ಕೊಡವ ಅಂತರಕುಟುಂಬ ಬಾಳೋ ಪಾಟ್‌‌ರ ಬಂಬಂಗ: ಜಿಲ್ಲೆ ಮತ್ತು ಜನರ ಶ್ರೇಯೋಭಿವೃದ್ಧಿಗೆ ಪಕ್ಷ ರಾಜಕೀಯ ಬದಿಗಿಟ್ಟು ಒಮ್ಮತದಿಂದ ಶ್ರಮಿಸುತ್ತೇವೆ; ಶಾಸಕದ್ವಯರ ಅಭಿಮತ

ಜನಾಂಗದ ಏಳಿಗೆಗೆ ಜನಪ್ರತಿನಿಧಿಗಳಾಗಿ ಪ್ರಾಮಾಣಿಕ ಪ್ರಯತ್ನ : ಕೊಡವಾಮೆರ ಕೊಂಡಾಟ ಸಂಘಟನೆ ವೇದಿಕೆಯಲ್ಲಿ ಶಾಸಕದ್ವಯರ ಅಭಿಮತ

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಯಾವುದೇ ಒಂದು ಜನಾಂಗದ ಏಳಿಗೆಗೆ ಆಡಳಿತ ಸರ್ಕಾರದ ಸಹಕಾರ ಅವಶ್ಯವಾಗಿದ್ದು, ಜನಪ್ರತಿನಿಧಿಗಳಾಗಿ ನಾವು ಸರ್ಕಾರದ ಸಂಪೂರ್ಣ ಸವಲತ್ತಿಗೆ ಪ್ರಯತ್ನಿಸುವುದಾಗಿ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ವಿರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಪೊನ್ನಣ್ಣ ಮತ್ತು ವಿಧಾನ ಪರಿಷತ್ ಸದಸ್ಯ ಮಂಡೆಪಂಡ ಸುಜಾ ಕುಶಾಲಪ್ಪ ಅವರು ಒಕ್ಕೊರಲ ಅಭಿಪ್ರಾಯ ಪಟ್ಟರು.

ಕೊಡವಾಮೆರ ಕೊಂಡಾಟ ಸಂಘಟನೆ ನಡೆಸಿದ ಎರಡನೇ ವರ್ಷದ ಕೊಡವ ಅಂತರಕುಟುಂಬ ಬಾಳೋ ಪಾಟ್‌‌ರ ಬಂಬಂಗ ಸ್ಪರ್ದೆಯ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿದ್ದ ಅವರುಗಳು ಜನಾಂಗೀಯ ಅಭಿವೃದ್ಧಿಯಲ್ಲಿ ಜನ ಪ್ರತಿನಿಧಿಗಳಾಗಿ ನಮ್ಮ ಪಾತ್ರವೂ ಮುಖ್ಯವಾಗಿದೆ. ಇದನ್ನ ನಾವು ಮನಗಂಡಿದ್ದು ಜಿಲ್ಲೆ ಮತ್ತು ಜನರ ಶ್ರೇಯೋಭಿವೃದ್ಧಿಗೆ ಪಕ್ಷ ರಾಜಕೀಯ ಬದಿಗಿಟ್ಟು ಒಮ್ಮತದಿಂದ ಶ್ರಮಿಸುತ್ತೇವೆ ಎಂದರು.

ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುವ ಪ್ರಪಂಚದ ವಿಷೇಶ ಜನಾಂಗವಾಗಿರುವ ಕೊಡವರ ಬುಡಕಟ್ಟು ಸ್ಥಾನಮಾನಕ್ಕೆ ಅಗತ್ಯವಾದ ಸೌಲಭ್ಯದಿಂದ ವಂಚಿತರಾಗಿದ್ದೇವೆ. ನಮ್ಮ ಮೂಲ ಪರಂಪರೆಯ ಉಳಿಕೆಗಾಗಿ ಶ್ರಮಿಸುತ್ತಿರುವ ಕೊಡವಾಮೆರ ಕೊಂಡಾಟ ಸಂಘಟನೆಯು ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವುದನ್ನ ಗಮನಿಸಿದ್ದೇವೆ, ಇದಕ್ಕೆ ನಾವು ಬೆನ್ನೆಲುಬಾಗಿ ನಿಲ್ಲುತ್ತೇವೆ ಎಂದರು. ಕೊಡವರು ಸಂವಿಧಾನದ ಅಡಿಯಲ್ಲಿ ತಮಗೆ ಸಲ್ಲಬೇಕಾದ ಹಕ್ಕನ್ನು ಕೇಳುತಿದ್ದು ಅದನ್ನು ಪಡೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದರು. ಜಿಲ್ಲೆ ಮತ್ತು ಜನಾಂಗಿಯ ಏಳಿಗೆಯಲ್ಲಿ ನಾವು ಪಕ್ಷಾತೀತವಾಗಿ ಒಂದಾಗಿದ್ದು, ಯಾವುದೇ ರಾಜಕಾರಣ ಮಾಡದೆ ಒಮ್ಮತದಿಂದ ದುಡಿಯುತ್ತೇವೆ ಇದಕ್ಕೆ ನಾವಿಬ್ಬರೂ ಒಪ್ಪಿದ್ದೇವೆ ಎಂದರು.

ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಅವರು ಮಾತನಾಡಿ ಜನಾಂಗದ ಏಳಿಗೆಯ ದೃಷ್ಟಿಯಿಂದ ಕೊಡವಾಮೆರ ಕೊಂಡಾಟ ಸಂಘಟನೆ ಶತ ಪ್ರಯತ್ನ ಮಾಡುತ್ತಾ ಜಾಗೃತಿ ಮೂಡಿಸುತಿದ್ದು ಇವರಂತೇ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಪಟ್ಟರೆ ಮತ್ತಷ್ಟು ಏಳಿಗೆ ಸಾಧ್ಯ ಎಂದರಲ್ಲದೆ, ಜನಾಂಗದ ಎಲ್ಲಾ ಸಮಾಜ ಮತ್ತು ಸಂಘಟನೆಗಳು ಒಂದೇ ವೇದಿಕೆಯಡಿ ಬರುವಂತಾಗಬೇಕು ಹಾಗಾದಾಗ ಒಗ್ಗಟ್ಟು ಮತ್ತು ಒಮ್ಮತದ ನಿರ್ಣಯಗಳಿಗೆ ಅನುವಾಗಲಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡವಾಮೆರ ಕೊಂಡಾಟ ಸಂಘಟನೆ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಅವರು ಕೊಡವ ಸಾಹಿತ್ಯದ ಮೇರು ವ್ಯಕ್ತಿಗಳಾದ ಹರಿದಾಸ ಅಪ್ಪನೆರವಂಡ ಅಪ್ಪಚ್ಚ ಕವಿ, ನಡಿಕೇರಿಯಂಡ ಚಿಣ್ಣಪ್ಪ, ಐ.ಮಾ.ಮುತ್ತಣ್ಣ ಅವರ ಸಾಹಿತ್ಯ ಸೇವೆಗೆ ಸೂಕ್ತ ಸ್ಥಾನಮಾನ ದೊರಕಲಿಲ್ಲ ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕು ಎಂದರಲ್ಲದೆ, ಕಳೆದ ನಾಲ್ಕೂವರೆ ವರ್ಷಗಳಿಂದ ಕೊಡವಾಮೆರ ಕೊಂಡಾಟ ಸಂಘಟನೆಯು ಜನಾಂಗದ ಶ್ರೇಯಕ್ಕೆ ದುಡಿರಿದ್ದು ಮುಂದೆಯೂ ಪ್ರಯತ್ನ ನಡೆಯಲಿದೆ ಎಂದರು.

ವೇದಿಕೆಯಲ್ಲಿ ದಾನಿಗಳಾದ ಸರ್ಕಂಡ ಸೋಮಯ್ಯ, ಹಂಚೆಟ್ಟಿರ ಮನುಮುದ್ದಪ್ಪ, ಅಂಜಪರವಂಡ ರಂಜು ಮುತ್ತಪ್ಪ ಹಾಜರಿದ್ದರು. ಎರಡನೇ ವರ್ಷದ ಬಾಳೋಪಾಟ್ ವಿಜೇತರಾದ ಚೇನಂಡ, ಕನ್ನಿಗಂಡ, ಓಡಿಯಂಡ ಹಾಗೂ ಮಾತಂಡ ಮೊಣ್ಣಪ್ಪ ನೆನಪಿನ ಪ್ರಬಂಧ ಸ್ಪರ್ಧೆ ವಿಜೇತರಾದ ಅಮ್ಮಣಿಚಂಡ ಗಂಗಮ್ಮ ಬೆಳ್ಯಪ್ಪ, ಬಾಚಮಾಡ ಭೀಮಯ್ಯ, ಸಣ್ಣುವಂಡ ಅಕ್ಕಮ್ಮ ಸನ್ನಿ ಅವರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದ ಮೊದಲಿಗೆ, ಮಿನ್ನಂಡ ಚಿಣ್ಣಮ್ಮ ಮತ್ತು ಮಿನ್ನಂಡ ಚೋಂದಮ್ಮ ಅವರು ತಳಿಯತಕ್ಕಿ ಬೊಳಕ್ ಮತ್ತು ಕುಂಬಡಿ ಗ್ರಾಮದ ಬಾಳೋಪಾಟ್ ತಂಡವು ಅತಿಥಿಗಳನ್ನ ಬಟ್ಟೆಪಾಟ್‌‌ನೊಂದಿಗೆ ನೆಲ್ಲಕ್ಕಿಗೆ ತರೆತಂದರೆ, ವೇದಿಕೆಯಲ್ಲಿ ಕೊಡವ ಮೂಲ ಪದ್ದತಿಯಂತೆ ಚೆನಿಯಪಂಡ ಮನುಮಂದಣ್ಣ ಅವರು ಒಕ್ಕಣೆ ಕಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ, ಸಂಘಟನೆಯ ಕಾರ್ಯಕಾರ ಕುಂಞಿರ ಗಿರೀಶ್ ಭೀಮಯ್ಯ ಸ್ವಾಗತಿಸಿ, ಕೂಡ್‌‌ಕಾರ್ಯಕಾರ ತೀತಮಾಡ ಸೋಮಣ್ಣ ವಂದಿಸಿದರೆ, ಸದಸ್ಯೆ ಕುಲ್ಲಚಂಡ ದೇಚಮ್ಮ ಕೇಸರಿ ನಿರೂಪಿಸಿದರು.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments