Shastavu Temple Peraje ಪೆರಾಜೆಯ ಶ್ರೀ ಶಾಸ್ತಾವು ದೇವಸ್ಥಾನದ ಕಾಲಾವಧಿ ಜಾತ್ರೋತ್ಸವ

ಪೆರಾಜೆಯ ಶ್ರೀ ಶಾಸ್ತಾವು ದೇವಸ್ಥಾನದ ಕಾಲಾವಧಿ ಜಾತ್ರೋತ್ಸವ-2022

ದಿನಾಂಕ 09-03-2022ರಿಂದ 10-04-2022ರ ತನಕ

ಧಾರ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪೆರಾಜೆಯ ಶ್ರೀ ಶಾಸ್ತಾವು ದೇವಸ್ಥಾನವು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸುಮಾರು 2000 ವರ್ಷಗಳಷ್ಟು ಪುರಾತನವೆಂಬ ನಂಬಿಕೆಯಿದೆ. ಒಂದು ದಿಕ್ಕಿನಲ್ಲಿ ತಲಕಾವೇರಿಯ ಬ್ರಹ್ಮಗಿರಿಯೊಂದಿಗೆ ಸ್ಪರ್ಧಿಸುವಷ್ಟು ಎತ್ತರದ ಕೋಳಿಕಮಲೆ. ಇನ್ನೊಂದು ದಿಕ್ಕಿನಲ್ಲಿ ಸಂಪತ್‌ ಸಮೃದ್ಧ ಪೂಮಲೆ. ಮುಂದೆ-ಹಿಂದೆ ಸುತ್ತಲೂ ಇರುವ ಹಳ್ಳ-ಕೊಳ್ಳ ಕಾಡು ಬೆಟ್ಟಗಳೆಡೆಯಲ್ಲಿ ಕೃಷಿಕ ಸಮುದಾಯದ ಪರಿಶ್ರಮದಿಂದ ತಲೆಯೆತ್ತಿದ ಹಸಿರು ತೋಟಗಳು ಇವೆಲ್ಲವುಗಳ ಜೀವರಸವಾಹಿನಿಯಾಗಿ ಹರಿಯುವ ಪಯಸ್ವಿನಿ ನದಿಯ ತಟದಲ್ಲಿ ಪ್ರಶಾಂತ ವಾತಾವರಣ ಹೊಂದಿದ ಶ್ರೀ ಶಾಸ್ತಾವು ದೇವಸ್ಥಾನವು ಈ ಊರಿನ ಮತ್ತು ಪರವೂರಿನ ಜನರ ಆಸ್ತಿಕ ಭಾವನೆಗಳನ್ನು ಪ್ರಕಾರಗೊಳಿಸುವ ಕೇಂದ್ರವಾಗಿದೆ . 

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಈ ಹಿಂದೆ ಮೂರು ಬಾರಿ ಸಂಪೂರ್ಣ ನಶಿಸಿ ಮತ್ತೆ ಪುನರ್‌ನವೀಕರಣಗೊಂಡಂತಹ ಕ್ಷೇತ್ರವೆಂಬುದು ಅಷ್ಟಮಂಗಲ ಪ್ರಶ್ನೆಯ ಆಧಾರದಲ್ಲಿ ತಿಳಿದು ಬಂದಿರುವುದು. ಸುಮಾರು 300 ವರ್ಷಗಳಿಂದೀಚೆಗೆ ಹುಲ್ಲು ಹಾಸಿನ ಮಾಡಿನಿಂದ ಇದ್ದಿರುವ ದೇವಸ್ಥಾನವನ್ನು ನಂತರ ಹೆಂಚು ಹಾಕಿ ನಿರ್ಮಿಸಿರುವುದಕ್ಕೆ ಸಾಕಷ್ಟು ಪುರಾವೆ ಆಧಾರ ಕಂಡು ಬರುವುದು. ಹಾಲೇರಿ ವಂಶದ ಲಿಂಗರಾಜನೆಂಬ ಅರಸನು ಆನೆಯ ಮೇಲೆ ಬಂದು ಜಾತ್ರೆಯನ್ನು ನಡೆಸುತ್ತಿದ್ದನು ಎಂಬುದು ಹಿರಿಯರ ಅಭಿಪ್ರಾಯ.

ಪೆರಾಜೆ ಎಂಬ ದೇವ ಭೂಮಿಯಲ್ಲಿ ಅತೀ ಪೌರಾಣಿಕ ಕಾಲದಿಂದಲೇ ಪ್ರಭಾ, ಸತ್ಯಕ, ಶಾಸ್ತಾವು ದೇವ ಸಾನಿಧ್ಯಗಳ ಮತ್ತು ದೈವಗಳ ಆರಾಧನೆಯು ಊರ ಮಹಾಜನರ ಐಕ್ಯ, ಮತ್ಯ ಬುದ್ಧಿಯಿಂದಲೂ, ಭಕ್ತಿ, ವಿಶ್ವಾಸ, ಶ್ರದ್ಧೆ ಮತ್ತು ನಂಬಿಕೆಯಿಂದ ನಡೆದು ಬಂದಿರುತ್ತದೆ. ಇಲ್ಲಿ ಶ್ರೀ ಶಾಸ್ತಾವು ದೇವರು ಪ್ರಧಾನವಾಗಿದ್ದು ʼಶನಿಗೆ ವಿಶೇಷʼ ಪರಿಹಾರ ಕಂಡುಕೊಳ್ಳುವುದಕ್ಕೆ ಸಾಧ್ಯವಾಗಿರುವುದು. ದೈವಗಳ ಆರಾಧನೆಯಲ್ಲಿ  ʼಶ್ರೀ ಕರಿಭೂತ ಕೋಮಾಳಿʼ ಭಕ್ತರ ನಂಬಿಕೆಯ ದೈವವಾಗಿದ್ದು, ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡು ನೆಮ್ಮದಿಯನ್ನು ಕಾಣುವುದಕ್ಕೆ ಸಾಧ್ಯವಾಗಿರುವುದರಿಂದ ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆಯೇ ಹೆಚ್ಚಾಗಿರುವುದು ಮತ್ತು ಧನಕನಕ ಒದಗಿ ಬರುವುದು ವಾಸ್ತವ ವಿಚಾರವಾಗಿದೆ.

ಜಾತ್ರೋತ್ಸವಕ್ಕೆ ತಮ್ಮೆಲ್ಲರನ್ನು ಆದರದಿಂದ ಆಮಂತ್ರಿಸುವ:

ಹೊನ್ನಪ್ಪ ಕೊಳಂಗಾಯ ಆಡಳಿತ ಕಾರ್ಯದರ್ಶಿ ನಿಡ್ಯಮಲೆ ಜೋಯಪ್ಪ ಸಹ ಕಾರ್ಯದರ್ಶಿ, ರಾಜಗೋಪಾಲ ರಾಮಕಜೆ ದೇವತಕ್ಕರು ಮತ್ತು ಭಾಸ್ಕರ ಕೋಡಿ, ವಿಶ್ವನಾಥ ಮೂಲೆಮಜಲು, ಪ್ರಭಾಕರ ಕೋಡಿ, ಗಣಪತಿ ಕುಂಬಳಚೇರಿ, ಪುರುಷೋತ್ತಮ ನಿಡಮಲೆ ತಕ್ಕ ಮುಖ್ಯಸ್ಥರು. ವಿಶ್ವನಾಥ ಕುಂಬಳಚೇರಿ ಆಡಳಿತ ಮೊತ್ತೇಸರರು ಆಡಳಿತ ಸಮಿತಿ ಸದಸ್ಯರುಗಳು ಹಾಗೂ ಗ್ರಾಮಸ್ಥರು ಶ್ರೀ ಶಾಸ್ತಾವು ದೇವಸ್ಥಾನ ಪೆರಾಜೆ.

