ವಾಲಿಬಾಲ್ ನಲ್ಲಿ ಕೊಡಗಿನ “ಜಿಮ್ಮೀ ಜಾರ್ಜ್” ಸುಹೈಲ್ ಗುಂಡಿಕೆರೆ
ವಾಲಿಬಾಲ್ ನಲ್ಲಿ ದೇಶ, ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ದೇಶದ ಹೆಸರನ್ನು ಪ್ರಪಂಚಕ್ಕೆ ಪರಿಚಯಿಸಿದ ಕೇರಳದ “ಜಿಮ್ಮೀ ಜಾರ್ಜ್” ಶೈಲಿಯ ಆಟಗಾರನಾಗಿದ್ದಾನೆ ಕೊಡಗಿನ
ತಾಲ್ಲೂಕಿನ ಗುಂಡಿಕೆರೆಯ ಪುಂಜರೇ ಕುಟುಂಬದ ಹಂಸ ಮುಸ್ಲಿಯಾರ್ ಹಾಗೂ ಖದೀಜ ದಂಪತಿಗಳ ಪುತ್ರನಾಗಿದ್ದಾನೆ ಸುಹೈಲ್.
ಕೊಡಗು ಕರ್ನಾಟಕದ ಕಾಶ್ಮೀರ, ಕ್ರೀಡೆಯ ತವರೂರು, ಸೈನಿಕರ ನಾಡು ಕಾಫಿಯ ಬೀಡು, ಹೀಗೆ ನೂರಾರು ಹೆಸರುಗಳಿಂದ ಪುಟ್ಟ ಜಿಲ್ಲೆಯನ್ನು ವರ್ಣಿಸುತ್ತಾರೆ.ಅಂತರಾಷ್ಟ್ರೀಯ ಮಟ್ಟದಲ್ಲಿ ಜಿಲ್ಲೆಯ ಹಲವಾರು ಕ್ರೀಡಾಪಟುಗಳು ಭಾಗವಹಿಸಿ ಜಿಲ್ಲೆಯ ಹೆಸರನ್ನು ಜಗತ್ತಿಗೆ ಪರಿಚಯಿಸಿದೆ.
ಸುಹೈಲ್ ಗುಂಡಿಕೆರೆ ಅಂದರೆ ಸಾಕು,, ಕೊಡಗಿನ ವಾಲಿಬಾಲ್ ಆಟಗರಾರಲ್ಲಿ ನಡುಕ ಉಂಟು ಮಾಡುತ್ತದೆ, “ಕ್ರಿಕೆಟ್ ನಲ್ಲಿ ” ಕ್ರಿಸ್ ಗೇಲ್” ಯಾವ ರೀತಿ ತನ್ನ ಹೊಡಿ ಬಡಿ ಆಟದ ಶೈಲಿಯಿಂದ ಆಟಗಾರರಿಗೆ ಸಿಂಗ ಸ್ವಪ್ನ.
“ಅದೇ ರೀತಿ ವಾಲಿಬಾಲ್ ನಲ್ಲಿ “ಜಿಮ್ಮೀ ಜಾರ್ಜ್” ಶೈಲಿಯ ಹೊಡೆತಗಾರ ಸುಹೈಲ್ ಗುಂಡಿಕೆರೆ.
ಕೊಡಗಿನಲ್ಲಿ ವಾಲಿಬಾಲ್ ನಲ್ಲೇ ಹೆಸರುವಾಸಿಯಾಗಿ “ವಾಲಿಬಾಲ್ ” ತವರೂರು ಎಂದೇ ಪ್ರಖ್ಯಾತಿ ಹೊಂದಿದ ಜಿ.ವೈ.ಸಿ ಗುಂಡಿಕೆರೆ ತಂಡದ ಮೂಲಕ ಉದಯವಾದ ಪ್ರತಿಭೆಯಾಗಿದೆ “ಸುಹೈಲ್ ಗುಂಡಿಕೆರೆ”
ಜಿಲ್ಲೆಯಲ್ಲಿ ನಡೆಯುವ ಎಲ್ಲಾ ವಾಲಿಬಾಲ್ ಕ್ರೀಡಾಕೂಟದಲ್ಲಿ ಜಿ.ವೈ.ಸಿ ಗುಂಡಿಕೆರೆ ತಂಡವು ಭಾಗವಹಿಸಿದರೇ ಪ್ರಥಮ ಸ್ಥಾನವನ್ನು ಪಡೆಯದ ಪಂದ್ಯಾಟಗಳಲ್ಲಿ, ಸುಹೈಲ್ಗೆ ಪ್ರಶಸ್ತಿ ಸಿಗದ ವಾಲಿಬಾಲ್ ಆಟವಿಲ್ಲ ಕೊಡಗಿನಲ್ಲಿ.ಅಷ್ಟರ ಮಟ್ಟಿಗೆ ತನ್ನ “ಜಿಮ್ಮೀ ಜಾರ್ಜ್” ಶೈಲಿಯ ಹೊಡೆತದ ಮೂಲಕ ಸಾವಿರಾರು ಅಭಿಮಾನಿಗಳ ಮನಸ್ಸನ್ನು ತನ್ನೆಡೆ ಸೆಳೆದಿದ್ದಾನೆ.
ಬಾಲ್ಯದಿಂದಲೂ ವಾಲಿಬಾಲ್ ಕ್ರೀಡೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಸುಹೈಲ್ ತನ್ನ ಪ್ರಾಥಮಿಕ ಶಿಕ್ಷಣದಿಂದಲೇ ಜಿಲ್ಲಾ ಮಟ್ಟದ ಎಲ್ಲಾ ಕ್ರೀಡೆಯಲ್ಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆಯುತ್ತಿದ್ದ.ವಿರಾಜಪೇಟೆ ತಾಲ್ಲೂಕಿನ ಗುಂಡಿಕೆರೆ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರಾಗಿದ್ದಾರೆ ಸುಹೈಲ್ ನ ವಾಲಿಬಾಲ್ ಗುರು.
ಪ್ರೌಢ ಶಿಕ್ಷಣದ ಸಂದರ್ಭದಲ್ಲಿ ರಾಜ್ಯ ಮಟ್ಟವನ್ನು ಪ್ರತಿನಿಧಿಸಿ, ತನ್ನ ಪಿ.ಯು.ಸಿ ಯಲ್ಲೂ ಜಿಲ್ಲೆಯನ್ನು ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿ ಪ್ರಶಸ್ತಿ ಪಡೆದಿದ್ದಾನೆ…
ವಾಲಿಬಾಲ್ ಪಂದ್ಯಾಟಕ್ಕಾಗಿ ದುಬೈನಿಂದ ತನ್ನ ತವರೂರಿಗೆ
ಜಿಲ್ಲೆಯ ವರ್ಷಂಪ್ರತಿ ನಡೆಯುವ ೬೦ ಕ್ಕೂ ಹೆಚ್ಚು ತಂಡಗಳು ಭಾಗವಹಿಸುವ ” ವಾಲಿಬಾಲ್ ಕೊಡಗು ಮುಸ್ಲಿಂ ಕಪ್” ಪಂದ್ಯಾಟಕ್ಕೆ ತನ್ನ ಸ್ಟಾರ್ ಬಾಯ್ಸ್ ತನ್ನವನ್ನು ಪ್ರತಿನಿಧಿಸಲು ತಾನು ಉದ್ಯೋಗದಲ್ಲಿರುವ ಅರಬ್ ಮಣ್ಣಿನಿಂದ ಕರ್ನಾಟಕ ಕಾಶ್ಮೀರದ ಮಣ್ಣಿಗೆ ಆಗಮಿಸಿ “ಕೊಡಗು ವಾಲಿಬಾಲ್ ಮುಸ್ಲಿಂ ಕಪ್” ನ್ನು ಸ್ಟಾರ್ ಬಾಯ್ಸ್ ತಂಡದ ಮುಡಿಗೇರಿಸುವಲ್ಲಿ ಪ್ರಮುಖ ಪಾತ್ರವಹಿಸಿ “ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ತನ್ನ ಮಡಿಲಿಗೆ ಹಾಕಿಕೊಂಡ ಆಟಗಾರ ಸುಹೈಲ್ ಗುಂಡಿಕೆರೆ.
ವಿದೇಶಿ ನೆಲದಲ್ಲಿ ” ವಾಲಿಬಾಲ್ ನಲ್ಲಿ ಸುಹೈಲ್ ಗುಂಡಿಕೆರೆ ಎಂದೇ ಪ್ರಖ್ಯಾತಿ
ದುಬೈನಲ್ಲಿ ನಡೆಯುವ ಎಲ್ಲಾ ಅಂತರಾಷ್ಟ್ರೀಯ ವಾಲಿಬಾಲ್ ಪಂದ್ಯದಲ್ಲಿ ಆಡಿ ವಾಲಿಬಾಲ್ ನಲ್ಲಿ ಕೊಡಗಿನ ಹೆಸರನ್ನು ಅರಬ್ ಮಣ್ಣಿಗೆ ಪರಿಚಯಿಸಿದ ಆಟಗಾರ ಸುಹೈಲ್ ಗುಂಡಿಕೆರೆ.
ಅಂತರಾಷ್ಟ್ರೀಯ ಮಟ್ಡದ ಆಟಗಾರೊಂದಿಗೆ ಆಡಿ ಅನುಭವ ಹೊಂದಿದ ಕ್ರೀಡಾಪಟು.ದುಬೈನಲ್ಲಿ ತನ್ನ ಕೆಲಸದೊಂದಿಗೆ ಕ್ರೀಡೆಯ ಕಡೆ ಹೆಚ್ಚಿನ ಒಲವು ತೋರುವ ಸುಹೈಲ್ ಭಾರತ ತಂಡದವನ್ನು ಪ್ರತಿನಿಧಿಸಿದ ಆಟಗಾರರನ್ನು ಒಳಗೊಂಡ “ಇಂಡಿಯನ್ ಸ್ಪೈಕರ್ಸ್ ” ತಂಡದಲ್ಲಿ ಆಡಿ ” ಹಲವಾರು ಪ್ರಶಸ್ತಿಯನ್ನು ಪಡೆದಿದ್ದಾನೆ.
ಯಾವುದೇ ರೀತಿಯ ಕ್ರೀಡಾ ತರಬೇತಿಯನ್ನು ಪಡೆಯದೇ ತನ್ನ ಪ್ರತಿಭೆಯನ್ನು ವಾಲಿಬಾಲ್ ನಲ್ಲಿ ಚಿಮ್ಮಿಸಿದಾ ಆಟಗಾರ ಸುಹೈಲ್ ಗುಂಡಿಕೆರೆ.