ಜುಲೈ 1, ಪತ್ರಿಕಾ ದಿನಾಚರಣೆ “ಮಂಗಳೂರು ಸಮಾಚಾರ” ಕನ್ನಡದ ಮೊದಲ ಪತ್ರಿಕೆ.

ಜುಲೈ 1, ಪತ್ರಿಕಾ ದಿನಾಚರಣೆ
“ಮಂಗಳೂರು ಸಮಾಚಾರ” ಕನ್ನಡದ ಮೊದಲ ಪತ್ರಿಕೆ.

“ಮಂಗಳೂರು ಸಮಾಚಾರ” ಪತ್ರಿಕೆ ಆರಂಭಗೊಂಡ ದಿನವನ್ನು ಪತ್ರಿಕಾ ದಿನಾಚರಣೆ’ಯನ್ನಾಗಿ ಆಚರಿಸಲಾಗುತ್ತಿದೆ. ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ’ ರೆವರೆಂಡ್ ಹರ್ಮನ್ ಮೊಗ್ಲಿಂಗ್ ಅವರು 1843ರ ಜುಲೈ 1ರಂದು ಆರಂಭಿಸಿದ ದಿನದ ಅಂಗವಾಗಿ ಈ ಪತ್ರಿಕಾ ದಿನಾಚರಣೆ ಯನ್ನು ಆಚರಿಸಲಾಗುತ್ತಿದೆ. ಕನ್ನಡ ಪತ್ರಿಕೋದ್ಯಮ ಮೊದಲು ಪ್ರಾರಂಭವಾದದ್ದು ಮಂಗಳೂರಿನಲ್ಲಿ. 1843ರಲ್ಲಿ ‘ಮಂಗಳೂರು ಸಮಾಚಾರ’ ವೆಂಬ ಹೆಸರಿನಲ್ಲಿ ಪ್ರಾರಂಭಗೊಂಡ ಕನ್ನಡ ವಾರ ಪತ್ರಿಕೆಯಿಂದ ಕನ್ನಡ ಪತ್ರಿಕೋದ್ಯಮದ ಚರಿತ್ರೆ ಕರ್ನಾಟಕದಲ್ಲಿ ಆರಂಭವಾಗುತ್ತದೆ.

ಸ್ವಿಜರ್ಲೆಂಡಿನ ಬಾಸೆಲ್‍ನಿಂದ 1834ರಲ್ಲಿ ಭಾರತಕ್ಕೆ ಬಂದ ಮಿಶನರಿಗಳು, ಬಾಸೆಲ್ ಮಿಶನ್ ಎಂಬ ಸಂಸ್ಥೆ ಯನ್ನು ಹುಟ್ಟು ಹಾಕಿ 1841ರಲ್ಲಿ ಮಂಗಳೂರಿನಲ್ಲಿ ಬಾಸೆಲ್ ಮಿಶನ್ ಪ್ರೆಸ್‍ನ್ನು ಸ್ಥಾಪಿಸಿ ಕನ್ನಡ ಮತ್ತು ತುಳುವಿನಲ್ಲಿ ಮುದ್ರಣ ಕಾರ್ಯ ಪ್ರಾರಂಭಿಸುತ್ತಾರೆ. ಇವರು 1843ರಲ್ಲಿ ‘ಮಂಗಳೂರು ಸಮಾಚಾರ’ ವೆಂಬ ಹೆಸರಿನಲ್ಲಿ ವಾರ ಪತ್ರಿಕೆಯೊಂದನ್ನು ಸ್ಥಾಪಿಸಿ, ಕ್ರೈಸ್ತ ಮತ ಪ್ರಚಾರಕ್ಕಾಗಿ ಬಂದ ಹೆರ್ಮನ್ ಮ್ಯೋಗ್ಲಿಂಗ್ ರವರನ್ನು ಸಂಪಾದಕರಾಗಿ ನೇಮಿಸುತ್ತಾರೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

(೧೯ನೆಯ ಶತಮಾನದಲ್ಲಿ ಹುಟ್ಟಿ ಬದುಕಿದ  ರೆವರೆಂಡ್ ಡಾಕ್ಟರ್‍ ಹರ್ಮನ್ ಮೊಗ್ಲಿಂಗ್ (೧೮೧೧೧೮೮೧) ಜರ್ಮನ್ ದೇಶೀಯನಾದರೂ ಕನ್ನಡದಲ್ಲಿ ಅಪಾರ ಪ್ರೇಮವನ್ನಿಟ್ಟು ಕನ್ನಡಕ್ಕೆ ಸಂಬಂಧಿಸಿದ ಅನೇಕ ವಿಷಯಗಳಲ್ಲಿ ಮೊದಲಿಗನಾದವನು. ಕನ್ನಡದ ಪ್ರಪ್ರಥಮ ಪತ್ರಿಕೆ ‘ಮಂಗಳೂರು ಸಮಾಚಾರ’ ಪ್ರಾರಂಭಿಸಿದವನು ಮೊಗ್ಲಿಂಗ್. ಕನ್ನಡದಲ್ಲಿಪತ್ರ ಸಾಹಿತ್ಯಪ್ರಾರಂಭಿಸಿದ್ದೂ ಅವನೇ. ಕನ್ನಡದ ಕೆಲಸಕ್ಕಾಗಿ ಕೊಡಮಾಡಿದ ಮೊದಲಿನ ಡಾಕ್ಟರೇಟು ಸಹಾ ಅವನಿಗೆ ದೊರಕಿತು.)

 

ಮೊದಲು ಇಲ್ಲಿ ಕಲ್ಲಚ್ಚಿನ ಮುದ್ರಣವನ್ನು ಬೆಳಕಿಗೆ ತಂದರು. ತದನಂತರ ಅಚ್ಚುಮೊಳೆಗಳ ಮುದ್ರಣವೂ ಆರಂಭವಾಯಿತು. ಮಂಗಳೂರು ಸಮಾಚಾರ ವಾರ ಪತ್ರಿಕೆಯ ಮೊದಲ ಪ್ರತಿಯ ಕಿರು ಪರಿಚಯ ಹೀಗಿದೆ. 1943 ಜುಲೈ 1. ಕ್ರಯ ಒಂದು ದುಡ್ಡು. (ಮಂಗಳೂರು ಸಮಾಚಾರ-ಜುಲೈ 1843-1844 ಫೆಬ್ರವರಿ) ಮೊದಲಿಗೆ ಇದನ್ನು ಪತ್ರಿಕೆ ಎನ್ನದೆ ಕಾಗದ ಎನ್ನುತ್ತಿದ್ದರು. ತಿಂಗಳಿಗೆ ಎರಡಾವರ್ತಿ ಪ್ರಕಟವಾಗುತ್ತಿತ್ತು. ಅಂಚೆ ಹಾಗೂ ನೇರ ಮಾರಾಟಕ್ಕೆ ಸಹ ಲಭ್ಯವಿದ್ದ ಈ ಪತ್ರಿಕೆ ವಿವಿಧ ಮೂಲಗಳಿಂದ ಸಂಗ್ರಹಿಸಿದ ವರ್ತಮಾನಗಳನ್ನು ಬಹು ಎಚ್ಚರಿಕೆಯಿಂದ ವರ್ಗೀಕರಿಸಿ ಪ್ರಕಟಿಸುತ್ತಿತ್ತು. ಪತ್ರಿಕೆಯು ಬಲು ಬೇಗ ಹೆಸರು ಗಳಿಸಿತು.

    ಪತ್ರಿಕೆಯು ಕನ್ನಡ ಮಾತನಾಡುವ ಹೊರಗಿನವರಿಗೂ ತಲುಪಬೇಕೆಂದು ಯೋಚಿಸಿ, ಮಂಗಳೂರಿನಲ್ಲಿ ಪ್ರಕಟವಾದ ಈ ಪತ್ರ್ರಿಕೆ ಬಳ್ಳಾರಿಗೆ ಮಾರ್ಚ 1844 ರಲ್ಲಿ ವರ್ಗಾವಣೆಗೊಂಡಿತು. ಪತ್ರಿಕೆಯ ಹೆಸರನ್ನು ‘ಕನ್ನಡ ಸಮಾಚಾರ’ ಎಂದು ಹರ್ಮನ್ ಮೊಗ್ಲಿಂಗ್  ಬದಲಾಯಿಸಿದನು. ಬಳ್ಳಾರಿಯಲ್ಲಿ ಸುಮಾರು ಹತ್ತು ತಿಂಗಳ ಕಾಲ ಈ ಪತ್ರಿಕೆ ಪ್ರಕಟವಾಯಿತು. ಮೊಗ್ಲಿಂಗ್ ನಷ್ಟು ಕ್ರೀಯಾಶಾಲಿ ಸಮಾಚಾರ ಸಂಗ್ರಹಕಾರರು ಬಳ್ಳಾರಿಯಲ್ಲಿ ಲಭ್ಯವಾಗಲಿಲ್ಲ. ಮಂಗಳೂರಿನಲ್ಲಿದ್ದು ಕೊಂಡು ಬಳ್ಳಾರಿಯಲ್ಲಿ ಪತ್ರಿಕೆ ನಡೆಸುವ ಆತನ ಸಾಹಸ ಯಶಸ್ವಿಯಾಗಲಿಲ್ಲ.ಸಿಪಾಯಿ ದಂಗೆಯ ಬೆಳವಣಿ ಗೆಗಳನ್ನು ಜನತೆಗೆ ಮುಟ್ಟಿಸ ಬೇಕೆನ್ನುವ ಆಕಾಂಕ್ಷೆಯಿಂದ 13 ವರ್ಷಗಳ ನಂತರ ‘ಕಂನಡ ವಾರ್ತಿಕ’ ಪತ್ರಿಕೆಯನ್ನು ಮೊಗ್ಲಿಂಗ್ ಆರಂಭಿಸಿದ. ಎರಕದಲ್ಲಿ ಹೊಯ್ದ ಅಚ್ಚು ಮೊಳೆಗಳನ್ನು ಮೊದಲ ಬಾರಿಗೆ ಈ ಪತ್ರಿಕೆ ಅಳವಡಿಸಿಕೊಂಡಿತ್ತು. ಆದರೆ ಇದು ಕೆವಲ ಒಂದೇ ವರ್ಷದಲ್ಲಿ ನಿಂತಿತು. 1853 ರಿಂದ ಹಲವು ವರ್ಷ ‘ಮಂಗಳೂರು ಪಂಚಾಗ’ವನ್ನು ಪ್ರಕಟಿಸಿದ ಕೀರ್ತಿ ಮೊಗ್ಲಿಂಗ್ ಗೆ ಸಲ್ಲುತ್ತದೆ.

ಮತಪ್ರಚಾರದ ಉದ್ದೇಶಕ್ಕಾಗಿ ಬಂದ ಇವರು ತಮ್ಮ ಚರ್ಚ್ ವಟಾರದಲ್ಲಿ ಅಥವಾ ಕ್ರೈಸ್ತರಾದವರ ಮದ್ಯೆ ಪ್ರಸಾರಕ್ಕಾಗಿ ತುಲನಾತ್ಮಕ ಅದ್ಯಯನದಂತ ಕ್ರೈಸ್ತ ಪತ್ರಿಕೆಗಳನ್ನು ಪ್ರಕಟಿಸಿದ್ದಾರೆಯೇ ವಿನಾ ಮೊದಲಿನ ಎರಡು ‘ಮಂಗಳೂರು ಸಮಾಚಾರ’ ವೆಂಬ ಕನ್ನಡ ಪತ್ರಿಕೆಯಲಿ ಧರ್ಮ ನಿಂದನೆ ಅಥವಾ ತುಲನಾತ್ಮಕ ಅದ್ಯಯನ ವಿಚಾರಗಳನ್ನು ಎಲ್ಲಿಯೂ ಬಳಸಲಿಲ್ಲ. ಮಿಶನರಿಗಳು ಈ ಪತ್ರಿಕೆಯನ್ನು ಸ್ವಮತ ಪ್ರಸಾರಕ್ಕಾಗಿ ಬೇಕಾದ ಹಾಗೆ ಬಳಸಿಕೊಳ್ಳಬಹುದಾಗಿತ್ತು. ಹಾಗೆ ಮಾಡದ್ದರಿಂದ ಕನ್ನಡದ ಈ ಪತ್ರಿಕೆಯು ಜಾತ್ಯಾತೀತವಾದ ಸಮಸ್ತ ಕನ್ನಡಿಗರನ್ನುದ್ದೇಶಿಸಿದ ಮೊದಲ ಪತ್ರಿಕೆಯಾಗಿ   ನೆಲೆನಿಂತಿತು.

✍. ವಿವೇಕ್‌ ನರೇನ್

ವಿವೇಕ್‌ ನರೇನ್‌

0 0 votes
Article Rating
Subscribe
Notify of
guest
0 Comments
Inline Feedbacks
View all comments