ಕಲಾನಗರ ಸಾಂಸ್ಕøತಿಕ ಕಲಾ ವೇದಿಕೆ (ರಿ)
ರಾಘವೇಂದ್ರ ದೇವಾಲಯದ ಬಳಿ ಮಡಿಕೇರಿ – 57102, ಕೊಡಗು
ಪ್ರಾಸ್ತಾವಿಕ
ಭಾರತದ 69ನೇ ಗಣರಾಜ್ಯೋತ್ಸವ ಆಚರಣೆ
ಮಡಿಕೇರಿ ಜ. 26. ಸ್ಥಳೀಯ ಮಡಿಕೇರಿಯ ರಾಘವೇಂದ್ರ ದೇವಾಲಯದ ಬಳಿಯಿರುವ ಕಲಾನಗರ ಸಾಂಸ್ಕøತಿಕ ಕಲಾ ವೇದಿಕೆÀ(ರಿ) ವತಿಯಿಂದ 69ನೇ ಗಣರಾಜ್ಯೋತ್ಸವನ್ನು ಆಚರಿಸಲಾಯಿತು.
ಬೆಳಿಗ್ಗೆ 8 ಗಂಟೆಗೆ ನಗರಸಭಾ ಸದಸ್ಯರೂ ಹಾಗೂ ಮಡಿಕೇರಿ ನಗರಾಭಿವೃದ್ಧಿ ಪ್ರಾದಿಕಾರದ ಅಧ್ಯಕ್ಷರೂ ಆದ ಶ್ರೀ ಚುಮ್ಮಿ ದೇವಯ್ಯ ಭಾರತದ ತ್ರಿವರ್ಣ ಧ್ವÀ್ವಜಾರೋಹಣ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಚುಮ್ಮಿ ದೇವಯ್ಯನವರು ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ ನಮ್ಮ ಭಾರತ ಗಣರಾಜ್ಯ. ಇಲ್ಲಿ ಸರ್ವರಿಗೂ ಸಮಪಾಲು-ಸಮಬಾಳು ದೊರಕುವಂತಾಗಬೇಕು. ಆಗ ನಮ್ಮ ಗಣರಾಜ್ಯಕ್ಕೆ ಪೂರ್ಣ ಪ್ರಮಾಣದ ಮಹತ್ವ ದೊರೆಯುತ್ತದೆ. ಇದಕ್ಕೆ ನಾವೆಲ್ಲರೂ ಒಗ್ಗೂಡಿ ಮುಂದುವರೆಯೋಣ ಈ ದೇಶದ ಅಖಂಡತೆಗೆ ನಮ್ಮ ತನು-ಮನ-ಧನದಿಂದ ಸಮರ್ಪಿಸಿಕೊಳ್ಳೋಣ, ಭವ್ಯ ಭಾರತದ ಕನಸನ್ನು ಸಕಾರಗೊಳಿಸಲು ಪ್ರಯತ್ನಿಸೋಣ ಎಂದು ಹೇಳಿದರು.
ಧ್ವÀ್ವಜಾರೋಹಣ ಸಂದರ್ಭ ಈ ಭಾಗದ ನಾಗರೀಕರು, ಕಿತ್ತೂರು ಚೆನ್ನಮ್ಮ ಮಹಿಳಾ ಸಮಾಜದ ಪಧಾದಿಕಾರಿಗಳು, ಕಲಾನಗರ ಸಾಂಸ್ಕøತಿಕ ಕಲಾ ವೇದಿಕೆಯ ಪಧಾದಿಕಾರಿಗಳು ಭಾಗವಹಿಸಿದರು. ಕಾರ್ಯಕ್ರಮದ ಕೊನೆಗೆ ಕಲಾನಗರ ಸಾಂಸ್ಕøತಿಕ ಕಲಾ ವೇದಿಕೆಯ ಅಧ್ಯಕ್ಷರಾದ ಅಪ್ಪು ಮಹೇಶ್‍ರವರು ವಂದನಾರ್ಪಣೆಯನ್ನು ಮಾಡಿದರು.
ಸಂದರ್ಶನ:
ವ್ಯವಸ್ಥಾಪನ ಸಮಿತಿ
Good job ?