ನಾವು ಸಾವಿನ ಹಿಂದೆ; ಸಾವು ನಮ್ಮ ಹಿಂದೆ
ಹುಟ್ಟು ಬೃಹ್ಮನ ಸೃಷ್ಟಿ
ಸಾವು ಕಾಲ ನಿರ್ಣಯ
ಮದ್ಯ ಬರುವ ವಿಧಿಯಾಟದ ತಾಳಕ್ಕೆ
ಕುಣಿಯುವ ಬಲಿ ಪಶು ನಾವು!
ಬಯಸಿ ಪಡೆದದ್ದಲ್ಲಾ ಹುಟ್ಟು
ಬಯಸಿದರೂ ಬರುವುದಿಲ್ಲ ಸಾವು
ಹುಟ್ಟು ಸಾವಿನ ನಡುವೆ ತಪ್ಪಿದ್ದಲ್ಲ ನೋವು !!
ಏನು ಹೇಳಬೇಕೋ ತೋಚುತ್ತಿಲ್ಲ
ಹೌದೆನ್ನಲೋ? ಇಲ್ಲವೆನ್ನಲೋ?
ಹುಟ್ಟು-ಸಾವು ಜೀವನದ ಎರಡು ಕೊನೆಗಳು.
ಜನನ ಆಕಸ್ಮಿಕವಾದರೂ ನಡೆವ ಜೀವನ ದಾರಿ ಸತ್ಯ
ಜೀವನ ಹೀಗೆ ನಡೆಯಬೇಕೆಂಬ ನಿಯಮವೆಂಬುವುದಿಲ್ಲ.
ಬದುಕೆಂಬುದು ಒಂದು ಮಾಯಾ ಪಾಶ
ಇಲ್ಲಿ ಸಿಲುಕಿ ಕೊಳ್ಳದಿರುವವರು ಯಾರೂ ಇಲ್ಲ.
ಅನುಭವ ಕೊನೆಯಲ್ಲಿ ಅನಿಸುವುದೊಮ್ಮೆ;
ಬಾಳೊಂದು ತಿರುಕನ ಕನಸಿನಂತೆ.
ಯಾವುದು ಆರಂಭವೋ?
ಯಾವುದು ಕೊನೆಯೋ?
ಚಿಂತಿಸುವ ಮನಕ್ಕೆ ಎಲ್ಲವೂ ಶೂನ್ಯವೇ!
ಬದುಕಿನ ದಿನಗಳಲ್ಲಿ ಯಾರು ಎಷ್ಟೆ ಮೆರೆದಾಡಲಿ
ಕೊನೆಗೆ ಸಾವಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.
ಎಲ್ಲವೂ ಬ್ರಹ್ಮ ಲಖಿತ!
ಸಾವಿನ ಸೂತಕದ ಛಾಯೆ
ಮನದೊಳಗೊ, ಮನೆಯೊಳಗೊ….
ಮಸಣದೊಳಗೊ ??
ನಾವು ಸಾವಿನ ಹಿಂದೆ
ಸಾವು ನಮ್ಮ ಹಿಂದೆ
ಪರಿಣಾಮ ಒಂದೇ!
ಲೇಖಕರು: ✍. ಅರುಣ್ ಕೂರ್ಗ್