ಪಾಲಿಬೆಟ್ಟ ಆರ್ಕಾಡ್ ಪಟ್ಟಾಣ್ ಬಾಬ ಶಾಹ್-ವಲಿಯವರ ದರ್ಗ
ಪ್ರಾಸ್ತಾವಿಕ
ಹಿನ್ನಲೆ
ಸುಮಾರು 200 ವರ್ಷಗಳ ಹಿಂದಿನ ಕಥೆ: ಬ್ರಿಟೀಷರು ರಾಜ್ಯಬಾರ ಮಾಡುತ್ತಿದ್ದ ಸಂದರ್ಭ ಕೊಡಗಿನ ಪಾಲಿಬೆಟ್ಟ ಎಂಬ ಊರಿನಲ್ಲಿ ಈಗಿನ ಟಾಟಾ ಕಾಫಿ ಲಿಮಿಟೆಡ್‍ನ ಪ್ರಧಾನ ಕಛೇರಿ ಅಥವಾ ಹಿಂದಿನ ಕನ್ಸಾಲಿಡೇಟ್ ಕಾಫಿ ಲಿಮಿಟೆಡ್ ಕೇಂದ್ರ ಕಛೇರಿ ಇದ್ದ ಸ್ಥಳದಲ್ಲಿ ಬ್ರಿಟೀಷರ ಕಾಫಿ ಕಂಪೆನಿ ಕಾರ್ಯ ನಿರ್ವಹಿಸುತ್ತಿತು. ಆ ಕಂಪೆನಿಯಲ್ಲಿ ಹಣಕಾಸು ಲೆಕ್ಕಪತ್ರ ಮಾಹಿತಿ ದಾಖಲೆಗಳನ್ನು ವ್ಯವಸ್ಥಾಪನೆ ಮಾಡುವಲ್ಲಿ ಬ್ರಿಟೀಷರ ನಂಬಿಕೆಗೆ ತೀರ ಹತ್ತಿರವಾಗಿದ್ದವರು ಪಟ್ಟಾಣ್ ಬಾಬ ಎಂಬ ಪ್ರಾಮಾಣಿಕ ವ್ಯಕ್ತಿ. ಇವರು ಕಂಪೆನಿಯ ಮಾಹಿತಿ ದಾಖಲೆಗಳನ್ನು ಬ್ರಿಟೀಷರ ಒಂದು ತೋಟದ ಕಛೇರಿಯಿಂದ ಇನ್ನೊಂದು ತೋಟದ ಕಛೇರಿಗೆ ಸಾಗಿಸುವ ನೇತೃತ್ವವನ್ನು ವಹಿಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದರು. ಪಟ್ಟಾಣ್ ಬಾಬ ವ್ಯಕ್ತಿಯ ನಿಷ್ಠತೆ, ಪ್ರಾಮಾಣಿಕತೆÀ, ಬ್ರಿಟೀಷ್ ಅಧಿಕಾರಿಗಳ ನಂಬಿಕೆಗೆ ಪಾತ್ರವಾಗಿತ್ತು. ಆ ಸಂದರ್ಭದಲ್ಲಿ ಇವರ ಚಲನವಲನಗಳನ್ನು ಗಮನಿಸುತ್ತಿದ್ದ ದರೋಡೆಕಾರರ ಗುಂಪೊಂದು, ಇವರು ಒಂದು ತೋಟದಿಂದ ಇನ್ನೊಂದು ತೋಟಕ್ಕೆ ಹಣವನ್ನು ಸಾಗಿಸುತ್ತಿರುವ ಬಗ್ಗೆ ತಿಳಿದು ಸಮಯ ಸಾಧಿಸಿ, ಪಟ್ಟಾಣ್ ಬಾಬ ಪಾಲಿಬೆಟ್ಟ ಸಮೀಪದ ಮಾರ್ಗೊಳ್ಳಿ ತೋಟದಿಂದ ಸಂಜೆ ಕತ್ತಲಾಗುವ ಸಮಯದಲ್ಲಿ ಹಣವನ್ನು ಕೇಂದ್ರ ಕಛೇರಿಗೆ ತರುವ ಸಂದರ್ಭದಲ್ಲಿ ಇವರ ಮೇಲೆ ದಾಳಿ ಮಾಡಿ ಹಣವನ್ನು ದೋಚಿ ಇವರ ರುಂಡ-ಮುಂಡವನ್ನು ಬೇರ್ಪಡಿಸಿ ರುಂಡವನ್ನು ಈಗಿನ ದರ್ಗಾದ ಬಳಿ ಹಾಗೂ ಮುಂಡವನ್ನು ಪಾಲಿಬೆಟ್ಟದಿಂದ ಗೋಣಿಕೊಪ್ಪಲು ಹೋಗುವ ಕೋಟೆಬೆಟ್ಟ ತೋಟದ ಬಳಿಯೂ ಬಿಸಾಕಿ ಹೋಗಿರುತ್ತಾರೆ.
ಈ ವಿಷಯವು ಆ ದಿನ ರಾತ್ರಿ ಊಟೋಪಚಾರವನ್ನು ಮಾಡಿ ಮಲಗಿ ನಿದ್ರಿಸುತ್ತಿದ್ದ ಬುಲ್ ಸಾಹೇಬ ಎಂಬ ಬ್ರಿಟೀಷ್ ಕಾಫಿ ತೋಟದ ವ್ಯವಸ್ಥಾಪಕ ನಿರ್ದೇಶಕನಿಗೆ ಕನಸ್ಸಿನಲ್ಲಿ ಈ ರೀತಿ ನನ್ನ ರುಂಡ-ಮುಂಡವನ್ನು ಕತ್ತರಿಸಿ ಹಣವನ್ನು ದೋಚಿ ರುಂಡವನ್ನು ಈ ಸ್ಥಳದಲ್ಲೂ ಮುಂಡವನ್ನು ಇಂತಹ ಸ್ಥಳದಲ್ಲೂ ಬಿಸಾಕಿ ಹೋಗಿದ್ದಾರೆಂದು ತಿಳಿಸುತ್ತಾರೆ. ಕನಸಿನಿಂದ ಎಚ್ಚರಗೊಂಡ ಬುಲ್ ಸಾಹೇಬ ಎಂಬ ಅಧಿಕಾರಿ ಪಟ್ಟಾಣ್ ಬಾಬ ಕನಸಿನಲ್ಲಿ ತಿಳಿಸಿದ ಮಾಹಿತಿಯನ್ನರಸಿ ಸಹಚರರೊಂದಿಗೆ ಅನ್ವೇಷಣೆ ಮಾಡಲು ತೆರಳುತ್ತಾರೆ. ಈ ಸಂದರ್ಭದಲ್ಲಿ ಪಟ್ಟಾಣ್ ಬಾಬ ಆ ಬ್ರಿಟೀಷ್ ಅಧಿಕಾರಿಗೆ ಕನಸಿನಲ್ಲಿ ಬಂದು ಹೇಳಿದ ರೀತಿಯಲ್ಲಿ ಬಾಬರ ದೇಹದ ರುಂಡ-ಮುಂಡ ಅದೇ ಸ್ಥಳದಲ್ಲಿ ಕಾಣಿಸಿಕೊಳ್ಳುತ್ತದೆ. ಆಗ ಬುಲ್ ಸಾಹೇಬ ಬ್ರಿಟೀಷ್ ಅಧಿಕಾರಿ ಪಟ್ಟಾಣ್ ಬಾಬರ ದೇಹದ ಭಾಗಗಳನ್ನು ತಂದು ಈಗಿನ ಪಟ್ಟಾಣ್ ಬಾಬರವರ ದರ್ಗಾವಿರುವ ಸ್ಥಳದಲ್ಲಿ ಒಂದುಗೂಡಿಸಿ ಅಂತ್ಯ ವಿಧಿ-ವಿದಾನಗಳನ್ನು ನೆರವೇರಿಸುತ್ತಾರೆ. ತದ ನಂತರ ಆ ಜಾಗದಲ್ಲಿ ಪಟ್ಟಾಣ್ ಬಾಬರ ಹಲವಾರು ಪವಾಡಗಳು ನಡೆಯತೊಡಗುತ್ತದೆ. ಮೇಕೂರು, ಪಾಲಿಬೆಟ್ಟ ಮುಂತಾದ ಹಾಸುಪಾಸಿನಲ್ಲಿ ಮಳೆಯಿಲ್ಲದೆ ಬರಗಾಲ ತಲೆದೋರಿದ ಸಂದರ್ಭದಲ್ಲಿ ಅಲ್ಲಿನ ನಾಗರಿಕರು ಪಟ್ಟಾಣ್ ಬಾಬರ ಬಳಿ ಬಂದು