ಕಾಳುಮೆಣಸು
ಕರಿಮೆಣಸು ಸಂಬಾರು ಬೆಳೆಗಳ ‘ರಾಜ’ ಎಂದು ಕರೆಯುತ್ತಾರೆ. ಕರ್ನಾಟಕದಲ್ಲಿ ಕಾಫಿ, ಕಿತ್ತಲೆ, ತೆಂಗು, ಅಡಿಕೆ ಮತ್ತು ಏಲಕ್ಕಿ ತೋಟಗಳಲ್ಲಿ ಮಿಶ್ರ ಬೆಳೆಯಾಗಿ ಬೆಳೆಯಲಾಗುತ್ತಿದೆ. ಕರಾವಳಿ ಮತ್ತು ಘಟ್ಟ ಪ್ರದೇಶಗಳಲ್ಲಿ ಹಾಗೂ ನೀರಾವರಿ ಸೌಕರ್ಯವಿರುವ ಅರೆ ಮಲೆನಾಡು ಪ್ರದೇಶಗಳಲ್ಲಿ ಕೂಡಾ ತೆಂಗಿನ ತೋಟದಲ್ಲಿ ಕರಿಮೆಣಸನ್ನು ಬೆಳೆಸಬಹುದು. ಕರಿಮೆಣಸನ್ನು ಸಾಂಬಾರು ವಸ್ತುವಾಗಿ ಅಡುಗೆ, ತಿಂಡಿ-ತಿನಿಸುಗಳಲ್ಲಿ ಬಳಸುವುದಲ್ಲದೆ ಇದರಿಂದ ಓಲಿಯೋರೆಸಿನ್ ಎಂಬ ಅಂಶವನ್ನು ಬೇರ್ಪಡಿಸಿ ಔಷಧಿ, ಸುಗಂಧ ದ್ರವ್ಯ ವಸ್ತುಗಳ ತಯಾರಿಕೆಯಲ್ಲಿ ಬಳಸುವರು.
ಹವಾಗುಣ
ಉಷ್ಣ ಮತ್ತು ಸಮಶೀತೋಷ್ನ ಹವಾಗುಣದಲ್ಲಿ ಸಮುದ್ರ ಮಟ್ಟದಿಂದ 1500 ಮೀಟರ್‍ಗಳವರೆಗೆ ಬೆಳೆಯಬಹುದು. ಜೂನ್-ಜುಲೈ ತಿಂಗಳುಗಳು ನಾಟಿಗೆ ಸೂಕ್ತ. ಉಷ್ಣ ಮತ್ತು ತಂಪು ಹವಾಮಾನ ಹೊಂದಿರುವ ಘಟ್ಟ ಪ್ರದೇಶಗಳು ಈ ಬೆಳೆಗೆ ಅತಿ ಸೂಕ್ತ. 10 ರಿಂದ 40o ಸೆಂ. ಉಷ್ಣತೆ ಮತ್ತು 1250 ರಿಂದ 2000 ಮಿ.ಮೀ. ಮಳೆ ಬೀಳುವ ಪ್ರದೇಶ ಉತ್ತಮ.
ಮಣ್ಣು
ಈ ಬೆಳೆಗೆ ಫಲವತ್ತಾದ ಹೆಚ್ಚು ಸಾವಯವ ಪದಾರ್ಥಗಳಿಂದ ಕೂಡಿದ ನೀರು ಬಸಿದು ಹೋಗುವಂತಹ ಮಣ್ಣು ಸೂಕ್ತ. ಕೆಂಪು ಮತ್ತು ಕಪ್ಪು ಗೋಡು ಮತ್ತು ಜಂಬಿಟ್ಟಿಗೆ ಮಣ್ಣುಗಳು ಅತ್ಯುತ್ತಮ.
ಕರಾವಳಿ ಪ್ರದೇಶಕ್ಕೆ ಸೂಕ್ತವಾದ ತಳಿಗಳು
ಬಿಳಿಮಲ್ಲಿಗೆ ಸರ: ಪ್ರತಿ ವರ್ಷ ಫಸಲಿಗೆ ಬರುವ ತಳಿಯಾಗಿದ್ದು ಅಡಿಕೆ ಮತ್ತು ಕಾಫಿ ತೋಟಗಳಲ್ಲಿ ಬೆಳೆಯಾಗುತ್ತದೆ. ಎಲೆ ಮತ್ತು ಕಾಳುಗಳು ತಿಳಿ ಹಸಿರು ಬಣ್ಣದ್ದಾಗಿರುತ್ತವೆ. ಗೊಂಚಲುಗಳಲ್ಲಿ ದ್ವಿಲಿಂಗ ಹೂವುಗಳು ಹೆಚ್ಚಾಗಿದ್ದು ಕಾಳುಗಳು ಮಧ್ಯಮ ಗಾತ್ರದ್ದಾಗಿರುತ್ತವೆ.
ಕರಿಮಲ್ಲಿಗೆ ಸರ: ಎಲೆ ಮತ್ತು ಕಾಯಿಗಳು ಅಚ್ಚ ಹಸಿರು ಬಣ್ಣದಾಗಿರುತ್ತವೆ. ಗೊಂಚಲುಗಳಲ್ಲಿ ಶೇ.82 ರಷ್ಟು ದ್ವಿಲಿಂಗ ಹೂವುಗಳು ಇದ್ದು ಕಾಳುಗಳು ಸಣ್ಣದಾಗಿರುತ್ತವೆ. ಈ ತಳಿ ಪ್ರತಿ ವರ್ಷ ಫ¯ ಕೊಡುವುದಾಗಿದ್ದು ಕಾಫಿ ಮತ್ತು ಅಡಿಕೆ ತೋಟಗಳಲ್ಲಿ ಬೆಳೆಯುವುದಕ್ಕೆ ಸೂಕ್ತವೆನ್ನಿಸಿದೆ.
ಉದ್ದಕರೆ: ಗೊಂಚಲು ಉದ್ದವಾಗಿರುವುದರಿಂದ ಈ ಹೆಸರನ್ನು ಪಡೆದಿದೆ. ಗೊಂಚಲುಗಳು ಶೇ. 95 ರಷ್ಟು ದ್ವಿಲಿಂಗ ಹೂವುಗಳನ್ನು ಹೊಂದಿರುತ್ತದೆ. ಕಾಳುಗಳು ಮಧ್ಯಮ ಗಾತ್ರವುಳ್ಳವಾಗಿದ್ದು ತಿಳಿ ಹಸುರಿನಿಂದ ದಟ್ಟ ಹಸಿರುಬಣ್ಣ ಹೊಂದಿರುತ್ತವೆ. ಎರಡು ವರ್ಷಗಳಿಗೊಮ್ಮೆ ಫಲ ಕೊಡುವ ತಳಿಯಾಗಿರುತ್ತವೆ.
ಕರಿಮುಂಡ: ಎಲೆಗಳು ಮತ್ತು ಕಾಯಿಗಳು ಹಚ್ಚ ಹಸಿರು ಬಣ್ಣ ಹೊಂದಿರುತ್ತವೆ. ನೆರಳು ಜಾಸ್ತಿ ಇರುವ ಕಾಫಿ ತೋಟಗಳಲ್ಲಿ ಬೆಳೆಯಲಾಗುತ್ತದೆ. ಗೊಂಚಲುಗಳಲ್ಲಿ ಶೇ. 80ರಷ್ಟು ದ್ವಿಲಿಂಗ ಹೂವುಗಳು ಇದ್ದು ಕಾಯಿಗಳು ಮಧ್ಯಮ ಗಾತ್ರದ್ದಾಗಿರುತ್ತವೆ.
ಪನ್ನಿಯೂರ್ ಹೈಬ್ರಿಡ್-1: ಹೆಚ್ಚು ಇಳುವರಿ ಕೊಡುವ ತಳಿಯಾಗಿದ್ದು ಗೊಂಚಲುಗಳು ಉದ್ದವಾಗಿದ್ದು ಕಾಯಿಗಳ ಗಾತ್ರ ದೊಡ್ಡಾದಾಗಿರುತ್ತದೆ. ಎಲೆಗಳು ದೊಡ್ಡದಾಗಿದ್ದು, ತಿಳಿ ಹಸಿರು ಬಣ್ಣ ಹೊಂದಿರುತ್ತದೆ. ಈ ಸಂಕರ ತಳಿಯು ಕಡಿಮೆ ನೆರಳಿರುವ ಪ್ರದೇಶಗಳಲ್ಲಿ ಚೆನ್ನಾಗಿ ಬರುತ್ತದೆ.
ಬೇಸಾಯ ಸಾಮಗ್ರಿಗಳು
1. ಕಾಂಡದ ತುಂಡುಗಳು : 3200/ ಹೆಕ್ಟೇರಿಗೆ (250 ಸೆಂಟ್ಸ್‍ಗೆ)
2.5 ಮೀ. x 2.5 ಮೀ.
2. ಕೊಟ್ಟಿಗೆ ಗೊಬ್ಬರ : ಕಾಂಪೆÇೀಸ್ಟ್ 10 ಕಿ.ಗ್ರಾಂ.
(ಪ್ರತಿ ಬಳ್ಳಿಗೆ ಪ್ರತಿ ವರ್ಷಕ್ಕೆ)
ರಾಸಾಯನಿಕ ಗೊಬ್ಬರಗಳು ಪ್ರತಿ ಬಳ್ಳಿಗೆ (ಗ್ರಾಂ.) ಪ್ರತಿ ಹೆಕ್ಟೇರಿಗೆ (ಕಿ.ಗ್ರಾಂ.)
ಮೊದಲನೇ ವರ್ಷ ಸಾರಜನಕ 35 56
ರಂಜಕ 15 24
ಪೆÇಟ್ಯಾಷ್ 45 72
ಎರಡನೇ ವರ್ಷ ಸಾರಜನಕ 70 112
ರಂಜಕ 30 48
ಪೆÇಟ್ಯಾಷ್ 90 144
ಮೂರನೇ ವರ್ಷ ಸಾರಜನಕ 100 160
ರಂಜಕ 40 64
ಪೆÇಟ್ಯಾಷ್ 140 224
ಬೇಸಾಯ ಕ್ರಮ
ಸಸ್ಯಾಭಿವೃದ್ಧಿ: ಬಳ್ಳಿಯ ಕೆಳಭಾಗದಲ್ಲಿ ಬರುವ ಕವಲುಗಳಿಂದ 2-3 ಗೆಣ್ಣುಗಳಿರುವ ತುಂಡುಗಳನ್ನು ಸಸ್ಯಾಭಿವೃದ್ಧಿಗೆ ಉಪಯೋಗಿಸಬೇಕು. ಈ ರೀತಿ ತಯಾರಿಸಿದ ಬಳ್ಳಿಯ ತುಂಡುಗಳನ್ನು 3 ಭಾಗ ಮೇಲ್ಮಣ್ಣು, 2 ಭಾಗ ಕೊಟ್ಟಿಗೆ ಗೊಬ್ಬರ ಮತ್ತು ಒಂದು ಭಾಗ ಮರಳಿನಿಂದ ಕೂಡಿದ ಮಿಶ್ರಣದಿಂದ ತುಂಬಲ್ಪಟ್ಟ ಪಾಲಿಥೀನ್ ಚೀಲಗಳಲ್ಲಿ ನೆಡಬೇಕು.
ನಾಟಿ ಮಾಡುವುದು: ಆಧಾರದ ಗಿಡದಿಂದ (ತೆಂಗು ಅಥವಾ ಅಡಿಕೆ) 60 ಸೆಂ.ಮೀ. ದೂರದಲ್ಲಿ, ಈಶಾನ್ಯ ದಿಕ್ಕಿನಲ್ಲಿ 45 x 45 x 45 ಸೆಂ.ಮೀ. ಅಳತೆಯ ಗುಣಿಗಳನ್ನು ತೆಗೆಯಬೇಕು. ಈ ಗುಣಿಗಳನ್ನು ಮೇಲ್ಮಣ್ಣು ಮತ್ತು ಕೊಟ್ಟಿಗೆ ಗೊಬ್ಬರದ ಮಿಶ್ರಣದಿಂದ ತುಂಬಿ ಅವುಗಳ ಮಧ್ಯದಲ್ಲಿ ಬೇರು ಬಿಟ್ಟ ಮೆಣಸಿನ ತುಂಡುಗಳನ್ನು ನಾಟಿ ಮಾಡಿ ನೀರು ಹಾಯಿಸಬೇಕು.
ಗೊಬ್ಬರ ಕೊಡುವುದು ಮತ್ತು ಅಂತರ ಬೇಸಾಯ: ಮೇ-ಜೂನ್ ಸಮಯದಲ್ಲಿ ಗೊಬ್ಬರ ಹಾಕುವ ಮೊದಲು ಮೆಣಸಿನ ಬಳ್ಳಿಗಳ ಸುತ್ತಲೂ ಇರುವ ಕಳೆಗಳನ್ನು ಸ್ವಚ್ಛ ಮಾಡಿ. 10 ಕಿ.ಗ್ರಾಂ. ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೆÇೀಸ್ಟ್ ಮತ್ತು ಶಿಫಾರಸ್ಸು ಮಾಡಿದ ರಾಸಾಯನಿಕ ಗೊಬ್ಬರ ಪ್ರಮಾಣವನ್ನು ಜೂನ್ ತಿಂಗಳಲ್ಲಿ ಕೊಡಬೇಕು. ಕುಡಿಗಳನ್ನು ಕಾಲಕಾಲಕ್ಕೆ ಆಧಾರದ ಮರಗಳಿಗೆ ಕಟ್ಟುತ್ತಿರಬೇಕು. ಬಳ್ಳಿಗಳ ಬುಡವನ್ನು ಮುಖ್ಯವಾಗಿ ಬೇಸಿಗೆ ಕಾಲದಲ್ಲಿ ಒಣ ಎಲೆ ಅಥವಾ ಹುಲ್ಲಿನಿಂದ ಮುಚ್ಚಿ ಹೊದಿಕೆ ಮಾಡಬೇಕು. ಇದು ಮಣ್ಣಿನ ತೇವಾಂಶವನ್ನು ಕಾಪಾಡುವುದರಲ್ಲಿ ಸಹಾಯವಾಗುತ್ತದೆ.
ಸಸ್ಯ ಸಂರಕ್ಷಣೆ
ಕೀಟಗಳು: ಹಿಟ್ಟು ತಿಗಣೆ, ಕಾಂಡಕೊರೆಯುವ ಹುಳು ಮತ್ತು ಥ್ರಿಪ್ಸ್ ಕೀಟಕಳು ಕಾಳುಮೆಣಸಿನ ಬೆಳೆಯನ್ನು ಹಾನಿ ಮಾಡುತ್ತಿದ್ದು, ಇವುಗಳ ಬಾಧೆ ತಡೆಗಟ್ಟಲು 1.7 ಮಿ.ಲೀ. ಡೈಮೀಥೋಯೇಟ್ ಅಥವಾ 2 ಮಿ.ಲೀ. ಕ್ವಿನಾಲ್‍ಪಾಸ್ ಅಥವಾ 1 ಮಿ.ಲೀ. ಮೀಥೈಲ್ ಪ್ಯಾರಾಥಿಯಾನ್ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಬಳ್ಳಿಗಳಿಗೆ ಸಿಂಪಡಿಸಬೇಕು.
ಪ್ರತಿ ಬಳ್ಳಿಗೆ 1.2 ಕೆ.ಜಿ. ಬೇವಿನ ಹಿಂಡಿ ಹಾಕಬೇಕು, ಇದರಿಂದ ಬಳ್ಳಿಗಳಲ್ಲಿ ಕಾಣಿಸಿಕೊಳ್ಳುವ ಕೀಟ ಮತ್ತು ರೋಗಗಳ ಬಾಧೆಯನ್ನು ಕಡಿಮೆ ಮಾಡಬಹುದು.
ರೋಗಗಳು: ಚಿಬ್ಬು ರೋಗ, ಕಪ್ಪುಕೊಳೆ ರೋಗ ಮತ್ತು ಸೊರಗು ರೋಗಗಳು.
ಶೀಘ್ರ ಸೊರಗು ರೋಗ: ಕಾಳು ಮೆಣಸು ಬೆಳೆಗೆ ಬರುವ ಸುಮಾರು ಹದಿನೇಳು ರೋಗಗಳಲ್ಲಿ ‘ಫೈಟಾಪ್ತರ ಬುಡ ಕೊಳೆಯುವ ರೋಗ’ ಈ ಬೆಳೆಯ ಉತ್ಪಾದನೆಗೆ ಮಾರಕವಾಗಿದೆ. ಶೀಘ್ರ ಸೊರಗು ರೋಗ, ಹಳದಿ ರೋಗ, ಕಾಳು ಮೆಣಸಿನ ಕಟ್ಟೆ ರೋಗ ಎಂದೆಲ್ಲಾ ಕರೆಯುವ ಈ ರೋಗ ಕಳೆದ 15-20 ವರ್ಷಗಳಿಂದೀಚೆಗೆ ತೀವ್ರವಾಗಿ ಕಾಳು ಮೆಣಸಿನ ಬೆಳೆಯನ್ನು ವಿನಾಶದಂಚಿಗೆ ತಲುಪಿಸುವ ರೋಗವಾಗಿದೆ.
ಜೌಗು ಪ್ರದೇಶ ಹಾಗೂ ತೇವಾಂಶದಿಂದ ಕೂಡಿದ ವಾತಾವರಣ ಈ ರೋಗಾಣುವಿಗೆ ಅನುಕೂಲಕರ. ಪ್ರತಿದಿನ ಸುಮಾರು 22 ಮಿ.ಮೀ. ಗಿಂತ ಹೆಚ್ಚು ಮಳೆ ಸುರಿಯುವುದು ಶೇಕಡಾ 83 ರಿಂದ 99 ರಷ್ಟು ಆರ್ದತೆ, 22 ರಿಂದ 29 ಡಿಗ್ರಿ ಸೆಲ್ಮಿಯಸ್ ಉಷ್ಣಾಂಶ ಮತ್ತು ದಿನಕ್ಕೆ 2 ರಿಂದ 3 ಗಂಟೆಗಳಿಗಿಂತ ಕಡಿಮೆ ಸೂರ್ಯನ ಬೆಳಕು ಈ ರೋಗ ಹೆಚ್ಚಾಗಲು ಸಹಕಾರಿಯಾಗಿವೆ. ಕಾಳುಮೆಣಸನ್ನು ಅಡಿಕೆ ಬೆಳೆ ಜತೆಯಲ್ಲಿ ಮಿಶ್ರ ಬೆಳೆಯಾಗಿ ಬೆಳೆದ ಕಡೆ ರೋಗ ತೀವ್ರವಾಗಿ ಅಕ್ಟೋಬರ್ ತಿಂಗಳಿಂದ ಜನವರಿವರೆಗೂ ಕಂಡುಬರುವುದುಂಟು.
ಈ ಶಿಲೀಂಧ್ರ ರೋಗದ ಮುಖ್ಯ ಲಕ್ಷಣಗಳೆಂದರೆ ರೋಗ ತಗುಲಿದ ಬಳ್ಳಿಯನ್ನು ವೀಕ್ಷಿಸಿದಾಗ ಮೊದಲಿಗೆ ಬಳ್ಳಿಯ ಬುಡದ ಒಂದೆರಡು ಎಲೆಗಳು ನಂತರ ಇತರ ಎಲೆಗಳ ಮೇಲೆ ವೃತ್ತಾಕಾರದ ನೀರಿನಿಂದ ತೋಯ್ದಂತಹ ಬೂದು ಬಣ್ಣದ ಮಚ್ಚೆಗೆಗಳು ಕಂಡು ಬರುವವು. ನಂತರ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಕೊಳೆತು ನಾರುವವು ಹಾಗೂ ಉದುರಿ ಬೀಳುವವು. ಬುಡದಿಂದ ಸುಮಾರು 30-40 ಸೆಂ.ಮೀ. ವರೆಗೆ ಕಾಂಡದ ಮೇಲೆ ನೀರಿನಿಂದ ತೋಯ್ದಂತಹ ಕಪ್ಪು ಮಚ್ಚೆಗಳು ಕಾಣಿಸಿಕೊಂಡು ದೊಡ್ಡದಾಗುವವು. ಈ ರೋಗವು ತೀವ್ರವಾದಾಗ ಕಾಂಡವು ಕೊಳೆಯುವುದು ನಂತರ ಆ ಭಾಗದ ತೊಗಟೆ ಸುಲಿದು ಬಿದ್ದು ಬಳ್ಳಿ ಸಂಪೂರ್ಣವಾಗಿ ಹಾಳಾಗುವುದು.
ಹತೋಟಿ ವಿಧಾನ:
1. ಸೊರಗು ರೋಗ ಹತೋಟಿಗೆ ಸಮಗ್ರ ಹತೋಟಿ ಕ್ರಮಗಳೆಂದರೆ
• ನೆಲದ ಮೇಲೆ ಹರಡುವ ಬಳ್ಳಿಗಳನ್ನು ಮುಂಗಾರಿನ ಮುಂಚೆ ಕತ್ತರಿಸಬೇಕು.
• ಪ್ರತಿ ಬಳ್ಳಿಗೆ ಪ್ರತಿ ವರ್ಷ 1.2 ಕಿ.ಗ್ರಾಂ. ಬೇವಿನ ಹಿಂಡಿ ಹಾಕಿ ಬೆರೆಸಬೇಕು.
• ಬಳ್ಳಿಯ ಕಾಂಡಕ್ಕೆ 1 ಮೀಟರ್ ಎತ್ತರದವರೆಗೆ ಬೋರ್ಡೊ ಮುಲಾಮು ಹಚ್ಚಬೇಕು.
• ಮುಂಗಾರಿನ ಮೊದಲು ಶೇ. 1 ರ ಬೋರ್ಡೊ ದ್ರಾವಣ ಅಥವಾ 3 ಗ್ರಾಂ. ತಾಮ್ರದ ಆಕ್ಸಿಕ್ಲೋರೈಡ್ ಬೆರೆಸಿ ಭೂಮಿಯನ್ನು ತೋಯಿಸಬೇಕು ಮತ್ತು ಎಲೆಗಳಿಗೆ ಸಿಂಪಡಿಸಬೇಕು.
• ಪ್ರತಿ ಬಳ್ಳಿಗೆ 50ರಿಂದ 60 ಗ್ರಾಂ. ಟ್ರೈಕೋಡರ್ಮಾ ವಿರಿಡೆ ಶಿಲೀಂಧ್ರವನ್ನು 1 ಕಿ.ಗ್ರಾಂ. ಬೇವಿನ ಹಿಂಡಿ ಅಥವಾ 5 ಕಿ.ಗ್ರಾಂ. ಕೊಟ್ಟಿಗೆ ಗೊಬ್ಬರದಲ್ಲಿ ಮಿಶ್ರ ಮಾಡಿ ಬುಡಕ್ಕೆ ಹಾಕುವುದು.
• ತೋಟದ ಭೂಭಾಗವನ್ನು ಎಲೆಗಳಿಂದ ಹೊದಿಕೆ ಮಾಡುತ್ತಿರಬೇಕು ಮತ್ತು ಮಳೆಗಾಲದಲ್ಲಿ ಅಗೆತ ಕೆಲಸ ಮಾಡಬಾರದು.
2. ಮುಂಗಾರಿಗೆ ಮೊದಲು ಒಂದು ಬಾರಿ, ಮುಂಗಾರಿನ ಸಮಯದಲ್ಲಿ ಮತ್ತು ಮುಂಗಾರಿನ ನಂತರ ಒಂದು ಬಾರಿ ಶೇ. 1ರ ಬೋರ್ಡೊ ದ್ರಾವಣ ಅಥವಾ 2 ಗ್ರಾಂ. ಹೆಕ್ಸಾಕೋನಜೋಲ್ (ಕಾಂಟಾಪ್) ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ಬಳ್ಳಿಗಳಿಗೆ ಸಿಂಪಡಿಸಬೇಕು. ಇದರಿಂದ ಕಾಯಿ ಗೊಂಚಲು ಕೊಳೆಯುವಿಕೆಯನ್ನು ತಡೆಯಬಹುದು.
3. ಬಳ್ಳಿ ಸೊರಗು ರೋಗವನ್ನು ತಡೆಗಟ್ಟಲು ಪ್ರತಿ ಗಿಡಕ್ಕೆ ಭೂಮಿಗೆ 20 ಗ್ರಾಂ. ಫ್ಯುರಡಾನ್ ಅಥವಾ 10 ಗ್ರಾಂ ಥಿಮೆಟ್ ಹಾಗೂ ಶೇ. 0.1 ರ ಕಾರ್ಬೆಂಡೈಜಿಮ್ ಅಥವಾ ಶೇ. 0.3 ರ ಕ್ಯಾಪ್ಟಾನ್‍ನಿಂದ ಉಪಚರಿಸಬೇಕು.
ಇಳುವರಿ
ಪ್ರತಿ ಬಳ್ಳಿಯ ಪ್ರತಿ ವರ್ಷ ಸರಾಸರಿ ಒಂದು ಕಿ.ಗ್ರಾಂ. ಒಣಗಿದ ಮೆಣಸನ್ನು ಕೊಡಬಲ್ಲದು.
ಮೆಣಸು ಸಂಸ್ಕರಣೆ: ಮೆಣಸಿನ ಬೆಳೆಯು ಹೂಬಿಟ್ಟ ನಂತರ ಕೊಯ್ಲಿನವರೆಗೆ 8 ರಿಂದ 10 ತಿಂಗಳನ್ನು ತೆಗೆದುಕೊಳ್ಳುತ್ತದೆ. ಮೆಣಸನ್ನು ಕಪ್ಪು ಮತ್ತು ಬಿಳಿ ಮೆಣಸು ಎಂದು ಎರಡು ವಿಧವಾಗಿ ಸಂಸ್ಕರಿಸಬಹುದು.
ಕಪ್ಪು ಮೆಣಸು: ಗೊಂಚಲಿನ ಒಂದೆರಡು ಕಾಳುಗಳು ಹೊಳಪು ಕಿತ್ತಳೆ ಅಥವಾ ನೇರಳೆ ಬಣ್ಣಕ್ಕೆ ತಿರುಗಿದಾಗ ಪೂರ್ತಿ ಗೊಂಚಲನ್ನು ತೆಗೆಯಬೇಕು. ನಂತರ ಉತ್ತಮ ಬಣ್ಣ ಪಡೆಯಲು ಕುದಿಯುವ ನೀರಿನಲ್ಲಿ ಒಂದು ನಿಮಿಷ ಅದ್ದಬೇಕು. ನಂತರ ಗೊಂಚಲುಗಳನ್ನು ಹೊರತೆಗೆದು ಕಾಳುಗಳನ್ನು ಬೇರ್ಪಡಿಸಿ 7 ರಿಂದ 10 ದಿನಗಳ ಕಾಲ ಬಿಸಿಲಿನಲ್ಲಿ ಒಣಗಿಸಬೇಕು. ಆಗ ಕಪ್ಪು ಮೆಣಸು ತಯಾರಾಗುತ್ತವೆ.
ಬಿಳಿ ಮೆಣಸು: ಬಹುಪಾಲು ಕಾಳುಗಳು ಕೆಂಪು ಬಣ್ಣಕ್ಕೆ ತಿರುಗಿದಾಗ ಕೊಯ್ಲು ಮಾಡಬೇಕು. ಗೊಂ ಚಲುಗಳನ್ನು ಒಂದೆರಡು ದಿನ ರಾಶಿ ಹಾಕಬೇಕು. ಆಗ ಕಾಳುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಅನಂತರ ಕಾಳುಗಳನ್ನು ಬೇರ್ಪಡಿಸಿ 8-10 ದಿನ ನೀರಿನಲ್ಲಿ ನೆನೆಸಿ ಹೊರಗೆ ತೆಗೆದು ರಾಶಿ ಹಾಕಿ ಮುಚ್ಚಬೇಕು. ಲಘುವಾಗಿ ಹಳಸುವಿಕೆ (ಫರ್ಮೆಂಟೇಶನ್) ಕ್ರಿಯೆಯು ನಡೆದು ಕಾಳುಗಳ ಮೇಲಿನ ತೆಳುವಾದ ಹೊದಿಕೆಯು ಸಡಿಲಗೊಳ್ಳುವುದು. ಆಗ ನೀರಿನಲ್ಲಿ ತೊಳೆದು ಕಾಳು ಮತ್ತು ಹೊದಿಕೆಯನ್ನು ಬೇರ್ಪಡಿಸಬೇಕು. ಹೀಗೆ ದೊರೆಯುವ ಬಿಳಿ ಮೆಣಸಿನ ಕಾಳುಗಳನ್ನು ಬಿಸಿಲಿನಲ್ಲಿ ಒಣಗಿಸಬೇಕು.
ಪೆÇದೆ ಕರಿ ಮೆಣಸಿನ ಗಿಡ:
ಕರಿಮೆಣಸಿನ ಬಳ್ಳಿಗಳನ್ನು ಮರಕ್ಕೆ ಹಬ್ಬಿಸಿ ಬೆಳೆಯುವ ಬದಲು ಚಿಕ್ಕ ಪೆÇದೆಯಂತೆಯೂ ಬೆಳೆಯಬಹುದು. ಇವುಗಳನ್ನು ಮಣ್ಣಿನ ಅಥವಾ ಸಿಮೆಂಟಿನ ಕುಂಡಗಳಲ್ಲಿ, ಹೂ ತೋಟಗಳಲ್ಲಿ ಅಥವಾ ಮನೆಯ ತಾರಸಿಯ ಮೇಲೆ ಬೆಳೆಯಬಹುದು. ಮಣ್ಣಿನಲ್ಲಿ ಹರಿಯುವ ಬಳ್ಳಿಗಳನ್ನು ಉಪಯೋಗಿಸಿ ಪೆÇದೆ ಮೆಣಸಿನ ಗಿಡಗಳನ್ನು ಬೆಳೆಯಲು ಆಗುವುದಿಲ್ಲ. ಪೆÇದೆ ಮೆಣಸಿನ ಗಿಡ ಬೆಳೆಯಲು ಕಳೆದ ವರ್ಷ ಫಸಲು ಬಿಟ್ಟ ಕವಲುಗಳನ್ನು ಉಪಯೋಗಿಸಬೇಕು. ಈ ಕವಲುಗಳಿಗೆ ಬೇರು ಬರಿಸಿ ಪೆÇದೆ ಕರಿಮೆಣಸಿನ ಗಿಡಗಳನ್ನು ತಯಾರು ಮಾಡಿಕೊಳ್ಳಬಹುದು. ಈ ಗಿಡಗಳು ನೆಟ್ಟ ವರ್ಷವೇ ಫಸಲನ್ನು ಕೊಡಲು ಪ್ರಾರಂಭ ಮಾಡುತ್ತವೆ ಹಾಗೂ ವರ್ಷಪೂರ್ತಿ ಹೂ, ಕಾಯಿಗಳನ್ನು ಕೊಡುತ್ತವೆ.
ಪೆÇದೆ ಕರಿಮೆಣಸಿನ ಗಿಡಗಳನ್ನು ತಯಾರು ಮಾಡಲು ಫೆಬ್ರವರಿ, ಮಾರ್ಚ್ ಹಾಗೂ ಸೆಪ್ಟೆಂಬರ್, ಅಕ್ಟೋಬರ್, ತಿಂಗಳುಗಳು ಸೂಕ್ತ. ಪ್ರತಿ ಎರಡು ತಿಂಗಳಿಗೊಮ್ಮೆ ಸಾರಜನಕ ಒಂದು ಗ್ರಾಂ., ರಂಜಕ 0.5 ಗ್ರಾಂ. ಹಾಗೂ ಪೆÇಟ್ಯಾಷ್ 2 ಗ್ರಾಂ. ನಂತೆ ಪ್ರತಿ ಕುಂಡಗಳಿಗೆ ಕೊಡುತ್ತಿರಬೇಕು. ಕಾಂಪೆÇೀಸ್ಟ್ ಗೊಬ್ಬರವನ್ನು ಸಾಕಷ್ಟು ಪ್ರಮಾಣದಲ್ಲಿ ಒದಗಿಸಿದರೆ ಉತ್ತಮ. ಹೊರಗೆ ತೋಟಗಳಲ್ಲಿ ನೆಟ್ಟಿರುವ ಗಿಡಗಳಿಗೆ 10 ಗ್ರಾಂ. ಸಾರಜನಕ, 5 ಗ್ರಾಂ. ರಂಜಕ ಹಾಗೂ 20 ಗ್ರಾಂ. ಪೆÇಟ್ಯಾಷನ್ನು ವರ್ಷಕ್ಕೆ ಮೂರು ಸಲ ಅಂದರೆ ಜನವರಿ, ಮೇ ಹಾಗೂ ಸೆಪ್ಟೆಂಬರ್ ತಿಂಗಳುಗಳಲ್ಲಿ ಕೊಡಬೇಕು. ಜೂನ್ ತಿಂಗಳಿನಲ್ಲಿ 5 ಕಿ.ಗ್ರಾಂ. ನಷ್ಟು ಕೊಟ್ಟಿಗೆ ಗೊಬ್ಬರ ನೀಡಬೇಕು. ಚೆನ್ನಾಗಿ ಬೆಳೆಸಿದ ಗಿಡದಲ್ಲಿ ಒಂದು ಕುಂಡದಿಂದ 100 ರಿಂದ 150 ಗ್ರಾಂ ಒಣ ಮೆಣಸು ದೊರೆಯುತ್ತದೆ. ತೋಟದಲ್ಲಿ ನೆಟ್ಟ ಗಿಡದಿಂದ 200 ರಿಂದ 250 ಗ್ರಾಂ ತನಕ ಇಳುವರಿ ಸಿಗುತ್ತದೆ.