ಸಹಬಾಳ್ವೆಯ ಪರಂಪರೆ ಹೊಂದಿದ ದೇಶ ಭಾರತ : ಡಾ – ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ
ಸಿದ್ದಾಪುರ: ಸಹಬಾಳ್ವೆಯ ಪರಂಪರೆಯನ್ನು ಹೊಂದಿದ ದೇಶ ಭಾರತ ಈ ಮಣ್ಣಿನಲ್ಲಿ ಹುಟ್ಟಿದ ನಾವು ಧನ್ಯರು, ಅತಿ ಪುರಾತನ ಪರಂಪರೆಯ ಬಗ್ಗೆ ಮುಂದಿನ ತಲೆಮಾರಿಗೆ ಪರಿಚಯಿಸುವ ಕೆಲಸವನ್ನು ನಾವು ಮಾಡಬೇಕೆಂದು ಡಾ- ಅಬ್ದುಲ್ ರಶೀದ್ ಝೈನಿ ಕಾಮಿಲ್ ಸಖಾಫಿ ಕಕ್ಕಿಂಜೆ ಕರೆ ನೀಡಿದರು.
ಸಿದ್ದಾಪುರದಲ್ಲಿ ನಡೆದ ಕೊಡಗು ಜಿಲ್ಲಾ ಎಸ್ ವೈ ಎಸ್ ನ ಪರಂಪರೆಯ ಪ್ರತಿನಿಧಿಗಳಗೋಣ ಎಂಬ ಘೋಷವಾಕ್ಯದಲ್ಲಿ ಜನವರಿ 24ರಂದು ಮಂಗಳೂರಿನಲ್ಲಿ ನಡೆಯುವ 30ನೇ ವಾರ್ಷಿಕ ಮಹಾ ಸಮ್ಮೇಳನದ ಪ್ರಚಾರಾರ್ಥ ನಡೆದ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಸಿದ್ಧಾಪುರ ಬಸ್ ನಿಲ್ದಾಣದಲ್ಲಿ ಎಸ್ ವೈ ಎಸ್ ಜಿಲ್ಲಾಧ್ಯಕ್ಷರಾದ ಹಮೀದ್ ಮುಸ್ಲಿಯಾರ್ ಕೊಳಕೇರಿಯವರ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ಧರ್ಮಗಲೆಲ್ಲವು ಸಾರುವ ಸಂದೇಶ ಸುಸ್ಥಿರವಾದ ಸಮಾಜ ನಿರ್ಮಾಣವಾಗಿದೆ ಎಂದರು. ಎಸ್ ವೈ ಎಸ್ ರಾಜ್ಯಾಧ್ಯಕ್ಷರಾದ ಅಬ್ದುಲ್ ಹಫೀಲ್ ಸಅದಿ ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ಉದ್ಘಾಟಿಸಿ ಮಾತನಾಡಿದರು. ಕೂರ್ಗ್ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಸಯ್ಯದ್ ಶಿಹಾಬುದ್ದೀನ್ ಅಲ್ ಹೈದರೂಸಿ (ಕಿಲ್ಲೂರ್ ತಂಙಳ್) ರವರು ಪ್ರಾರ್ಥನೆಗೆ ನೇತೃತ್ವ ನೀಡಿದರು. ಖ್ಯಾತ ವಾಗ್ಮಿ ವಹ್ಹಾಬ್ ಸಖಾಫಿ ಮಂಬಾಡ್ ಮುಖ್ಯ ಭಾಷಣಗಾರರಾಗಿ ಆಗಮಿಸಿದ್ದರು.
ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಕುಂಜಿಲ,ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಜಿಲ್ಲಾಧ್ಯಕ್ಷ ಹನೀಫ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್,ಮಡಿಕೇರಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹೊದ್ದೂರ್ ಗ್ರಾ.ಪಂ. ಅಧ್ಯಕ್ಷ ಹಂಸ ಕೊಟ್ಟಮುಡಿ, ವಕೀಲ ಕುಂಜಾಅಬ್ದುಲ್ಲ, ಕೊಡಗು ಜಿಲ್ಲಾ ಎಸ್ ಎಸ್ ಎಫ್ ಅಧ್ಯಕ್ಷ ಝುಬೈರ್ ಸಅದಿ, ಕೊಡಗು ಸುನ್ನಿ ವೆಲ್ಫೇರ್ ಯುಎಇ ಅಧ್ಯಕ್ಷ ಉಸ್ಮಾನ್ ಹಾಜಿ ನಾಪೋಕ್ಲು ಕಾರ್ಯಕ್ರಮಕ್ಕೆ ಶುಭ ಹಾರೈಸಿ ಮಾತನಾಡಿದರು.
ವೇದಿಕೆಯಲ್ಲಿ ಸಯ್ಯಿದ್ ಫಝಲ್ ಅಲ್ ಹೈದರೂಸಿ, ವಕ್ಫ್ ಬೋರ್ಡ್ ಕೊಡಗು ಜಿಲ್ಲಾಧ್ಯಕ್ಷ ಹಕೀಂ ಗೋಣಿಕೊಪ್ಪ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅಬ್ದುಲ್ ಲತೀಫ್ ಸುಂಟಿಕೊಪ್ಪ,, ಬಾವ ನೆಲ್ಯಹುದಿಕೇರಿ, ಅಬೂಬಕ್ಕರ್ ಹಾಜಿ ಹಾಕತ್ತೂರು, ಯೂಸುಫ್ ಹಾಜಿ ಕೊಂಡಂಗೇರಿ, ಅಬ್ದುಲ್ಲ ನೆಲ್ಯಹುದಿಕೇರಿ, ಹಮೀದ್ ಕಬಡಕೇರಿ, ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಅಬ್ದುಲ್ ರೆಹಮಾನ್ ನಾಪೋಕ್ಲು, ಹಂಝ ಸಅದಿ ಹುಂಡಿ, ಮೊಯ್ದೀನ್ ಕುಂಞಿ ಬಾಳುಗೋಡು, ಹನೀಫ್ ಸಖಾಫಿ ಕೊಂಡಂಗೇರಿ, ಇಸ್ಮಾಯಿಲ್ ಸಖಾಫಿ, ಎಸ್ ಎಸ್ ಎಫ್ ಪ್ರ.ಕಾರ್ಯದರ್ಶಿ ಜುನೈದ್ ಅಮ್ಮತ್ತಿ, ಕೊಡ್ಲಿಪೇಟೆ ಗ್ರಾ.ಪಂ.ಅಧ್ಯಕ್ಷ ಹನೀಫ್, ಅಲಿ ಗುಂಡಿಕೆರೆ, ಖಲೀಲ್ ಭಾಷ ಮತಿತ್ತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಹ್ಮದ್ ಮದನಿ ಗುಂಡಿಕೆರೆ ಸ್ವಾಗತಿಸಿ ಯಾಕೂಬ್ ಮಾಸ್ಟರ್ ಕೊಳಕೇರಿ ವಂದಿಸಿ, ಶಾಫಿ ಸಅದಿ ಸೋಮವಾರಪೇಟೆ ಕಾರ್ಯಕ್ರಮ ನಿರೂಪಿಸಿದರು.