ಮತ್ತೋಮ್ಮೆ ಕೇಳಿ ಬರುತ್ತಿದೆ “ಚಿಂವ್ ಚಿಂವ್ ಗುಬ್ಬಚ್ಚಿ” ಸದ್ದು

Reading Time: 6 minutes

ಮತ್ತೋಮ್ಮೆ ಕೇಳಿ ಬರುತ್ತಿದೆ “ಚಿಂವ್ ಚಿಂವ್ ಗುಬ್ಬಚ್ಚಿ” ಸದ್ದು

 ಸಂಘ ಜೀವಿಯಾಗಿ ಬಾಳುತ್ತಿದ್ದ ಮನುಷ್ಯ, ಈಗಿನ ಕಾಲಘಟ್ಟದಲ್ಲಿ ಒಬ್ಬಂಟಿಯಾದ ಚಿಕ್ಕ ಕುಟುಂಬವೆ ಇಷ್ಟವೆಂದು ಬಾಳುತ್ತಿರುವುದು ನಮ್ಮ-ನಿಮ್ಮ ಸುತ್ತ-ಮುತ್ತ ಕಾಣಸಿಗುತ್ತದೆ. ಅದೊಂದು ಕಾಲವಿತ್ತು ತಂದೆ-ತಾಯಿ, ಅಜ್ಜ-ಅಜ್ಜಿ, ದೊಡ್ಡಪ್ಪ-ಚಿಕ್ಕಪ್ಪ, ಅತ್ತೆ-ಮಾವ ಅಂತ ಮನೆ ತುಂಬಾ ಸದಸ್ಯರಿರುವ ಕೂಡು ಕುಟುಂಬ. ವ್ಯಕ್ತಿಗಳು ತಮ್ಮಲ್ಲಿ ಸ್ವಾರ್ಥವನ್ನು ಬೆಳೆಸಿಕೊಂಡ ಮೇಲೆ, ಅದೆಲ್ಲಾ ಮಾಯವಾಗಿ ತಾನಾಯಿತು ತನ್ನ ಹೆಂಡತಿ/ಗಂಡ ಮಕ್ಕಳಾಯಿತು ಎಂದು ಬಾಳುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ಉಳಿದವರು ಏನಾದರೂ ಚಿಂತೆಯಿಲ್ಲ ಎನ್ನುವಷ್ಟರ ಮಟ್ಟಿಗೆ ಸ್ವಾರ್ಥರಾಗಿಬಿಟ್ಟಿದ್ದಾರೆ ಈಗಿನ ಕಾಲಘಟ್ಟದ ಮನುಷ್ಯರು.
ಕಾಡು ಕಡಿದು ಊರು ಬೆಳೆದಂತೆ ಜನರ ಜೀವನವು ಯಾಂತ್ರೀಕೃತಗೊಂಡು, ಇಂದು ಗಣಕಯಂತ್ರ, ಮೊಬೈಲ್‍ಗಳಿಲ್ಲದೆ ಬದುಕು ನಡೆಸಲು ಕಷ್ಟಸಾಧ್ಯ ಎನ್ನುವದಷ್ಟರ ಮಟ್ಟಿಗೆ ಬಂದು ನಿಂತಿದೆ. ನಾವು ಚಿಕ್ಕವರಿದ್ದಾಗ ಹಳ್ಳಿಗಳಲ್ಲಿ ಮುಂಜಾವಿನ ವೇಳೆಯಲ್ಲಿ ನಮ್ಮನ್ನು ಎಬ್ಬಿಸುವವರೆ ಪಕ್ಷಿಗಳು. ದಟ್ಟವಾದ ಕಾಡು ಮರಗಳ ನಡುವೆ ವಿವಿಧ ರೀತಿಯ ಪಕ್ಷಿಗಳ ಕೂಗು ಚಿಲಿಪಿಲಿ ಕಲರವಗಳಿಂದ ಮನಸ್ಸು ಪುಳಕಿತಗೊಳ್ಳುವುದರ ಜೊತೆಗೆ ಅವುಗಳ ಹಾರಾಟ, ಚೀರಾಟಗಳು ಕಣ್ಣಿಗೆ ಹಬ್ಬವನ್ನುಂಡುಮಾಡುತಿತ್ತು. ಒಮ್ಮೆ ಅಂಗಳದಲ್ಲಿ ಅಮ್ಮ ಅಕ್ಕಿ ಆರಿಸುತ್ತ ಕುಳಿತಿದ್ದಳು. ಆಗ ಕೇಳಿಬಂದಿದ್ದು ‘ಕಿಚಿ ಕಿಚಿ’ ‘ಚಿಂವ್ ಚಿಂವ್’. ನೋಡಿದರೆ ಜೋಡಿ ಜೋಡಿ ಗುಬ್ಬಚ್ಚಿಗಳು. ಅಮ್ಮನಿಂದ ದೂರಬಿದ್ದಿದ್ದ ಅಕ್ಕಿಕಾಳುಗಳನ್ನು ಕಚ್ಚಿಕೊಂಡ ಗುಬ್ಬಚ್ಚಿಗಳು ಪುರ್ರÀನೆ ಹಾರಿ ಸೂರು ಹಾಗೂ ಅಕ್ಕ-ಪಕ್ಕದಲ್ಲಿದ್ದ ಗಿಡ-ಮರಗಳ ಮೇಲೆ ಹೋಗಿ ಕೂರುತ್ತಿದ್ದವು ಅವುಗಳ ಆ ಸಡಗರ ನಮಗೆ ಮನಸ್ಸಿಗೆ ಮುದವನ್ನುಂಟು ಮಾಡುತ್ತಿದ್ದವು.

ಜನರ ಜೀವನ ಆಧುನಿಕತೆಗೆ ತೆರೆದುಕೊಂಡಂತೆ, ಮೊಬೈಲ್‍ಗಳ ಬಳಕೆ ಹೆಚ್ಚಾದಂತೆ, ಇಲ್ಲಿ ಸ್ವಚ್ಛಂದವಾಗಿ ಬದುಕುತ್ತಿದ್ದ ಅನೇಕ ಪ್ರಾಣಿ-ಪಕ್ಷಿಗಳು ತನ್ನ ಅಸ್ತಿತ್ವಗಳನ್ನೆ ಕಳೆದುಕೊಂಡಿದೆ. ವಿದ್ಯುತ್ ಬಳಕೆಯಿಂದಾಗಿ ಸಾವಿರಾರು ಬಾವಲಿಗಳು ಸಾವಿಗೀಡಾಗುತ್ತಿದೆ. ದಿನ ಬೆಳಗಾದರೆ ಹಲವಾರು ಪಕ್ಷಿಗಳ ಕಳೆಬರಹÀ ತಂತಿಗಳ ಮೇಲೆ ತೂಗುತ್ತಿದ್ದರೆ, ಮೊಬೈಲ್ ಮತ್ತು ದೂರವಾಣಿಗಳ ಬಳಕೆಯಿಂದ ಮನೆಗಳಲ್ಲಿ ವಾಸಿಸುತ್ತಿದ್ದ ಗುಬ್ಬಿಗಳು ಕಣ್ಮರೆಯಾಗತೊಡಗಿದವು. ಇದನ್ನು ಮನಗಂಡ ಕೆಲವು ಪಕ್ಷಿ, ಪ್ರಾಣಿ ಪ್ರೇಮಿಗಳು ಅವುಗಳ ಪುನರ್‍ಜೀವನಕ್ಕಾಗಿ ಕೆಲವೊಂದು ಹಣ್ಣಿನ ಗಿಡ-ಮರಗಳನ್ನು ಬೆಳೆಸಿ ಪಕ್ಷಿಗಳಿಗೆ ಆಹಾರ ಆಶ್ರಯ ನೀಡುವುದು ಅಲ್ಲಲ್ಲಿ ಕಾಣಸಿಗುತ್ತದೆ.
ನಮ್ಮ ಮನೆಯು ಚಿಕ್ಕ ಪಟ್ಟಣವೊಂದರಲ್ಲಿರುವುದರಿಂದ ಮನೆಯ ಪಕ್ಕದಲ್ಲಿ ಸೀಬೆ, ಮಾವಿನಂತಹ ಹಣ್ಣಿನ ಮರಗಳನ್ನು ಬೆಳೆಸಿದ್ದೇವೆ. ಈ ಮರಗಳಲ್ಲಿ ಹಣ್ಣು ಹಂಪಲುಗಳನ್ನು ಪಕ್ಷಿಗಳು ಬಂದು ತಿಂದು ಹೋಗುವುದು ಅವುಗಳಿಗೆ ನಿತ್ಯದ ಕಾಯಕವಾಗಿದೆ. ಸೀಬೆ ಹಣ್ಣುಗಳು ಹೇರಳವಾಗಿ ಬೆಳೆಯುವ ಸಮಯದಲ್ಲಿ ಪೂರ್ತಿ ಹಣ್ಣುಗಳನ್ನು ಕೀಳಲು ಮಕ್ಕಳೆನಾದರೂ ಪ್ರಾರಂಭಿಸಿದರೆ ನನ್ನ ಮನೆಯವರು “ಸ್ವಲ್ಪ ಹಣ್ಣುಗಳನ್ನು ಪಕ್ಷಿಗಳು ತಿನ್ನಲಿ ಬಿಡಿ ನಿಮಗೆ ತಿನ್ನಲು ಬೇರೆನಾದರೂ ಸಿಗುತ್ತದೆ ಪಾಪ ಅವಕ್ಕೇನು ಸಿಗುತ್ತದೆ?” ಎಂದು ಆ ಮಕ್ಕಳಲ್ಲಿ ತಮ್ಮ ಮನೋಭಿಲಾಷೆಯನ್ನು ವ್ಯಕ್ತಪಡಿಸುತ್ತಾರೆ. ಕುಟುಂಬಕ್ಕೆ ಅನ್ವರ್ಥವಾಗಿ ಸದಾ ಮನುಷ್ಯನೊಂದಿಗೆ ಆಪ್ತವಾಗಿಯೇ ಬದುಕಿರುತ್ತಿದ್ದ ಈ ಪುಟ್ಟ ಪಕ್ಷಿ ಸಂಕುಲವೇ ಬಹುತೇಕ ಮರೆಯಾಗಿ ಹೋಗಿತ್ತು. ಆದರೆ ಇತ್ತೀಚೆಗೆ ಮತ್ತೋಮ್ಮೆ ಕೇಳಿ ಬರುತ್ತಿದೆ. “ಚಿಂವ್ ಚಿಂವ್ ಗುಬ್ಬಚ್ಚಿ” ಸದ್ದು.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಇತ್ತೀಚೆಗೆ ಹೊರಬಂದ ರಜನಿಕಾಂತ್ ಹಾಗೂ ಅಕ್ಷಯ್‍ಕುಮಾರ್ ಅಭಿನಯದ ಚಲನಚಿತ್ರ 2.0 ನೋಡಿ ಬಂದ ಮೇಲೆ ಮಗಳು ಮನೆಯಲಿ ಕೆಲವು ಡಬ್ಬ, ಕತ್ತರಿ, ಚಾಕು, ಹಗ್ಗಗಳನ್ನು ಹಿಡಿದು ಕುಳಿತ್ತಿದ್ದಳು, ಏನೋ ಕಾಲೇಜಿನಿಂದ ಕೈಕೆಲಸ ಹೇಳಿರಬಹುದೆಂದು ಸುಮ್ಮನಾದೆ ಸ್ವಲ್ಪ ಸಮಯದ ನಂತರ ಆ ಕೈ ಕೆಲಸದ ಡಬ್ಬಗಳು ಸೀಬೆ ಮರದಲ್ಲಿ ನೇತಾಡುತಿತ್ತು. ಒಂದರಲ್ಲಿ ಸ್ವಲ್ಪ ಅಕ್ಕಿ ಮತ್ತೊಂದರಲ್ಲಿ ನೀರು ತುಂಬಿಸಿ ಇಟ್ಟಿದ್ದಳು. 2.0 ಚಲನ ಚಿತ್ರ ನೋಡಿ ಅದರಲ್ಲಿ ಅಕ್ಷಯ್‍ಕುಮಾರ್ ಪಕ್ಷಿಗಳ ಉಳಿವಿಗಾಗಿ ಏನೆಲ್ಲಾ ತೊಂದರೆಗಳನ್ನು ಅನುಭವಿಸಿದ್ದಾರೆ ಎನ್ನುತ್ತಾ ಈಕೆ ಪಕ್ಷಿಗಳಿಗೆ ಆಹಾರ ಮತ್ತು ನೀರು ಸರಬರಾಜು ಮಾಡುವ ಕಾರ್ಯ ಮಾಡುತ್ತಿದ್ದಾಳೆ. ಸೀಬೆ ಮರದಲ್ಲಿ ಹಣ್ಣುಗಳು ಬಿಟ್ಟಿದ್ದು, ತನಗೆ ಬೇಕಾದಷ್ಟು ಕುಯ್ಯುದು ಉಳಿದ ಹಣ್ಣುಗಳನ್ನು ಪಕ್ಷಿಗಳಿಗಾಗಿ ಹಾಗೇ ಬಿಡುತ್ತಾಳೆ.
ಗುಬ್ಬಿ ಗೂಡು ಕಟ್ಟಿದರೆ ಅಂಥ ಮನೆ ನೆಮ್ಮದಿಯ ತಾಣವೆಂತಲೂ, ಅಭಿವೃದ್ಧಿಯ ಸಂಕೇತವೆಂತಲೂ ಇಂದಿಗೂ ನಂಬಲಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಇಡೀ ಮನೆಯ ವಾತಾವರಣವನ್ನೇ ಸಂಭ್ರಮಕ್ಕೆ ತಿರುಗಿಸುವ ಅಂಥ ಕಲರವ ಮತ್ತೋಮ್ಮೆ ಕೇಳಿ ಬರುತ್ತಿದೆ. ಗುಬ್ಬಿಯ ಬದುಕಿಗೆ, ಅದರ ಗೂಡಿಗೆ ಧಕ್ಕೆ ತಂದರೆ ಮುಂದಿನ ಜನ್ಮದಲ್ಲಿ ಕನಿಷ್ಠ ಸೂರೂ ಸಿಗದ ಸಂಕಷ್ಟಕ್ಕೆ ಒಳಗಾಗುತ್ತೇವೆಂಬ ನಂಬಿಕೆ ಗ್ರಾಮೀಣರಲ್ಲಿದೆ. ಹೀಗಾಗಿ ಗುಬ್ಬಿಗಾಗಿ ಪ್ರತಿ ಮನೆಯಲ್ಲೂ, ಜಂತಿಯ ಸಂದಿನಲ್ಲೋ, ಸೂರಿನ ಕೆಳಗೋ, ಗೋಡೆಯ ಮೇಲ್ಭಾಗದಲ್ಲೋ ಜಾಗವನ್ನು ಕಲ್ಪಿಸುವ ಪದ್ಧತಿ ಇತ್ತು. ಮರೆಯಾದ ಆ ಪದ್ದತಿ ಮತ್ತೋಮ್ಮೆ ಮರುಕಳಿಸಲಿ. ಮನೆ ಮಕ್ಕಳು, ಸಂಸಾರವನ್ನು ಆಚ್ಚೆಯಿಂದ ಕಾಪಿಡುವವನನ್ನು ‘ಮನೆಗುಬ್ಬಿ’ ಎಂದೇ ಕರೆಯುವುದು ರೂಢಿ. ನಮ್ಮೋಂದಿಗೆ ಗುಬ್ಬಚ್ಚಿಗಳಿಗೂ ಒಂದು ಗೂಡು ಇರಲಿ.

2.0 ಚಲನಚಿತ್ರ ನೋಡಿ ಈಕೆಯಲ್ಲಾದ ಬದಲಾವಣೆಗಳಿಂದ ನಮಗೂ ಸಂತೋಷವಾಗಿದೆ ಇಂದು 20ರಿಂದ 30ರಷ್ಟು ಗುಬ್ಬಿಗಳು ಇಲ್ಲಿ ಸ್ವಚ್ಛಂದವಾಗಿ ಹಾರಾಡುತ್ತಾತಿರುತ್ತದೆ. ನಮ್ಮ ಮುಂದಿನ ಪೀಳಿಗೆಗಾಗಿ ಪರಿಸರದೊಂದಿಗೆ ಪ್ರಾಣಿ-ಪಕ್ಷಿಗಳನ್ನು ಉಳಿಸಿ ಬೆಳೆಸುವ ಪರಿಪಾಠವನ್ನು ನಾವು ರೂಡಿಸಿಕೊಂಡು ನಮ್ಮ ಮಕ್ಕಳಿಗೂ ಅವುಗಳ ಮಹತ್ವದ ಬಗ್ಗೆ ತಿಳಿಸಿಕೊಡುವುದು ಇಂದಿನ ಅನಿವಾರ್ಯವಾಗಿದೆ. ಅದರಂತೆ ಮಾನವ ಜನಾಂಗದ ನೆಮ್ಮದಿಯ ನಾಳೆಗೆ ನಮ್ಮದೊಂದು ಕೊಡುಗೆಯಿರಲಿ. ತಂತ್ರಜ್ಞಾನದ ಅಬ್ಬರಕ್ಕೆ ಬಹುಕಾಲ ನಮ್ಮಿಂದ ಮರೆÀಯಾದ ಗುಬ್ಬಚ್ಚಿÀ್ಚಗಳು ಮಾನವನೊಂದಿಗೆ ಸದಾಕಾಲ ಜೊತೆಗಿರಲು ಹೊಸ ಶಕ್ತಿ ಹುರುಪಿನೊಂದಿಗೆ ಮತ್ತೋಮ್ಮೆ ಕೇಳಿ ಬರುತ್ತಿರುವ. “ಚಿಂವ್ ಚಿಂವ್ ಗುಬ್ಬಚ್ಚಿ” ಸದ್ದು. ಮರಯಾಗದಂತೆ ಶ್ರಮಿಸೋಣ.

. ಕಾನತ್ತಿಲ್ ರಾಣಿ ಅರುಣ್

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments