ನಂ. 2760 ನೇ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ, ಚೆಟ್ಟಳ್ಳಿ
ಸೋಮವಾರಪೇಟೆ ತಾಲ್ಲೂಕು, ಕೊಡಗು ಜಿಲ್ಲೆ.
(Reg No. DRZ/S/2760/76-77/18-09-1977)
ನಮ್ಮ ಬಗ್ಗೆ
1976ರಲ್ಲಿ 150 ಸದಸ್ಯರಿಂದ ಪ್ರಾರಂಭಗೊಂಡ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2018ರಲ್ಲಿ ಪ್ರಸ್ತುತ 1097 ಸದಸ್ಯರನ್ನು ಹೊಂದಿದ್ದು, ರೂ.103.53 ಲಕ್ಷಗಳ ಪಾಲು ಬಂಡವಾಳವನ್ನು ಸಂಗ್ರಹಿಸಲಾಗಿದೆ.
ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯವ್ಯಾಪ್ತಿಯು ಚೇರಳಶ್ರೀಮಂಗಲ, ಈರಳೆವಳಮುಡಿ ಮತ್ತು ಕೂಡ್ಲೂರು ಚೆಟ್ಟಳ್ಳಿ ಗ್ರಾಮಗಳ ವ್ಯಾಪ್ತಿಗೆ ಒಳಪಟ್ಟಿರುತ್ತದೆ.
ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಕೃಷಿಕರಿಗೂ ಹಾಗೂ ಗ್ರಾಮಸ್ಥರಿಗೆ ಅನುಕೂಲವಾಗಲೆಂದು 1ಕೋಟಿ 70ಲಕ್ಷ ವೆಚ್ಚದಲ್ಲಿ ಶ್ರೀ ನರೇಂದ್ರಮೋದಿ ರೈತ ಸಹಕಾರ ಭವನವನ್ನು ಸಂಘದ ಆಡಳಿತ ಮಂಡಳಿ, ಸದಸ್ಯರು ಹಾಗೂ ದಾನಿಗಳ ನೆರವಿನಿಂದ ನಿರ್ಮಿಸಿದೆ. 2018ರವರಗೆ ಈ ಸಹಕಾರ ಭವನದಿಂದ 2ಲಕ್ಷ 15ಸಾವಿರ ರೂಪಾಯಿಗಳು ಬಾಡಿಗೆ ರೂಪದಲ್ಲಿ ಆದಾಯ ಲಭಿಸಿದೆ. ಈ ಸಭಾಭವನದಲ್ಲಿ ಮದುವೆ ಇನ್ನಿತರ ಸಮಾರಂಭಗಳಿಗೆ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. 2017-18ನೇ ಸಾಲಿನಲ್ಲಿ ಸಂಘವು ರೂ. 23,63,125.00 ಲಕ್ಷ ನಿವ್ವಳ ಲಾಭ ಗಳಿಸಿದೆ.
ನಿಧಿಗಳು
2017-18ನೇ ಸಾಲಿನಲ್ಲಿ ಸಂಘದ ಕ್ಷೇಮನಿಧಿ ರೂ. 42.53 ಲಕ್ಷ್ಷಗಳಿದ್ದು, ರೂ. 116.46 ಲಕ್ಷ ಇತರೆ ನಿಧಿಗಳಿರುತ್ತದೆ.
ಠೇವಣಾತಿ
2017-18ನೇ ಸಾಲಿನಲ್ಲಿ ಸಂಘದ ಸಂಚಯ ಹಾಗೂ ನಿರಖು ಠೇವಣಿ ದಿನಾಂಕ 31.03.2018ಕ್ಕೆ ಒಟ್ಟು ರೂ. 1045.19 ಲ್ಷಗಳಿರುತ್ತದೆ.
ಸದಸ್ಯರು ಮತ್ತು ಸದಸ್ಯರೇತರ ಸಾಲಗಳು
ಸದಸ್ಯರಿಗೆ 2017-18ನೇ ಸಾಲಿಗೆ ಭತ್ತ, ಕಾಫಿ, ಕರಿಮೆಣಸು, ಬೆಳೆಯನ್ನು ಪರಿಗಣಿಸಿ ರೂ. 10.00 ಲಕ್ಷದವರಗೆ ಸೇರಿ ಒಟ್ಟು ರೂ. 866.07 ಲಕ್ಷಗಳ ಕೆ.ಸಿ.ಸಿ. ಫಸಲು ಸಾಲ ವಿತರಿಸಿದೆ. ಸದಸ್ಯರು ಸದಸ್ಯೇತರರಿಗೆ ಚಿನ್ನಾಭರಣ ಸಾಲ, ಅಸಾಮಿ ಸಾಲ, ವ್ಯಾಪಾರಾಭಿವೃದ್ಧಿ ಸಾಲ, ವಾಹನ ಸಾಲ, ವಿದ್ಯಾಭ್ಯಾಸ ಸಾಲ, ಜಾಮೀನು ಸಾಲ, ಕಾಫಿ-ಕರಿಮೆಣಸು ಅಡವುಸಾಲ, ನಿರಖು ಠೇವಣಿ ಸಾಲ, ಪಿಗ್ಮಿಠೇವಣಿ ಆಧಾರದ ಸಾಲ ಮತ್ತು ಸ್ವಸಹಾಯ ಗುಂಪುಗಳಿಗೆ ಅಲ್ಪಾವಧಿ ಸಾಲವಾಗಿಒಟ್ಟು ರೂ. 591.63 ಲಕ್ಷಗಳಸಾಲ ವಿತರಿಸಲಾಗಿದೆ.
ಅಸಾಮಿ ಸಾಲ ಮತ್ತು ವ್ಯಾಪಾರಾಭಿವೃದ್ಧಿ ಸಾಲಗಳನ್ನು ಹೊರತುಪಡಿಸಿ ಎಲ್ಲಾ ಸಾಲಗಳು ಶೇ 100 ಕ್ಕೆ 100 ರಷ್ಟು ವಸೂಲಿಯಾಗಿರುತ್ತದೆ.
ಕೇಂದ್ರ ಬ್ಯಾಂಕು ಸಾಲ
ಕೇಂದ್ರ ಬ್ಯಾಂಕಿನಿಂದ 2017-18ನೇ ಸಾಲಿಗೆ ರೂ. 798.42 ಲಕ್ಷಗಳ ಕೆ.ಸಿ.ಸಿ. ಫಸಲುಸಾಲವನ್ನು ಪಡೆಯಲಾಗಿದೆ. ಪ್ರತಿ ವರ್ಷ ಪಡೆದ ಸಾಲವನ್ನು ಅವಧಿಗೆ ಸರಿಯಾಗಿ ಶೇ.100 ಕ್ಕೆ 100 ರಷ್ಟು ಮರುಪಾವತಿಸಿ ಪ್ರಶಸ್ತಿ ಹಾಗೂ ಬಹುಮಾನವನ್ನು ಪಡೆದಿದೆ.
ಲಾಭಾಭಿವೃದ್ಧಿ
- 2017-18ನೇ ಸಾಲಿನಲ್ಲಿ ಸಂಘವು ರೂ. 23,63,125.00 ಲಕ್ಷ ನಿವ್ವಳ ಲಾಭ ಗಳಿಸಿದೆ. ಚೆಟ್ಟಳ್ಳಿ ಶಾಖೆಯ ಮೂಲಕ ರಸಗೊಬ್ಬರ, ಸಿಮೆಂಟ್, ಕೃಷಿ ಉಪಕರಣ, ಹತ್ಯಾರು, ಪೈಪುಗಳು, ಆಸ್ಫರ್‍ಶೀಟ್‍ಗಳು, ಕೋವಿತೋಟ, ನಿಯಂತ್ರಿತ ಮತ್ತು ಅನಿಯಂತ್ರಿತ ವಸ್ತುಗಳ ಮಾರಟ ಮಾಡಲಾಗುತ್ತಿದೆ. ಈರಳೆವಳಮುಡಿ ಶಾಖೆಯಲ್ಲಿ ರಸಗೊಬ್ಬರ, ನಿಯಂತ್ರಿತ ಮತ್ತು ಅನಿಯಂತ್ರಿತ ವಸ್ತುಗಳ ಮಾರಟ ಮಾಡಲಾಗುತ್ತಿದೆ. 2017-18ನೇ ಸಾಲಿಗೆ ಒಟ್ಟು ರೂ. 552.33 ಲಕ್ಷಗಳ ವಹಿವಾಟಿನಲ್ಲಿ ರೂ.25.97 ಲಕ್ಷಗಳ ವ್ಯಾಪಾರಲಾಭಗಳಿಸಿದೆ.
- ಸಂಘದ ವ್ಯವಹಾರಕ್ಕಾಗಿ ಸದಸ್ಯರುಗಳ ಹಾಗೂ ಗ್ರಾಹಕರ ಅನುಕೂಲಕ್ಕಾಗಿ ಜೆರಾಕ್ಸ್ ಮಿಷನ್‍ನ್ನು ಅಳವಡಿಸಲಾಗಿದೆ. 15ಕೆ.ವಿ. ಸಾಮಥ್ರ್ಯದ ಜನರೇಟರನ್ನು ಅಳವಡಿಸಿದ್ದು, ಸಿಂಡಿಕೇಟ್ ಬ್ಯಾಂಕಿಗೆ ಮಾಸಿಕ ರೂ. 7,900.00ಗಳಿಗೆ ಬಾಡಿಗೆಗೆ ನಿಡಲಾಗಿದೆ.
- ಸಭೆ-ಸಮಾರಂಭಗಳಿಗೆ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಶೃ ನರೇಂದ್ರ ಮೋದಿ ರೈತ ಸಮುದಾಯ ಭವನ ಹಾಗೂ ವ್ಯಾಪಾರ ಮಳಿಗೆಗಳಿಂದ ರೂ. 2,15,604.00 ಬಾಡಿಗೆ ಬಂದಿರುತ್ತದೆ.
ಸಂಘದ ಇತರೆ ಸೇವೆಗಳು
* ಸಂಘವು ಭದ್ರತಾ ಕೊಠಡಿ ಹೊಂದಿದ್ದು, ಸದಸ್ಯರುಗಳಿಗೆ ಲಾಕರ್ ಸೌಲಭ್ಯವನ್ನು ಒದಗಿಸಿದೆ.
* ರಸಗೊಬ್ಬರಗಳಾದ ಡಿ.ಎ.ಪಿ.(ಮಂಗಳ), ಇಫ್ಕೋ 10:26:26, ಎಂ.ಒ.ಪಿ, ಯೂರಿಯಾ(ಮಂಗಳ), ಫ್ಯಾಕ್ಟ್ 20:20:13(ಆನೆ ಮಾರ್ಕ್), ವಿಜಯ 17:17:17(ಮದ್ರಾಸ್ ಫರ್ಟಿಲೈಸರ್ಸ್), ನೀಮ್ ಕೇಕ್, ಐ.ಪಿ.ಎಲ್ 16:16:16, ರಾಕ್ ಫಾಸ್ಫೇಟ್, ಎಸ್.ಎಸ್.ಪಿ, ಕೋರಮಂಡಲ್, ಜುವಾರಿ 19:19:19, ಐ.ಪಿ.ಎಲ್ 15:15:15, ಆರ್ಗಾನಿಕ್ ಇತ್ಯಾದಿ ರಸಗೊಬ್ಬರಗಳು ರೀಟೈಲ್ ಮತ್ತು ಹೋಲ್ಸೇಲ್ ದರದಲ್ಲಿ ದೊರೆಯುತ್ತದೆ. ಸಿಮೆಂಟ್‍ಗಳಾದ ಅಲ್ಟ್ರಾಟೆಕ್-ಕೊರಮಂಡಲ್, ಕೃಷಿ ಉಪಕರಣ, ಹತ್ಯಾರು, ಪೈಪುಗಳು, ಆಸ್ಫರ್‍ಶೀಟ್‍ಗಳು, ಮೈಕಾನ್ ಬೇಲಿತಂತಿ, ಕೊಂಕನ್ ಗ್ಯಾಸ್ ದೊರೆಯುತ್ತದೆ.
* 22 ಕೋವಿತೋಟ ಮತ್ತು 12ನೇ ಬೋರಿನ ಕೋವಿತೋಟ ದೊರೆಯುತ್ತದೆ.
ಒಟ್ಟು ವಹಿವಾಟು (ಲಕ್ಷಗಳಲ್ಲಿ)
2015-16 ರಲ್ಲಿ ರೂ. 9305.22, 2016-17ರಲ್ಲಿ ರೂ. 9420.20, 2017-18ರಲ್ಲಿ ರೂ. 10651.55
ವ್ಯಾಪಾರ ಲಾಭ (ಲಕ್ಷಗಳಲ್ಲಿ)
2015-16 ರಲ್ಲಿ ರೂ. 13.34, 2016-17ರಲ್ಲಿ ರೂ. 15.31, 2017-18ರಲ್ಲಿ ರೂ. 25.97
ನಿವ್ವಳ ಲಾಭ (ಲಕ್ಷಗಳಲ್ಲಿ)
2015-16 ರಲ್ಲಿ ರೂ. 16.21, 2016-17ರಲ್ಲಿ ರೂ. 23.49, 2017-18ರಲ್ಲಿ ರೂ. 23.63
ಸದಸ್ಯರಿಗೆ ಡಿವೆಡೆಂಡ್ ಹಂಚಿಕೆ
2015-16 ರಲ್ಲಿ ಸೇ.8, 2016-17ರಲ್ಲಿ ಶೇ.12, 2017-18ರಲ್ಲಿ ಶೇ.12
“ಸದಾ ನಿಮ್ಮ ಸೇವೆಯೇ ನಮ್ಮ ಗುರಿ”
ಶ್ರೀ ಬಲ್ಲಾರಂಡ ಮಣಿ ಉತ್ತಪ್ಪ ಅಧ್ಯಕ್ಷರು,
ಉಪಾಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿ ವರ್ಗ
ಹಾಲಿ ಸಿಬ್ಬಂದಿ ವರ್ಗ
1. ಶ್ರೀ ಹೆಚ್.ಬಿ. ರಮೇಶ್ – ಆಂತರಿಕ ಲೆಕ್ಕ ಪರಿಶೋಧಕರು ಹಾಗೂ ಸಲಹೆಗಾರರು
2. ಶ್ರೀಮತಿ ಕೆ.ಈ. ಪೂರ್ಣಿಮ – ಮುಖ್ಯ ಕಾರ್ಯ ನಿರ್ವಹನಾಧಿಕಾರಿ
3. ಶ್ರೀಮತಿ ಕೆ.ಎಸ್. ನಂದಿನಿ – ಲೆಕ್ಕಿಗರು
4. ಶ್ರೀಮತಿ ಹೆಚ್.ಸಿ. ಹರಿಣಿ – ಮಾರಾಟ ಗುಮಾಸ್ತೆ
5. ಶ್ರೀಮತಿ ಎನ್.ಯು. ಕುಸುಮ – ಗುಮಾಸ್ತೆ
6. ಶ್ರೀ ಬಿ.ಎ. ನಾಣಯ್ಯ – ಗುಮಾಸ್ತ
7. ಕು. ಕೆ.ಎಚ್. ಕಿಶೋರ್ ಹೊನ್ನಪ್ಪ – ಗುಮಾಸ್ತ
8. ಶ್ರೀ ಹೆಚ್.ಪಿ. ಮುತ್ತಪ್ಪ – ಅಟೆಂಡರ್
9. ಶ್ರೀ ಪಿ.ಎಸ್. ಮುತ್ತಪ್ಪ – ಪಿಗ್ಮಿ ಏಜೆಂಟ್
10. ಕು. ಎನ್.ವಿ. ಅಜೀತ್ – ತಾತ್ಕಾಲಿಕ ಅಟೆಂಡರ್
ನಮ್ಮ ಸಂಪರ್ಕ
ನಂ. 2760 ನೇ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ, ಚೆಟ್ಟಳ್ಳಿ
ಸೋಮವಾರಪೇಟೆ ತಾಲ್ಲೂಕು, ಕೊಡಗು ಜಿಲ್ಲೆ.
ದೂರವಾಣಿ ಸಂಖ್ಯೆ: ಕಛೇರಿ: 08276-266673
ಅಧ್ಯಕ್ಷರು: 8277131512
ಶ್ರೀ ನರೇಂದ್ರ ಮೋದಿ ರೈತ ಸಹಕಾರ ಭವನ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ, ಚೆಟ್ಟಳ್ಳಿ