ಶ್ರೀ ಮುನೇಶ್ವರ ವೀರಭದ್ರ ದೇವಾಲಯ
(ಹಳೆ ಬಸಪ್ಪ ಚಿತ್ರ ಮಂದಿರ ಹಿಂಭಾಗ)
ಮಡಿಕಟ್ಟೆ, ದಾಸವಾಳ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ.
ಪ್ರಾಸ್ತಾವಿಕ
ಶತಮಾನಗಳಿಂದ ಭಕ್ತಿಯ ಕೀರ್ತಿ ಪತಾಕೆಯನ್ನು ಗಾಳಿಯ ಜೊತೆ ಬೆರೆ ಬೆರೆಸುತ್ತಾ ನಂಬಿಕೆ, ಉನ್ನತ ಶಕ್ತಿಯ ಪ್ರತೀಕವಾಗಿರುವ ಶ್ರೀ ಮುನೀಶ್ವರ ವೀರಭದ್ರೇಶ್ವರ ಗುಡಿಯ ಪುನರ್‍ಪ್ರತಿಷ್ಟಾಪನೆಯ ವಾರ್ಷಿಕೋತ್ಸವದಲ್ಲಿ ನಾವಿಂದು ಹೆಜ್ಜೆಯಿಡುತ್ತಿದ್ದೆವೆ.
ಇತಿಹಾಸ ಹಿನ್ನಲೆ
ದೇವಾಲಯದ ಪುನರ್ ಪ್ರತಿಷ್ಟಾಪನೆಯು 2012 ನೇ ಎಪ್ರಿಲ್ ತಾರೀಖು 11,12, ರಲ್ಲಿ ಕೇರಳದ ಬೈತೂರಿನ ಶ್ರೀಗೋಪಾಲಕೃಷ್ಣ ನಂಬೂದರಿ ಹಾಗೂ ಅವರ ಶಿಷ್ಯವೃಂದದ ನೇತೃತ್ವದಲ್ಲಿ ನಡೆಯಿತು.
ಹಲವಾರು ತಲೆಮಾರುಗಳ ಬಳುವಳಿಯಾಗಿ ಪೂಜೆ ಪುನಸ್ಕಾರಗಳು ನಡೆದುಕೊಂಡು ಬರುತ್ತಿದ್ದರೂ, ಅದನ್ನು ಈ ಮಟ್ಟದಕ್ಕೆ ತಂದು ದೇವಾಲಯವನ್ನು ನಿರ್ಮಿಸಿರುವ ಗೌರವ ಪ್ರಸ್ತುತ ಈ ತಲೆಮಾರಿಗೆ ಸೇರುತ್ತದೆ.
ಸುಮಾರು ನೂರು ವರುಷಗಳಿಗೂ ಮೀರಿ ಇತಿಹಾಸವಿರುವ ಈ ಮುನೀಶ್ವರ ವೀರಭದ್ರೇಶ್ವರ ದೇವಾಲಯ ಜೀರ್ಣೋದ್ದಾರ ನಂತರ ಇಂದು ವಪ್ರತಿಯೊಬ್ಬರ ಕಂಗಳಲ್ಲಿಯೂ ಭಕ್ತಿಯ ಸಿಂಚನವನ್ನು ಪ್ರತಿಫಲಿಸುತ್ತಿದೆ.
ದಶಕಗಳ ದಾರಿ ಹಿಡಿದು ಬಂದಿದ್ದರೂ ಇಲ್ಲಿಯವರೆಗೂ ಅದರ ನೈಜತೆಯನ್ನು ಕಳೆದುಕೊಳ್ಳದೇ ಬರುತ್ತಿರುವುದು ನಮ್ಮ ಕುಲಭಾಂಧವರ, ಭಕ್ತಾದಿಗಳ ಹಾಗೂ ಸಾರ್ವಜನಿಕರ ಶ್ರಮವನ್ನು ಭಿತ್ತರಿಸುತ್ತದೆ. ದೇವಾಲಯದ ಆವರಣವು ಬಹು ವಿಸ್ತಾರವಾಗಿದ್ದು, ಅವಶ್ಯಕ ಸಂಗತಿಗಳನ್ನು ಒಳಗೊಂಡಿದೆ.
ದೇವಾಲಯಕ್ಕೆ ಸಣ್ಣ ಹರಿವೊಂದನ್ನು ದಾಟಿ ಬಂದ ತಕ್ಷಣ ಅರಳಿ ವೃಕ್ಷವು ನಮ್ಮನ್ನು ಆದರದಿಂದ ಬರಮಾಡಿಕೊಳ್ಳುವುದು, ಎಡಕೆ ನಡೆದರೆ ಅಲ್ಲಲ್ಲಿ ಅರಳಿರುವ ಹೂಗಳು, ತುಳಸಿ ತುಂಬೆಯಂತಹ ದೇವಾರ್ಚನೆಗಿರುವ ಗಿಡಗಳು,ಹಚ್ಚಹಸುರಾಗಿ ಕಂಗೊಳಿಸುತ್ತಿದೆ.
ಪೂರ್ವ ದಿಕ್ಕಿಗಿರುವ ದೇವಾಲಯವು ಅತೀ ಸುಂದರವಾದ ಗೋಲಾಕಾರದ ಇಂಡೋಪಾಕ್ ಶೈಲಿಯಂತಹ ಅತ್ಯದ್ಭುತವಾದ ಗೋಪುರದ ಶೈಲಿಯನ್ನು ಒಳಗೊಂಡಿದೆ.
ಸುಂದರವಾಗಿರುವ ಬಹು ಸೂಕ್ಷ್ಮ ಕೆತ್ತನೆಗಳು ನಿಮ್ಮನ್ನು ಆಕರ್ಷಿಸುತ್ತದೆ. ಪವಿತ್ರ ಕಲ್ಯಾಣಿ ತೀರ್ಥದ ಮೊದಲ ಭೇಟಿಯ ನಂತರ ವೀರಭದ್ರ ದೇವರ ಗರ್ಭಗುಡಿಯಿದೆ.
ಅದಕ್ಕೆ ನೇರವಾಗಿ ಮೂರು ವಿಗ್ರಹಗಳಿವೆ
ಇದರ ಪ್ರಹಾರವು ಕೋಡ ವಿಸ್ತಾರವಾಗಿದ್ದು, ಅನೇಕ ಕಾರ್ಯಕ್ರಮಗಳಿಗೆ ಬಂದೊದಗಿದೆ.ವಾರ್ಷಿಕೋತ್ಸವ ನಡೆಯುವ ಮುನ್ನ ನಗರದ ಶಕ್ತಿ ದೇವತೆಗಳಾದ ಚೌಟಿಮಾರಿಯಮ್ಮ ದೇವಾಲಯ, ದಂಡಿನ ಮಾರಿಯಮ್ಮ ದೇವಾಲಯ ,ಕಂಚಿಕಾಮಾಕ್ಷಿ ದೇವಾಲಯ, ಕೋಟೆ ಮಾರಿಯಮ್ಮ ದೇವಾಲಯ, ಬೀರ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದ ನಂತರ ಈದೇವಾಲಯದ ಪೂಜಾ ಕೈಂಕರ್ಯಗಳು ನೆರವೇರುವುದು .
ಕುಲದಲ್ಲಿ ಶುಭ ಕಾರ್ಯಕ್ರಮಗಳು ಕೈಗೆತ್ತಿಕೊಳ್ಳುವ ಮುನ್ನ ಇವರ ಸಮ್ಮತ್ತಿ ಹಾಗೂ ಪೂಜೆ ಕಡ್ಡಾಯವಾಗಿ ಸಲ್ಲುತ್ತದೆ.
2001 ನಂತರ ಪಿ.ಜಿ.ಸುಕುಮಾರ್ ಅವರ ಅಧ್ಯಕ್ಷತೆಯಲ್ಲಿ ಪ್ರತಿ ವರ್ಷದ ವಾರ್ಷಿಕೋತ್ಸವವು ವಿಜೃಂಭಣೆಯಿಂದ ನಡೆದು ಬರುತ್ತಿದ್ದು, ಪ್ರತಿ ಸೋಮವಾರ ಇಲ್ಲಿ ಪೂಜಾ ಕೈಂಕರ್ಯಗಳ ಜೊತೆಗೆ ದೃಷ್ಟಿಪೂಜೆಯು ನಡೆಯುತ್ತಿದೆ.
ಮಡಿವಾಳರು
ಯಾರಿವರು ? ಈ ಜನಾಂಗ ಆರಂಭ ಹೇಗಾಯಿತು?ಇವರ ಹಿನ್ನಲೆ ಏನಿರಬಹುದು?
ಮಡಿವಾಳರೆಂದರೆ ದೇಹವನ್ನೂ, ಧರಿಸುವ ವಸ್ತ್ರವನ್ನೂ ಮಡಿಯಾಗಿ ಎಂದರೆ ಶುಚಿಯಾಗಿಡುವ ಗುಣ ಉಳ್ಳವರು.
ಮಡಿವಾಳ ಜನಾಮಗದ ಕುಲ ಕಸುಬು ವಸ್ತ್ರಗಳನ್ನು ಶುಚಿಗೊಳಿಸುವುದು ಆದರೆ ಕೇವಲ ವಸ್ತ್ರವಲ್ಲ ಪರರ ಮನಸ್ಸನ್ನೂ, ತಮ್ಮ ಮನಸ್ಸನ್ನೂ ಮಡಿಯಾಗಿರುತ್ತಾರೆ. ಅರ್ಥ ಪೂರ್ಣಗುಣಗಳು , ಸಹೃದಯತೆ, ಸಮಾಧನ ,ಸಹೋದರತ್ವದ , ಧೈರ್ಯ, ವಚನಪಾಲನೆ ಇಂತಹ ಎಲ್ಲಾ ಗುಣಗಳೂ ಇವರಲ್ಲಿವೆ.
ಈಗುಣಗಳ ವರ ಇವರಿಗೆ ಹೇಗೆ ಲಭಿಸಿತು? ಈ ಜನಾಂಗದ ಹುಟ್ಟು ಎಲ್ಲಿಂದ ಆಗಿದೆ?
ಮಡಿವಾಳರಿಗೆ ಇಂದಿನದಲ್ಲ, ಬಹಳ ಹಳೆಯ ಇತಿಹಾಸವಿದೆ. ದಕ್ಷ ಮಹಾರಾಜನು ವಿಷ್ಣುವಿನ ಪರಮ ಭಕ್ತನಾಗಿದ್ದು, ಅವರ ವರದಂತೆ ಪ್ರಜಾಪತಿ ದಕ್ಷ ಎಂದು ಹೆಸರುವಾಸಿಯಾದನು. ದಕ್ಷನಿಗೆ ಸತಿ ಎಮಬ ಹೆಸರಿನಲ್ಲಿ ಒಬ್ಬ ಮಗಳಿದ್ದಳು. ದಕ್ಷನು ತನ್ನಮಗಳಾದ ಸತಿಯನ್ನು ವಿಷ್ಣುವಂಶದವರಿಗೆ ವರಿಸಬೇಕೆಂದು ನಿಶ್ಚಯಿಸಿದನು.ಆದರೆ ಸತಿಯ ಮನಸ್ಸು ಶಿವನನ್ನೇ ನೆನೆಯಿತು. ಶಿವನೇ ಅವಳ ಪತಿಯೆಂದು ಅವಳು ನಿಶ್ಚಯಿಸಿದಳು.
ಸತಿಯ ಸ್ವಯಂವರದಲ್ಲಿ ಸತಿಯು ಶಿವನನ್ನು ಪತಿಯಾಗಿ ಸ್ವೀಕರಿಸಿದಳು. ಆದರೆ ಪ್ರಜಾಪತಿ ದಕ್ಷನು ಇದಕ್ಕೆ ಒಪ್ಪಿಗೆ ಸೋಚಿಸಲಿಲ್ಲಿ. ಸತಿ ಮತ್ತು ಈಶ್ವರನು ಬಹಳ ಸರಳ ಮತ್ತು ಸಂತೋಷದ ಜೀವನ ನಡೆಸಿದರು.
ದಕ್ಷನು ತನ್ನ ಆಸ್ತಾನದಲ್ಲಿ ಮಹಾ ಯಜ್ಞವನ್ನು ಏರ್ಪಡಿಸಿದ್ದನು. ಎಲ್ಲರನ್ನು ಆಮಂತ್ರಿಸಿದ ದಕ್ಷ ತನ್ನ ಅಳಿಯನಾದ ಶಿವನನ್ನು ಆಮಂತ್ರಿಸಲಿಲ್ಲ. ಸತಿಯು ಶಿವನ ವಚನಗಳನ್ನು ಸ್ವೀಕರಿಸದೆ ದಕ್ಷನ ಆಸ್ಥಾನಕ್ಕೆ ಹೋದಳು. ಅಲ್ಲಿ ದಕ್ಷನು ಶಿವನ ಬಗ್ಗೆ ಹೀನಾಮಾನವಾಗಿ ಮಾತನಾಡುತ್ತಿರುವುದನ್ನು ಕಂಡು ಕೋಪಗೊಂಡಳು ಇಂತಹ ಮಾತುಗಳನ್ನು ಕೇಳಿ ತನ್ನ ದೇಹ ಮಲಿನಗೊಂಡಿತೆಂದು ,ಅಗ್ನಿ ದೇವರ ಬಳಿ ತನ್ನನ್ನು ಬಸ್ಮಮಾಡುವಂತೆ ಕೇಳಿಕೊಂಡಳು.
ಆದರೆ ಅಗ್ನಿದೇವ ಅವಳ ವಚನವನ್ನು ಸ್ವೀಕರಿಸಲ್ಲಿಲ್ಲ. ಶಿವನ ಮಡದಿಯನ್ನು ಭಸ್ಮಮಾಡುವುದು ಅಸಾಧ್ಯ ಎಂದನು.
ವಿಮರೀತ ಕ್ರೋದಿತಳಾದ ಸತಿಯು ತಾನೇ ತನ್ನನ್ನು ಭಸ್ಮಮಾಡಿಕೊಂಡಳು. ಸತಿಯ ಅಗಲಿಕೆಯಿಂದ ಕ್ರೋದಿತನಾದ ಶಿವನು ತನ್ನ ಒಂದು ಜಡೆಯನ್ನು ಕಿತ್ತು ನೆಲಕ್ಕೆ ಅಪ್ಪಳಿಸಿದಾಗ ವೀರಭದ್ರ ಎಂಬ ಧೂತನು ಉಧ್ಬವಿಸಿದನು. ವೀರಭದ್ರನು ಶಿವನ ಧೂತನಲ್ಲದೆ, ಶಿವನ ಒಂದು ರೂಪವು ಆಗಿರುತ್ತಾನೆ.
ವೀರಭದ್ರನು ಅತ್ಯಂತ ಕ್ರೋದದಿಂದ ದಕ್ಷನ ಸಂಹಾರಮಾಡಲು ಮುನ್ನುಗ್ಗುತ್ತಿರುತ್ತಾನೆ. ದಕ್ಷನು ಎದುರು ಕಂಡಾಗ ಸತಿಯ ಅಗಲಿಕೆಯನ್ನು ನೆನೆದು ಮತ್ತಷ್ಟು ಕೋಪದಿಂದ ದಕ್ಷನ ತಲೆಯನ್ನು ಕಡೆದು ಹಾಕುತ್ತಾನೆ.
ದಕ್ಷನನ್ನು ಸಂಹಾರ ಮಾಡಿದ ವಿಷಯವನ್ನು ಶಿವನಿಗೆ ತಿಳಿಸುವ ಪ್ರಸನ್ನತೆಯಿಂದ ವೀರಭದ್ರನು ಸಪ್ತಋಷಿಗಳ ಕುಟೀರವನ್ನು ದಾಟುವಾಗ ಅಲ್ಲಿ ಯಜ್ಞ ದಲ್ಲಿ ತಲ್ಲೀನರಾಗಿದ್ದ ಅವರ ಮೇಲೆ ವೀರಭದ್ರನ ಅಂಗವಸ್ತ್ರ ಸ್ಪರ್ಶಿಸುತ್ತದೆ.
ಆಗ ಕೋಪಗೊಂಡ ಋಷಿಮುನಿಗಳು ಅಶುಧ್ದವಾದ, ರಕ್ತ ಚಿಮ್ಮಿದ ವಸ್ತ್ರ ಸ್ಪರ್ಶಿಸಿ ಅವರನ್ನು ಮಲೀನ ಗೊಳಿಸಿದ್ದಕ್ಕಾಗಿ ಮುಂಬರುವ ದಿನಗಳಲ್ಲಿ ವೀರಭದ್ರನ ಸಂತತಿ ಎಲ್ಲರ ವಸ್ತ್ರಗಳನ್ನು ಶುದ್ದಗೊಳಿಸಬೇಕೆಂದು ಶಪಿಸುತ್ತಾರೆ.
ಈ ಶಾಪದಿಂದ ಖಿನ್ನನಾದ ವೀರಭದ್ರನು ಶಿವನ ಬಳಿ ಬಂದು ನಡೆದ ಕಾರ್ಯ, ನೀಡಿದ ಶಾಪದ ಬಗ್ಗೆ ತಿಳಿಸುತ್ತಾನೆ. ಆಗ ಶಿವನು ತನಗಾಗಿ ಮಾಡಿದ ಕಾರ್ಯದಿಂದ ಶಾಪವನ್ನು ಪಡೆದ ವೀರಭದ್ರನು ಮುಂಬರುವ ದಿನಗಳಲ್ಲಿ ಈಶ್ವರನಿಗೆ ಗುರುವಾಗಿ ಬರಬೇಕೆಂದು ವರ ನೀಡುತ್ತಾನೆ. ಆಗ ನೀಡಿದ ವರವೇ ಮುಂದಿನ ಯುಗದಲ್ಲಿ ವೀರಭದ್ರನು ಮಡಿವಾಳ ಮಾಚೀದೇವರ ಜನ್ಮತಾಳಿ ಬಸವಣ್ಣನವರಿಗೆ ಗುರುವಾದರು.
ಈ ರೀತಿ ಗುರುಗಳ ಸ್ಥಾನ ಪಡೆದ ಮಡಿವಾಳ ಜನಾಂಗದ ಎಲ್ಲಾ ಗುಣಗಳನ್ನು ಕರಗತ ಮಾಡಿಕೊಂಡಿದ್ದಾರೆ.
ಎಲ್ಲ ಕೆಲಸ ಕಾರ್ಯದಲ್ಲೂ ಮಡಿವಂತಿಕೆ ಇರಬೇಕೆಂದು ಇವರ ಇಚ್ಚೆ . ಆದರಿಂದ ಎಲ್ಲರ ಎಲ್ಲರ ವಸ್ತ್ರಗಳನ್ನು ಶುಭ್ರಗೊಳಿಸುತ್ತಾರೆ.
ಸಂದರ್ಶನ: