ಡ್ಯೂರಾಕ್ ಹಂದಿ ಸಾಕಾಣಿಕೆ
ಕರ್ನಾಟಕದ ಕೊಡಗು ಜಿಲ್ಲೆ ಬಹು ಹಿಂದಿನ ದಿನಗಳಿಂದಲೂ ಹಂದಿ ಸಾಕಾಣಿಕೆಗೆ ಹೆಸರುವಾಸಿ. ಹಂದಿ ಸಾಕಣೆ ಇಲ್ಲಿನ ಜನರ
ಒಂದು ಲಾಭದಾಯಕ ಉಪಕಸುಬಾಗಿದೆ. ಅಲ್ಲದೆ ಹಂದಿ ಮಾಂಸಕ್ಕೆ ಇತರೆ ಎಲ್ಲಾ ಜಿಲ್ಲೆಗಳಿÀಗೂ ಹೋಲಿಕೆ ಮಾಡಿದಲ್ಲಿ, ಇಲ್ಲಿ ಹೆಚ್ಚು
ಬೇಡಿಕೆಯಿದೆ. ಈ ನಿಟ್ಟಿನಲ್ಲಿ ಹೆಚ್ಚು ಮರಿ ಹಾಕುವ, ಶೀಘ್ರ ಬೆಳವಣಿಗೆಯ ಹಾಗು ಕಡಿಮೆ ಕೊಬ್ಬಿನಾಂಶಯುಕ್ತ ಪೌಷ್ಟಿಕ ಮಾಂಸದ
ಉತ್ಪಾದನೆ ನೀಡುವ ಹಂದಿ ತಳಿ ಸದ್ಯದ ಜನರ ಬೇಡಿಕೆಯಾಗಿದೆ. ಇಲ್ಲಿನ ಪರಿಸರಕ್ಕೆ ಹೊಂದಿಕೊಂಡು ಜನರ ಬೇಡಿಕೆಗೆ ಅನುಗುಣವಾಗಿ
ಮಾಂಸ ಉತ್ಪಾದಿಸಬಲ್ಲ ತಳಿಯಾಗಿ ಹಲವು ವರ್ಷಗಳಿಂದ ಕೊಡಗು ಕೃಷಿ ವಿಜ್ಞಾನ ಕೇಂದ್ರ, ಗೋಣಿಕೊಪ್ಪಲು ಕೈಗೊಂಡಂತಹ
ಮೂಂಚೂಣಿ ಪ್ರಾತ್ಯಕ್ಷಿಕೆಗಳಿಂದ ಸಾಬೀತಾದ ಹಂದಿ ತಳಿಯೇ- ಡ್ಯೂರಾಕ್
ಈ ತಳಿಯು ವಿದೇಶಿ ಹಂದಿ ತಳಿಯಾಗಿದ್ದು ಕೊಡಗಿನಲ್ಲಿ ಇದರ ಸಾಕಾಣಿಕೆಗೆ ಉತ್ತಮ ಪ್ರತಿಕ್ರಿಯೆ ಕಂಡು ಬರುತ್ತಿದೆ. ಹೆಚ್ಚು
ವಿದ್ಯಾವಂತ ಯುವಜನಾಂಗವಿರುವ ಈ ಜಿಲ್ಲೆಯಲ್ಲಿ, ವೈಜ್ಞಾನಿಕ ವಿಧಾನದಲ್ಲಿ ಡ್ಯೂರಾಕ್ ಹಂದಿ ಸಾಕಾಣಕೆ ಮಾಡಿದಲ್ಲಿ ಇದು
ಖಂಡಿತವಾಗಿಯೂ ಒಂದು ಲಾಭದಾಯಕ ಸಾಕಾಣಿಕೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.s
ಕೊಡಗಿಗೆ ಸೂಕ್ತ ತಳಿ ಡ್ಯೂರಾಕ್ ಹಂದಿಯ ಗುಣ ಲಕ್ಷಣಗಳು
ಈ ತಳಿಯ ಹಂದಿಯನ್ನು ಮೂಲತಃ ಅಮೇರಿÀಕಾದ ಡ್ಯೂರಾಕ್ ಪ್ರಾಂತ್ಯದಲ್ಲಿ ‘ಲಾರ್ಜ್ ವೈಟ್ ಯಾರ್ಕ್‍ಶೈರ್’ ಮತ್ತು
‘ಲ್ಯಾಂಡ್‍ರೇಸ್’ ಹಂದಿ ತಳಿಗಳ ಸಂಕರಣದಿಂದ ಅಭಿವೃದ್ಧಿಪಡಿಸಲಾಯಿತು. ಇದರ ದೇಹದ ಬಣ್ಣ ಮುಖ್ಯವಾಗಿ ಕಂದು ಅಥವಾ
ಬಂಗಾರ ಬಣ್ಣ ಮಿಶ್ರಿತ ಕಂದುಬಣ್ಣವಾಗಿರುತ್ತದೆ. ಕೆಲವೊಮ್ಮೆ ಕಂದು ಬಣ್ಣದ ಮೈಮೇಲೆ ಅಲ್ಲಲ್ಲಿ ಚಿಕ್ಕ ಕಪ್ಪು ಬಣ್ಣದ ಮಚ್ಚೆಗಳೂ
ಕಂಡುಬರುವುದುಂಟು. ಈ ತಳಿಯು ತಂಪಾದ ಪರಿಸರದಲ್ಲಿ ಉತ್ತಮವಾಗಿ ಬೆಳೆಯುವುದಲ್ಲದೆ, ಉತ್ತಮ ಆಹಾರ ಪರಿವರ್ತನಾ
ಸಾಮಥ್ರ್ಯ ಹೊಂದಿದೆ. ಸಾಮಾನ್ಯವಾಗಿ ದಢೂತಿ ದೇಹದ ಈ ಹಂದಿಗಳು ನೀಳ ಕಾಯ ಹೊಂದಿದ್ದು ಶೀಘ್ರಗತಿಯಲ್ಲಿ ಬೆಳೆಯುತ್ತವೆ.
ಅಗಲವಾದ ಚೂಪನೆ ಕಿವಿಗಳು ಮತ್ತು ಕಾಂತಿಯುತ ಚಿಕ್ಕ ಕಣ್ಣುಗಳನ್ನು ಹೊಂದಿರುತ್ತವೆ. ಎಲ್ಲಾ ಬಗೆಯ ಆಹಾರವನ್ನು ತಿಂದು ಅದನ್ನು
ರುಚಿಕರ ಕಡಿಮೆ ಕೊಬ್ಬುಯುಕ್ತ ಮಾಂಸವನ್ನಾಗಿ ಪರಿವರ್ತಿಸುವ ಸಾಮಥ್ರ್ಯ ಹೊಂದಿವೆ. 20 ತಿಂಗಳಲ್ಲಿ 150 ರಿಂದ 230
ಕಿ.ಗ್ರಾಂ.ಗಳವರೆಗೆ ತೂಗುತ್ತವೆ. ತಿನ್ನಲು ಯೋಗ್ಯವಾದ ಮಾಂಸದ ಇಳುವರಿ – 70 ರಿಂದ 72% ಇದೆ. ಸಾಧಾರಣವಾಗಿ 6 ರಿಂದ 8
ತಿಂಗಳಲ್ಲಿ ಸರಾಸರಿ ಸುಮಾರು 60 ರಿಂದ 70 ಕೆ.ಜಿ.ಯವರೆಗೆ ಬೆಳೆಯಬಲ್ಲವು. ಡ್ಯೂರಾಕ್ ಹೆಣ್ಣು ಹಂದಿಗಳು ಸಾಮಾನ್ಯವಾಗಿ 7 ರಿಂದ
9ನೇ ತಿಂಗಳಿನ ವಯಸ್ಸಿನಲ್ಲಿ ಮೊದಲಬಾರಿಗೆ ಬೆದೆಗೆ ಬರುತ್ತವೆ. ಋತುಚಕ್ರ ಪ್ರತಿ 19-21 ದಿನಗಳಿಗೆ ಒಮ್ಮೆ ಪುನರಾವರ್ತಿತವಾಗುತ್ತದೆ.
ಮೊದಲ ಎರಡು ಬೆದೆಗಳನ್ನು ಬಿಟ್ಟು ಮೂರನೇ ಬೆದೆಯಲ್ಲಿ ಡ್ಯೂರಾÀಕ್ ಗಂಡು ಹಂದಿಯೊಡನೆ ಕೂಡಲು ಬಿಟ್ಟು ಗರ್ಭಕಟ್ಟಿಸಬೇಕು.
ಇನ್ನು ಗಂಡು ಹಂದಿಯು ಒಂದು ವರ್ಷ ವಯಸ್ಸಾಗುವವರೆಗೂ ಹೆಣ್ಣು ಹಂದಿಯೊಂದಿಗೆ ಬೆರೆಯಲು ಬಿಡಬಾರದು. ಕಾರಣ ಒಂದು
ವರ್ಷ ಮೇಲ್ಪಟ್ಟ ಗಂಡು ಹಂದಿಯ ವೀರ್ಯದ ಗುಣಮಟ್ಟ ಉತ್ತಮವಾಗಿದ್ದು, ಉತ್ತಮ ಮರಿಗಳನ್ನು ಪಡೆಯುವಲ್ಲಿ ಇದು ಸಹಕಾರಿ.
ಸಕಾಲದಲ್ಲಿ ಗರ್ಭಕಟ್ಟಿದ ಹೆಣ್ಣುಹಂದಿ ಮುಂದಿನ 115 ರಿಂದ 117 ದಿನಗಳಲ್ಲಿ ಸರಾಸರಿ 8 ರಿಂದ 15 ಮರಿಗಳಿಗೆ ಜನ್ಮ
ನೀಡುತ್ತದೆ. ಸಾಮಾನ್ಯವಾಗಿ ಒಂದು ಗಂಡು ಹಂದಿಯನ್ನು ಪ್ರತಿ 10 ರಿಂದ 15 ಹೆಣ್ಣು ಹಂದಿಗಳೊಂದಿಗೆ ಸಂತಾನೋತ್ಪತ್ತಿಗಾಗಿ
ಬಳಸಬಹುದು. ಪ್ರೌಢ ಗಂಡುಹಂದಿ (ಸಲಗ) ವನ್ನು ನಿಯಮಿತ ಆಹಾರ ಹಾಗು ವ್ಯಾಯಮ ನೀಡಿ ಒಂದ ರಿಂದ ಆರು
ವರ್ಷಗಳವರೆಗೆ ಸಂತಾನೋತ್ಪತ್ತಿಗಾಗಿ ಬಳಕೆ ಮಾಡಬಹುದು. ತದನಂತರ ಒಳತಳಿಯಾಗುವುದನ್ನು ತಪ್ಪಿಸಲು ಬೇರೆ ಗಂಡು
ಹಂದಿಯನ್ನು ಆಯ್ಕೆಮಾಡಬೇಕು.
ಸಂತಾನೋತ್ಪತಿಗಾಗಿ ಉತ್ತಮ ಪ್ರೌಢ ಹೆಣ್ಣು ಮತ್ತು ಗಂಡು ಹಂದಿಗಳ ಆಯ್ಕೆ
· ಹೆಣ್ಣು ಹಂದಿಯ ವಯಸ್ಸು 9-10 ತಿಂಗಳಾಗಿದ್ದು ಸಾಧಾರಣ 80-90 ಕೆ.ಜಿ. ತೂಕವಿರಬೇಕು.
· ಹೆಣ್ಣು ಹಂದಿ ಆರೋಗ್ಯಯುತವಾಗಿ, ಕಾಂತಿಯುತ ಚರ್ಮ ಕಣ್ಣುಗಳನ್ನು ಹೊಂದಿರಬೇಕು.
· ಸದೃಢ ಕಾಲುUಳ Àು ಮತ್ತು ಉz್ದನ Éಯ ಶರೀg À ºೂÉ ಂದಿg¨À Éೀಕು.
· ಸಮದೂರದ 6 ಜೊತೆ (12) ಮೊಲೆತೊಟ್ಟುಗಳು ಇರಬೇಕು.
· ಅತಿಯಾದ ಕೊಬ್ಬಿನಿಂದ ಮುಕ್ತವಾಗಿರಬೇಕು.
· ಹೆಣ್ಣು ಹಂದಿ ಸೌಮ್ಯ ಸ್ವಭಾವದ್ದಾಗಿದ್ದು, ಉತ್ತಮ ತಾಯ್ತನದ ಲಕ್ಷಣಗಳನ್ನು ಹೊಂದಿದರಬೇಕು.
· ಯಾವುದೇ ರೀತಿಯ ಅನುವಂಶಿಕ ನ್ಯೂನ್ಯತೆಯಿಂದ ಮುಕ್ತವಾಗಿರಬೇಕು.
· ಗಂಡು ಹಂದಿಗಳು ಚುರುಕಾಗಿ ಆರೋಗ್ಯಯುತವಾಗಿರಬೇಕು.
· ಒಂದು ವರ್ಷದ ಮೇಲೆ ವಯಸ್ಸಾಗಿರಬೇಕು ಮತ್ತು ಸದೃಢ ದೇಹವನ್ನು ಹೊಂದಿರಬೇಕು.
· ಸದೃಢ ಹಿಂಗಾಲು ಮತ್ತು ಹಗೂರವಾದ ಮುಂದೋಳುಗಳು ಆಪೇಕ್ಷಿತ.
· ಚುರುಕಾಗಿ ಹೆಣ್ಣಿನೊಡನೆ ಬೆರೆಯುವಂತಿರಬೇಕು ಮತ್ತು ಗಂಡು ಹಂದಿಯ ತಾಯಿಯು ಉತ್ತಮ ತಾಯ್ತನ ಹಾಗು ಆಹಾರ
ಪರಿವರ್ತನಾ ಸಾಮಥ್ರ್ಯ ಹೊಂದಿರಬೇಕು.
· ಗಂಡು ಹಂದಿ ಅಧಿಕ ಬೊಜ್ಜಿನಿಂದ ಮುಕ್ತವಾಗಿರಬೇಕು.
ಹಂದಿಗಳ ವಸತಿ ನಿರ್ಮಾಣ
1. ಸ್ಥಳ ಆಯ್ಕೆ
· ಸ್ಥಳ ಎತ್ತರ ಪ್ರದೇಶದಲ್ಲಿರಬೇಕು ಮತ್ತು ಜನನಿಬಿಡ ಪ್ರದೇಶದಿಂದ ದೂರದಲ್ಲಿರಬೇಕು.
· ಉತ್ತಮ ಗಾಳಿ-ನೀರು ಸೌಕರ್ಯ ಹೊಂದಿರಬೇಕು.
· ವಿದ್ಯುತ್ ಸೌಕರ್ಯವಿರಬೇಕು.
· ಆಯ್ಕೆ ಮಾಡುವ ಸ್ಥಳ ಮಾರುಕಟ್ಟೆಗೆ ಹತ್ತಿರವಿದ್ದು ಉತ್ತಮ ರಸ್ತೆ ಸಂಪರ್ಕ ಹೊಂದಿರಬೇಕು
2. ಹಂದಿಗೂಡು ನಿರ್ಮಾಣ ಮಾಡುವಾಗ ಗಮನಿಸಬೇಕಾದ ಕೆಲ ಅಂಶಗಳು
· ºಂÀ ದಿಗೂಡು ಕಟ್ಟುವಾU À ಅದg À ಉz್ದದ À ಭಾUವ ÀÅ ಪೂರ್ವ- ಪಶ್ಚಿಮ ದಿಕ್ಕಿನಲಿ ್ಲ ಬರುವಂತಿg¨À Éೀಕು.
· ಹಂದಿಗೂಡಿನ ವಿಸ್ತೀರ್ಣ ಅವುಗಳ ಶರೀರಭಾರ (ತೂಕ)/ ವರ್ಗ/ ಹವಾಮಾನಗಳಿಗೆ ಹೊಂದಿಕೊಂಡಿರುತ್ತದೆ.
ಹಂದಿಗಳ ತೂಕ (ಕಿ.ಗ್ರಾಂಗಳಲ್ಲಿ)
ಒಂದು ಹಂದಿಗೆ ಬೇಕಾದ ಸ್ಥಳಾವಕಾಶ
(ಅಡಿಗಳಲ್ಲಿ)
10-15 4 x 4
15-20 5 x 5
20-35 6 x 6
35-50 8 x 8
50 ರ ಮೇಲ್ಪಟ್ಟು 10 x 10
ಸಂತಾನೋತ್ಪತ್ತಿಗಾಗಿ ಬಳಸುವ ಹೆಣ್ಣು ಮತ್ತು ಗಂಡು ಹಂದಿಗೆ 12-15 x 12-15
ಮರಿಹಾಕುವ ಕೋಣೆ 48-60 x 48-60
· ಸಾಮಾನ್ಯವಾಗಿ 10 x 20 ಅಡಿ ಜಾಗದಲ್ಲಿ 12 ರಿಂದ 15 ತಾಯಿಯಿಂದ ಬೇರ್ಪಟ್ಟ ಮರಿಗಳು ಅಥವಾ 8 ಬೆಳವಣಿಗೆ ಹಂತದ
ಯುವ ಹಂದಿ ಮರಿಗಳು ಅಥವಾ 4 ಪ್ರೌಢ ಬತ್ತಿದ ಹೆಣ್ಣು ಹಂದಿಗಳು ಅಥವಾ 2 ಪ್ರೌಢ ಸಲಗಗಳು.
· ಹಳ್ಳಿಗಳಲ್ಲಿ ಹಂದಿಗೂಡಿನ ನಿರ್ಮಾಣದ ಖರ್ಚನ್ನು ತಗ್ಗಿಸುವ ಸಲುವಾಗಿ ಸ್ಥಳಿಯವಾಗಿ ಲಭ್ಯವಿರುವ ಅಡಿಕೆಮರ, ತೆಂಗಿನ ಗರಿ,
ಭತ್ತದ ಹುಲ್ಲು ಮುಂತಾದವುಗಳನ್ನು ಬಳಸಿ ಕೊಟ್ಟಿಗೆಯ ಮೇಲ್ಚಾವಣಿ ಮಾಡಬಹುದು.
· ನೆಲಕ್ಕೆ ಹಾಸುಗಲ್ಲಾಗಿ ಚಪ್ಪಡಿ ಹರಡುವುದು/ ಸಿಮೆಂಟ್ ಕಾಂಕ್ರೀಟ್‍ನಿಂದ ನೆಲ ಮಾಡುವುದು ಮತ್ತು ನೆಲ ಜಾರದಂತೆ
ಒರಟಾಗಿಸುವುದು.
· ಬೇಸಿಗೆಯಲ್ಲಿ ಹಂದಿಗಳಿಗೆ ಸೆಖೆಯಿಂದ ರಕ್ಷಿಸಲು ಒಂದು ನೀರಿನ ತೊಟ್ಟಿಯನ್ನು 3 ಅಡಿ ಅಗಲ x 5 ಅಡಿ ಉದ್ದ x 6 ಅಂಗುಲ
ಆಳದ ವಿಸ್ತೀರ್ಣದಲ್ಲಿ ನಿರ್ಮಿಸುವುದು ಸೂಕ್ತ. ಕಾgಣÀ ºಂÀ ದಿಗಳಿU É ಬೆವರಿನ U್ರಂÀ ಥಿಗಳು ಇರದೇ ಇರುವುದರಿಂದ, ದೇºದ À
ತಾಪಮಾನ ಹೆಚ್ಚಿ ಆಹಾರವನ್ನು ಕಡಿಮೆ ಸೇವಿಸುತ್ತವೆ. ಇದರಿಂದಾಗಿ ಮಾಂಸ ಉತ್ಪಾದನೆ ಕುಂಠಿತಗೊಳ್ಳುತ್ತದೆ.
· ಬೇರೆ-ಬೇರೆ ವರ್ಗದ ಹಂದಿಗಳಿಗೆ ಒಂದೇ ಸೂರಿನಡಿ ಬೇರೆ-ಬೇರೆ ಕೊಠಡಿ ನಿರ್ಮಿಸಿ ಸಾಕಾಣೆ ಮಾಡುವುದರಿಂದ ಹಂದಿಗಳ
ನಿರ್ವಹಣೆ ಸುಗಮವಾಗುತ್ತದೆ.
· ಹಂದಿಗೂಡಿನ ಛಾವಣಿ ‘ಂ’ ಆಕಾರದಲ್ಲಿದ್ದು, ಸುತ್ತಲೂ 4 ಅಡಿ ಎತ್ತರದ ಗೋಡೆ ಇರಬೇಕು.
· ಹಂದಿಗೂಡಿನ ಮಧ್ಯದಲ್ಲಿ ತಿಂಡಿನೀಡಲು ಹಾಗು ವೀಕ್ಷಿಸಲು 1-1.5 ಮೀಟರ್ ಅಗಲದ ದಾರಿ ಇರುವುದು ಉತ್ತಮ.
· ಹಂದಿಗಳಿಗೆ ಬಿಸಿಲು ಕಾಯಿಸುವ ಸಲುವಾಗಿ ಸುಮಾರು 10 ಅಡಿ ಅಗಲದ ಛಾವಣಿ ರಹಿತ ಕೊಠಡಿ ಇರುವುದು ಒಳ್ಳೆಯದು.
· ಹಂದಿಗಳಿಗೆ ದಿನದ 24 ಗಂಟೆಗಳ ಕಾಲವೂ ಕುಡಿಯುವ ಸ್ವಚ್ಚ ನೀರಿನ ವ್ಯವಸ್ಥೆ ಇರಬೇಕು.
ಹಂದಿಯ ಆಹಾರ
ಹಂದಿ ಒಂದು ಸರ್ವಭಕ್ಷಕ ಸರಳ ಹೊಟ್ಟೆಯ ಪ್ರಾಣಿಯಾಗಿದ್ದು, ಹಂದಿ ಸಾಕಾಣೆಯಲ್ಲಿ ತಗಲುವ ಒಟ್ಟು ವೆಚ್ಚದಲ್ಲಿ ಶೇ. 75-
80 ಭಾಗ ಅದರ ಆಹಾರಕ್ಕಾಗಿಯೇ ಮೀಸಲಿರುತ್ತದೆ. ಆದ್ದರಿಂದ ಹಂದಿ ಸಾಕಾಣಿಕೆ ಮಾಡುವವರು. ಈ ಆಹಾರದ ವೆಚ್ಚವನ್ನು ವಿವಿಧ
ರೀತಿಯಲ್ಲಿ ಕಡಿಮೆ ಮಾಡಿಕೊಂಡರೆ, ಹಂದಿ ಸಾಕಾಣಿಕೆಯಿಂದ ಹೆಚ್ಚು ನಿವ್ವಳ ಲಾಭಗಳಿಸಬಹುದು. ಹಂದಿಗೆ ನೀಡುವ ಆಹಾರವನ್ನು
ನಾವು ಮುಖ್ಯವಾಗಿ ಎರಡು ವಿಧದಲ್ಲಿ ವಿಂಗಡಿಸಬಹುದು
1. ಸ್ಥೂಲ ಆಹಾರ
2. ಸಮತೋಲನ ಉತ್ಪಾದನಾ ಆಹಾರ
ಸ್ಥೂಲ ಆಹಾರ
ಇದು ಹಂದಿಯ ದೈನಂದಿನ ಕಾರ್ಯ ಚಟುವಟಿಕೆಗಳಿಗೆ ಬೇಕಾದ ಶಕ್ತಿ ಹಾಗು ಇತರೆ ಜೈವಿಕ ಕ್ರಿಯೆಗಳಿಗೆ ಕೊಡುವಂತಹ
ಆಹಾರ. ಇದರಲ್ಲಿ ನಾವು ಮುಖ್ಯವಾಗಿ ಮಾನವ ಉಪಯೋಗಕ್ಕೆ ಯೋಗ್ಯವಲ್ಲದ ಕಾಳು-ಕಡ್ಡಿ, ಅಕ್ಕಿ, ಬೇಳೆ, ಗೆಣಸು, ಕೆಸವಿನ ಗೆಡ್ಡೆ,
ಕಬ್ಬಿನ ತೊಂಡೆ, ಬೆಳೆ ಕಟಾವಿನ ನಂತರದ ಚಿಗುರು, ತರಕಾರಿ ಮರುಕಟ್ಟೆಯಲ್ಲಿ ಸಿಗುವ ಉಳಿಕೆ ತರಕಾರಿ, ನಿರುಪಯುಕ್ತ ಕಾಯಿಪಲ್ಯೆ
ಹಾಗು ಹಣ್ಣಿನ ರಸದ ಕೇಂದ್ರಗಳಲ್ಲಿನ ಹಣ್ಣಿನ ಸಿಪ್ಪೆ, ಗೋಧಿಬೂಸ, ಜೋಳದ ಒಡಕಲು ಇತ್ಯಾದಿಗಳನ್ನು ಕೊಡಬಹುದು, ಇವಲ್ಲದೆ
ಮನೆ ಹಾಸ್ಟೆಲ್, ಹೋಟೆಗಳಲ್ಲಿನ ಉಳಿಕೆ ತಿಂಡಿ, ಕೋಳಿಮಾಂಸದ ಅಂಗಡಿಗಳ ತ್ಯಾಜ್ಯವಾದ ಕೋಳಿಯ ಕರಳು ಭಾಗಗಳು
ಇತ್ಯಾದಿಗಳನ್ನು ಬೇಯಿಸಿ ತಿನ್ನಲು ಕೊಡಬಹುದು.
ಸಮತೋಲನ ಉತ್ಪಾದನಾ ಆಹಾರ
ಸ್ಥೂಲ ಆಹಾರದಲ್ಲಿ ಹಂದಿಯ ದೇಹಕ್ಕೆ ಬೇಕಾದ ಎಲ್ಲಾ ಪೆÇೀಷಕಾಂಶಗಳು ಸಮತೋಲನ ಪ್ರಮಾಣದಲ್ಲಿ ಸಿಗದೇ
ಇರುವುದರಿಂದ ನಾವು ಅವುಗಳಿಗೆ ಸಮತೋಲನ ಉತ್ಪಾದನಾ ಆಹಾರವನ್ನು ನೀಡಬೇಕು. ಈ ಆಹಾರ ಹಂದಿಗಳ ವಿವಿಧ ವರ್ಗಗಳಿಗೆ
ಶೇಕಡಾವರು ಆಹಾರಾಂಶಗಳಲ್ಲಿ ಬೇರೆ-ಬೇರೆಯಾಗಿ ಲಭ್ಯವಿರುತ್ತದೆ.
2 ರಿಂದ 8 ವಾರದ ವಯಸ್ಸಿನ ಮರಿಗಳ ಆಹಾರ
ಆಹಾರ
ಪದಾರ್ಥಗಳು
1 ನೇ ವಿಧಾನ 2 ನೇ ವಿಧಾನ 3 ನೇ ವಿಧಾನ 4 ನೇ
ವಿಧಾನ
ಮೆಕ್ಕೆಜೋಳ 65% 60% 65% 62%
ಗೋಧಿಬೂಸ 10% 05% 08% 08%
ಕಡಲೆಕಾಯಿ ಹಿಂಡಿ 15% 15% 18% 15%
ಮೀನಿನ ಪುಡಿ 05% 05% 05% 05%
ಕಾಕಂಬಿ 05% 05% 04% 05%
ಹಾಲಿನ ಪುಡಿ – 10% – 05%
100% 100% 100% 100%
2 ತಿಂಗಳು 6 ತಿಂಗಳ ವಯಸ್ಸಿನ ಮರಿಗಳಿಗೆ
ಆಹಾರ ಪದಾರ್ಥಗಳು 1 ನೇ ವಿಧಾನ 2 ನೇ ವಿಧಾನ 3 ನೇ ವಿಧಾನ 4 ನೇ ವಿಧಾನ
ಮೆಕ್ಕೆಜೋಳ 50 50 45 45
ಗೋಧಿಬೂಸ 20 15 15 20
ಕಡಲೆಕಾಯಿ ಹಿಂಡಿ 18 20 20 18
ಅಕ್ಕಿ ನುಚ್ಚು – 05 08 05
ಕಾಕಂಬಿ 05 04 05 05
ಮೀನಿನ ಪುಡಿ 05 04 05 05
ಖನಿಜ ಮಿಶ್ರಣ 1.5 1.5 1.5 1.5
ಅಡಿಗೆ ಉಪ್ಪು 0.5 0.5 0.5 0.5
100% 100% 100% 100%
6 ವಾರ ಮೇಲ್ಪಟ್ಟ/ ಮಾನಿಸಿಕೊಂಡ (ಬರಡು) ಹೆಣ್ಣು ಹಂದಿ / ಗಂಡು ಹಂದಿಗಳಿಗೆ
ಆಹಾರ ಪದಾರ್ಥಗಳು 1 ನೇ ವಿಧಾನ 2 ನೇ ವಿಧಾನ 3 ನೇ ವಿಧಾನ 4 ನೇ ವಿಧಾನ
ಮೆಕ್ಕೆಜೋಳ 35 25 30 25
ಅಕ್ಕಿ ತೌಡು 10 16 10 15
ಗೋಧಿಬೂಸ 25 20 25 22
ಅಕ್ಕಿ ನುಚ್ಚು 05 18 05 15
ಕಡಲೆಕಾಯಿ ಹಿಂಡಿ 20 10 20 15
ಮೀನಿನ ಪುಡಿ 03 05 04 03
ಕಾಕಂಬಿ – 04 04 03
ಖನಿಜ ಮಿಶ್ರಣ 1.5 1.5 1.5 1.5
ಅಡಿಗೆ ಉಪ್ಪು 0.5 0.5 0.5 0.5
100% 100% 100% 100%
ಗರ್ಭಧರಿಸಿದ ಹಾಗು ಮರಿ ಹಾಕಿದ ಹಂದಿಗಳಿಗಾಗಿ
ಆಹಾರ ಪದಾರ್ಥಗಳು 1 ನೇ ವಿಧಾನ 2 ನೇ ವಿಧಾನ 3 ನೇ ವಿಧಾನ 4 ನೇ ವಿಧಾನ
ಮೆಕ್ಕೆಜೋಳ 50 20 30 50
ಅಕ್ಕಿ ತೌಡು – 15 – –
ಗೋಧಿಬೂಸ 18 20 18 20
ಅಕ್ಕಿ ನುಚ್ಚು – 15 22 05
ಕಡಲೆಕಾಯಿ ಹಿಂಡಿ 20 18 20 18
ಮೀನಿನ ಪುಡಿ 05 05 04 –
ಕಾಕಂಬಿ 05 05 04 05
ಖನಿಜ ಮಿಶ್ರಣ 1.5 1.5 1.5 1.5
ಅಡಿಗೆ ಉಪ್ಪು 05 0.5 0.5 0.5
100% 100% 100% 100%
ಹಂದಿಗಳ ಸಮತೋಲನ ಆಹಾರದಲ್ಲಿ ಕನಿಷ್ಠ ಪ್ರಮಾಣದಲ್ಲಿ ಇರಬೇಕಾದ ಆಹಾರಾಂಶಗಳ ಕೋಷ್ಠಕ
ಹಾಲು
ಕುಡಿಯುವ
ಮರಿಗಳಿಗೆ
(2 ರಿಂದ 8
ವಾರ)
ತಾಯಿಯಿಂದ
ಬೇರ್ಪಟ್ಟ
ಮರಿಗಳಿಗೆ
(8 ವಾರದಿಂದ 6
ತಿಂಗಳು)
ಬೆಳವಣಿಗೆ ಹಂತದ
ಮರಿಗಳಿಗೆ
(6 ರಿಂದ 8 ತಿಂಗಳು)
ಕಟಾವಿನ
ಹಂತದ
ಮರಿಗಳಿಗೆ
(8-12 ತಿಂಗಳು)
ಪ್ರೌಢ ಸಲಗ
ಹಾಗೂ
ಗಬ್ಬದ
ಹಂದಿಗೆ
ಮೆಕ್ಕೆಜೋಳ 60 55 50 45 50
ಗೋದಿಬೂಸ 14 17 20 25 18
ಕಡಲೆಕಾಯಿ ಹಿಂಡಿ 14 16 18 20 20
ಕಾಕಂಬಿ 05 05 05 03 05
ಮೀನಿನ ಪುಡಿ 05 05 05 05 05
ಖನಿಜ ಮಿಶ್ರಣ 01 01 05 0.5 1.5
ಅಡಿಗೆ ಉಪ್ಪು 01 01 1.5 1.5 0.5
100% 100% 100% 100% 100%
· ಗರ್ಭಧರಿಸಿದ ಹಂದಿಗಳನ್ನು ಸರಿಯಾಗಿ ನೋಡಿಕೊಳ್ಳಬೇಕು.
· 3 ತಿಂಗಳ ಗರ್ಭದಲ್ಲಿ ಹೆಣ್ಣು ಹಂದಿಯನ್ನು ಮರಿಹಾಕುವ ಕೋಣೆಗೆ ವರ್ಗಾಯಿಸಿ, ಸರಿಯಾದ ಮೆತ್ತನೆ ಹುಲ್ಲುಹಾಸನ್ನು ಹಾಸಿ
ಮರಿಹಾಕಲು ಅನುವು ಮಾಡಿಕೊಡಬೇಕು.
· ಕೋಣೆ ಸ್ವಚ್ಚವಾದ ಗಾಳಿ-ಬೆಳಕಿನಿಂದ ಕೂಡಿರಬೇಕು ಮತ್ತು ಬೆಚ್ಚಗಿರಬೇಕು.
· 107ನೇ ದಿನದ ಗರ್ಭಾವಧಿಯಿಂದ ಗಬ್ಬದ ಹೆಣ್ಣು ಹಂದಿಗೆ ಆಹಾರ ನೀಡಿಕೆಯಲ್ಲಿ ಕಡಿಮೆಮಾಡಿ, ಮರಿಹಾಕಿದ 2 ದಿನಗಳ
ನಂತರ ನಿಧಾನಗತಿಯಲ್ಲಿ ಆಹಾರ ನೀಡಿಕೆ ಹೆಚ್ಚಿಸಬೇಕು.
· ಪ್ರತಿ ಮರಿಗೆ 100-150 ಗ್ರಾಂ ಆಹಾರದಂತೆ ತಾಯಿ ಹಂದಿಗೆ ಹೆಚ್ಚಾಗಿ ಆಹಾರವನ್ನು ನೀಡಬೇಕು.
· ಹುಟ್ಟಿದ ಮರಿಗಳಿಗೆ ಬೆಚ್ಚನೆ ವಾತಾವರಣ ನಿರ್ಮಿಸಬೇಕು.
· ಮರಿಗಳಿಗೆ 4ನೇ ಹಾಗು 14ನೇ ದಿನದ ವಯಸ್ಸಿನಲ್ಲಿ ಕಬ್ಬಿಣದ ಸಲ್ಫೇಟ್ ಚುಚ್ಚುಮದ್ದನ್ನು ಕೊಡಿಸಬೇಕು.
· ಹಾಲೂಡಿಸುವ ತಾಯಿ ಹಂದಿಗೆ ಕ್ಯಾಲ್ಸಿಯಂ ಸಿರಪ್ ನೀಡುವುದು.
ಹಂದಿಗೂಡಿನ ನೈರ್ಮಲ್ಯತೆ
· ಹಂದಿಗೂಡನ್ನು ಪ್ರತಿದಿನ ಸ್ವಚ್ಛಗೊಳಿಸಿ ಉತ್ತಮ ಗಾಳಿ ಬೆಳಕು ಬರುವಂತಿರಬೇಕು.
· ಅತಿಯಾದ ತೇವಾಂಶವಿರಬಾರದು.
· ಹಂದಿಗಳನ್ನು ದಿನವೂ ಸ್ವಚ್ಛ ನೀರಿನಲ್ಲಿ ತೊಳೆಯಬೇಕು.
· ಅತಿಯಾದ ಶೀತ ಅಥವಾ ಉμÁ್ಣಂಶಗಳಿಂದ ಹಂದಿಗಳನ್ನು ರಕ್ಷಿಸಬೇಕು.
· ದಿನವೂ ಹಂದಿಯ ತಿಂಡಿ ಹಾಕುವ ಪಾತ್ರೆ/ ತೊಟ್ಟಿ ಮತ್ತು ನೀರಿನ ತೋಟ್ಟಿಗಳನ್ನು ಸ್ವಚ್ಛಮಾಡಬೇಕು.
· ಹಂದಿಗೂಡಿನ ನೆಲವನ್ನು ನಂಜುನಿವಾರಕ ದ್ರಾವಣ-ಪೆÇಟ್ಯಾಶಿಯಂ ಪರಮಾಂಗನೇಟ್ ಅಥವಾ ಫಿನಾಯಿಲ್ ದ್ರಾವಣಗಳಿಂದ
ತೊಳೆಯಬೇಕು.
ಹಂದಿಗಳಲ್ಲಿ ಕಾಣಿಸುವ ಪ್ರಮುಖ ರೋಗಗಳು ಮತ್ತು ಅವುಗಳ ನಿರ್ವಹಣೆ
ವೈರಸ್‍ನಿಂದ ಬರುವ ಹಂದಿ ಕಾಯಿಲೆಗಳು
1. ಹಂದಿಜ್ವರ / ಹಾಗ್ ಕಾಲೆರಾ : ವಿಪರೀತ ಜ್ವರ, ಕೆಂಪು ಅಥವಾ ನೀಲಿ ಬಣ್ಣದ ಮಚ್ಚೆಗಳು ಹೊಟ್ಟೆ ಹಾಗು ದೇಹದ
ಮೇಲೆ ಕಾಣಿಸಿಕೊಳ್ಳುತ್ತವೆ. ಹಂದಿ ಮಂಕಾಗಿದ್ದು ಆಹಾರವನ್ನು ನಿರಾಕರಿಸುತ್ತದೆ. ಸಾವಿನ ಪ್ರಮಾಣ ಹೆಚ್ಚು.
2. ಕಾಲು ಬಾಯಿ ಜ್ವರ: ಕಾಲಿನ ಗೊರಸು ಹಾಗು ಬಾಯಿಯಲ್ಲಿ ಹುಣ್ಣು ಕಾಣಿಸಿಕೊಡು ಯಾವಾಗಲೂ ಜೊಲ್ಲು
ಸುರಿಸುತ್ತಿರುತ್ತದೆ. ಜ್ವರವಿದ್ದು ಹಂದಿ ಆಹಾರ ನಿರಾಕರಿಸುತ್ತದೆ.ಮರಣ ಪ್ರಮಾಣ ಕಡಿಮೆ.
3. ಹಂದಿ ಸಿಡುಬು: ದೇಹದ ಮೇಲೆ ಸಿಡುಬಿನ ಕಲೆಗಳಿದ್ದು, ಜ್ವರವಿರುತ್ತದೆ. ಹಂದಿ ಮಂಕಾಗಿರುತ್ತದೆ.
ಏಕಾಣು ಜೀವಿ/ ಬ್ಯಾಕ್ಟೀರಿಯಾದಿಂದ ಬರುವ ಪ್ರಮುಖ ಹಂದಿ ರೋಗಗಳು
1. ಹಂದಿ ಬೇನೆ / ಗಳಲೆ ರೋಗ : ವಿಪರೀತ ಜ್ವರ, ಕಷ್ಟಕರ ಉಸಿರಾಟ, ಗಂಟಲಲ್ಲಿ ಬಾವು, ಕೆಲವೊಮ್ಮೆ ರಕ್ತದಂತಹ
ಕೆಲವು ಗುಳ್ಳೆ ಕಾಣಿಸಿಕೊಳ್ಳುವುದು.
2. ಇಸುಬು ರೋಗ / ದದ್ದು ರೋಗ : ಚರ್ಮದ ಮೇಲೆ ವಜ್ರಾಕಾರದ ಹುಣ್ಣುಗಳು ಕಿವಿಯ ಹಿಂಭಾಗ, ಹೊಟ್ಟೆ
ಭಾಗಗಳಲ್ಲಿ ಕಾಣಿಸಿಕೊಳ್ಳುವುದು.
3. ನೆರಡಿ ರೋಗ/ ಆಂಥ್ರಾಕ್ಸ್: ವಿಪರೀತ ಜ್ವರ, ಗಂಟಲು ಬಾವು, ರಕ್ತವರ್ಣದ ಮೂತ್ರ ವಿಸರ್ಜನೆ, ಆಮಶಂಕೆ, ಉಸಿರಾಟದ
ತೊಂದರೆ, ಕಡುಕಪ್ಪನೇ ರಕ್ತ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುವುದು.
4. ಕಂದು ರೋಗ: ಗರ್ಭಾವಸ್ಥೆಯಲ್ಲಿ ಮರಿ ಬಲಿಯುವ ಮುನ್ನವೇ ಗರ್ಭಪಾತವಾಗುವುದು, ಬಂಜೆತನ, ಕೀಲು ಹಾಗೂ
ಗರ್ಭಕೋಶಗಳಲ್ಲಿ ಬಾವು ಕಾಣಿಸಿಕೊಳ್ಳುವುದು.
ಪರೋಪ ಜೀವಿಗಳಿಂದ ಬರುವ ಪ್ರಮುಖ ರೋಗಗಳು
1. ಕಜ್ಜಿ: ಜೇಡನ ಜಾತಿಯ ಪರೋಪ ಜೀವಿಯಿಂದ ಬರುತ್ತದೆ, ಕೂದಲು ಉದುರುವಿಕೆ, ಮೈಕೆರೆತ, ಪ್ರಾರಂಭದಲ್ಲಿ ಕಣ್ಣು, ಕಿವಿ,
ಬಾಲದ ಸುತ್ತ ಪ್ರಾರಂಭವಾಗಿ ಕ್ರಮೇಣ ಇಡೀ ದೇಹವನ್ನು ಆವರಿಸುತ್ತದೆ.
2. ಜಂತುಹುಳು/ ಆಸ್ಕಾರಿಯಾಸಿಸ್: ಇದು ಒಂದು ಸಣ್ಣ ಕರುಳಿನಲ್ಲಿನ ದುಂಡಾಣು ಹುಳುವಿನಿಂದ ಬರುತ್ತದೆ. ರಕ್ತ ಹೀನತೆ,
ಮಂಕು, ಕುಂಠಿತ ಬೆಳವಣಿಗೆ, ಉಸಿರಾಟದ ತೊಂದರೆ, ಬೇದಿ ಅಲ್ಲದೆ ಹೊಟ್ಟೆ ಗುಡಾಣದಂತಿರುತ್ತದೆ.
ಪೆÇೀಷಕಾಂಶಗಳ ಕೊರತೆಯಿಂದ ಬರುವ ಪ್ರಮುಖ ಹಂದಿ ರೋಗಗಳು
1. ಹಂದಿಮರಿಗಳಲ್ಲಿ ರಕ್ತಹೀನತೆ/ ಪಿಗ್‍ಲೆಟ್ ಅನೀಮಿಯಾ: ಇದು ಮುಖ್ಯವಾಗಿ ಹಂದಿಯ ಹಾಲಿನಲ್ಲಿರುವ
ಕಬ್ಬಿಣದಾಂಶದ ಕೊರತೆಯಿಂದ ಬರುತ್ತದೆ. ಇದು ಮುಖ್ಯವಾಗಿ 1-2 ತಿಂಗಳ ಒಳಗಿನ ಹಂದಿ ಮರಿಗಳಲ್ಲಿ ಹೆಚ್ಚಾಗಿ
ಕಾಣಿಸಿಕೊಳ್ಳುತ್ತದೆ. ಬಾಹ್ಯವಾಗಿ ಹಂದಿಮರಿಗಳಿಗೆ ಕಬ್ಬಿಣದ ಸಲ್ಫೇಟ್ ಚುಚ್ಚುಮದ್ದು ಅಥವಾ ಸಿರಪ್ ನೀಡುವುದರಿಂದ
ಇದರಿಂದ ಇದರಿಂದ ಮರಿಗಳನ್ನು ರಕ್ಷಿಸಬಹುದು.
ಮೇಲೆ ತಿಳಿಸಿರುವ ಎಲ್ಲಾ ಮಾಹಿತಿಯೊಂದಿಗೆ ರೈತರು ಪ್ರತಿವರ್ಷ 6 ತಿಂಗಳಿಗೊಮ್ಮೆ ಅಂದರೆ ನವೆಂಬರ್-ಡಿಸೆಂಬರ್
ಮತ್ತು ಮೇ-ಜೂನ್ ತಿಂಗಳಿನಲ್ಲಿ ಕಾಲುಬಾಯಿರೋಗ, ಗಳಲೆ ರೋಗ, ಹಂದಿ ಜ್ವರ ಮುಂತಾದ ರೋಗಗಳಿಗೆ ನುರಿತ ಪಶುವೈದ್ಯರಿಂದ
ರೋಗ ನಿರೋಧಕ ಚುಚ್ಚುಮದ್ದು ಕೊಡಿಸುವುದರಿಂದ ಮುಂದೆ ಈ ರೋಗಗಳು ಬರುವುದನ್ನು ತಡೆಗಟ್ಟಬಹುದಲ್ಲದೆ, ಹಂದಿ
ಸಾಕಾಣೆಯನ್ನು ಒಂದು ಉತ್ತಮ ಲಾಭದಾಯಕ ಉದ್ಯಮವನ್ನಾಗಿ ಬೆಳೆಸಬಹುದು.