ಸ್ತ್ರೀಯು ಶೋಷಣೆಯಿಂದ ಮುಕ್ತಳಾಗಳು ಇನ್ನೆಷ್ಟು ಕಾಲ….?!

ಸ್ತ್ರೀಯು ಶೋಷಣೆಯಿಂದ ಮುಕ್ತಳಾಗಳು ಇನ್ನೆಷ್ಟು ಕಾಲ....?!

“ನಮ್ಮ ದೇಶವನ್ನು ಭಾರತ ಮಾತೆ” ಎಂದು ಸ್ತ್ರೀಯನ್ನು ದೇವತೆಯ ರೂಪದಲ್ಲಿ ಕಂಡು ಪೂಜಿಸುತ್ತೇವೆ. ಹಣವನ್ನೂ, ಚಿನ್ನ, ಬೆಳ್ಳಿಯನ್ನೂ ಏಕೆ? ನಾವು ದಿನ ನಿತ್ಯ ತಿನ್ನುವ ಅನ್ನವನ್ನು ‘ಅನ್ನ ಪೂರ್ಣೆ ಎಂದು ಧÀವಸ, ಧಾನ್ಯವನ್ನೂ, ಧಾನ್ಯಲಕ್ಷ್ಮಿ ಎಂದು, ಸ್ತ್ರೀ ರೂಪದಲ್ಲಿ ಕಂಡು ಪೂಜಿಸುತ್ತೇವೆ. ಆಕೆಯನ್ನು “ಕಾರ್ಯೇಸು ಮಂತ್ರಿ, ಕರುಣೇಸು ಮಾತಾ, ಶಯನೇಸು ದಾಸಿ, ಕ್ಷಮಯಾ ಧರಿತ್ರಿ” ಎಂದು ಪುಸ್ತಕಗಳಲ್ಲಿ ಹಾಡಿ ಹೊಗಳುತ್ತೇವೆ. ನಿಜ ಜೀವನದಲ್ಲಿ ಆಕೆ ತಾಯಿಯ ಗರ್ಭದಲ್ಲಿ ಇರುವಾಗಲಿಂದ ಹಿಡಿದು, ವಯೋವೃದ್ಧೆಯಾಗುವ ತನಕವು ಒಂದಲ್ಲಾ ಒಂದು ರೀತಿಯ ತುಳಿತಕ್ಕೆ ಒಳಗಾಗುತ್ತಳೇ ಇದ್ದಾಳೆ. ಗರ್ಭದಲ್ಲಿರುವುದು ಹೆಣ್ಣು ಎಂದು ಗೊತ್ತಾದ ತಕ್ಷಣ ಗರ್ಭಪಾತ ಮಾಡಿಸುವುದರಿಂದ ಹಿಡಿದು, ಹೇಳಿದ ಹುಡುಗನ ಮದುವೆಯಾಗಲಿಲ್ಲವೆಂದೂ, ಗಂಡನಿನೆ ಹೆಂಡ ಕುಡಿಯಲು ದುಡ್ಡುಕೊಡಲಿಲ್ಲವೆಂದೂ, ತನ್ನ ಮಕ್ಕಳಿಂದಲೇ ಕಿರುಕುಳಕ್ಕೆ ಒಳಗಾಗಿಯೂ, ಹೀಗೆ ಹಲವಾರು ರೀತಿಯಲ್ಲಿ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುವುದನ್ನು ಕಾಣುತ್ತೇವೆ. ಪುರುಷ ಪ್ರಧಾನವಾದ ಸಮಾಜದಲ್ಲಿ ಲಿಂಗ ತಾರತಮ್ಯವಿಲ್ಲದ ‘ಆತ್ಮ’ ಎಲ್ಲರಲ್ಲೂ ಒಂದೇ ಎಂದು ಪರಿಗಣಿಸುವ ಕಾಲವೊಂದಿತ್ತು. ಅದುವೇ ವೇದಕಾಲ ತದನಂತರದ ಕಾಲಗಳಲಿ ಮಹಿಳೆಯರ ಸ್ಥಾನಮಾನ ಕೆಳಗಿಳಿಯ ತೊಡಗಿದ್ದವು. ಇಂದು ಕೆಲವರಲ್ಲಿ ಹೆಣ್ಣು ಮಗು ಹುಟ್ಟುವುದೇ ತಪ್ಪು ಎಂಬ ಸ್ಥಿತಿಗೆ ಬಂದು ನಿಂತಿದೆ.

 ದಿನ ಬೆಳಗಾದರೆ ಸಾಕು ಪತಿಯಿಂದ, ಅತ್ತೆ-ಮಾವನಿಂದ, ಭಾವ-ಮೈದುನರಿಂದ, ನಾದಿನಿಯರಿಂದ, ಒಡ ಹುಟ್ಟಿದ ಸಹೋದರರಿಂದ, ಸ್ವಂತ ಗಂಡುಮಕ್ಕಳಿಂದಲೂ, ಚಿತ್ರ ಹಿಂಸೆಗೆ ಗುರಿಯಾಗಿ ಹತ್ಯೆಯಾಗಿಯೋ, ಆತ್ಮಹತ್ಯೆ ಮಾಡಿಕೊಂಡೊ ಸರ್ವನಾಶವಾಗುತ್ತಿರುವ ನಿದÀರ್ಶನಗಳು ನಿತ್ಯ ಈ ಸಮಾಜದಲ್ಲಿ ಕಂಡುಬರುತ್ತಿದೆ. ಒಂದೆಡೆ ನ್ಯಾಯ ಒದಗಿಸಬೇಕಾದ ವ್ಯಕ್ತಿಗಳೆ ಅನ್ಯಾಯ ಮಾಡುತ್ತಿರುವಾಗ ಆಕೆ ಇನ್ನೆಲ್ಲಿ ತಾನೆ ಹೋದಾಳು? 2013 ರಲ್ಲಿ ಬಾಂಬೆ ಕೋರ್ಟ್ ಒಂದರಲ್ಲಿ ಪತಿಯು ತನ್ನ ಪತ್ನಿಯಿಂದ ವಿಚ್ಚೇದನಕ್ಕೆ ಅರ್ಜಿ ಹಾಕಿದ. ಇದಕ್ಕೆ ಕಾರಣವಿಷ್ಟೆ..! ತನ್ನ ಪತ್ನಿ ತಾನು ಕರೆಯುವ ಕಡೆ ಬರಲಿಲ್ಲವೆಂದು, ಆತನ ಪತ್ನಿಗೆ ವಯೋವೃದ್ಧರಾದ ತಂದೆ-ತಾಯಿಯರಿದ್ದು, ಶಾಲೆಗೆ ಹೋಗುವ ಪುಟ್ಟ ಮಕ್ಕಳಿದ್ದರು. ಇದನ್ನು ಗಣನೆಗೆ ತೆಗೆದುಕೊಳ್ಳದ ಪತಿ ತಾನು ಕೆಲಸ ಮಾಡುವ ಕಡೆಗೆ ಬರಬೇಕೆಂದು ಹಠ ಹಿಡಿದ. ಇದರಿಂದ ಕಂಗಾಲಾದ ಪತ್ನಿ ತನ್ನ ಅಸಾಹಾಯಕತೆಯನ್ನು ನ್ಯಾಯಾಲಕ್ಕೆ ತಿಳಿಸಿದರೂ, ಅನೂಪ್‍ಮೆಹ್ತಾ ಪೀಠವು ಆ ಮಹಿಳೆಯನ್ನು ಉದ್ದೇಶಿಸಿ “ಮಹಿಳೆಯರಲ್ಲಾ ಸೀತೆಯಂತಿರಬೇಕು” ಎಂದಿತು. ತನ್ನ ಪತಿಯಾದವನು ರಾಮನಂತಿದ್ದರೆ, ಖಂಡಿತ ಆತನ ಹೆಂಡತಿ ಸೀತೆಯಂತೆ ಇರುತ್ತಾಳೆ. ಪತಿ ರಾಮನಂತೆ ಇರದೆ, ರಾವಣನಂತೆಯೊ, ರಾಕ್ಷಸನಂತೆಯೊ ಇದ್ದರೆ ಪತ್ನಿಯರು ಇನ್ನೇನು ತಾನೆ ಆದಾಳು.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಮತ್ತೊಂದು ಘಟನೆ: ಪತ್ನಿಗೆ ಒಂದರ ನಂತರ ಒಂದು ಹೆಣ್ಣು ಮಕ್ಕಳು ಹುಟ್ಟಿತ್ತು. ಇದರಿಂದ ಕುಪಿತನಾದ ಪತಿಯಾದವನು ಪತ್ನಿಯ ಮುಖವನ್ನು ಕಚ್ಚಿ ವಿಕಾರಗೋಳಿಸಿದ. ಪತ್ನಿಯ ಕಡೆಯವರು ಕೋರ್ಟ್ ಮೆಟ್ಟಿಲೇರಿದರು. ಕಾರಣ ಕೇಳಿದಾಗ ಪತಿಯಾದವನು ನನಗೆ ಕುಲಪುತ್ರ, ವಂಶೋದ್ಧಾರಕರಾದ ಗಂಡುಮಕ್ಕಳು ಬೇಕಿತ್ತು. ಈಕೆ ಹೆಣ್ಣುಮಕ್ಕಳನ್ನು ಹೆತ್ತಿದ್ದಾಳೆ ಅದಕ್ಕೆ ಹೀಗೆ ಮಾಡಿದೆ ಎಂದ. ತಪ್ಪು ತನ್ನದೆ ಇದ್ದರೂ ಆತ ಮಾತ್ರ ಮಹಿಳೆಯನ್ನೇ ದೂರುತಿದ್ದಾನೆ.

ಇನ್ನೊಂದು ಘಟನೆ: ಮಗಳು ಕಾಣೆಯಾಗಿದ್ದಾಳೆಂದು ಪೋಲೀಸ್ ಠಾಣೆಗೆ ದೂರು ದಾಖಲು ಮಾಡಲು ತೆರಳಿದ ದಂಪತಿಗಳಿಗೆ ಪೋಲೀಸಪ್ಪ ಏನು ಹೇಳಿದ ಗೊತ್ತೇ..? ನಿಮ್ಮ ಮಗಳು ಓಡಿಹೋಗಿರಬಹುದು. ಆಕೆ ಸಿಕ್ಕಿದೆಯಾದರೆ ‘ಹೊಡೆದು ಸಾಯಿಸಿಬಿಡಿ. ಅಥವಾ ನೀವು ಆತ್ಮಹತ್ಯೆ ಮಾಡಿಕೊಳ್ಳಿ’..! ನಾನಾದರೆ ಹೀಗೆಯೇ ಮಾಡುತ್ತಿದ್ದೆ, ಎಂದು. ಸಮಾಜದಲ್ಲಿ ಉನ್ನತ್ತ ಸ್ಥಾನದಲ್ಲಿರುವ ಅಧಿಕಾರಿಗಳೇ ಈ ರೀತಿಯಾಗಿ ಹೇಳಿದರೆ, ಬಡವರ ಪಾಡೇನು? ಅವರು ನ್ಯಾಯಕ್ಕಾಗಿ ಇನ್ನೆಲ್ಲಿ ತಾನೆ ಹೋದಾರು. ಒಟ್ಟಿನಲ್ಲಿ ಹುತ್ತಕ್ಕೆ ಹಾಲು ಉಯ್ಯವ ಜನ ನಿಜವಾದ ಹಾವನ್ನು ಕಂಡು ಕಲ್ಲೆಸೆದು ಸಾಯಿಸುವಂತೆ ಸಮಾರಂಭಗಳಲ್ಲಿ, ಮಾಧ್ಯಮದ ಮುಂದೆ ಮಹಿಳೆಯರ ಮೇಲೆ ನಡೆಯುವ ಶೋಷಣೆಯ ಬಗ್ಗೆ ಬೊಗಳೆ ಬಿಡುವ ಕೆಲವು ಜನರು, ನಿಜವಾದ ತಮ್ಮ ತಾಯಿ, ಹೆಂಡತಿ, ಸಹೋದರಿ, ಮಗಳನ್ನು ಪ್ರೀತಿಸಿ ಗೌರವಿಸುವುದನ್ನು ಮಾತ್ರ ಮರೆತೆಹೋಗುತ್ತಾರೆ.

ಕೊನೆಯದಾಗಿ ಸ್ವಾಮಿ ವಿವೇಕಾನಂದರ ಒಂದು ಮಾತನ್ನು ಇಲ್ಲಿ ನೆನಪಿಸಿ ಕೊಳ್ಳೋಣ; “ಸ್ತ್ರೀಯರ ಸ್ಥಿತಿ ಉತ್ತಮವಾಗುವ ತನಕ ಪ್ರಪಂಚ ಉತ್ತಮವಾಗಲಾರದು. ಹಕ್ಕಿ ಕೇವಲ ಒಂದೇ ರೆಕ್ಕೆಯ ಬಲದಿಂದ ಹಾರಲಾರದು.”

. ಕಾನತ್ತಿಲ್ ರಾಣಿ ಅರುಣ್

ಕಾನತ್ತಿಲ್‌ ರಾಣಿ ಅರುಣ್‌

0 0 votes
Article Rating
Subscribe
Notify of
guest
0 Comments
Inline Feedbacks
View all comments