ಹ್ಯಾಪಿ ನ್ಯೂ ಇಯರ್ 2019
ಅರೆ, ಒಂದು ವರ್ಷ ಮುಗಿದೇ ಹೋಯ್ತಲ್ಲ! ಸದ್ಯ ಮುಗಿಯಿತು ಅಂತ ನಿಟ್ಟಿಸಿರು ಬಿಡೋಣವೇ, ಇಲ್ಲ, ಈ ವರ್ಷದ ದುರಂತಗಳಿಗೆ ಮರುಗೋಣವೇ, ಅಥವಾ ಇನ್ನೊಂದು ವರ್ಷದ ಸ್ವಾಗತದ ಸುಖ ಪಡೋಣವೇ? ಗೊತ್ತಾಗುತ್ತಿಲ್ಲ.
ನಾವೇನೇ ಮಾಡಿದರೂ, ತಿಪ್ಪರಲಾಗ ಹಾಕಿದರೂ, ‘ಮಂಕೆಗಳೇ ನನ್ನ ನೋಡಿ ಕಲಿಯಿರಿ’ ಎಂಬಂತೆ ಕಾಲ ಸದ್ದಿಲ್ಲದೆ ಸಾಗುತ್ತಿದ್ದಾನೆ. ತನ್ನ ಕರ್ತವ್ಯಕ್ಕೆ ಚ್ಯುತಿಇಲ್ಲದಂತೆ ತೆರಳುತ್ತಿದ್ದಾನೆ. ವರ್ಷಗಳ, ಇತಿಹಾಸಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತಿದೆ.
ಹೀಗಿರುತ್ತಾ, ಹೊಸವರ್ಷದ ನಿರ್ಧಾರವೇನೆಂಬ ಪ್ರಶ್ನೆಗೆ ಪಟ್ಟಂತ ಉತ್ತರಿಸಲಾಗುತ್ತಿಲ್ಲ. ನಾನು ಸೇರಿದಂತೆ ನಮ್ಮೆಲ್ಲರ ಅನೇಕಾನೇಕ ನಿರ್ಧಾರಗಳು ತಿಪ್ಪೆ ಸೇರಿದ ಉದಾಹರಣೆಗಳು ಸಾಕಷ್ಟಿವೆ ಎಂಬುದನ್ನು ಯಾವ ಸಂಶೋಧನೆಯೂ ಇಲ್ಲದೆ ಹೇಳಿಬಿಡಬಹುದು.
ಸಿಗರೇಟು ಸೇದಲಾರೆ, ಮದ್ಯಪಾನ ಮಾಡಲಾರೆ, ಸಿಟ್ಟು ಬಿಡುತ್ತೇನೆ ಎಂದೆಲ್ಲಾ ನಾವು ಹೇಳಿದರೂ ಅವುಗಳು ನಮ್ಮನ್ನು ಬಿಡುತ್ತಿಲ್ಲ ಎಂಬುದು ಅನುಭವಿಗಳ ಮಾತು.
ಆದರೂ, ನಿರ್ಧಾರಗಳನ್ನು ಕೈಗೊಳ್ಳುವುದು ತಪ್ಪಲ್ಲ. ದೊಡ್ಡ ಮಟ್ಟಿನ ನಿರ್ಧಾರಗಳನ್ನು ಕೈಗೊಂಡು ಪೂರೈಸುವವರೂ ಇದ್ದಾರೆ. ಎಲ್ಲರಿಗೂ ಇದು ಕಷ್ಟಸಾಧ್ಯ. ನಮ್ಮ ನಿರ್ಧಾರಗಳು ಹೀಗಿದ್ದರೆ ಚೆಂದವಲ್ಲವೇ…..
ದೇಶೋದ್ಧಾರ, ಸಮಾಜೋದ್ಧಾರ, ವ್ಯವಸ್ಥೆಯ ಬದಲಾವಣೆ ಎಲ್ಲರ ತುಡಿತ. ಆದರೆ ಎಲ್ಲವೂ ನಾವಂದುಕೊಂಡಂತೆ ನಡೆಯುವುದಿಲ್ಲ ತಾನೆ. ಹಾಗಾಗಿ ಕೆಲವು ಮಾರ್ಪಾಡುಗಳು ನಮ್ಮಿಂದಲೂ ಆಗಬಹುದು. ಕೆಲವು ಕಾರ್ಯಗಳನ್ನು ನಾವೇ ಆರಂಭಿಸಬಹುದು. ಅದೇನೆಂಬುದನ್ನು ನಾವೇ ನಿರ್ಧರಿಸಬೇಕು.
ಹಳೆಯ ಅನುಭವಗಳನ್ನು ಪಟ್ಟಿ ಮಾಡೋಣ. ಎಲ್ಲಿ ಗೆದ್ದಿದ್ದೇವೆ, ಎಲ್ಲಿ ಬಿದ್ದಿದ್ದೇವೆ ಎಂಬುದರ ಕುರಿತು ಒಂದು ಅವಲೋಕನ ಮಾಡೋಣ. ಸೋತವುಗಳಿಗೆ ಕಾರಣ ನಮಗೆ ಗೊತ್ತಿರುತ್ತದೆ ಅದನ್ನು ಸರಿಪಡಿಸೋಣ. ಗೆಲುವಿನ ಅನುಭವವನ್ನು ಮುಂದಿನ ವರ್ಷಕ್ಕೂ ಒಯ್ಯೋಣ.
ಎಲ್ಲರೂ ಚೆನ್ನಾಗಿರೊಣ. ‘ನೀವೂ ಬದುಕಿ ಇತರರನ್ನು ಬದುಕಲಿ ಬಿಡಿ’ ಎಂಬುದು ಎಲ್ಲರ ತತ್ವವಾದರೆ ಸಮಾಜ ಎದುರಿಸುವ ಅರ್ಧದಷ್ಟು ಸಮಸ್ಯೆಗಳು ಮುಗಿದಂತೆ. ಸಾಧ್ಯವಾದರೆ ಸಣ್ಣಪುಟ್ಟ ಸಹಾಯಗಳನ್ನು ಇತರರಿಗೆ ಮಾಡೋಣ. ಇಲ್ಲವೇ, ಉಪಕಾರ ಮಾಡದಿದ್ದರೂ ಪರವಾಗಿಲ್ಲ; ಉಪದ್ರವನ್ನಂತೂ ಮಾಡದಿರೋಣ. ಏನಂತೀರಿ….?ಒಂದು ಕ್ಯಾಲೆಂಡರ್ ವರ್ಷ ಉರುಳಿ ಹೊಸ ಕ್ಯಾಲೆಂಡರ ಗೋಡೆ ಏರಿದೆ. ಇನ್ನೊಂದು ವರ್ಷ ಕಳೆದು ಹೋಯಿತಲ್ಲ ಎಂಬ ವ್ಯಥೆ ಕೆಲವರಿಗಾದರೆ ಹೊಸ ವರ್ಷದಲ್ಲಿ ಹೊಸ ಸಾಧನೆ ಮಾಡಿದರಾಯಿತು ಎಂಬ ಛಲ ಕೆಲವರಿಗೆ. ಇದೇ ಉದ್ದೇಶದಿಂದ ಅನೇಕರು ಹೊಸ ವರ್ಷಕ್ಕೆ ಹೊಸ ರೆಸಲೂಷನ್ ತೆಗೆದುಕೊಳ್ಳುವುದು ವಾಡಿಕೆ. ಹೊಸ ವರ್ಷಕ್ಕೆ ನಿಮ್ಮ ಹೊಚ್ಚಹೊಸ ರೆಸಲೂಷನ್ ಯಾವುದು? ನಮಗೆ ಗೊತ್ತಾಗಲಿಲ್ಲವೇ. ಕಾಲದೇಶ ವರ್ತಮಾನಗಳನ್ನು ಗಮನದಲ್ಲಿಟ್ಟು ಹೊಸ ವರ್ಷದ 25 ಸಂಕಲ್ಪಗಳನ್ನು ಜಾಗರೂಕತೆಯಿಂದ ಪಟ್ಟಿಮಾಡಲಾಗಿದೆ. ಇವು ನಿಮಗೂ ಇಷ್ಟವಾಗುವುದೆಂಬ ಸಂಕಲ್ಪ ನಮ್ಮದು. ಕಳೆದ ಎರಡು ದಿನಗಳಲ್ಲಿ ನಮ್ಮ ಕಣ್ಣು ಕಿವಿಗೆ ಬಿದ್ದ ಕೆಲವು ಪಾಪುಲರ್ ನ್ಯೂ ಇಯರ್ ರೆಸಲೂಷನ್ನುಗಳು ಹೀಗಿವೆ. ನೀವು ಓದಿ. ನೀವು ಕೇಳಿದ ಅಥವಾ ಕೈಗೊಂಡ ರೆಸಲೂಶನ್ನುಗಳನ್ನೂ ಇಲ್ಲಿ ಪಟ್ಟಿ ಮಾಡಬಹುದು. ಹ್ಯಾಪಿ ನ್ಯೂ ಇಯರ್!
1. ಕುಡಿಯುವುದನ್ನು ಬಿಡುತ್ತೇನೆ.
2. ಸಿಗರೇಟು ಸೇದುವುದನ್ನು ನಿಲ್ಲಿಸುತ್ತೇನೆ.
3. ಕಚೇರಿಗೆ ಟೈಮಿಗೆ ಸರಿಯಾಗಿ ಹೋಗುತ್ತೇನೆ.
4. ಹೆಲ್ಮೆಟ್ ಧರಿಸದೆ ಗಾಡಿ ಓಡಿಸುವುದಿಲ್ಲ.
5. ಯಾವ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳುವುದಿಲ್ಲ.
6. ಹಣ ಪೋಲು ಮಾಡುವುದಿಲ್ಲ.
7..ಪ್ಲಾಸ್ಟಿಕ್ ಕಾಗದವನ್ನು ಬಳಸುವುದನ್ನು ಕಡಿಮೆ ಮಾಡಿ
8. ಸ್ವಚ್ಛತೆಗೆ ಆದ್ಯತೆ ನೀಡಿ ಪರಿಸರಕ್ಕೆ ಕೊಡುಗೆ ನೀಡಿ
9.ಬಡವರೊಂದಿಗೆ ಹಬ್ಬ ಆಚರಿಸಲು ತೀರ್ಮಾನಿಸಿ
10.ನನ್ನನ್ನು ನಾನೆ ಕೊಚ್ಚಿ ಕೊಳ್ಳುವುದಿಲ್ಲ
11. ದೀನದಲಿತರಿಗೆ ನೆರವಾಗುತ್ತೇನೆ.
12.ದೇಶಕ್ಕಾಗಿ ಯಾವುದೇ ತ್ಯಾಗಕ್ಕೂ ಸಿದ್ಧ
13. ಒಂದು ಪೈಸಾ ಲಂಚ ಕೊಡಲ್ಲ.
14. ರಕ್ತ ಧಾನ ಮಾಡಿ ಪ್ರಾಣ ಉಳಿಸುವ ತೀರ್ಮಾನ .
15.ಕನಿಷ್ಠ ಪಕ್ಷ ವರ್ಷಕ್ಕೆ ನಾಲ್ಕೈದು ಗಿಡ ನೆಟ್ಟು ಬೆಳೆಸಿ .
16. ನಾಳೆ ಕೆಲಸ ಇಂದೇ ಮಾಡುತ್ತೇನೆ.
17. ತೂಕ ಕಡಿಮೆ ಮಾಡಿಕೊಳ್ಳುತ್ತೇನೆ. .
18. ದೂರದ ಊರಿಗೆ ಪ್ರವಾಸ ಕೈಗೊಳ್ಳುತ್ತೇನೆ.
19.ಹಿರಿಯರನ್ನು ಗೌರವಿಸುತ್ತೇನೆ
20. ೩ ತಿಂಗಳಿಗೊಮ್ಮೆ ಗೆಳೆಯಾರಜೊತೆಗೂಡಿ ವೀಕೆಂಡ್ ಶ್ರಮದಾನ ಮಾಡಿ .
21. ಮದುವೆ ಆಗೇ ಆಗುತ್ತೇನೆ.
23. ಹುಟ್ಟಿದ ಊರಿಗೆ ಮರಳುತ್ತೇನೆ. * .
24. ಬೇಗ ಮಲಗಿ ಬೇಗ ಏಳುತ್ತೇನೆ..
25..ಭವಿಷ್ಯದ ಬಗ್ಗೆ ಎಲ್ಲವೂ ಅನಿಶ್ಚಿತವಾಗಿದ್ದರೂ, ದೇವರು ಈಗಾಗಲೇ ನಮ್ಮ ಎಲ್ಲಾ ನಾಳೆಗಳನ್ನು ನಿರ್ಧರಿಸಿದ್ದಾನೆ, ಹೀಗಾಗಿ ಇಂದಿನ ಜೀವನವನ್ನು ಸುಖದಿಂದಲೇ ಅನುಭವಿಸೋಣ, ನಿಮ್ಮ ನಾಳೆಗಳು ಸುಂದರವಾಗಿರಲಿ 2018 ಹೊಸ ವರ್ಷದ ಶುಭಾಶಯಗಳು.