ಮಾರ್ಚ್‌ 9ರಿಂದ ಕೊಡಗಿನ ಪೆರಾಜೆಯ ಶ್ರೀ ಶಾಸ್ತಾವು ದೇವಸ್ಥಾನದ ಕಾಲಾವಧಿ ಜಾತ್ರೋತ್ಸವ

ಸ್ವಸ್ತಿ ಶ್ರೀ ಭವನಾಮ ಸಂವತ್ಸರದ ಕುಂಭ ಮಾಸ 25 ರಿಂದ ಮೀನ ಮಾಸ 27 ಸಲುವ ದಿನಾಂಕ 09-03-2022ರಿಂದ 10-04-2022ರ ತನಕ ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಛಿಲತ್ತಾಯ ಪದ್ಮನಾಭ ತಂತ್ರಿಯವರ ಮಾರ್ಗದರ್ಶನದಲ್ಲಿ ಕೊಡಗಿನ ಪೆರಾಜೆಯ ಶ್ರೀ ಶಾಸ್ತಾವು ದೇವಸ್ಥಾನದ ಕಾಲಾವಧಿ ಜಾತ್ರೋತ್ಸವವು ವಿಜೃಂಭಣೆಯಿಂದ ನಡೆಯಲಿದೆ.

ಕಾರ್ಯಕ್ರಮದ ವಿವರ: 

ದಿನಾಂಕ : 09-03-2022ನೇ ಬುಧವಾರ 

ಬೆಳಿಗ್ಗೆ  9-00 ಗಂಟೆಗೆ ಜಾತ್ರೋತ್ಸವಕ್ಕೆ ಮುಹೂರ್ತದ ಗೊನೆ ಕಡಿಯುವುದು (ಪುದುವಟ್ಟು ಕಾಸು ಸ್ಥಾನದಿಂದ)  ಹಾಗೂ ಬೆಳಿಗ್ಗೆ  10-30 ಗಂಟೆಗೆ ಜಾತ್ರೋತ್ಸವದ ಬಗ್ಗೆ ಸಭೆ

ದಿನಾಂಕ : 25-03-2022ನೇ ಶುಕ್ರವಾರ  

ಬೆಳಿಗ್ಗೆ  9-00 ಗಂಟೆಗೆ   ಉಗ್ರಾಣ ತುಂಬಿಸುವುದು

ದಿನಾಂಕ : 26-03 -2022ನೇ ಶನಿವಾರ 

ಬೆಳಿಗ್ಗೆ 11-00 ಗಂಟೆಗೆ  ಕಲಶೋತ್ಸವ, ಮಧ್ಯಾಹ್ನ 12-30 ಗಂಟೆಗೆ ಮಹಾಪೂಜೆ, ಮಧ್ಯಾಹ್ನ 1-30 ಗಂಟೆಗೆ ಮಹಾಸಮಾರಾಧನೆ. 

ಸಾಯಂಕಾಲ 4-00 ಗಂಟೆಗೆ ಶ್ರೀ ಉಳ್ಳಾಗುಳ ಮಾಡದ ಅರಮನೆಯಿಂದ ಭಂಡಾರ ತರುವುದು, ಸಾಯಂಕಾಲ 5-00 ಗಂಟೆಗೆ ಮುಖ ತೋರಣ ಏರಿಸುವುದು, ಸಾಯಂಕಾಲ 5-30 ಗಂಟೆಗೆ ಶಿಸ್ತು ಅಳೆಯುವುದು,  ಸಾಯಂಕಾಲ 7-30 ಗಂಟೆಗೆ ಶ್ರೀ ದೇವರ ಭೂತಬಲಿ,  ರಾತ್ರಿ  8-00 ಗಂಟೆಗೆ  ದೇವರ ನೃತ್ಯ ಬಲಿ ನಂತರ ಕಟ್ಟೆ ಪೂಜೆ 

ದಿನಾಂಕ : 27-03-2022ನೇ ರವಿವಾರ 

ಬೆಳಿಗ್ಗೆ ಗಂಟೆ 8-40 ರಿಂದ  ರಾತ್ರಿ ಗಂಟೆ 8-00ರಿಂದ ದೇವರ ದರ್ಶನಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ.

ರಾತ್ರಿ ಗಂಟೆ 8-00ರಿಂದ ತುಳು ಕೋಲದ ಬೆಳ್ಳಾಟ 2, ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ, ತುಳು ಕೋಲ ತಿರುವಪ್ಪಗಳು 2

ದಿನಾಂಕ: 28-03-2022ನೇ ಸೋಮವಾರ 

ಮಧ್ಯಾಹ್ನ ಗಂಟೆ 12-00 ರಿಂದ ಬೇಟೆಕರಿಮಗನ್ ಈಶ್ವರನ್ ದೈವ,

ರಾತ್ರಿ ಗಂಟೆ 8-00ರಿಂದ ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ ಮತ್ತು ತುಳು ಕೋಲ 2 ರ ಬೆಳ್ಳಾಟ ಮತ್ತು ಅವುಗಳ ತಿರುವಪ್ಪಗಳು

ದಿನಾಂಕ: 29-03-2022ನೇ ಮಂಗಳವಾರ 

ಮಧ್ಯಾಹ್ನ ಗಂಟೆ 12-00ರಿಂದ ಬೇಟೆಕರಿಮಗನ್ ಈಶ್ವರನ್ ದೈವ

ರಾತ್ರಿ ಗಂಟೆ 7-40ರಿಂದ ಪಳ್ಳಿಯಾರ ಬಾಗಿಲು ತೆರೆಯುವುದು ಮತ್ತು ಕರಿಂತಿರಿ ನಾಯರ್‌, ಪುಲಿಮಾರುತನ್ ದೈವಗಳ ಬೆಳ್ಳಾಟಗಳು, ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ, ತುಳು ಕೋಲದ ಬೆಳ್ಳಾಟಗಳು 2 ಮತ್ತು ಅವುಗಳ ತಿರುವಪ್ಪಗಳು 2

ದಿನಾಂಕ:30-03-2022ನೇ ಬುಧವಾರ 

ಬೆಳಿಗ್ಗೆ ಗಂಟೆ 8-00ರಿಂದ ಕರಿಂತಿರಿ ನಾಯರ್ ದೈವ , ಪುಲಿಮಾರುತನ್ ದೈವ ಮತ್ತು ಬೇಟೆ ಕರಿಮಗನ್ ಈಶ್ವರನ್ ದೈವ

ರಾತ್ರಿ ಗಂಟೆ 8-00ರಿಂದ ಕಾಳ ಪುಲಿಯನ್ ಮತ್ತು ಮುಲಿಕಂಡನ್ ದೈವಗಳ ಬೆಳ್ಳಾಟಗಳು ನಂತರ ತುಳು ಕೋಲಗಳ ಬೆಳ್ಳಾಟ 2 ಮತ್ತು ಬೇಟೆ ಕರಿಮಗನ್ ಈಶ್ವರನ್ ಬೆಳ್ಳಾಟ, ತುಳು ಕೋಲಗಳ ತಿರುವಪ್ಪಗಳು 2  

ದಿನಾಂಕ: 31-03-2022ನೇ ಗುರುವಾರ 

ಬೆಳಿಗ್ಗೆ ಗಂಟೆ 8-00ರಿಂದ ಕಾಳ ಪುಲಿಯನ್ ಮತ್ತು ಪುಲಿಕಂಡನ್ ದೈವಗಳು, ಬೇಟೆ ಕರಿಮಗನ್ ಈಶ್ವರನ್ ದೈವ

