Flower Show at Raja Seat Madikeri, Kodagu (Coorg) ರಾಜಾಸೀಟು ಫಲಪುಷ್ಪ ಪ್ರದರ್ಶನ

Reading Time: 5 minutes

Flower Show at Raja Seat Madikeri, Kodagu (Coorg)
ರಾಜಾಸೀಟು ಫಲಪುಷ್ಪ ಪ್ರದರ್ಶನ

ಚಿತ್ರಶಾಲೆ

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಪ್ರಾಸ್ತಾವಿಕ

ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ರಾಜಾಸೀಟು ಉದ್ಯಾನವನದಲ್ಲಿ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನ ನೋಡುಗರ ಗಮನ ಸೆಳೆಯುತ್ತದೆ. ತರಕಾರಿ ಹಣ್ಣುಗಳಲ್ಲಿ ಕೆತ್ತನೆ ಮಾಡಿದ ಕಲಾಕೃತಿಗಳು ನೋಡುಗರನ್ನು ಮತ್ತೆ ಮತ್ತೆ ಆಕರ್ಷಣಿಯಗೊಳಿಸುತ್ತದೆ. ಮಹಾತ್ಮ ಗಾಂಧಿ, ಡಾ|| ಬಿ.ಅರ್. ಅಂಬೇಡ್ಕರ್, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ಸುಭಾಷ್ ಚಂದ್ರಬೋಷ್, ಸ್ವಾಮಿ ವಿವೇಕಾನಂದ, ಚಂದ್ರಶೇಖರ್ ರಾಜ, ಸಂಗೋಳಿ ರಾಯಣ, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹೀಗೆ ನಾನಾ ಕಲಾಕೃತಿಗಳು, ಹಣ್ಣುಗಳಿಂದ ಮಾಡಿದ ವಿವಿಧ ರೀತಿಯ ಹೂವುಗಳು ಅತ್ಯಾಕರ್ಷಣಿಯವಾಗಿದೆ.
ರಾಷ್ಟ್ರಕವಿ ಕುವೆಂಪು ಅವರ ಕವಿ ಶೈಲದಲ್ಲಿ ಕವನ ಬರೆಯುವ ಮಾದರಿ ಸಾಹಿತ್ಯ ಲೋಕವನ್ನು ಬಿಂಬಿಸುತ್ತಿದೆ. ನಗರದ ಕೋಟೆ ಕಲಾಕೃತಿ ಕಾವೇರಿ ಮಾತೆ ಹಾಗೂ ಮಂಟಪ ತೀರ್ಥೋದ್ಭವ ಕುಂಡಿಕೆ ಪಾಲಿಹೌಸ್ ನೆರಳು ಪರದೆ ಮನೆ, ಕಿಚನ್ ಗಾರ್ಡ್‍ನ್, ಟೆರಸ್ ಗಾರ್ಡ್‍ನ್, ವರ್ಟಿಕಲ್ ಗಾರ್ಡ್‍ನ್ ಇತ್ತಿತರ ಫಲಪುಷ್ಪ ಪ್ರದರ್ಶನಗಳು ಮನ ಸೆಳೆಯುತ್ತಿವೆ.
ಆನೆ, ಜಿಂಕೆ, ಹುಲಿ ,ಮೊಲ, ಚಿಟ್ಟೆ ಕಲಾಕೃತಿಗಳನ್ನು ಹೂವು ಅಲಂಕಾರಿಕ ಎಲೆಗಳಿಂದ ನಿರ್ಮಿಸಲಾಗಿದೆ.
ಮಕ್ಕಳಿಗೆ ಮನರಂಜನೆ ನೀಡುವ ಸೈಕಲ್, ಪಾರ್ಮಲ ಕಾರು ಮಾದರಿ ಗಮನ ಸೆಳೆಯುತ್ತಿವೆ. ಮಾವು, ಕಿತ್ತಳೆ, ಅನಾನಾಸ್ ಹಣ್ಣುಗಳು ಪೋಟೋ ಪ್ರಮ್‍ಗಳ ಮಾದರಿ ಗಮನ ಸೆಳೆಯುತ್ತಿವೆ. ಫಲಪುಷ್ಪ ಪ್ರದರ್ಶನದ ಅಂಗವಾಗಿ ಈಗಾಗಲೇ ರಾಜಾಸೀಟು ಉದ್ಯಾನವನದಲ್ಲಿ 3000-4000 ಸಂಖ್ಯೆಯ ವಿವಿಧ ಜಾತಿಯ ಹೂವುಗಳಾದ ಪೇಟೋನಿಯ, ಕ್ಯಾನ, ಸಾಲ್ವಿಯ, ಸೇವಂತಿಗೆ, ಗಾಂಪ್ರಿನಾ, ಕಾಕಡ ಮಲ್ಲಿಗೆ, ಚಂಡುಹೂ, ಪ್ಲಾಕ್ಸ್, ಜೀನಿಯಾ, ಜರೇನಿಯಂ, ವಿಂಕಾ ರೋಸಿಯಾ, ಇತ್ಯಾದಿಗಳನ್ನು ಪಾತಿಯಲ್ಲಿ ನಾಟಿ ಮಾಡಲಾಗಿದೆ ಹಾಗೂ 1500 ಕುಂಡಗಳಲ್ಲಿ ವಿವಿಧ ಜಾತಿಯ ಹೂವುಗಳನ್ನು ಬೆಳೆಸಲಾಗಿದೆ.
ಹಾಗೆಯೇ ನಗರದ ಗಾಂಧೀ ಮೈದಾನದಲ್ಲಿ ಕೃಷಿ ತೋಟಗಾರಿಕೆ, ಪಾಶುಪಾಲನೆ, ಮೀನುಗಾರಿಕೆ ಹೀಗೆ ನಾನಾ ಇಲಾಖೆಗಳ ವಸ್ತು ಪ್ರದರ್ಶನಗಳ ಮಳೆಗೆ ನಿರ್ಮಿಸಲಾಗಿದೆ.
ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್ ಅವರು ಕಳೆದ ಬಾರಿಗಿಂತ ಈ ಬಾರಿ ಫಲಪುಷ್ಪ ಪ್ರದರ್ಶನ ಅಕರ್ಷಣಿಯವಾಗಿದೆ ಎಂದು ಅವರು ಹೇಳಿದರು ಕೊಡಗಿನ ಸಂಸ್ಕøತಿ ಬಿಂಬಿಸುವ ಕಲಾಕೃತಿಗಳು ರಚನೆ ಮಾಡಿರುವುದು, ಅಕರ್ಷಣಿಯವಾಗಿದೆ ಎಂದು ಶಾಸಕರು ಹೇಳಿದರು.
ಕೊಡಗು ಜಿಲ್ಲೆಗೆ ಪ್ರವಾಸಿಗರು ಇಲ್ಲಿನ ಆಚಾರ ವಿಚಾರ, ಸಂಸ್ಕøತಿ ತಿಳಿಯಲು ಬರುತ್ತಾರೆ ಆ ನಿಟ್ಟಿನಲ್ಲಿ ರಾಜಾಸೀಟು ಉದ್ಯಾನವನದಲ್ಲಿ ಜಿಲ್ಲೆಯ ಪ್ರವಾಸೋದ್ಯಮ ಹಾಗೂ ಪ್ರಕೃತಿ ಹಾಗೂ ಕಲೆ ಸಂಸ್ಕøತಿ ಅಚಾರ ವಿಚಾರವನ್ನು ಬಿಂಬಿಸುವಲ್ಲಿ ಫಲಪುಷ್ಪ ಪ್ರದರ್ಶನ ಸಹಕಾರಿಯಾಗಿದೆ ಎಂದು ಅವರು ಹೇಳಿದರು
ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಫಲಪುಷ್ಪ ಪ್ರದರ್ಶನ ಅರ್ಕಷಣಿಯಾವಾಗಿದೆ. ಇದೊಂದು ಉತ್ತಮ ಪ್ರಯತ್ನವಾಗಿದೆ ಮುಂದಿನ ಬಾರಿ ಇನ್ನೂ ಉತ್ತಮ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗುವುದು ಎಂದು ಅವರು ಹೇಳಿದರು.
ಫಲಪುಷ್ಪ ಪ್ರದರ್ಶನದ ವೀಕ್ಷಣೆಗೆ ರೂ. 10.00 ಗಳ ಪ್ರವೇಶ ಶುಲ್ಕ ಹಾಗೂ ಮಕ್ಕಳಿಗೆ ರೂ. 5.00 ಮತ್ತು ಶಾಲಾ ಮಕ್ಕಳಿಗೆ ಉಚಿತವಾಗಿ ಪ್ರವೇಶವಿದೆ ಎಂದು ಅವರು ತಿಳಿಸಿದರು.
ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾದ ಪದ್ಮಿನಿ ಪೊನ್ನಪ್ಪ, ಜಿ.ಪಂ.ಅಧ್ಯಕ್ಷರಾದ ಬಿ.ಎ.ಹರೀಶ್, ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್. ಜಿ.ಪಂ.ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂ.ಕೆ.ವಿಜು ಸುಬ್ರಮಣಿ, ತಾ.ಪಂ. ಅಧ್ಯಕ್ಷರಾದ ತೇಕಡೆ ಶೋಭಾ ಮೋಹನ್ ನಗರಸಭೆ ಅಧ್ಯಕ್ಷರಾದ ಕಾವೇರಮ್ಮ ಸೋಮಣ್ಣ, ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರ,ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ದೇವಕಿ, ನಗರಸಭೆ ಪೌರಾಯುಕ್ತರಾದ ಬಿ.ಶುಭ ಇತರರು ಇದ್ದರು.

0 0 votes
Article Rating
Subscribe
Notify of
guest
2 Comments
Oldest
Newest Most Voted
Inline Feedbacks
View all comments
Dineskumar. K
Dineskumar. K
6 years ago

Great job, I love Coorg
Raja seat is one of the beautiful tourist place in Coorg

Dineskumar. K
Dineskumar. K
6 years ago

Very nice