ಪ್ರಾರ್ಥನೆ ಸಲ್ಲಿಸಿ, ಬೇಡಿಕೊಂಡಾಗ ಯಥೇಚ್ಛವಾಗಿ ಮಳೆ ಬಂದು ಕೃಷಿ-ಬೆಳೆಗಳು ಸಮೃದ್ಧಿಕೊಂಡು ಜನ ಸುಭಿಕ್ಷವಾಗತೊಡಗಿದರು. ಎಂಬುದಾಗಿ ಅಲ್ಲಿನ ಜನ ಹೇಳುತ್ತಿದ್ದಾರೆ. ಹಾಗೆ ವರ್ಷಗಳಿಂದ ವಾಸಿಯಾಗದ ಕಾಯಿಲೆಗಳಿಂದ ನರಳುತ್ತಿದ್ದ ಜನರು ಇಲ್ಲಿ ಬಂದು ಪ್ರಾರ್ಥಿಸಿದುದರ ಫಲವಾಗಿ ಅವರ ಕಾಯಿಲೆಗಳು ವಾಸಿಯಾಗಿ ಜನರು ನೆಮ್ಮದ್ದಿಯನ್ನು ಕಂಡುಕೊಂಡಿದ್ದಾರೆ. ಹೀಗೆ ಇವರ ಪವಾಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದನ್ನು ಮನಗಂಡ ಬುಲ್ ಸಾಹೇಬ ಅಂದಿನ ಕನ್ಸಾಲಿಡೇಟ್ ಕಾಫಿ ಲಿಮಿಟೆಡ್ ಅಥವಾ ಈಗಿನ ಟಾಟಾ ಕಾಫಿ ಲಿಮಿಟೆಡ್ ಕೇಂದ್ರ ಕಚೇರಿಯ ಬಳಿ ಸುಮಾರು 1 1/2 ಏಕರೆಯಷ್ಟು ವಿಸ್ತೀರ್ಣದ ಜಾಗವನ್ನು ಮೀಸಲಿಟ್ಟು ‘ಆರ್ಕಾಟ್ ಪಟ್ಟಾಣ್ ಬಾಬ ದರ್ಗಾ’ ಎಂಬ ನಾಮದೇಯದಲ್ಲಿ ದರ್ಗಾವೊಂದನ್ನು ನಿರ್ಮಿಸುತ್ತಾರೆ. ಇಲ್ಲಿ ಮುಸ್ಲಿಂ ಬಾಂದವರು ಮಾತ್ರವಲ್ಲದೆ, ಎಲ್ಲಾ ಜಾತಿ ಸಮುದಾಯದವರು ಬಂದು ತಮ್ಮ ಹರಕೆ ಪ್ರಾರ್ಥನೆಯನ್ನು ಸಲ್ಲಿಸಿ ಪಟ್ಟಾಣ್ ಬಾಬರ ಕೃಪೆಗೆ ಪಾತ್ರರಾಗಿ ತಮ್ಮ ಜೀವನದಲ್ಲಿ ಸುಖ ಸಂತೋಷವನ್ನು ಕಾಣುತ್ತಿದ್ದಾರೆ.
ಹಿನ್ನಲೆ-ಆಚರಣೆ
ಊರೂಸು ಸಮಾರಂಭದ ಕಾರ್ಯಕ್ರಮಗಳ ರಿತಿ-ರಿವಾಜು:
ಅನ್ನದಾನ: ಕೇವಲ ಸಸ್ಯಹಾರಿ ಅನ್ನದಾನವನ್ನು ಮಾತ್ರ ಮಾಡಿಸಲಾಗುತ್ತದೆ.
