ಕೊಡಗಿನ ಗಡಿಯಾಚೇಗಿನ ಪ್ರಕೃತಿ ರಮಣೀಯ ಯಾತ್ರಾ ಸ್ಥಳ ಕೊಟ್ಟಿಯೂರ್ ಶಿವಕ್ಷೇತ್ರ

Reading Time: 6 minutes

ಕೊಡಗಿನ ಗಡಿಯಾಚೇಗಿನ ಪ್ರಕೃತಿ ರಮಣೀಯ ಯಾತ್ರಾ ಸ್ಥಳ
"ಕೊಟ್ಟಿಯೂರ್ ಶಿವಕ್ಷೇತ್ರ"

  ಕೊಡಗು-ಕೇರಳ ಗಡಿಗಂಟ್ಟಿಕೊಂಡ ಬೆಟ್ಟಗಳ ಸಾಲಿನ ರುದ್ರ-ರಮಣೀಯ, ಮನಮೋಹಕ, ಮನಸ್ಸಿಗೆ ಮುದ ನೀಡುವಂತಹ ಪ್ರಕೃತಿಯ ನಡುವೆ ಇರುವ ಪೌರಾಣಿಕ ಹಿನ್ನಲೆಯುಳ್ಳ ಇತಿಹಾಸ ಪ್ರಸಿದ್ಧವಾದ ಪುಣ್ಯ ಸ್ಥಳವೆ ವಡಕೇಶ್ವರ ಎಂಬ ದಕ್ಷಿಣ ಕಾಶಿ ಕೊಟ್ಟಿಯೂರ್ ಶಿವಕ್ಷೇತ್ರ.

ಈ ದೇವಸ್ಥಾನವು ಕೊಡಗಿನ ಗಡಿಯಾಚೆಯ ಕೇರಳ ರಾಜ್ಯದ ಕಣ್ಣಣ್ಣೂರು ಜಿಲ್ಲೆಯ ಇರಿಟಿಯಿಂದ ಕೇವಲ 30 ಕಿ.ಮಿ ಅಂತರದಲ್ಲಿದೆ. ಈ ದೇವಸ್ಥಾನದ ವೈಶಿಷ್ಟ್ಯವನ್ನು ಕೇಳಿದರೆ, ಎಂತಹವರಿಗೂ ಜೀವನ ದಲ್ಲಿ ಒಮ್ಮೆಯಾದರೂ ನೋಡಬೇಕೆನಿ ಸುವ ಪುರಾಣ ಪ್ರಸಿದ್ಧ ರಮಣೀಯ ತಾಣ.
ಕೇರಳಿಯರ ಹಾಡು ಭಾಷೆಯಲ್ಲಿ ಹೇಳುವುದಾದರೆ, ವಡಕೇಶ್ವರಂ(ಇಕ್ಕರೆ ಕೊಟ್ಟಿಯೂರ್) ಮತ್ತು ಕೆಝಕೇಶ್ವರಂ (ಅಕ್ಕರೆ ಕೊಟ್ಟಿಯೂರ್) ಕೇರಳದ ದೇವಸಂ ಬೋರ್ಡ್‍ನ ಅಧೀನದ ಲ್ಲಿರುವÀ ಈ ದೇವಸ್ಥಾನವು ಇತಿಹಾಸ ಪ್ರಸಿದ್ಧ ಹಿನ್ನಲೆಯುಳ್ಳದಾಗಿದ್ದು ಬ್ರಹ್ಮನ ಮಾನಸ ಪುತ್ರನಾದ ದಕ್ಷ ಶಿವನ ವಿರುದ್ಧ ಹಗೆ ತೀರಿಸಿಕೊಳ್ಳಲು ಯಾಗ ಮಾಡಿದಂತಹ ಸ್ಥಳ. ದಕ್ಷನ ಕೊನೆಯ ಪುತ್ರಿ ಸತಿದೇವಿ (ಶಿವನಪತ್ನಿ) ತನ್ನ ತಂದೆಯ ಯಾಗ ಕುಂಡದಲ್ಲಿಯೇ ಬಿದ್ದು ಆತ್ಮಹತ್ಯೆ ಮಾಡಿದಂತಹ ಸ್ಥಳವೂ ಹೌದು. ಪವಿತ್ರ ಬಾವಲಿ ನದಿಯು ಎರಡು ಕ್ಷೇತ್ರಗಳ ಮಧ್ಯ ಭಾಗದಲ್ಲಿ ಹರಿಯುತ್ತಿರುವುದರಿಂದ ಇದನ್ನು ಅಕ್ಕರೆ ಕೊಟ್ಟಿಯೂರ್ ಮತ್ತು ಇಕ್ಕರೆ ಕೊಟ್ಟಿಯೂರ್ ಎಂಬುದಾಗಿ ಕರೆಯುತ್ತಾರೆ.
ದಕ್ಷನನ್ನು ‘ಪ್ರಜಾಪತಿ’ ಸ್ಥಾನಕ್ಕೇರಿಸಿದ ದೇವತೆಗಳು (ಪ್ರಜಾಪತಿ ಎಂದರೆ ಸೃಷ್ಠಿ ಕಾರ್ಯದಲ್ಲಿ ಬ್ರಹ್ಮನಿಗೆ ಸಹಾಯ ಮಾಡುವವನು ಎಂದರ್ಥ) ದೇವ ಲೋಕದಲ್ಲಿ ಯಾಗ ಮಾಡುತ್ತಾರೆ. ಅಲ್ಲಿಗೆ ಆಗಮಿಸಿದ ಶಿವನನ್ನು ನೋಡಿ ದಕ್ಷನಿಗೆ ಪಿತ್ತ ನೆತ್ತಿಗೇರುತ್ತದೆ. ಇದಕ್ಕೆ ಕಾರಣ ಇಲ್ಲದಿಲ್ಲ, ದಕ್ಷನಿಗೆ ಸತಿಯನ್ನು ಬಿಟ್ಟು ಇನ್ನೂ ಐವತ್ತೆರೆಡು ಜನ ಹೆಣ್ಣುಮಕ್ಕಳಿರುತ್ತಾರೆ, ಅದರಲ್ಲಿ 27 ಜನ ಮಕ್ಕಳನ್ನು (ಅಶ್ವಿನಿ, ಭರಣಿ, ಕೃತಿಕ, ರೋಹಿಣಿ….ನಕ್ಷತ್ರಗಳ ಮುಂತಾದ ಹೆಸರುಗಳು) ಮಕ್ಕಳನ್ನು ಚಂದ್ರನಿಗೆ ಕೊಟ್ಟು ಮದುವೆ ಮಾಡಿರುತ್ತಾನೆ. ಸ್ವಲ್ಪ ಸಮಯದ ನಂತರ ಚಂದ್ರನಿಗೆ ಏನೋ ವೈಮನಸ್ಸು ಬಂದು ಎಲ್ಲಾ 27 ಹೆಂಡತಿಯರಿಂದಲೂ ದೂರ ವಿರುತ್ತಾನೆ, ಇದರಿಂದ ಕುಪಿತನಾದ ದಕ್ಷನು ಚಂದ್ರನ ಮೇಲೆ ಯುದ್ಧಕ್ಕೆ ಹೋಗುತ್ತಾನೆ ಆಗ ಚಂದ್ರನು ಶಿವನನ್ನು ಕಾಪಾಡುವಂತೆ ಮೊರೆ ಹೋಗುತ್ತಾನೆ ಶಿವನು ಯುದ್ಧದಲ್ಲಿ ದಕ್ಷನನ್ನು ಸೋಲಿಸುತ್ತಾನೆ. ಇದು ಒಂದೆಡೆಯಾದರೆ, ತನ್ನ ಕೊನೆಯ ಮಗಳು ಸತಿ ಹುಟ್ಟಿನಿಂದಲೂ ಶಿವನ ಆರಾಧಕಿಯಾಗಿರುತ್ತಾಳೆ ತಾನು ಶಿವನನ್ನೇ ಮದುವೆಯಾಗುವುದಾಗಿ ಹೇಳುತ್ತಾ ತಂದೆ ಏರ್ಪಡಿಸಿದ ಸ್ವಯಂವರದಲ್ಲಿ ರಾಜಕುಮಾರರನ್ನು ವರಿಸುವ ಬದಲು ದಕ್ಷನ ಇಚ್ಛೆಗೆ ವಿರುದ್ಧವಾಗಿ ಶಿವನನ್ನು ಮದುವೆಯಾಗಿದ್ದು ಇನ್ನೂ ದ್ವೇಷಕ್ಕೆ ಕಾರಣವಾಗಿರುತ್ತದೆ. ದೇವಲೋಕದ ಯಜ್ಞದಲ್ಲಿ ಸೇಡು ತೀರಿಸಿಕೊಳ್ಳಲು ಮುಂದಾದ ದಕ್ಷನನ್ನು ತಡೆದ ಭೃಗು ಮಹಾಋಷಿಯು ಯಾಗದಲ್ಲಿನ ಸೇಡನ್ನು ನೀನು ಭೂಲೋಕದಲ್ಲಿ ಯಾಗ ಮಾಡಿ ತೀರಿಸು ಎಂದು ಹೇಳಿರುವುದರಿಂದ ದಕ್ಷ ಭೂಲೋಕ ದ ಈ ಕೊಟ್ಟಿಯೂರ್ ಎಂಬಲ್ಲಿ ಯಾಗ ಮಾಡಿರುವುದು ಎಂಬುದಾಗಿ ಪುರಾಣಗಳು ತಿಳಿಸುತ್ತವೆ. ಹಾಗೆ ಯಾಗ ಮಾಡಿದ ದಕ್ಷ, ತನ್ನ ಮಗಳು, ಅಳಿಯನಾದ ಶಿವನನ್ನು ಹೊರತು ಪಡಿಸಿ ಎಲ್ಲಾ ದೇವತೆಗಳನ್ನು, ಋಷಿ-ಮುನಿಯರನ್ನು, ರಾಜರನ್ನು ಕರೆದು ಯಾಗ ಆರಂಭಿಸುತ್ತಾನೆ, ಇದರಿಂದ ಬೇಸರಗೊಂಡ ಸತಿಯು ತಂದೆ ಮಾಡುವ ಯಾಗಕ್ಕೆ ನಾನು ಹೊಗಲೇಬೇಕು, ದಯವಿಟ್ಟು ಕಳುಹಿಸಿಕೊಡಿ ಎಂಬುದಾಗಿ ಶಿವನನ್ನು ಅಂಗಲಾಚುತ್ತಾಳೆ, ಸತಿಯ ತವಕಕ್ಕೆ ಮರುಗಿ ಶಿವನು ನಿನ್ನ ತಂದೆ “ದಕ್ಷನ ಯಾಗಕ್ಕೆ ಹೋಗುವುದಾದರೆ ಹೋಗು ಯಾವ ಕಾರಣಕ್ಕೂ ಅವಮಾನಿತಳಾಗಿ ಕೈಲಾಸಕ್ಕೆ ಮರಳಬಾರದೆಂದು ತಾಕೀತು ಮಾಡಿ ಸತಿಯನ್ನು ಕಳುಹಿಸಿ ಕೊಡುತ್ತಾನೆ.
ಹಾಗೆ ಯಾಗ ನಡೆಯುವಲ್ಲಿಗೆ ಬಂದ ಸತಿಯನ್ನು ನೋಡಿ ದಕ್ಷನು ಅಲ್ಲಿ ನೆರೆದಿದ್ದವರ ಮುಂದೆ ಇನ್ನಿಲ್ಲದ ಅವಮಾನ ಮಾಡುತ್ತಾನೆ. ಶರೀರ ತುಂಬಾ ಬೂದಿ ಬಳಿದುಕೊಂಡ್ಡಿರುವ ನಿನ್ನ ಗಂಡನಿಗೆ ತೊಟ್ಟುಕೊಳ್ಳಲು ಬಟ್ಟೆಯೂ ಇಲ್ಲದೆ ಸ್ಮಶಾನವಾಸಿ ಯಾದ ಅವನನ್ನು ಮದುವೆಯಾದ ನಿನ್ನನ್ನು ಯಾಗಕ್ಕೆ ಕರೆದವರಾರು ಎಂಬುದಾಗಿ ಹಿಯಾಳಿಸುತ್ತಾನೆ. ಇದರಿಂದ ಬೇಸರಗೊಂಡ ಸತಿಗೆ ಶಿವ ಅವಮಾನಿತಳಾಗಿ ಕೈಲಾಸಕ್ಕೆ ಬರಕೂಡದೆಂದು ತಾಕೀತು ಮಾಡಿ ದ್ದು ನೆನಪಾಗಿ ಅದೆ ಯಾಗ ಕುಂಡಕ್ಕೆÉ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ತ್ರಿಕಾಲ ಜ್ಞಾನಿಯಾದ ಶಿವನಿಗೆ ತಕ್ಷಣವೆ ಈ ವಿಷಯ ತಿಳಿದು ತನ್ನ ಮೂರನೆಯ ಕಣ್ಣನ್ನು ತೆರೆಯುತ್ತಾನೆ ಆಗ ಅದರಿಂದ ಹುಟ್ಟಿದ ವೀರಭದ್ರನು ತನ್ನ ಹತ್ತು ಕೈಗಳಲ್ಲಿ ಆಯುಧಗಳನ್ನು ಹಿಡಿದುಕೊಂಡು ಬಂದು ಯಾಗದಲ್ಲಿ ನೆರೆದಿದದ್ದವರನ್ನು ಕೊಲ್ಲಲಾರಂಭಿ ಸುತ್ತಾನೆ, ಹಾಗೆ ದಕ್ಷನ ತಲೆಯನ್ನೂ ಕತ್ತರಿಸಿ ಹಾಕುತ್ತಾನೆ. ಪರಿಸ್ಥಿತಿ ಕೈ ಮಿರುವುದನ್ನು ಅರಿತ ತ್ರಿಮಾರ್ತಿಗಳಲ್ಲಿ ಇಬ್ಬರಾದ ಬ್ರಹ್ಮ ಮತ್ತು ವಿಷ್ಣು ಯಾಗ ಸ್ಥಳಕ್ಕೆ ಆಗಮಿಸಿ ಶಿವನ್ನು ವೀರಭದ್ರÀ ನನ್ನು ಸಮಾಧಾನ ಪಡಿಸಿ, ಯಾಗ ವನ್ನು ನಿರ್ವಿಘ್ನವಾಗಿ ಮುಂದುವರಿಸಲು ಮತ್ತು ದಕ್ಷನಿಗೆ ಮರುಜನ್ಮ ನೀಡಿ ಆಡಿನ ಮುಖ ನೀಡುತ್ತಾರೆ. ಅಂದಿನಿಂದ ದಕ್ಷ ಶಿವನ ಆರಾಧಕ ನಾಗುತ್ತಾನೆ. ಸತಿ ಆತ್ಮಹತ್ಯೆ ಮಾಡಿಕೊಂಡಿರುವ ಈ ಯಾಗ ಸ್ಥಳವೆ ಇಕ್ಕರೆ ಕೊಟ್ಟಿಯೂರ್. ಇಲ್ಲಿ ಶಿವನ ಸ್ವಯಂಬೂ ಲಿಂಗವಿದ್ದು, (ಸ್ವಯಂ ಉದ್ಭವಿಸಿದ್ದ ಲಿಂಗ) ವರ್ಷದಲ್ಲಿ 28 ದಿನ ಮೇ ತಿಂಗಳ ಕೊನೆ ದಿನದಿಂದ ಜೂನ್ ತಿಂಗಳ 26ರ ವರೆಗೆ ಈ ಸ್ಥಳದಲ್ಲಿ ಪೂಜೆ ಪುರಸ್ಕಾರಗಳು ನೆರವೇರುತ್ತದೆ. ವರ್ಷದ ಉಳಿದ ದಿನಗಳಲ್ಲಿ ಬಾವಲಿ ನದಿಯು ಈ ಪ್ರದೇಶದಲ್ಲಿ ಉಕ್ಕಿ ಹರಿಯುವುದ ರಿಂದ ಆ ಜಾಗವೆಲ್ಲಾ ನೀರಿನಿಂದ ಆವರಿಸುವ ಕಾರಣ ಅಲ್ಲಿ ಯಾರಿ ಗೂ ಪ್ರವೇಶಿಸಲು ಆಗುವುದಿಲ್ಲ್ಲ. ಇದನ್ನು ಮನಗಂಡ ಭಗವಾನ್ ಪರಶುರಾಮರು ಇಂತಹ ಪವಿತ್ರ ಸ್ಥಳದಲ್ಲಿ ನಿತ್ಯ ಪೂಜೆ ನಡೆಯುತ್ತಿರ ಬೇಕೆಂದು ಮನಗಂಡು ಇಕ್ಕರೆ ಕೊಟ್ಟಿಯೂರ್ ಹೊಳೆಯಿಂದ ಈ ಬದಿಗೆ ಶಿವಲಿಂಗವನ್ನು ಪ್ರತಿಷ್ಠಾಪಿಸಿ ವರ್ಷದ ಇತರ ದಿನಗಳಲ್ಲಿ ಪೂಜೆ ನೆರವೇರುವಂತೆ ಮಾಡಿರುತ್ತಾರೆ. ಅದು ಇಂದಿಗೂ ನಡೆದುಕೊಂಡು ಬರುತ್ತಿದೆ.

✍. ಕಾನತ್ತಿಲ್ ರಾಣಿ ಅರುಣ್

0 0 votes
Article Rating
Subscribe
Notify of
guest
0 Comments
Oldest
Newest Most Voted
Inline Feedbacks
View all comments