ಹೀಗೊಂದು ದೇಶ ಭಕ್ತ ಆತ್ಮದ ಕಥೆ

Reading Time: 7 minutes

ಹೀಗೊಂದು ದೇಶ ಭಕ್ತ ಆತ್ಮದ ಕಥೆ

ಮಾತೃಭೂಮಿಯ ಮೇಲೆ ಪ್ರೀತಿ, ಅಭಿಮಾನ, ಆಧರ, ಗೌರವ, ಸ್ವಾಭಿಮಾನ, ನಿಷ್ಠೆ, ಋಣ, ಇವೆಲ್ಲಾ ಇಲ್ಲದ ನರಜನ್ಮ ಹುಡುಕಿದರೆ ಬಹುಷ ಸಿಗಲಿಕ್ಕಿಲ್ಲ. ಕೆಲವರು ಬದುಕಿದ್ದಾಗ ಮಾತೃಭೂಮಿಯ ಋಣ ತೀರಿಸಿದರೆ, ಇನ್ನು ಕೆಲವರು ಕಾಲವಾದ ನಂತರವು ದೇಶದ ಗಡಿ ಕಾಯುವ ಕೆಲಸವನ್ನು ಮಾಡುತಿರುತ್ತಾರೆಂದರೆ ನಂಬಲು ಸಾಧ್ಯವೆ?. ಇದು ಬೇರೆ ಎಲ್ಲಿಯಾದರೂ ನಡೆದಿದ್ದರೆ ಅದನ್ನು ಭಾರತೀಯರು ಹುಬ್ಬೇರಿಸಿಕೊಂಡು ಬೆರಗುಗಣ್ಣಿನಿಂದ ಕೇಳುತ್ತಿದ್ದರು, ಅಂತಹ ದೇಶದವರನ್ನು ಹಾಡಿ ಹೊಗಳುತ್ತಿದ್ದರು. ‘ಹಿತ್ತಲ ಗಿಡ ಮದ್ದಲ’್ಲ ಎಂಬಂತೆ. ನಮ್ಮ ದೇಶಭಕ್ತ ಸೈನಿಕರು ಬದುಕಿದ್ದಾಗ ದೇಶದ ಗಡಿ ಕಾಯುತ್ತಿದ್ದರೆ, ಇನ್ನು ಕೆಲವರು ತಮ್ಮ ದೇಹತ್ಯಾಗದ ನಂತರವೂ ಆತ್ಮದ ರೂಪದಲ್ಲಿ ಗಡಿ ಕಾಯುವ ಕೆಲಸವನ್ನು ಮಾಡುತ್ತಿದ್ದಾರೆ.
ಪಂಜಾಬ್ ರೆಜಿಮೆಂಟಿನ ಸಿಪಾಯಿಯಾಗಿದ್ದ “ಹರ್‍ಭಜನ್ ಸಿಂಗ್” ಸಿಕ್ಕಿಂನ ನಥುಲಾಪಾಸ್ ಮತ್ತು ಸಿನೋ-ಇಂಡಿಯನ್ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ, ಹಿಮಪಾತದಡಿ ಸಿಲುಕಿ ಕೆಲವು ದೂರದವರೆಗೆ ಕೊಚ್ಚಿಕೊಂಡು ಹೋಗಿ ಕಣ್ಮರೆಯಾಗುತ್ತಾನೆ. ಎಷ್ಟು ಹುಡುಕಿದರೂ ಆತನÀ ಮೃತ ದೇಹ ದೊರಕದೆ ಸ್ನೇಹಿತರು ಕಂಗಾಲಾಗುತ್ತಾರೆ. ಆ ಸಂದರ್ಭದಲ್ಲಿ ತಮ್ಮ ಸ್ನೇಹಿತರೊರ್ವರ ಕನಸಿನಲ್ಲಿ ಹರ್‍ಭಜನ್ ಸಿಂಗ್‍ನು ಬಂದು ನನ್ನ ಶರೀರ ಇಂತಹ ಕಡೆಯಲ್ಲಿ ಇದೆ. ಅದನ್ನು ಸಮಾಧಿ ಮಾಡಿ ಅಲ್ಲಿ ಒಂದು ಗುಡಿಯನ್ನು ಕಟ್ಟಿಸಬೇಕು ನಾನು ಮರಣಾನಂತರವೂ ದೇಶಕ್ಕಾಗಿ ಕರ್ತವ್ಯ ಮಾಡಬೇಕಾಗಿದೆ ಎಂದು ಹೇಳಲಾಗುತ್ತದೆ. ಮಾರನೆಯ ದಿನ ಸ್ನೇಹಿತರು ಆ ಸ್ಥಳವನ್ನು ಹುಡುಕಿದಾಗ ಹರ್‍ಭಜನ್‍ನನು ಕನಸಿನಲ್ಲಿ ಹೇಳಿದ ಸ್ಥಳದಲ್ಲಿಯೇ ಆತನ ಮೃತ ದೇಹ ಮತ್ತು ರೈಫಲ್ ದೊರೆಯುತ್ತದೆ. ಆತನ ಇಚ್ಛೆಯಂತೆ ಮೃತ ಶರೀರವನ್ನು ಸಕಲ ಸರ್ಕಾರಿ ಗೌರವದೊಂದಿಗೆ ಆತ ಕನಸಿನಲ್ಲಿ ಹೇಳಿದ ಸ್ಥಳದಲ್ಲಿಯೇ ಸಮಾಧಿ ಮಾಡಲಾಗುತ್ತದೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ನಂತರದ ದಿನಗಳಲ್ಲಿ ಆತನ ಸ್ನೇಹಿತ ಸೈನಿಕರು ತಾವು ಇರುವ ಬಂಕರ್‍ನ ಬಳಿಯ ಸ್ಥಳದಲ್ಲಿ ಮಂದಿರವೊಂದನ್ನು ಕಟ್ಟಿ ಅಲ್ಲಿ ಹರ್‍ಭಜನ್ ಸಿಂಗ್ ಉಪಯೋಗಿಸುತ್ತಿದ್ದ ವಸ್ತುಗಳನ್ನು ಇಟ್ಟು ಪೂಜಿಸುತ್ತಾರೆ. ಹರ್‍ಭಜನ್ ತನ್ನ ಸಹೋದ್ಯೋಗಿಗಳ ಕನಸಿನಲ್ಲಿ ಬರುವುದೂ, ಅವರ ಕಷ್ಟಗಳಿಗೆ ಸ್ಪಂದಿಸುವುದೂ, ರಾತ್ರಿ ಸಮಯದಲ್ಲಿ ಕುದುರೆಯೇರಿ ಬಂದು ಗಡಿಕಾಯುವ ಕೆಲಸವನ್ನು ಮಾಡುವುದೂ ಇತ್ಯಾದಿಗಳಿಂದಾಗಿ ಮೇಲಧಿಕಾರಿಗಳ ಗಮನ ಸೆಳೆಯಲಾಗುತ್ತದೆ. ಅಷ್ಟರಲ್ಲಾಗಲೇ ಚೀನಾ ಗಡಿಯಿಂದಲೂ ಅಧಿಕಾರಿಗಳಿಗೆ ಪತ್ರವೊಂದು ಬರುತ್ತದೆ. ರಾತ್ರಿ ಪಾಳೆಯದಲ್ಲಿ ನಿಮ್ಮ ಸೈನಿಕನೊಬ್ಬ ಕುದುರೆಯಲ್ಲಿ ಬಂದು ಇಲ್ಲಿ ಗಡಿಕಾಯುತ್ತಿದ್ದಾನೆ ಇವನನ್ನು ಹಿಂತಿರುಗಿ ಕರೆಸಿಕೊಳ್ಳಿ ಎಂದು. ಮೇಲಾಧಿಕಾರಿಗಳು ಇದನ್ನು ನಂಬುವುದೋ ಬಿಡುವುದೋ ಎಂದು ಚಿಂತೆಗೀಡಾಗುತ್ತಾರೆ. ತನ್ನ 22ನೇ ವಯಸ್ಸಿಗೆ ಹುತಾತ್ಮನಾಗಿ ದಂತಕಥೆಯಾಗಿದ್ದು ಮಾತ್ರವಲ್ಲದೆ, ಧಾರ್ಮಿಕ ಪೂಜೆ ಮತ್ತು ಇಂದಿನ ಸೈನಿಕರಿಗೆ ಸ್ಪೂರ್ತಿಯ ಸೆಲೆಯಾಗಿ ಬಾಬಾ ಹರ್‍ಭಜನ್ ಸಿಂಗ್(ಇದು ಇವರ ಕರ್ತವ್ಯಕ್ಕೆ ಸೈನಿಕರು ಮತ್ತು ಊರಿನವರು ನೀಡಿದ ಹೆಸರು) ಎಂದು ಆರಾಧಿಸಲ್ಪಡುತ್ತಿದ್ದಾರೆ.

ಹರ್‍ಭಜನ್ ಸಿಂಗ್ 1946 ಆಗಷ್ಟ್ 30ರಂದು ಪಂಜಾಬಿನ ಇಂದಿನ ಪಾಕಿಸ್ತಾನದ ಸಿಂಗ್ ಕುಟುಂಬವೊಂದರಲ್ಲಿ ಹುಟ್ಟಿ, 1965ರ ಜೂನ್ 30ರಂದು ರಜಪೂತ ರೆಜಿಮೆಂಟಿನಲ್ಲಿ ಕರ್ತವ್ಯಕ್ಕೆ ಹಾಜರಾದರು. 1968ರವರೆಗೆ ಸೇವೆಸಲ್ಲಿಸುತ್ತಿರುವಾಗಲೇ ಇವರು ಹುತಾತ್ಮರಾಗುತ್ತಾರೆ. ಆಗ ಇವರ ಪ್ರಾಯ ಕೇವಲ 22 ವರ್ಷಗಳು ಮಾತ್ರ. ಅಲ್ಲಿಂದ ಮುಂದೆ ಪ್ರಾರಂಭಗಾಗುತ್ತದೆ ಹರ್‍ಭಜನ್ ಸಿಂಗ್‍ನ ನಿಜವಾದ ಕರ್ತವ್ಯ. ಚೀನಾದ ಆಕ್ರಮಣದ ಬಗ್ಗೆ ಸೈನಿಕರಿಗೆ ಮೊದಲೇ ಮಾಹಿತಿಯನ್ನು ರವಾನಿಸುವುದು, ಗಡಿಯಲ್ಲಿ ನಿಯುಕ್ತರಾದ ಭಾರತೀಯ ಸೈನಿಕರು ರಾತ್ರಿ ಪಾಳೆÀಯದಲ್ಲಿ ನಿದ್ರಿಸದಂತೆ ನೋಡಿಕೋಳ್ಳುವುದು, ಒಂದು ವೇಳೆ ಅವರಿಗೇನಾದರೂ ಮಂಪರು ಬಂತೆಂದರೆ ಎರಡು ಬಾರಿಸಿ ಎಚ್ಚರಿಸುವುದು, ಚೀನಾ ಸೈನಿಕರೆನಾದರೂ ಭಾರತದ ವಿರುದ್ಧ ಪಿತೂರಿ ನಡೆಸಿದರೆ ಅವರಗಿ ಸರಿಯಾದ ಶಾಸ್ತಿ ಮಾಡುವುದೂ ಮುಂತಾದ ರೀತಿಯಲ್ಲಿ ತಮ್ಮ ಮರಣಾನಂತರವೂ ಸೇವೆ ಸಲ್ಲಿಸುತ್ತಿದ್ದಾರೆ. ಇದರಿಂದಾಗಿ ಚೀನಾ ಗಡಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸದಾ ಎಚ್ಚರಿಕೆಯಿಂದಿದ್ದು, ಗಡಿ ಸಂರಕ್ಷಣೆ ಮಾಡುತ್ತಿದ್ದಾರೆ. ರಾತ್ರಿಯಾಯಿತೆಂದರೆ ಬಾಬಾ ಹರ್‍ಭಜನ್ ಸಿಂಗ್‍ರ ಮಂದಿರವನ್ನು ಮುಚ್ಚುತ್ತಾರೆ ಏಕೆಂದರೆ? ಹರ್‍ಭಜನ್ ರಾತ್ರಿ ಗಡಿಕಾಯುವ ಕೆಲಸಕ್ಕೆ ಹೊರಡುವ ಸಮಯ.
ಬಾಬಾ ಹರ್‍ಭಜನ್ ಸಿಂಗ್‍ರ ಸೇವೆಯನ್ನು ಪರಿಗಣಿಸಿ ಭಾರತ ಸರಕಾರವು ಮರಣಾನಂತರ ಮಹಾವೀರ ಚಕ್ರವನ್ನು ನೀಡಿ ಪುರಸ್ಕರಿಸಿರುತ್ತಾರೆ. ಭಾರತ-ಚೀನಾ ರಾಷ್ಟ್ರಗಳ ನಡುವಿನ ಧ್ವಜ ದಿನಾಚರಣೆಯಂದು ಚೀನಾ ಸೈನಿಕರು ಬಾಬಾ ಹರ್‍ಭಜನ್ ಸಿಂಗ್‍ನನ್ನು ಗೌರವಿಸುತ್ತಾ ಅವರಿಗಾಗಿ ಒಂದು ಕುರ್ಚಿಯನ್ನು ಮುಂಗಡವಾಗಿ ಕಾದಿರಿಸುತ್ತಾರೆ.

ಸೆಷ್ಟಂಬರ್ 15ರಂದು ಇವರಿಗೆ ಎರಡು ತಿಂಗಳ ರಜೆಯನ್ನು ನೀಡಿ ಅವರ ಹುಟ್ಟೂರಾದ ಪಂಜಾಬಿನ ಕಪುರ್ಥಲಾ ಜಿಲ್ಲೆಯ ಕುಕ ಗ್ರಾಮಕ್ಕೆ ಇಬ್ಬರು ಜವಾನರೊಂದಿಗೆ ಹರ್‍ಭಜನ್‍ಸಿಂಗ್‍ರ ಫೋಟೋ ಜೊತೆಗೆ ಅವರು ಜೀವಂತವಾಗಿದ್ದಾಗ ಬಳಸುತ್ತಿದ್ದ ವಯುಕ್ತಿಕ ಸಾಮಾನುಗಳೊಂದಿಗೆ ಕಳುಹಿಸಿಕೊಡುತ್ತಾರೆ. ಅಂದು ಎಲ್ಲಾ ಸೈನಿಕರು ರೈಲ್ವೆ ನಿಲ್ದಾಣದಲ್ಲಿ ಬಂದು ಇವರನ್ನು ಗೌರವಯುಕ್ತವಾಗಿ ಬೀಳುಕೊಡುತ್ತಾರೆ. ರಜೆಗೆಂದು ಮನೆಗೆ ಬರುವ ಬಾಬ ಹರ್‍ಭಜನ್ ಸಿಂಗನನ್ನು ಬರಮಾಡಿಕೊಳ್ಳಲು ಮನೆಯವರು ಕೊಠಡಿಯೊಂದನ್ನು ಅಲಂಕರಿಸಿಡುತ್ತಾರೆ. ಅಲ್ಲಿ ಅವರು ಎರಡು ತಿಂಗಳುಗಳ ಕಾಲ ತನ್ನ ವಸ್ತುಗಳನ್ನು ಉಪಯೋಗಿಸುತ್ತಾರೆಂದೂ, ಹಾಸಿಗೆ ದಿಂಬುಗಳು ಅಸ್ತವ್ಯಸ್ತವಾಗಿರುತ್ತದೆಂದೂ ಶೂಗಳು ಮಣ್ಣಾಗಿ ಕೊಳಕ್ಕಾಗಿಯೂ ಇರುತ್ತದೆಂದು ಅವರ ಅಣ್ಣ ರತನ್ ಸಿಂಗ್ ತಮ್ಮ ಅನುಭವವನ್ನು ಹೇಳುತ್ತಾರೆ. ಅಣ್ಣನಿಗೆ ಇವರ ಬಗ್ಗೆ ಅನುಮಾನ ಬಂದು ಇದೆಲ್ಲಾ ಭ್ರಮೆ ಎಂದು ಅನುಮಾನಿಸಿದ ತಕ್ಷಣ ಅವರ ಮುಂದೆ ಪ್ರಕ್ಯಕ್ಷಗೊಂಡು ಇದು ‘ನಾನೇ ನಿಮ್ಮ ಹರ್‍ಭಜನ್’ ಎಂದು ಹೇಳಿ ಅಪ್ರತ್ಯಕ್ಷಗೊಳ್ಳುತ್ತಾರೆ. ಅಂದಿನಿಂದ ಅಣ್ಣ ರತನ್ ಸಿಂಗ್, ನನ್ನಲ್ಲಿ ಯಾವುದೇ ಅನುಮಾನಗಳು ಸುಳಿಯಲಿಲ್ಲ್ಲವೆಂದು ಹೇಳುತ್ತಾರೆ.

ಸಿಪಾಯಿಯಾಗಿ ಸೈನ್ಯಕೆ ಹಾಜರಾದ ಸಮಯದಿಂದÀ ಬಾಬಾ ಹರ್‍ಭಜನ್ ಸಿಂಗ್‍ಗೆ ಬಡ್ತಿ ನೀಡಿ ಕ್ಯಾಪ್ಟನ್ ಆಗಿ 2005ರಲ್ಲಿ ನಿವೃತಿ ಹೊಂದಬೇಕಾಗಿತ್ತು. ಆದರೆ ಇವರ ಕರ್ತವ್ಯವನ್ನು ಮನಗಂಡು 2006ರಲ್ಲಿ ನಿವೃತಿ ನೀಡಿ ಊರಿಗೆ ಕಳುಹಿಸಿಸುವ ಕಾರ್ಯವನ್ನು ಮಾಡಲಾಗುತ್ತದೆ. ಅಲ್ಲಿ ಅಣ್ಣ ರತನ್ ಸಿಂಗ್ ತಾಯಿಯ ನಿಧನಾ ನಂತರ ಅವರ ಮನೆಯಲ್ಲಿಯೇ ಒಂದು ಕೊಠಡಿಯಲ್ಲಿ ಗುರುದ್ವಾರವನ್ನು ನಿರ್ಮಿಸಿದ್ದಾರೆ. ಇಲ್ಲಿ ಊರಿನ ಜನ ನಿತ್ಯ ಭಕ್ತಿಯಿಂದ ಬಂದು ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಯಾರೇ ಜವಾನರು ಇದರ ಮುಂದಿನಿಂದ ಹಾದು ಹೋದರೆ ಸಲ್ಯೂಟ್ ಹೊಡೆದೆ ಮುಂದೆ ಸಾಗುತ್ತಾರೆ.
2006ರಲ್ಲಿ ನಿಯಮದಂತೆ ಬಾಬಾ ಹರ್‍ಭಜನ್ ಸಿಂಗ್‍ರ ನಿವೃತಿಯ ನಂತರವೂ ಭಾರತೀಯ ಸೇನೆಯಿಂದ ಇವರ ದೇಶ ಸೇವೆಯ ಕರ್ತವ್ಯವನ್ನು ಮುಂದುವರೆಸಲಾಗುತ್ತಿದೆ. ಈಗಲೂ ಇವರಿಗೆ ಸಂಬಳ, ಬಡ್ತಿ, ಜೊತೆಗೆ ಅವರಿಗೆ ರೈಲ್ವೆ ಟಿಕೇಟನ್ನು ಕಾಯ್ದಿರಿಸಲಾಗುತ್ತದೆ. ನಂತರ 2ತಿಂಗಳ ರಜೆ ಮುಗಿಯುವಷ್ಟರಲ್ಲಿ ಅಂದರೆ ಸೆಪ್ಟಂಬರ್ 15ರಿಂದ ನವೆಂಬರ್ 14ರವರಗೆ. ನಂತರ ನವೆಂಬರ್ 15ರಂದು ಇಬ್ಬರು ಸೈನಿಕರು ಹಾಗೂ ಇವರ ಮನೆಯವರು ಪುನಃ ಅದೇ ಫೋಟೋ ಮತ್ತು ವೈಯುಕ್ತಿಕ ಸಾಮಾನುಗಳನ್ನು ರೈಲಿನಲ್ಲಿಯೇ ಹಿಂತಿರುಗಿಸುತ್ತಾರೆ. ಬಾಬಾ ಹರ್‍ಭಜನ್ ಸಿಂಗ್‍ರ ತಾಯಿ ಹೇಳುವಂತೆ ಬಾಬಾ ಕರ್ತವ್ಯಕ್ಕೆ ಹೋದ ಮೇಲೆ ನಮ್ಮ ಮನೆಯಲ್ಲಿ ಮತ್ತು ಊರಿನಲ್ಲಿ ನೀರವ ಮೌನ ಆವರಿಸಿರುತ್ತದೆ. ಊರಿನಲ್ಲಿ ಯಾರಾದರೂ ತೀರಾ ವಾಸಿಯಾಗದಂತಹ ಕಾಯಿಲೆಯಿಂದ ಬಳಲುತ್ತಿದ್ದರೆ, ಒಂದು ಪಾತ್ರೆಯಲ್ಲಿ ನೀರನ್ನು ತಂದು ಬಾಬಾ ಹರ್‍ಭಜನ್ ಸಿಂಗ್‍ರ ಮಂದಿರದಲ್ಲಿಟ್ಟು, ಮೂರು ದಿನದ ಬಳಿಕ ಅದನ್ನು ಕುಡಿದರೆ ಎಂತಹ ಕಾಯಿಲೆಗಳು ವಾಸಿಯಾಗುವುದೆಂದು ನಂಬುತ್ತಾರೆ. ಬಾಬಾರ ಬಟ್ಟೆ, ಶೂ, ಕೈ ಗಡಿಯಾರ ಮತ್ತು ಅವರು ಉಪಯೋಗಿಸುತ್ತಿದ್ದ ವಸ್ತುಗಳನ್ನು ಇಲ್ಲಿ ದಿನಾ ಶುಭ್ರಗೊಳಿಸಿ ಸಂರಕ್ಷಿಸಿಡಲಾಗುತ್ತದೆ. ಇದೇ ರೀತಿಯ ಹಲವಾರು ಬಾಬಾಗಳು ತಮ್ಮ ನಿವೃತಿಯ ನಂತರವೂ ದೇಶಕ್ಕಾಗಿ ದುಡಿಯುತ್ತಿರುವುದಾಗಿ ಇಂದಿನ ಸೈನಿಕರೂ, ಅಧಿಕಾರಿ ವರ್ಗದವರೂ ನಂಬುತ್ತಾರೆ. ಏನೇ ಆಗಲಿ ಭಾರತದ ಮಣ್ಣಿನ ಗುಣ ಅಂತಹುದು.

“ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರಿಯಾಸಿ …” ಮಾತೆ ಹಾಗೂ ಮಾತೃಭೂಮಿಗಿಂತ ಮಿಗಿಲಾದ ಸ್ವರ್ಗ ಬೇರಿಲ್ಲಾ.
“ವಂದೆ ಮಾತರಂ”

. ಕಾನತ್ತಿಲ್ ರಾಣಿ ಅರುಣ್

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments