ಸ್ವಾತಂತ್ರ್ಯ ಹೋರಾಟಗಾರ
ಹುತಾತ್ಮ
ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡ
ಕೊಡಗಿನ ವೀರ ಪರಂಪರೆಯಲ್ಲಿ ಹುತಾತ್ಮ ಯೋಧ ಸುಬೇದಾರ್ ಅಪ್ಪಯ್ಯಗೌಡ ಅವರ ಹೆಸರು ಅಜರಾಮರ. ಸ್ವತಂತ್ರ್ಯ ಸಂಗ್ರಾಮದಲ್ಲಿ ಬಲಿದಾನಗೈದ ಅವರ ಕೊಡುಗೆಗೆ ಸರಿಸಾಟಿಯಿಲ್ಲ.
ಅಪ್ಪಯ್ಯಗೌಡರು ಕೊಡಗಿನ ಬಲಮುರಿ ಗ್ರಾಮದ ಗುಡ್ಡೆಮನೆ ಸುಬ್ಬಯ್ಯನವರ ಹಿರಿಯ ಮಗ. ಕ್ರಿ.ಶ.1792ರಲ್ಲಿ ಜನಿಸಿದ ಅಪ್ಪಯ್ಯನವರಿಗೆ ಇಬ್ಬರು ಸಹೋದರರಿದ್ದರು, ಕೊಡಗಿನ ಅರಸ ಲಿಂಗರಾಜರ ಆಳ್ವಿಕೆಯಲ್ಲಿ ಜಮೇದಾರರಾಗಿ ಸೇವೆ ಸಲ್ಲಿಸುತ್ತಿದ್ದ ಅಪ್ಪಯ್ಯನವರಿಗೆ ಓಡಾಡಲು ಕುದುರೆಯನ್ನು ನೀಡಲಾಗಿತ್ತು. ಲಿಂಗರಾಜರ ನಂತರ ಅಧಿಕಾರಕ್ಕೆ ಬಂದ ಚಿಕ್ಕವೀರರಾಜರ ಆಳ್ವಿಕೆಯಲ್ಲಿ ಅಪ್ಪಯ್ಯನವರು ಸುಬೇದಾರರಾಗಿ ಬಡ್ತಿ ಹೊಂದಿದು. 1834ರಲ್ಲಿ ಆಂಗ್ಲರು ಕೊಡಗನ್ನು ಆಕ್ರಮಿಸಿಕೊಂಡು, ಚಿಕ್ಕವೀರರಾಜನನ್ನು ಅಧಿಕಾರದಿಂದ ಇಳಿಸಿ ಮಡಿಕೇರಿಯ ಕೋಟೆ ಅರಮನೆಯಲ್ಲಿ ಗೃಹಬಂಧನದಲ್ಲಿ ಇರಿಸಲಾಯಿತು. 1834ರ ಏಪ್ರಿಲ್ 6ರಿಂದ ಮಡಿಕೇರಿ ಕೋಟೆಯ ಮೇಲೆ ಆಂಗ್ಲರ ಧ್ವಜ ಹಾರಾಡತೊಡಗಿತು. ರಾಜನನ್ನು ಗಡಿಪಾರು ಮಾಡಿ ಕಾಶಿಕೆ ಕಳುಹಿಸಲಾಯಿತು. ಇದರಿಂದ ಸ್ವಾಮಿನಿಷ್ಠೆಯ ಸ್ವಾಭಿಮಾನಿ ಅಪ್ಪಯ್ಯನವರ ರಕ್ತ ಕುದಿಯತೊಡಗಿತು.
ಕೊಡಗಿನ ಪ್ರಜೆಗಳು ಧಾನ್ಯದ ರೂಪದಲ್ಲಿ ತೆರಿಗೆಯನ್ನು ಕೊಡುವುದರ ಬದಲು ಹಣದ ರೂಪದಲ್ಲಿ ಕಟ್ಟಬೇಕೆಂಬ ಕಟ್ಟಪ್ಪಣೆ ಹಾಗೂ ರೈತರು ಹೊಗೆಸೊಪ್ಪನ್ನು ಬೆಳೆಸಲು ತಮ್ಮ ಅನುಮತಿ ಪಡೆಯುವಂತೆ ಆಂಗ್ಲರು ಆದೇಶಿಸಿದರು.
ತನ್ನೊಡೆಯನನ್ನು ಗಡಿಪಾರು ಮಾಡಿದ್ದು, ತೆರಿಗೆ ವಸೂಲಾತಿ ಮತ್ತು ಹೊಗೆಸೊಪ್ಪನ್ನು ಬೆಳೆಸಲು ಅನುಮತಿ ಪಡೆಯುವಂತೆ ನೀಡಿದ ಆದೇಶದ ಬಗ್ಗೆ ಆಂಗ್ಲರ ವಿರುದ್ದ ಅಪ್ಪಯ್ಯನವರು ಸಿಡಿದೆದ್ದರು. ಅಧಿಕಾರವನ್ನು ಧಿಕ್ಕರಿಸಿ ಸ್ವಂತ ಸೇನೆ ಕಟ್ಟಿ ಸಂಘರ್ಷಕ್ಕಿಳಿದರು. ಮಹಾದಂಡನಾಯಕನಾಗಿ ಘರ್ಜಿಸಿದ ಅಪ್ಪಯ್ಯನವರು ಮಂಗಳೂರಿನ ಬಾವುಟಗುಡ್ಡ ಎಂಬಲ್ಲಿ ಸ್ವತಂತ್ರ್ಯ ಧ್ವಜ ಹಾರಿಸಿದರು. ಅವರ ನಾಗರಿಕ ಸೇನೆ 13 ದಿನಗಳ ಕಾಲ ರಾಜ್ಯಭಾರ ಮಾಡಿತು. ಕೆಚ್ಚೆದೆಯ ವೀರ ಅಪ್ಪಯ್ಯನವರ ಸೇನೆ ಮಡಿಕೇರಿ ಕೋಟೆಯನ್ನು ಸಮೀಪಿಸುತ್ತಿರಲು ಅಪ್ಪಯ್ಯನವರನ್ನು ನಮ್ಮ ನಾಡಿನ ದೇಶ ದ್ರೋಹಿಗಳ ಸಹಾಯದಿಂದ ಆಂಗ್ಲರು ಸೆರೆಹಿಡಿದರು. ಸೆರೆಸಿಕ್ಕ ದೇಶಾಭಿಮಾನಿ 45ರ ಹರೆಯದ ಅಪ್ಪಯ್ಯನವರನ್ನು ಆಂಗ್ಲರು 1837 ಅಕ್ಟೋಬರ್ 31ರಂದು ಬೆಳ್ಳಿಗ್ಗೆ 10.45ರ ಸಮಯದಲ್ಲಿ ಮಡಿಕೇರಿ ಕೋಟೆ ಮುಂಬಾಗದಲ್ಲಿ ಬಹಿರಂಗವಾಗಿ ಗಲ್ಲಿಗೇರಿಸಿದರು. ತನ್ನ ನಾಡನ್ನು ಉಳಿಸಲು ಹೋರಾಟ ಮಾಡಿದ ಧೀಮಂತ ನಾಯಕನನ್ನು ಕಳೆದುಕೊಂಡ ಕೊಡಗು ಮಮ್ಮಲ ಮರುಗಿತ್ತು, ಶೋಕಾಬ್ದಿಯಲ್ಲಿ ಮುಳಿಗಿತ್ತು.
ಅಮರ ವೀರ ಸೇನಾನಿ ಅಪ್ಪಯ್ಯಗೌಡರಿಗೆ ನಾಡಿನ ಕೋಟಿ ಕೋಟಿ ಭಾವಪೂರ್ಣ ನಮನಗಳು