Sri Karavale Mahishi Mardini Bhagavathi Temple, Madikeri Kodagu (Coorg)

Reading Time: 5 minutes

posted on: 17-08-2017

ಶ್ರೀ ಕರವಲೆ ಮಹಿಷಿಮರ್ದಿನಿ ಭಗವತಿ ದೇವಸ್ಥಾನ

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಕರವಲೆ ಬಾಡಗ, ಮಡಿಕೇರಿ – ಕೊಡಗು

ಶ್ರೀ ಕರವಲೆ ಮಹಿಷಿಮರ್ದಿನಿ ಭಗವತಿ

ಪ್ರಾಸ್ತಾವಿಕ

ಮಹಿಷ ಮರ್ಧಿನಿ ದೇವಿಯು ಕೊಡಗಿನಲ್ಲಿಯೇ ಪ್ರಸಿದ್ಧವಾಗಿರುವಂತಹ ದೇವತೆ. ಕುಂದುರು ಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಿಗೂ ಮತ್ತು ಮಹಿಷ ಮರ್ಧಿನಿ ದೇವಿಗೂ ನಿಕಟ ಸಂಬಂಧವಿದೆ ಎಂಬುದು ಪ್ರತೀತಿ. ಮಡಿಕೇರಿಯಿಂದ ಅಬ್ಬಿ ಜಲಪಾತಕ್ಕೆ ಹೋಗುವ ಮಾರ್ಗದಲ್ಲಿರುವ ಭಗವತಿ ನಗರದಲ್ಲಿ ಈ ಪುರಾತನ ದೇಗುಲವಿದೆ. ಶ್ರೀ ಮಹಿಷ ಮರ್ಧಿನಿ ಮತ್ತು ಭಗವತಿ ತಾಯಿ ಇಬ್ಬರು ಜೊತೆಯಲ್ಲಿ ಸ್ಥಾಪಿತರಾಗಿದ್ದಾರೆ. ಇಲ್ಲಿನ ಗ್ರಾಮಸ್ಥರ ಹೇಳಿಕೆ ಪ್ರಕಾರ ಈ ದೇಗುಲದಲ್ಲಿ ಈ ಹಿಂದೆ ಮಹಿಷ ಮರ್ಧಿನಿ ದೇವಿ ಮಾತ್ರವಿದ್ದು, 2 ಶತಮಾನಗಳ ಹಿಂದೆ ಕರವಲೆ ಬಾಡಗದ 2 ಕುಟುಂಬಸ್ಥರು ಗಾಳಿಬೀಡು ಎಂಬಲ್ಲಿದ್ದ ಭಗವತಿ ದೇವಿಯನ್ನು ರಾತ್ರಿಯ ವೇಳೆ ತಂದು ಮಹಿಷ ಮರ್ಧಿನಿ ದೇಗುಲದಲ್ಲಿ ಅಂದರೆ ಮಹಿಷ ಮರ್ಧಿನಿ ದೇವಿಯ ವಿಗ್ರಹವಿರುವ ಎಡಭಾಗದಲ್ಲಿ ಭಗವತಿ ದೇವಿಯನ್ನು ಪ್ರತಿಷ್ಠಾಪಿಸಿದರು. ವರ್ಷಂಪ್ರತಿ ಮಾರ್ಚ್ ತಿಂಗಳಿನಲ್ಲಿ ವಾರ್ಷಿಕ ಪೂಜಾ ಮಹೋತ್ಸವವು ನಡೆಯುತ್ತದೆ. ಈ ಸಂದರ್ಭ ದೇವಿಯ ವಿಗ್ರಹವನ್ನು ಬ್ರಾಹ್ಮಣ ಅರ್ಚಕರು ತಲೆಯ ಮೇಲೆ ಹೊತ್ತು ನಾಡಿನವರ ದುಡಿಕೊಟ್ಟ್ ಪಾಟ್ ಹಾಗೂ ಚೆಂಡೆಯೊಂದಿಗೆ ಪ್ರದಕ್ಷಿಣೆ ಬರುತ್ತಾರೆ. ಮಾರನೆಯ ದಿನ ನಾಡಿನ ಭಕ್ತಾಧಿಗಳಿಂದ ಎತ್ತು ಪೋರಾಟದೊಂದಿಗೆ ದೊಡ್ಡ ಹಬ್ಬ ಪ್ರಾರಂಭವಾಗುತ್ತದೆ. ಈ ಸ್ಥಳದ ವಿಶೇಷವೆಂದರೆ ಭಗವತಿ ದೇವಿಯು ಗಾಳಿಬೀಡಿನಿಂದ ಬಂದ ಕಾರಣ ಭಗವತಿಯ ಆದಿ ಸ್ಥಳದಿಂದ ಹರಿದುಬರುವಂತಹ ನೀರಿನಿಂದಲೇ ತಾಯಿಯ ಜಳಕ ವಾಗಬೇಕೆಂಬುದು ಪ್ರತೀತಿ. ಇಲ್ಲಿ ವಾರ್ಷಿಕ ಉತ್ಸವದಲ್ಲಿ ಅಯ್ಯಪ್ಪ, ಸುಬ್ರಮಣ್ಯ, ಅಜ್ಜಪ್ಪ, ವಿಷ್ಣು ಮೂರ್ತಿ, ಪಡುಮಟ್ಟೆ ಚಾಮುಂಡಿ, ಭದ್ರಕಾಳಿ, ಮೈತಲಪ್ಪ ಗುಡಿಗಳಿವೆ. ಸುಮಾರು ಹದಿನೆಂಟು ವರ್ಷಗಳಿಂದ ಮಡಿಕೇರಿ ದಸರಾ ಮಹೋತ್ಸವದಲ್ಲಿ ದಶಮಂಟಪಗಳಲ್ಲಿ 10ನೇ ಮಂಟಪವಾಗಿ ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಲಿದೆ

ವ್ಯವಸ್ಥಾಪನ ಸಮಿತಿ

ನಾಡತಕ್ಕರು : ಪೊನ್ನಪ್ಪಂಡ ಕುಟುಂಬಸ್ಥರು
ದೇವತಕ್ಕರು: ಪಾಂಡಿರ ಕುಟುಂಬಸ್ಥರು
ಮುಕ್ಕಾಟಿ: ಸುಬ್ಬಮ್ಮಂಡ ಕುಟುಂಬಸ್ಥರು
ಕೊಡೆ ಮುಕ್ಕಾಟಿ: ಚೆಟ್ಟಿರ ಕುಟುಂಬಸ್ಥರು
ಒಕ್ಕ:
ತೆಕ್ಕಡ ಕುಟುಂಬಸ್ಥರು
ಬೊಳ್ಳೇರ ಕುಟುಂಬಸ್ಥರು

ಪುದಿಯತಂಡ ಕುಟುಂಬಸ್ಥರು
ಅರಿಯಂಡ ಕುಟುಂಬಸ್ಥರು
ಬೆದ್‍ಕಂಡ ಕುಟುಂಬಸ್ಥರು
ಮುದ್ದಂಡ ಕುಟುಂಬಸ್ಥರು
ನಾಪಂಡ ಕುಟುಂಬಸ್ಥರು
ಮಿನ್ನಂಡ ಕುಟುಂಬಸ್ಥರು
ಉದಿಯಂಡ ಕುಟುಂಬಸ್ಥರು
ಮತ್ತು ಮಲೆಯರು ಕುಟುಂಬಸ್ಥರು

ಬ್ರಹ್ಮ ಕಲಶೋತ್ಸವ

ದೇವರಕಾಡು

ಅರಣ್ಯ ನಾಶ ತಪ್ಪಿಸುವ ನಿಟ್ಟಿನಲ್ಲಿ ಹುಟ್ಟಿಕೊಂಡ ಪರಿಕಲ್ಪನೆ ದೇವರಕಾಡು. ದೇವರಕಾಡು ಕೊಡಗು, ಮಲೆನಾಡು ಪ್ರದೇಶಗಳ ಕಾಡುಗಳಲ್ಲಿ ಅಸ್ಥಿತ್ವದಲ್ಲಿದೆ. ಕಾಡನ್ನೇ ದೇವರೆಂದು ಪೂಜಿಸುವ ಮೂಲಕ ಕಾಡು ನಾಶ ತಪ್ಪಿಸುವ ಉದ್ದೇಶದಿಂದ ಈ ಕಲ್ಪನೆ ಹುಟ್ಟಿಕೊಂಡು ನೂರು ವರ್ಷಗಳೇ ಕಳೆದಿವೆ.
ಕೊಡಗು ಜಿಲ್ಲೆಯ 4104 ಚದರ ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ 1214 ದೇವರಕಾಡುಗಳನ್ನು ಪಟ್ಟಿ ಮಾಡಲಾಗಿದೆ. ಜಗತ್ತಿನ ಯಾವುದೇ ವನಪ್ರದೇಶದಲ್ಲಿ ಇಲ್ಲದಂತಹ ದಟ್ಟ ಅರಣ್ಯ ಇಲ್ಲಿದ್ದು, ವೈವಿಧ್ಯಮಯ ಸಸ್ಯಗಳು, ಗಿಡ – ಮರಗಳು ಮಿಗಿಲಾಗಿ ಪ್ರಾಣಿ ಸಂಕುಲ ಇದೆ. ಈ ಕಾಡುಗಳ ಉಸ್ತುವಾರಿಯನ್ನು ಸ್ಥಳೀಯ ದೇವಾಲಯಗಳೇ ನೋಡಿಕೊಳ್ಳುತ್ತವೆ. ಹೀಗಾಗಿ ದೇವರಕಾಡು ಪರಿಕಲ್ಪನೆಗೆ ಹೆಚ್ಚಿನ ಮಹತ್ವ ಬಂದಿದೆ.

ಚಿತ್ರಶಾಲೆ

ಸಂದರ್ಶನ

ಹಿನ್ನಲೆ – ಇತಿಹಾಸ

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments