೇಕು.
• ಉತ್ತಮವಾದ ಬೀಜಗಳನ್ನು ಕುಟ್ಟಿ ಬೀಜದ ಕವಚಗಳನ್ನು ಬೇರ್ಪಡಿಸಬೇಕು
• 4 ಕಿ.ಗ್ರಾಂ ಕವಚ ರಹಿತ ಬೀಜಗಳನ್ನು ಚೆನ್ನಾಗಿ ಕುಟ್ಟಿ ಅಥವಾ ರುಬ್ಬಿ ಪುಡಿಮಾಡಬೇಕು. ಬೀಜ ನುಣ್ಣಗಾದಷ್ಟು ಉತ್ತಮ ಫಲಿತಾಂಶ ದೊರೆಯುತ್ತದೆ.
• ಈ ಪುಡಿಯನ್ನು ಸುಮಾರು 20 ರಿಂದ 25 ಲೀಟರ್ ನೀರಿನಲ್ಲಿ ಬೆರೆಸಿ 12 ಗಂಟೆಗಳ ಕಾಲ ನೆನೆಸಿಡಬೇಕು
• 12 ಗಂಟೆಗಳ ನಂತರ ಚೆನ್ನಾಗಿ ಕಲಕಿ ತೆಳುವಾದ ಬಟ್ಟೆಯಿಂದ ಸೋಸಬೇಕು.
• ಸೋಸಿದ ದ್ರಾವಣಕ್ಕೆ ನೀರು ಬೆರೆಸಿ 100 ಲೀಟರ್ ಪ್ರಮಾಣಕ್ಕೆ ತರಬೇಕು. ಇಂತಹ ಕಷಾಯ ತಿಳಿಕಂದು ಬಣ್ಣದ್ದಾಗಿರುತ್ತದೆ. ಈ ದ್ರಾವಣಕ್ಕೆ 100 ಮಿ.ಲೀ ದ್ರಾವಣ ರೂಪದ ಸೋಪನ್ನು ಬೆರೆಸಿ ತಕ್ಷಣ ಉಪಯೋಗಿಸಬೇಕು.
3. ರಾಸಾಯನಿಕ ಕ್ರಮ
ಪೀಡೆನಾಶಕ ಬಳಕೆ
ಪೀಡೆ ನಿರ್ವಹಣೆಯ ವಿವಿಧ ಕ್ರಮಗಳನ್ನು ಪ್ರಾಮಾಣಿಕವಾಗಿ ಅನುಸರಿಸಬೇಕು ಹಾಗೂ ಪೀಡೆಗಳ ಸಂಖ್ಯೆ, ಆರ್ಥಿಕ ನಷ್ಟ ಮಿತಿಗಿಂತ ಹೆಚ್ಚಾಗಿದ್ದರೆ ಮಾತ್ರ ಪೀಡೆನಾಶಕಗಳನ್ನು ಉಪಯೋಗಿಸಬೇಕು. ಆದಷ್ಟು ಕಡಿಮೆ ತೀಕ್ಷ್ಣವಿರುವ ಪೀಡೆನಾಶಕಗಳನ್ನು ಸೂಕ್ತ ಪ್ರಮಾಣದಲ್ಲಿ ಮತ್ತು ಯೋಗ್ಯ ಸಮಯದಲ್ಲಿ, ಶಿಫಾರಸ್ಸು ಮಾಡಿದ ಪೀಡೆನಾಶಕಗಳನ್ನು ಬಳಸಿದರೆ ಅನೇಕ ಪೀಡೆಗಳನ್ನು ಸೂಕ್ತ ರೀತಿಯಲ್ಲಿ ಹತೋಟಿ ಮಾಡಬಹುದು.
ಪೀಡೆನಾಶಕಗಳ ಸಾಮಾನ್ಯ ಮತ್ತು ವಾಣಿಜ್ಯ ಹೆಸರುಗಳು
ಕ್ರ.ಸಂ. ಸಾಮಾನ್ಯ ಹೆಸರುಗಳು ವಾಣಿಜ್ಯ ಹೆಸರುಗಳು
ಕೀಟನಾಶಕಗಳು
1 ಕ್ಲೋರೋಪೈರಿಫಾಸ್ ಡರ್ಸಬಾನ್, ಟ್ರೈಸಲ್, ಕ್ಲಾಸಿಕ್
2 ಮೋನೋಕ್ರೋಟೊಫಾಸ್ ನವಕ್ರಾನ್, ಲುಫೆÇೀಸ್
3 ಕ್ವಿನಾಲ್‍ಫಾಸ್ ಎಕಲಕ್ಸ್, ಎಕಲಕ್ಸ್-5
4 ಮೆಲಾಥಿಯಾನ್ ಲೀಥಲ್‍ರಾಕ್, ಮೆಲಾಥಿಯನ್, ಮೊಲಮಾರ್, ಮೊಲಟಾಕ್ಸ್
5 ಪೆÇಸಲೋನ್ ಜೋಲೋನ್
6 ಡಯಾಜಿನಾನ್ ಬಾಸುದಿನ್
7 ಪೆಂಥೊಯೇಟ್ ಪೆಂಡಾಲ್
8 ಕಾರ್ಬೋಪ್ಯೂರಾನ್ ಪ್ಯೂರಾಡಾನ್,
9 ಫೆÇೀರೆಟ್ ಫೆÇೀರೆಟ್, ಥಿಮೇಟ್, ಹೆಕ್ಸಾಮಾರ್
ರೋಗನಾಶಕಗಳು
1 ಕಾರ್ಬೆಂಡೆಜಿಮ್ ಬ್ಯಾವಿಸ್ಟಿನ್,
2 ಎಡಿಫಿನ್‍ಫಾಸ್ ಹಿನೋಸಾನ್
3 ಟ್ರೈಸೈಕ್ಲಜೋಲ್ ಭೀಮ್,
4 ಮ್ಯೊಂಕೋಜೆಬ್ ಡೈಥೇನ್ ಎಂ-45, ಇಂಡೋಫಿಲ್ ಎಂ-45
5 ಹೆಕ್ಸಾಕೋನೊಜೋಲ್ ಕಾಂಟಾಪ್, ಕಂಟ್ರೋಲ್
6 ತಾಮ್ರದ ಆಕ್ಸಿಕ್ಲೋರೈಡ್ ಬ್ಲೈಟಾಕ್ಸ್, ಕ್ಯುಪ್ರಮಾರ್, ಬ್ಲೂಕಾಪರ್, ಶೆಲ್‍ಕಾಪರ್
7 ದುಂಡಾಣುನಾಶಕಗಳು ಸ್ಟ್ರೆಪೆÇ್ಟೀಸೈಕ್ಲಿನ್, ಅಗ್ರಿಮೈಸಿನ್