ಪ್ರಸಾದ: ಕುಸಲಕ್ಕಿ ಹುರಿದು, ಒಳ್ಳೆಮೆಣಸು ಸೇರಿಸಿ, ಹುಡಿಮಾಡಿದ ಸಕ್ಕರೆಯನ್ನು ಮಿಶ್ರಣ ಮಾಡಿದ ಪ್ರಸಾದವನ್ನು ಭಕ್ತರಿಗೆ ನೀಡಲಾಗುತ್ತದೆ. ಇದನ್ನು ಪ್ರತಿ ದಿನದ ಉರೂಸು ಸಮಾರಂಭದಲ್ಲೂ ನೀಡಲಾಗುತ್ತದೆ. ಇದನ್ನು ಭಕ್ತರು ಮನೆಗಳಲ್ಲಿ ಶೇಖರಿಸಿಟ್ಟು, ಹೊಟ್ಟೆನೋವು, ಶೀತ ತಲೆನೋವು ಜ್ವರ ಮುಂತಾದ ಖಾಯಿಲೆಗಳಿಗೆ ಉಪಯೋಗಿಸಿ ಖಾಯಿಲೆಗಳು ವಾಸಿಯಾದುದಾಗಿ ಭಕ್ತರು ತಮ್ಮ ನಂಬಿಕೆಯನ್ನು ವ್ಯಕ್ತಪಡಿಸುತ್ತಾರೆ.
ಕೊಡಗು ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಉರೂಸು ಸಮಾರಂಭವನ್ನು ಪ್ರಾರಂಭಿಸಿದ ಕೀರ್ತಿಯು ಆರ್ಕಾಡ್ ಪಟ್ಟಾಣ್ ಬಾಬಾ ದರ್ಗಾ ಉರೂಸು ಸಮಿತಿ ಇವರಿಗೆ ಸಲ್ಲುತ್ತದೆ. ಹಾಗೆ ವರ್ಷದ ಉರೂಸು ಸಮಾರಂಭದ ಚಾಲನೆಯು ಕೂಡಾ ಈ ದರ್ಗಾದಿಂದಲೇ ಪ್ರಾರಂಭವಾಗುತ್ತದೆ ಎಂಬುದು ಸಂತಸದ ಸಂಗತಿಯಾಗಿದೆ.
ಕೊಡಗು ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಊರೂಸು ಸಮಾರಂಭವನ್ನು ಪ್ರಾರಂಭಿಸಿದ ಕೀರ್ತಿಯು ಆರ್ಕಾಡ್ ಪಟ್ಟಾಣ್ ಬಾಬಾ ಉರೂಸು ಇವರಿಗೆ ಸಲ್ಲುತ್ತದೆ. ಹಾಗೆ ವರ್ಷದ ಊರೂಸು ಸಮಾರಂಭದ ಚಾಲನೆಯು ಕೂಡಾ ಈ ದರ್ಗಾದಿಂದಲೇ ಎಂಬುದು ಸಂತಸದ ಸಂಗತಿಯಾಗಿದೆ.
ವ್ಯವಸ್ಥಾಪನ ಸಮಿತಿ
ಜುಮ್ಮಾ ಮಸೀದಿ ಪಾಲಿಬೆಟ್ಟ ಹಾಗೂ ಆರ್ಕಾಡ್ ಪಟ್ಟಾಣ್ ಬಾಬ ಶಾಹ್-ವಲಿಯವರ ನೇರ್ಚೆ:
ಅಧ್ಯಕ್ಷರು: ಸಿ.ಎಂ. ಅಬ್ದುಲ್ ಜಬ್ಬಾರ್ ಮೊ: 99452056888
ಉಪಾಧ್ಯಕ್ಷರು: ಸಿ.ಎಚ್.ಖಾದರ್ ಮೊ: 9945272739
ಕಾರ್ಯದರ್ಶಿಗಳು: ಎಲ್.ಖಾಲಿದ್ ಹಾಜಿ ಮೊ: 9845803220
ಖಜಾಂಚಿ: ಕೆ.ಎಚ್, ಅಬೂಬಕರ್ ಮೊ: 9449334793
ಜಂಟಿ ಕಾರ್ಯದರ್ಶಿಗಳು: ಕೆ.ಯು.ಎಸ್ಮಾಯಿಲ್, ರಶೀದ್.
ಸದಸ್ಯರುಗಳು: ಪಿ.ಕೆ.ಎಸ್ಮಾಯಿಲ್, ಪ.ಕೆ.ಮುಸ್ತಾಫ, ಡಿ.ಎ.ಕರೀಂ, ಕೆ,ವಿ.ರಶೀದ್, ನೌಸಾದ್.
ಉಸ್ತಾದ್: ಮಹಮ್ಮದ್ ಆಲಿ: 8050057572, ಆಮೀರ್: 8277438644
ಸಂದರ್ಶನ: