“ನಾನು ಹೋದರೆ ಹೋದೇನು” ಎಂಬ ಭಾರತೀಯ ತತ್ವಶಾಸ್ತ್ರದ ಪರಿಕಲ್ಪನೆಯನ್ನು ಜಗತ್ತಿಗೆ ಸಾರಿದ ಮಹಾನ್‌ ಚೇತನ

“ನಾನು ಹೋದರೆ ಹೋದೇನು” ಎಂಬ ಭಾರತೀಯ ತತ್ವಶಾಸ್ತ್ರದ ಪರಿಕಲ್ಪನೆಯನ್ನು ಜಗತ್ತಿಗೆ ಸಾರಿದ ಮಹಾನ್‌ ಚೇತನ

ಕನಕದಾಸ ಎಂಬ ಮಹಾನ್‌ ಚೇತನ ತನ್ನ ಭಕ್ತಿಯ ಶಕ್ತಿಯಿಂದ ಪೂರ್ವ ದಿಕ್ಕಿನಲ್ಲಿದ್ದ ಉಡುಪಿಯ ಶ್ರೀ ಕೃಷ್ಣನ ವಿಗ್ರಹವನ್ನು ಪಶ್ಚಿಮಕ್ಕೆ ತಿರುಗಿಸಿ, ದರ್ಶನ ಪಡೆದ ಕಥೆ ನಮ್ಮಗೆಲ್ಲಾ ಗೋತ್ತೇ ಇದೆ.
ಯುದ್ಧದಲ್ಲಿ ಸೋತು ಘಾಸಿಗೊಂಡ ತಿಮ್ಮಪ್ಪ ನಾಯಕನ ದೇಹ ಮತ್ತು ಮನಸ್ಸಿನಲ್ಲಾದ ಬದಲಾವಣೆ. ತಿಮ್ಮಪ್ಪ ನಾಯಕನಿಗೆ ಆದ ಆ ಅನುಭವ…! ಕುಗ್ಗಿದ ಮನಸ್ಸಿಗೆ ಸ್ಥೈರ್ಯ, ಸಮಾಧಾನ ಮತ್ತು ಸತ್ಯದ ಜ್ಞಾನವನ್ನು ಪಡೆಯಲು ತಿಮ್ಮಪ್ಪ ನಾಯಕ ತನ್ನ ಗುರುಗಳಾದ ವ್ಯಾಸತೀರ್ಥರ ಮೊರೆ ಹೋದರು. ಸತ್ಯ ಮತ್ತು ಶಾಶ್ವತ ಜ್ಞಾನದ ಹಂಬಲದಲ್ಲಿದ್ದ ತಿಮ್ಮಪ್ಪ ನಾಯಕನಿಗೆ ಸತ್ಯದ ದರ್ಶನವನ್ನು ನೀಡಲು ವ್ಯಾಸತೀರ್ಥರು ಯಾವುದೇ ತಡೆ ಮಾಡಲಿಲ್ಲ. ಮಾಧ್ವಾ ವಿಧ್ವಾಂಸ ಮತ್ತು ವೇದಾಂತದ ದ್ವೈತ ಕ್ರಮಕ್ಕೆ ಸೇರಿದ ಕವಿಗಳಾದ ವ್ಯಾಸತೀರ್ಥರು ತಮ್ಮ ಜ್ಞಾನದ ಮೂಲಕ ತಿಮ್ಮಪ್ಪ ನಾಯಕನನ್ನು ಕನಕದಾಸನನ್ನಾಗಿಸಿದರು,
ಕನಕದಾಸನೆಂಬ ನಾಮದಿಂದ ಜ್ಞಾನದ ದಾಸನಾಗಿ, ಮನುಷ್ಯನ ಜೀವನ, ಮಾನವ ಸಮಾಜದಲ್ಲಿ ನಡೆಯುವ ಘಟನೆಗಳು (ಜಾತಿ ವ್ಯವಸ್ಥೆ, ಅಂಧಾಚಾರ, ಮೂಢನಂಬಿಕೆ, ಅಜ್ಞಾನ) ಅದರ ಪ್ರತಿಕ್ರಿಯೆಗಳು, ವ್ಯಕ್ತಿಯ ಒಳಗಿರುವ ಕಾಮ, ಕ್ರೋದ, ಮೋಹ, ಮದ, ಮತ್ಸರಗಳ ಬಗ್ಗೆ ಸೂಕ್ಷ್ಮವಾಗಿ ವಿಶ್ಲೇಷಿಸತೊಡಗಿದರು.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಒಮ್ಮೆ ಗುರುಗಳಾದ ವ್ಯಾಸತೀರ್ಥರು ತಮ್ಮ ಶಿಷ್ಯರಿಗೆ ಒಂದು ಪ್ರಶ್ನೆಯನ್ನಿತ್ತರು, “ಯಾರೆಲ್ಲಾ ನಿಮ್ಮಲ್ಲಿ ಮೋಕ್ಷಕ್ಕೆ (ಆನಂದಮಯ ಜೀವನ ನಡೆಸಲು) ಹೋಗುವರು” ತಿಳಿಸಿ ಎಂದು, ಆಗ ಕನಕದಾಸ ಹೇಳಿದ ಮಾತೇ “ನಾನು ಹೋದರೆ ಹೋದೇನು” ಎಂದು, ಕನಕದಾಸ ತನ್ನ ಈ ವಾಕ್ಯದಲ್ಲಿ ಭಾರತೀಯ ತತ್ವಶಾಸ್ತ್ರದ ಪರಿಕಲ್ಪನೆಯಾದ “ಅಹಂ” (ನಾನೋಬ್ಬನೇ ಎನ್ನುವ ಭಾವ) ಅನ್ನು ಬಿಡುವವನು ಮೋಕ್ಷಕ್ಕೆ (ಆನಂದಮಯ ಜೀವನ ನಡೆಸಲು) ಹೋಗುವರು ಎಂಬುದನ್ನು ತಿಳಿಸಿದರು. ಅಲ್ಲಿಗೆ ಕನಕದಾಸ ತನ್ನ ಮನಸ್ಸಿನ ಅಂಧಕಾರವನ್ನು ಜ್ಞಾನದಿಂದ ಬೆಳಗಿಸಿದ್ಧಾನೆ ಎಂದು ಗುರುಗಳಿಗೆ ಮನವರಿಕೆಯಾಯಿತು.
ಗುರುಗಳಾದ ವ್ಯಾಸತೀರ್ಥರ ಆಹ್ವಾನದ ಮೇರೆಗೆ ತನ್ನ ಇಷ್ಟ ದೇವನಾದ ಶ್ರೀ ಕೃಷ್ಣನನ್ನು ನೋಡಲು ಉಡುಪಿಗೆ ಆಗಮಿಸಿದರು. ಒಬ್ಬ ವ್ಯಕ್ತಿ ತನ್ನ ಜ್ಞಾನದಲ್ಲಿ ಎಷ್ಟೇ ಶ್ರೇಷ್ಠತಮನಾಗಿದ್ದರೂ, ಸಮಾಜದಲ್ಲಿ ನಡೆಯುವ ಅಸಮಾನತೆಯನ್ನು ಎದುರಿಸಲೇ ಬೇಕಾಗುತ್ತದೆ. ಅದೇ ರೀತಿ ಕನಕದಾಸರನ್ನು ಕೂಡ ಜಾತಿಯ ಆಧಾರದ ಮೇಲೆ ದೇವಾಲಯಕ್ಕೆ ಪ್ರವೇಶಿಸಲು ಬಿಡಲಿಲ್ಲ. ಆದರೆ ಆ ಘಟನೆ ಕನಕದಾಸರನ್ನು ಕುಗ್ಗಿಸಲಿಲ್ಲ. ಕಾರಣ ದೇವಾಲಯದ ಒಳಗಿರುವ ಸಾಕಾರ ರೂಪನಾದ ಶ್ರೀ ಕೃಷ್ಣ, ನಿರಾಕಾರನಾಗಿ ತನ್ನೋಳಗೆ ಇರುವನು. ಛಾಂದೋಗ್ಯ ಉಪನಿಷತ್‌ ನಲ್ಲಿ ರು ಒಂದು ಪದ “ತತ್ವಮಸಿ” (ಅದೇನಾನು) ಎನ್ನುವ ಅನುಭವ ಅವರಿಗಾಗಲೇ ಆಗಿತ್ತು.

ಕರ್ಮಯೋಗದ ಮೂಲಕ ಜೀವನ ನಡೆಸುವ ವ್ಯಕ್ತಿ ತನ್ನನ್ನೇ ಅಂದರೆ ಭಗವಂತನನ್ನೇ ಸೇರುತ್ತಾನೆ. ಎನ್ನುವ ಶ್ರೀ ಕೃಷ್ಣನ ಉಪದೇಶವನ್ನು ಮನಸ್ಸಿನಲ್ಲಿ ಸ್ಮರಿಸುತ್ತಾ ತಮ್ಮ ಜ್ಞಾನವನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುವುದರ ಮೂಲಕ ಕರ್ಮಯೋಗದ ಜೀವನವನ್ನು ನಡೆಸಲು ಪ್ರಾರಂಭಿಸುತ್ತಾರೆ. ದೇವಾಲಯದ ಹೊರಗಡೆಯೇ ತಿಂಗಳುಗಳ ಕಾಲ ವಾಸಿಸುತ್ತ, ಹಲವಾರು ತತ್ವಭರಿತವಾದ ಕೀರ್ತನೆಗಳನ್ನು ರಚಿಸಿದರು. ಆ ಕೀರ್ತನೆಗಳನ್ನು ಸ್ವತಃ ಅವರೆ ಹಾಡತೊಡಗಿದರು. ಸುಮಾರು 500 ವರ್ಷಗಳ ಹಿಂದೆ ಕನಕದಾಸರು ರಚಿಸಿದ ಕೀರ್ತನೆಗಳು ಇಂದಿಗೂ ಪ್ರಸಕ್ತವಾಗಿದೆ. ಎಂದರೆ ಅದು ಕನಕದಾಸರ ಜ್ಞಾನದ ಮಹತ್ವ ಎನ್ನಬಹುದು ಅದರೊಂದಿಗೆ ಅಂದಿನ ಸಮಾಜದ ಭಾವನೆಗಳು ಇಂದಿಗೂ ಬದಲಾಗಲಿಲ್ಲ ಎಂದೂ ಕೂಡ ಭಾವಿಸಬಹುದು.
ಕನಕದಾಸರು ಕನ್ನಡದ ಸಾಹಿತ್ಯಲೋಕಕ್ಕೆ ಅಪಾರವಾದ ಮೌಲ್ಯಯುಕ್ತ ಕೊಡುಗೆಯನ್ನು ನೀಡಿದ್ಧಾರೆ. ಕರ್ನಾಟಕದ ಹಿರಿಮೆಯನ್ನು ಭಾರತ ಹಾಗೂ ವಿಶ್ವದೆದುರಿಗೆ ತಿಳಿಸಲು ಇವರನ್ನು ಕೂಡ ಒಂದು ಮಾಧ್ಯಮವಾಗಿ ಬಳಸಬಹುದು. ಅದರೊಂದಿಗೆ ಅವರ ಚಿಂತನೆಗಳು ಉತ್ತಮವಾದ ಸಾಮಾಜಿಕ ಮತ್ತು ವಯುಕ್ತಿಕ ಜೀವನವನ್ನು ನಡೆಸಲು ನಮಗೆ ಆದರ್ಶದಾಯಕವಾದದು ಕೂಡ. ಆದರೆ ಇಂದು ಇಂತಹ ದಾರ್ಶನಿಕರನ್ನು ಕೇವಲ ರಾಜಕೀಯ ಹಿತಾಸಕ್ತಿಗಾಗಿ ಬಳಸುತ್ತಿರುವುದು, ಅವರ ಆದರ್ಶಗಳನ್ನು ನಾವು ಎಷ್ಟರ ಮಟ್ಟಿಗೆ ತಿಳಿದಿದ್ಧೀವಿ ಎಂಬುದರ ಮೇಲೆ ನಿಂತಿದೆ. ನಮ್ಮ ರಾಜ್ಯದ ಶಿಕ್ಷಣ ಕ್ಷೇತ್ರದಲ್ಲಿರುವ ಶಿಕ್ಷಕರಿಗೂ ಕೂಡ ಕನಕದಾಸರಂತಹ ವ್ಯಕ್ತಿಗಳ ಬಗ್ಗೆ ತಿಳುವಳಿಗೆ ಕಡಿಮೆ ಇರುವ ಹಾಗೆ ಕಾಣುತ್ತಿದೆ.

ಕನಕದಾಸರೊಡಗೂಡಿ ಮಹಾನ್‌ ಚೇತನಗಳು ಈ ಸಮಾಜಕ್ಕೆ ನೀಡಿದ ಜೀವನ್ಮುಖಿ ಸಾಹಿತ್ಯಗಳನ್ನು ಹೆಚ್ಚು ಪ್ರಚಾರ ಪಡಿಸಲು ಯಾವುದೇ ಸರ್ಕಾರ ಅಥವಾ ಸಂಘ-ಸಂಸ್ಥೆಗಳ ಮೇಲೆ ಅವಲಂಬನೆಯಾಗದೆ. ವಯುಕ್ತಿಕವಾಗಿ ನಾವೇ ಈ ಕಾರ್ಯವನ್ನು ಮಾಡಲು ತೊಡಗೋಣ. “ನಾನು ಹೋದರೆ ಹೋದೇನು” ಎಂಬ ಭಾರತೀಯ ತತ್ವಶಾಸ್ತ್ರದ ಪರಿಕಲ್ಪನೆಯನ್ನು ಹೊಂದಿರುವ ವಿಚಾರಯುಕ್ತ ವಾಕ್ಯವನ್ನು ಜನ ಸಾಮಾನ್ಯರೂ ತಿಳಿಯಲು ಮುನ್ನುಡಿ ಬರೆಯೋಣ.

✍. ವಿವೇಕ್‌ ನರೇನ್

admin

0 0 votes
Article Rating
Subscribe
Notify of
guest
0 Comments
Inline Feedbacks
View all comments