ಮಡಿಕೇರಿ,11: ಮಡಿಕೇರಿ ನಗರದ ಮ್ಯಾನ್ಸ್ ಕಾಂಪೌಂಡ್ ಬಳಿಯಿರುವ ಶ್ರೀ ಕಾವೇರಿ ಭಕ್ತ ಮಂಡಳಿ(ರಿ) ಇದರ ವತಿಯಿಂದ 69ನೇ ವರ್ಷದ ಶ್ರೀ ಕಾವೇರಿ ತೀರ್ಥ ವಿತರಣಾ ರಥಯಾತ್ರೆಯು ಅಕ್ಟೋಬರ್ 18ರಂದು ನೇರವೇರಲಿದೆ.
ಅಂದು ಬೆಳ್ಳಿಗೆ 7 ಗಂಟೆಗೆ ಗಣಪತಿ ಹೋಮದೊಂದಿಗೆ ಪ್ರಾರಂಭಗೊಂಡು ಶ್ರೀ ಕಾವೇರಿ ಮಾತೆಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಾ ಕೈಂಕರ್ಯಗಳು ಜರುಗಲಿದೆ. 12 ಗಂಟೆಗೆ ಅನ್ನದಾನದ ನಂತರ ಮಧ್ಯಾಹ್ನ ಶ್ರೀ ಕಾವೇರಿ ತೀರ್ಥ ವಿತರಣಾ ರಥಯಾತ್ರೆಯು ಮ್ಯಾನ್ಸ್ ಕಾಂಪೌಂಡ್ ಬಳಿಯಿಂದ ಹೊರಟು ಜೂನಿಯರ್ ಕಾಲೇಜು ಮಾರ್ಗವಾಗಿ ಓಂಕಾರೇಶ್ವರ ದೇವಾಲಯ, ಜನರಲ್ ತಿಮ್ಮಯ್ಯ ವೃತ್ತ, ಶಾಂತಿನಿಕೇತನ, ಮರಳಿ ಜನರಲ್ ತಿಮ್ಮಯ್ಯ ವೃತ್ತ, ಗೌಳಿಬೀದಿ, ಕೋಹಿನೂರು ರಸ್ತೆ, ಎಸ್.ಬಿ.ಐ, ಪೇಟೆ ಶ್ರೀ ರಾಮ ಮಂದಿರ, ಚೌಕಿ, ಗಣಪತಿ ಬೀದಿ, ಬನ್ನಿ ಮಂಟಪ, ಮಹದೇವಪೇಟೆ, ಚೌಕಿ, ಸ್ಕ್ವಾಡರ್ನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತ, ಜೂನಿಯರ್ ಕಾಲೇಜು ಮಾರ್ಗವಾಗಿ ಮ್ಯಾನ್ಸ್ ಕಾಂಪೌಂಡ್ ಬಳಿ ಸಂಪನ್ನ ಗೊಳ್ಳಲಿದೆ.
ಶ್ರೀ ಕಾವೇರಿ ತೀರ್ಥ ವಿತರಣಾ ರಥಯಾತ್ರೆ ಉತ್ಸವದಲ್ಲಿ ಸರ್ವರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಕಾವೇರಿ ಮಾತೆಯ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಕಾವೇರಿ ಭಕ್ತ ಮಂಡಳಿ(ರಿ) ಇದರ ಅಧ್ಯಕ್ಷರು ಹಾಗೂ ಸಮಿತಿ ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.