ವಿರಾಜಪೇಟೆಯಲ್ಲಿ ಬೃಹತ್ ಮಿಲಾದ್ ಸಂದೇಶ ಜಾಥಾ

Reading Time: 2 minutes

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಜಾಥಾ

ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ರವರ ಜನ್ಮದಿನಾಚರಣೆಯ ಪ್ರಯುಕ್ತ ಜಿಲ್ಲೆಯ ಪ್ರತಿಷ್ಠಿತ ಸಮನ್ವಯ ವಿದ್ಯಾ ಸಂಸ್ಥೆ ಅನ್ವಾರುಲ್ ಹುದಾ ಹಾಗೂ ಸುನ್ನೀ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಅನುಪಮ ವ್ಯಕ್ತಿತ್ವ ಅನರ್ಘ್ಯ ಸಂದೇಶ ಎಂಬ ಘೋಷಣೆಯೊಂದಿಗೆ ವಿರಾಜಪೇಟೆ ಪಟ್ಟಣದಲ್ಲಿ ಬೃಹತ್ ಸಂದೇಶ ಜಾಥಾ ನಡೆಯಿತು.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಸ್ವಾಗತ ಸಮಿತಿ ಚೆರ್ಮೆನ್ ಸಯ್ಯದ್ ಮಹ್ದೀ ಅಲ್ ಬುಖಾರಿ ತಂಙ್ಙಳ್ ರವರ ಪ್ರಾರ್ಥನೆಯೊಂದಿಗೆ ಜಾಥಾಕ್ಕೆ ಪಂಜರ್ ಪೇಟೆಯಿಂದ ಚಾಲನೆ ನೀಡಲಾಯಿತು.

ಎಸ್ ಎಸ್ ಎಫ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ರವರು ಜಾಥಾವನ್ನು ಉದ್ದೇಶಿಸಿ ಸಂದೇಶ ಭಾಷಣ ಮಾಡಿದರು.
ಪಂಜರಪೇಟೆಯಿಂದ ಪ್ರಾರಂಭಗೊಂಡ ಜಾಥಾ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ, ಗಡಿಯಾರಕಂಬ ಮುಖಾಂತರ ಪಟ್ಟಣದ ಮುಖ್ಯ ಬೀದಿಯಲ್ಲಿ ಸಂಚರಿಸಿ ಅನ್ವಾರುಲ್ ಹುದಾ ಕ್ಯಾಂಪಸ್ ನಲ್ಲಿ ಸಮಾಪನಗೊಂಡಿತು.
ಡೋನೇಟರ್ಸ್ ಚಾರಿಟೇಬಲ್ ಟ್ರಸ್ಟ್ ಸದಸ್ಯರು ಪಟ್ಟಣದಲ್ಲಿ ಜಾಥಾಕ್ಕೆ ಅದ್ದೂರಿಯಾಗಿ ಸ್ವಾಗತ ನೀಡಿದರು.

ಅನ್ವಾರುಲ್ ಹುದಾ ಸಂಸ್ಥೆಯ ಸಾರಥಿ ಶೈಖುನಾ ಅಶ್ರಫ್ ಅಹ್ಸನಿ ಉಸ್ತಾದ್ ಮಾತನಾಡಿ ಮೊಹಮ್ಮದ್ ಪೈಗಂಬರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಬೇಕು, ಯುವ ಸಮೂಹದ ವಿದ್ಯಾಭ್ಯಾಸ ಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು,ಕೇಶಲಂಕಾರದಂತಹ (ತಲೆ ಕೂದಲು ಮಾಡೆಲ್ ಕಟಿಂಗ್)ಗಳನ್ನು ಮಾಡದಂತೆ ಮೊಹಮದ್ ಪೈಗಂಬರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸ ಬೇಕೆಂದರು.

ದಫ್,ಸ್ಕೌಟ್ ಹಾಗೂ ವಿದ್ಯಾರ್ಥಿಗಳ ಪ್ಲವರ್ ಶೋ ಪ್ರದರ್ಶನ ಜಾಥಾದಲ್ಲಿ ಆಕರ್ಷಣೆಯಾಗಿತ್ತು

ಈ ಸಂದರ್ಭದ ಕೂರ್ಗ್ ಜಂಇಯ್ಯತುಲ್ ಉಲಮಾ ಕೋಶಾಧಿಕಾರಿ ಹುಸೈನ್ ಸಖಾಫಿ, ಸಿ.ಕೆ.ಉಸ್ತಾದ್,ಉಸ್ಮಾನ್ ಮದನಿ,ಸಯ್ಯದ್ ಅಜೀಜ್ ಅಲ್ ಹೈದರೂಸಿ ತಂಗಳ್,ಎಸ್ ವೈ ಎಸ್ ರಾಜ್ಯಾಧ್ಯಕ್ಷರಾದ ಹಫೀಲ್ ಸಅದಿ ಕೊಳಕೇರಿ, ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ, ಮೀಲಾದ್ ಸ್ವಾಗತ ಸಮಿತಿ ಕನ್ವೀನರ್ ಅಬಿದ್ ಕಂಡಕ್ಕರ ನೇತೃತ್ವ ವಹಿಸಿದ್ದರು.
ಜಿಲ್ಲೆಯ ಹಲವು ಭಾಗಗಳಿಂದ ಬಂದ ಸಹಸ್ರಾರು ಕಾರ್ಯಕರ್ತರು ಭಾಗವಹಿಸಿದರು.

ವರದಿ:  ಸಿ.ಎ. ಅಶ್ರಫ್, ಚೆಯ್ಯಂಡಾಣೆ

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments