ಕೋವಿಡ್-19 ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಆಯುಷ್ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆ
ಕೋವಿಡ್-19 ಮಹಾಮಾರಿ ವಿರುದ್ಧ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಆಯೂಷ್ ಇಲಾಖೆಯ ತಜ್ಞ ವೈದ್ಯರು ಅಭಿಪ್ರಾಯ ಒಳಗೊಂಡ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದ್ದು, ಮಾಹಿತಿ ಇಂತಿದೆ.
ದೇಶದ ಪ್ರಾಚೀನ ವೈದ್ಯಕೀಯ ಪದ್ಧತಿಯಾದ ಆಯುರ್ವೇದದ ಚರಕ ಮತ್ತು ಸುಶುೃತ ಸಂಹಿತೆಗಳು ಸಾಂಕ್ರಾಮಿಕ ಪಿಡುಗಿನ ಬಗ್ಗೆ ಸುಮಾರು 2500 ಸಾವಿರ ವರ್ಷಗಳ ಹಿಂದೆಯೇ ವಿವರಿಸಿರುವುದು ವಿಶೇಷವಾಗಿದೆ. “ಜನಪದೋಧ್ವಂಸ” ಎಂಬ ಅಧ್ಯಾಯದಲ್ಲಿ ಸಾಂಕ್ರಾಮಿಕ ರೋಗಗಳಿಗೆ ಕಾರಣಗಳನ್ನು ಹೇಳುತ್ತಾ ಪರಿಸರ ಮಾಲಿನ್ಯ ಅಧರ್ಮವನ್ನಾಚರಿಸುವುದು ಮತ್ತು ಸಾಮಾಜಿಕ ನಿಯಮಗಳನ್ನು ಪಾಲಿಸದೇ ಇರುವುದು, ಶೀನುವಾಗ, ಆಕಳಿಸುವಾಗ, ನಗುವಾಗ, ಮುಖವನ್ನು ಮುಚ್ಚಿಕೊಳ್ಳುವುದು ಖಾಯಿಲೆಯಿಂದ ಪೀಡಿತವಾಗಿರುವ ಪ್ರದೇಶವನ್ನು ತೊರೆಯುವುದು, ಸಾಮಾಜಿಕ ಅಂತರವನ್ನು ಕಾಪಾಡುವುದು ಹೀಗೆ ಅನೇಕ ಉಲ್ಲೇಖಗಳು ಸಾಂಕ್ರಾಮಿಕ ರೋಗಗಳನ್ನು ದೂರ ಮಾಡಲು ವಿವರಿಸಲಾಗಿದೆ.
ದಿನಚರ್ಯೆ, ಋತುಚರ್ಯೆ, ಸಾಮಾಜಿಕ ನಿಯಮಗಳನ್ನು ಪಾಲಿಸುವುದು, ರಸಾಯನಗಳನ್ನು ಸೇವಿಸುವುದು, ರೋಗ ತಡೆಗಟ್ಟಲು ಹೆಚ್ಚು ಒತ್ತು ನೀಡಿ ಹೇಳಿರುತ್ತಾರೆ. ಕೊರೊನಾ ವೈರಸ್ 65-125 ಎನ್‍ಎಂ ನಷ್ಟು ಸೂಕ್ಷ್ಮವಾಗಿದ್ದು, ಮನುಷ್ಯನ ದೇಹದೊಳಗೆ ಸೇರಿ ಅನೇಕ ಪಟ್ಟಾಗಿ ಅಪವರ್ತಿಸಿ ಉಸಿರಾಟದ ವ್ಯವಸ್ಥೆ ಹಾಳು ಮಾಡುತ್ತದೆ. ಈ ಭೂತಾಭಿಷಂಗವು ವಿಷಮ ಸನ್ನಿಪಾತ ಜ್ವರವನ್ನು ಮನುಷ್ಯರಲ್ಲಿ ಉಂಟು ಮಾಡುತ್ತದೆ. ವಿಷಮ ಸನ್ನೀಪಾತ ಜ್ವರದಲ್ಲಿ ಮೂರೂ ದೋಷಗಳು ಕುಪಿತಾವಸ್ಥೆಯಲ್ಲಿದ್ದು ಕಫಹೀನ, ಪಿತ್ತಮಧ್ಯ, ವಾತ ಅಧಿಕವಾಗಿ ಕುಪಿತಗೊಂಡಿರುತ್ತದೆ. ಜ್ವರ, ಕೆಮ್ಮು, ದಮ್ಮು, ಮೂಗು ಸೋರುವುದು, ಬಾಯಿ ಒಣಗಿಸುವುದು, ಪಾಶ್ರ್ವಶೂಲ(ನ್ಯುಮೋನಿಯಾ) ವಿಷಮ ಸನ್ನೀಪಾತ ಜ್ವರದ ಲಕ್ಷಣಗಳಾಗಿದೆ.
ಆಯುಷ್ ಪದ್ಧತಿಯಲ್ಲಿ ಅನುಸರಿಸಬೇಕಾದ ಕ್ರಮಗಳು: ಪ್ರತಿಯೊಬ್ಬರೂ ಆರೋಗ್ಯವಂತರಾಗಿರಲು ಜಠರಾಗ್ನಿ ಶಕ್ತಿಯೇ ಪ್ರಾಮುಖ್ಯವಾಗಿದ್ದು, ಅದನ್ನು ಸಮಸ್ಥಿತಿಯಲ್ಲಿಟ್ಟುಕೊಳ್ಳಲು ಸುಲಭವಾಗಿ ಜೀರ್ಣವಾಗುವ, ಜೀರ್ಣವಾದ ನಂತರ ಹಸಿವಾದಗ ಆಹಾರವನ್ನು ಸೇವಿಸುವುದು, ಪೌಷ್ಠಿಕಾಂಶಗಳುಳ್ಳ ಋತುಗಳಿಗನುಸಾರವಾಗಿ ಪ್ರಾಕೃತಿಕ ಆಹಾರವನ್ನು ಉಪಯೋಗಿಸುವುದು. ರೋಗ ತಡೆಗಟ್ಟುವಿಕೆ ಮತ್ತು ಉತ್ತಮ ಆರೋಗ್ಯವನ್ನು ಉತ್ತೇಜಿಸುವುದು.
ಕರ್ತವ್ಯಗಳು: ರೋಗ ನಿರೋಧಕ ಕಾರ್ಯತಂತ್ರ- ಮೊದಲನೆಯ ಹಂತ: ಮನೆಯನ್ನು ಕ್ರಿಮಿ ಮುಕ್ತಗೊಳಿಸಲು ಧೂಪ ಹಾಕಬಹುದಾಗಿದೆ. ರೋಗಿಯ ಬಲವನ್ನು ಹೆಚ್ಚಿಸಲು ಜಠರಾಗ್ನಿಯನ್ನು, ಧಾತ್ವಗ್ನಿಯನ್ನು, ಭೂತಾಗ್ನಿಯನ್ನು ಉತ್ತಮವಾಗಿಡಬೇಕಾಗಿರುತ್ತದೆ ಸರಿಯಾದ ಸಮಯಕ್ಕೆ ಮಲಗಿ ಏಳುವುದು, ಪೌಷ್ಟಿಕ ಆಹಾರ ಸೇವಿಸುವುದನ್ನು ರೂಢಿಸಿಕೊಳ್ಳಬೇಕಿದೆ.
ಯೋಗಶಾಸ್ತ್ರದಲ್ಲಿ ಹೇಳಿದ ಯಮ, ನಿಯಮ, ನಿತ್ಯ ಆಸನಗಳನ್ನು, ಪ್ರಾಣಾಯಾಮ ಮತ್ತು ಧ್ಯಾನವನ್ನು ಮಾಡುವುದರಿಂದ ಮನಸ್ಸು ಶಾಂತವಾಗುವುದಲ್ಲದೇ, ಉಸಿರಾಟದ ವ್ಯವಸ್ಥೆಯನ್ನು ಬಲಗೊಳಿಸುತ್ತದೆ. ಗಿಡಮೂಲಿಕೆಗಳಿಂದ ಮಾಡಿದ ಚಹಾ ಸೇವಿಸುವುದು. ಅಮೃತಷಡಂಗಮ್ ಅಥವಾ ಷಡಂಗ ಪಾನೀಯ ಕಷಾಯವನ್ನು, ಲಾವಂಚ ಹುಲ್ಲಿನಿಂದ ಕುದಿಸಿದ ನೀರನ್ನು ಕುಡಿಯುವುದು. ಅಶ್ವಗಂಧಾ ಬೆರೆಸಿದ ಹಾಲಿನೊಂದಿಗೆ ಹರಿಶಿನವನ್ನು ಸೇರಿಸಿ ಕುದಿಸಿ ಸೇವಿಸುವುದನ್ನು ನಿತ್ಯ ರೂಢಿಸಿಕೊಳ್ಳಬೇಕಿದೆ.
ಯುನಾನಿ ಔಷಧದಲ್ಲಿ ಆರೋಗ್ಯವನ್ನು ಕಾಪಡಿಕೊಳ್ಳಲು ಉಸಿರಾಟದ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಲು ಆರ್ಕ್-ಎ-ಅಜೀಬ್ ಎಂಬುದು ಉತ್ತಮವಾಗಿದ್ದು ಇದನ್ನು ಇನ್ಹಲೇಷನ್ ಮತ್ತು ಗಾಗ್ರ್ಲಿಂಗ್‍ಗೆ ಬಳಸಬಹುದು. ನಿಂಬೆಹಣ್ಣಿನ ರಸವನ್ನು ಬಿಸಿನೀರಿನಲ್ಲಿ ಹಾಕಿ ದಿನಕ್ಕೊಂದು ಎರಡು ಬಾರಿ ಸೇವಿಸುವುದು. ಹೋಮಿಯೋಪತಿಯಲ್ಲಿ ಆರ್ಸೆನಿಕಮ್ ಆಲ್ಬಂ-30 ಎಂಬುದು ಕರೋನ ವೈರಸ್‍ನ ರೋಗವನ್ನು ಕಡಿಮೆ ಮಾಡಲು ಹಾಗೂ ಇಮ್ಯೂನ್ ಬೂಸ್ಟರ್ ಆಗಿ ಅಲರ್ಜಿಗಳಲ್ಲಿ ಬಳಸಬಹುದಾಗಿದೆ. ವೈದ್ಯರ ಸಲಹೆ ಪಡೆಯಬೇಕು.
ಸರ್ಕಾರದ ಸೂಚನೆಯಂತೆ 60 ವರ್ಷ ಮೇಲ್ಪಟ್ಟವರು ಹಾಗೂ 10 ವರ್ಷದೊಳಗಿನ ಮಕ್ಕಳು ರೋಗ ಬಾರದಂತೆ ಸಂಪರ್ಕ ಸಾಧಿಸದಂತೆ ಮನೆಯಲ್ಲೇ ಇರುವುದು ಒಳ್ಳೆಯದು. ಆಯುರ್ವೇದದಲ್ಲಿ ಸೂಚಿಸಿದಂತೆ ತುಪ್ಪ, ಎಳ್ಳೆಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಮೂಗಿನ ಎರಡು ಹೊಳ್ಳೆಗಳಿಗೆ ಎರಡೆರಡು ಹನಿಯಂತೆ ಹಾಕಿಕೊಳ್ಳುವುದು. ಒಂದು ಟೇಬಲ್ ಚಮಚ ತೆಂಗಿನ ಎಣ್ಣೆ ಅಥವಾ ಎಳ್ಳೆಣ್ಣೆಯಿಂದ ಬಾಯಿ ಮುಕ್ಕಳಿಸಿ ಹೊರಗಡೆ ಉಗಿಯುವುದು(ಗಾಗ್ರ್ಲಿಂಗ್) ಹಾಗೂ ಬಿಸಿನೀರಿನಲ್ಲಿ ಬಾಯಿಯನ್ನು ತೊಳೆದುಕೊಳ್ಳುವುದು. ನಂತರ 50 ಮಿಲೀ ಬೆಚ್ಚಗಿನ ನೀರಿನಲ್ಲಿ ಒಂದು ಚಿಟಿಕಿ ಉಪ್ಪಿನೊಂದಿಗೆ 3-5 ನಿಮಿಷಗಳ ಕಾಲ ಬಾಯಿಯಲ್ಲಿ ಹಿಡಿದಿಟ್ಟುಕೊಳ್ಳುವುದು.
30 ನಿಮಿಷಗಳ ಕಾಲ ದೇಹ ಸಡಿಲಗೊಳಿಸುವ ವ್ಯಾಯಾಮ, ಸೂರ್ಯ ನಮಸ್ಕಾರ (6 ಸುತ್ತು), ಯಾವುದಾದರೂ ನಾಲ್ಕು ಆಸನಗಳು, ಪ್ರಾಣಾಯಾಮ ಮತ್ತು ಧ್ಯಾನ ಮಾಡುವುದು. 4 ತುಳಸಿ ಎಲೆ, ನಿಂಬೆರಸ, ಒಣದ್ರಾಕ್ಷಿಯೊಂದಿಗೆ ಯಾವುದಾದರೊಂದು ಮೂಲಿಕೆಯನ್ನು ಅರ್ಧ ಗ್ರಾಂ.ನಂತೆ ಸೇರಿಸಿ (ಪ್ರತಿದಿನ ಒಂದು ಮೂಲಿಕೆ) ಗಿಡಮೂಲಿಕೆ ಚಹಾವನ್ನು ತಯಾರಿಸಿ ದಿನಕ್ಕೆ ಒಂದರಿಂದ ಎರಡು ಬಾರಿ ಸೇವಿಸುವುದು. ದಾಲ್ಚಿನ್ನಿ, ಕರಿಮೆಣಸು, ಶುಂಠಿ, ಅರಿಶಿನ, ಜೀರಿಗೆ, ಕೊತ್ತಂಬರಿ ಹಾಗೂ ಬೆಳ್ಳುಳ್ಳಿಯನ್ನು ದಿನನಿತ್ಯದ ಅಡುಗೆಯಲ್ಲಿ ಉಪಯೋಗಿಸುವುದು. ಒಂದು ಲೋಟ ಕುದಿಯುವ ಹಾಲಿಗೆ ಅರ್ಧ ಟೀ ಚಮಚ ಅರಿಶಿನ ಪುಡಿಯನ್ನು ಸೇರಿಸಿ ನಂತರ ಹಾಲನ್ನು ಎರಡು ನಿಮಿಷ ಕುದಿಸಿ ಸೋಸಿ ತಯಾರಿಸಿದ ಗೋಲ್ಡನ್ ಮಿಲ್ಕ್‍ನ್ನು ಪ್ರತಿದಿನ ರಾತ್ರಿ ಮಲಗುವ ಮುನ್ನ ಸೇವಿಸುವುದು.
ರೋಗ ನಿರೋಧಕ ಕಾರ್ಯತಂತ್ರ- ಎರಡನೆಯ ಹಂತ: ಗುರಿ: ಉತ್ತಮ ಹಸಿವು, ಉತ್ತಮ ನಿದ್ರೆ, ಮಾನಸಿಕ ಶಾಂತಿಯನ್ನು ಕಾಪಾಡಲು ಮತ್ತು ಪೋಷಕಾಂಶವುಳ್ಳ ಆಹಾರವನ್ನು ಒದಗಿಸುವುದರ ಜೊತೆಗೆ ಅಲ್ಪ ಪ್ರಮಾಣದ ಔಷಧಿಯೊಂದಿಗೆ ರೋಗ ನಿರೋಧಕ ಶಕ್ತಿಯನ್ನು ವರ್ಧಿಸುವುದು ಅಗತ್ಯ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ರಾಮಚಂದ್ರ ಅವರು ತಿಳಿಸಿದ್ದಾರೆ.
ಅನುಸರಿಸಬೇಕಾದ ಸೂಚನೆ: ಬಿಸಿನೀರನ್ನು ಆಗಾಗ್ಗೆ ಸೇವಿಸಿ. ತಣ್ಣೀರು ಕುಡಿಯಬೇಡಿ ಮತ್ತು ತಣ್ಣನೆಯ ಆಹಾರವನ್ನು ಸೇವಿಸಬೇಡಿ. ಸಾಮಾಜಿಕ ದೂರವನ್ನು ಕಾಪಡಿಕೊಳ್ಳಿ. ಫೇಸ್ ಮಾಸ್ಕ್ ಬಳಕೆ ಕಡ್ಡಾಯವಾಗಿದೆ. ಆಗಾಗ ಕೈಗಳನ್ನು ತೊಳೆಯಬೇಕು. ಸೀನುವಾಗ ಬಾಯಿ ಮತ್ತು ಮೂಗನ್ನು ಬಟ್ಟೆಯಿಂದ ಮುಚ್ಚಿ. ಯೋಗ ಮತ್ತು ದೈಹಿಕ ವ್ಯಾಯಾಮವನ್ನು ಅಭ್ಯಾಸ ಮಾಡಿ. ಶೀತ, ಕೆಮ್ಮು ಮತ್ತು ಜ್ವರ ಇರುವ ಜನರಿಂದ ದೂರವಿರಿ. ಕೋವಿಡ್-19 ರೋಗ ಲಕ್ಷಣಗಳು ಕಂಡು ಬಂದಲ್ಲಿ ವೈದ್ಯರನ್ನು ಸಂಪರ್ಕಿಸಿ. ಹೋಮಿಯೋಪತಿ ಔಷಧಿಗಳನ್ನು ತೆಗೆದುಕೊಳ್ಳುವ ಮೊದಲು ಹೋಮಿಯೋಪತಿ ವೈದ್ಯರನ್ನು ಸಂಪರ್ಕಿಸಬೇಕಿದೆ. ಹೋಮಿಯೋಪತಿ ಔಷಧಿ ಬಳಸಿರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ. ಸಲಹೆ ಪಾಲಿಸೋಣ ಕೊರೋನಾ ಮುಕ್ತ ದೇಶವನ್ನಾಗಿಸೋಣ ಎಂದು ಆಯುಷ್ ವೈದ್ಯಾಧಿಕಾರಿ ಅವರನ್ನು ಸಂಪರ್ಕಿಸಿ ಸೂಕ್ತ ಸಲಹೆ ಪಡೆಯಬಹುದಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿಎಚ್.ರಾಮಚಂದ್ರ ಅವರು ತಿಳಿಸಿದ್ದಾರೆ.
Author Profile
Latest News
EventsAugust 30, 2022ಮಡಿಕೇರಿ ದಸರಾ 2022 Madikeri Dasara 2022
EventsAugust 15, 2022Shanthinikethana Youth Club, Madikeri ಶಾಂತಿನಿಕೇತನ ಯುವಕ ಸಂಘ, ಮಡಿಕೇರಿ
EventsAugust 14, 2022Virajpet Ganesha Utsava 2022
Madikeri DasaraAugust 6, 2022History of Karaga Madikeri Dasara ಕರಗ ಶಕ್ತಿ ದೇವತೆಗಳ ಹಿತಿಹಾಸ