ರಾತ್ರಿ ಗಂಟೆ 7-00ರಿಂದ ಪುಲ್ಲೂರ್ ಕಣ್ಣನ್ ಬೆಳ್ಳಾಟ 1 , ತುಳು ಕೋಲಗಳು ಬೆಳ್ಳಾಟ 1 , ಮಲೆಕಾರಿ ಬೆಳ್ಳಾಟ 1 , ವಿಷ್ಣುಮೂರ್ತಿ ತೊಡಜಲು , ರಕ್ರೇಶ್ವರಿ ತೊಡಂಜಲು , ಮೊಟ್ಟನ್ ದೈವದ ತೊಡಂಜಲು , ಬೇಟೆ ಕರಿಮಗನ್ ಬೆಳ್ಳಾಟ , ಭಗವತಿ ಕಲಶ ಬರುವುದು ಮತ್ತು ಭಗವತಿ ತೋಟ್ಟಂ , ಆಯರ್‌ ಭಗವತಿ ತೋಟ್ಟಂ , ಪುಲ್ಲೂರುಕಾಳಿ ತೋಟ್ಟಂ , ತುಳುಕೋಲ ಮತ್ತು ಮಲೆಕ್ಕಾರಿ ತಿರುವಪ್ಪಗಳು

ದಿನಾಂಕ : 01-04-2022ನೇ ಶುಕ್ರವಾರ 

ಬೆಳಿಗ್ಗೆ ಗಂಟೆ 6-00 ರಿಂದ ಪೊಟ್ಟನ್ ದೈವ , ರಕ್ತಶ್ವರಿ , ಆಯರ್‌ ಭಗವತಿ, ಪುತ್ತೂರು ಕಾಳಿ, ಪುತ್ತೂರುಕಣ್ಣನ್, ವಿಷ್ಣುಮೂರ್ತಿ ದೈವ ಮತ್ತು ಬೇಟೆಕರಿಮಗನ್ ಈಶ್ವರನ್ ದೈವ

ಮಧ್ಯಾಹ್ನ  12-30 ಗಂಟೆಗೆ  ಮಹಾಪೂಜೆ

ಮಧ್ಯಾಹ್ನ ಗಂಟೆ 1-00ರಿಂದ ಅನ್ನಸಂತರ್ಪಣೆ

ಅಪರಾಹ್ನ ಗಂಟೆ 4-00ಕ್ಕೆ ಶ್ರೀ ಭಗವತಿ ದೊಡ್ಡಮುಡಿ

ರಾತ್ರಿ ಗಂಟೆ 8-00ಕ್ಕೆ, ಪಯ್ಯೋಳಿ

ತುಲಾಭಾರ ಸೇವೆ ಮಾಡಿಸಲು ಇಚ್ಛಿಸುವವರು ಮಾರ್ಚ್ 25 ರ ಮೊದಲು ದೇವಸ್ಥಾನ ಕಛೇರಿಯಲ್ಲಿ ಹೆಸರು ನೋಂದಾಯಿಸುವುದು, ತುಲಾಭಾರ ಸೇವೆ ಮಾರ್ಚ್ 27 ರ ದೇವರ ದರ್ಶನ ಬಲಿ ದಿನ ಮಾತ್ರ.

ವಿಶೇಷ ಸೂಚನೆ: 

1.ನಿತ್ಯ ಅನ್ನಸಂತರ್ಪಣೆ ಇರುವುದರಿಂದ ಅನ್ನದಾನ ನಿಧಿಗೆ ದೇಣಿಗೆ ನೀಡಿ ರಶೀದಿ ಪಡೆಯಬೇಕಾಗಿ ವಿನಂತಿ. 

2. ಊರ ಮಹಾಜನರು ತಮ್ಮ ವಂತಿಗೆಗಳನ್ನು 25-03-2022ನೇ ಶುಕ್ರವಾರ ಅಂದರೆ ಉಗ್ರಾಣ ತುಂಬಿಸುವ ದಿವಸವೇ ತಂದು ರಶೀದಿ ಪಡೆಯಬೇಕಾಗಿ ವಿನಂತಿ.

3. ದೇವರ ಬಲಿಯ ಸಮಾರಾಧನೆ ಮತ್ತು ಬಿಟ್ಟಿ ಮಕ್ಕಳ ಊಟ ದಿನಾಂಕ 26-03-2022ನೇ ಶನಿವಾರ ಮಧ್ಯಾಹ್ನ ಗಂಟೆ 1-30ರಿಂದ 3-00ರ ವರೆಗೆ ಮತ್ತು ರಾತ್ರಿ ಅನ್ನಸಂತರ್ಪಣೆಯಿರುತ್ತದೆ. 

4. ಊರ ವಂತಿಗೆ ಕುಳುವಾರುಗಳು ಒತ್ತೆಕೋಲಕ್ಕೆ ಕೂಡುವ ದಿವಸ ಬಲಿತಟ್ಟುಗಳನ್ನು ಪ್ರತಿ ಮನೆಗಳಿಂದ ತರಬೇಕಾಗಿ ವಿನಂತಿ.

5.31-03-2022ನೇ ಗುರುವಾರ ಶ್ರೀ ಭಗವತೀ ದೇವಿಯ ಬಗ್ಗೆ ಸಮಾರಾಧನೆ ಇದೆ. ಮತ್ತು ರಾತ್ರಿ ಕುಂಬಳಚೇರಿಯ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ದೇವಸ್ಥಾನದ ಪರವಾಗಿ ಕೈವೀದು ನಡೆಯಲಿರುವುದು. 

6. ಶ್ರೀ ಕರಿಭೂತ ಕೋಮಾಳಿ ಹರಿಕೆ ಕೋಲ ನಡೆಸುವವರು 06-04-2022ನೇ ಬುಧವಾರ ಅಪರಾಹ್ನ 6-00 ಗಂಟೆಗೆ ಮುಂಚಿತವಾಗಿ ರಶೀದಿ ಪಡಕೊಳ್ಳತಕ್ಕದ್ದು , ಶ್ರೀ ಕರಿಭೂತ ಕೋಮಾಳಿ ಹರಿಕೆ ಕೋಲ ಒಂದರ ರೂ . 200 / 

7. ಹಿಂಗಾರ ಮತ್ತು ತೆಂಗಿನ ಚಿರಿಯನ್ನು ಕುಳುವಾರು ವಂತಿಗೆಯ ಮೂಲಕ ಭಕ್ತಾಧಿಗಳು 31-03-2022 ಗುರುವಾರ ಮತ್ತು 09-04-2022 ಶನಿವಾರ ಈ ಎರಡು ದಿವಸಗಳಲ್ಲಿ ತಂದು ಸಹಕರಿಸಬೇಕಾಗಿ ವಿನಂತಿ.

8. ಜೀರ್ಣೋದ್ಧಾರ ವಂತಿಗೆ ಬಾಕಿ ಎಲ್ಲ ಮೌಲ್ಯವನ್ನು ಕೊಟ್ಟು ರಶೀದಿ ಪಡೆಯಬೇಕಾಗಿ ವಿನಂತಿ.

9. ಭಕ್ತಾದಿಗಳು ಕೊಡುವ ಭಕ್ತಿ ಕಾಣಿಕೆ, ವಂತಿಗೆ ಧನಸಹಾಯವನ್ನು ಹೃತೂರ್ವಕವಾಗಿ ಸ್ವೀಕರಿಸಲಾಗುವುದು.

10. ಜಾತ್ರಾ ಸಮಯದಲ್ಲಿ ಊರ ಹಾಗೂ ಪರ ಊರ ಮಹಾಜನರು ಸಭ್ಯ ರೀತಿಯಲ್ಲಿ ವರ್ತಿಸಬೇಕಾಗಿ ಪ್ರಾರ್ಥನೆ.

11. ಗೊನೆ ಕಡಿದ ನಂತರ ಗ್ರಾಮದಲ್ಲಿ ಪ್ರಾಣಿ ಹತ್ಯೆ ನಿಷೇಧ. 

12.ಜಾತ್ರೋತ್ಸವದ ಕಾರ್ಯಕ್ರಮಗಳು ಸಮಯಕ್ಕೆ ಸರಿಯಾಗಿ ನಡೆಯುವುದು. 

13. ಜಾತ್ರೋತ್ಸವದ ಸಮಯದಲ್ಲಿ ವ್ಯಾಪಾರ ಮಾಡಲಿಚ್ಚಿಸುವವರು 9-03-2022ಕ್ಕೆ ಮುಂಚಿತವಾಗಿ ತಿಳಿಸುವಂತೆ ಕೋರಿಕೆ.

14. ಭಗವತಿ ದೊಡ್ಡ ಮುಡಿಗೆ ಹೂವು ನೀಡುವವರು ಹಣದ ರೂಪದಲ್ಲೂ ನೀಡಬಹುದು. 

15. 06-04-2022ರ ಬುಧವಾರ ಬೆಳಿಗ್ಗೆ ಗಂಟೆ 8-00ಕ್ಕೆ ಒತ್ತಕೋಲಕ್ಕೆ ಮುಹೂರ್ತದ ಕೊಳ್ಳಿ ಕಡಿಯುವುದು. ಮತ್ತು 08-04-2022ರ ಸಂಜೆಯೊಳಗೆ ಒತ್ತೆಕೋಲಕ್ಕೆ ಕೊಳ್ಳ ತಲುಪಿಸುವಂತೆ ವಿನಂತಿ (ಹಸಿ ಮರದ ಕೊಳ್ಳಿ ನಿಷೇಧ, ದಪ್ಪ ಮರದ ದಿಮ್ಮಿಗಳನ್ನು ಸೀಳಿ ತರುವುದು). 

16. ಜಾತ್ರೆ ಪ್ರಯುಕ್ತ ನಿತ್ಯ ರಾತ್ರಿ ಗಂಟೆ 8-00ರಿಂದ 9-00ತನಕ ಅನ್ನಸಂತರ್ಪಣೆಯಿರುತ್ತದೆ.

17. ತಾರೀಕು 11-04-2022ರಂದು ಬೆಳಿಗ್ಗೆ ಗಂಟೆ 9-00ರಿಂದ ದೇವಸ್ಥಾನದ ವಠಾರವನ್ನು ಸ್ವಚ್ಛಮಾಡುವ ಶ್ರಮದಾನ ಕಾರ್ಯ ನಡೆಯುತ್ತದೆ . ಸರ್ವರು ಸಹಕರಿಸಬೇಕಾಗಿ ವಿನಂತಿ.

ಸೇವೆಗಳ ವಿವರ:
  • ರುದ್ರಾಭಿಷೇಕ 50-00
  • ಶನಿಪೂಜೆ 100-00
  • ಮಹಾಪೂಜೆ 350-00
  • ಕಾರ್ತಿಕ ಪೂಜೆ ದೊಡ್ಡದು 200-00
  • ಕಾರ್ತಿಕ ಪೂಜೆ ಸಣ್ಣದು 200-00
  • ಕಡು ಪಾಯಸ 50-00
  • ಪಂಚಕಜ್ಜಾಯ 10-00
  • ಅಪ್ಪ ಕಜ್ಜಾಯ 75-00
  • ಶಾಸ್ತಾವು ಹಣ್ಣುಕಾಯಿ 2-00
  • ಗಣಪತಿ ಹಣ್ಣುಕಾಯಿ 2-00
  • ಅನ್ನಪೂರ್ಣೇಶ್ವರಿ ಹಣ್ಣುಕಾಯಿ 2-00
  • ಕರಿಭೂತ ಹಣ್ಣುಕಾಯಿ 4-00
  • ಕರಿಭೂತ ನಗದು ಹಣ್ಣುಕಾಯಿ 60-00
  • ಕರಿಭೂತ ಹರಕೆ ಕೋಲ(1ರ) 200-00
  • ಹಣ್ಣುಕಾಯಿ ನಗದು 30-00
  • ನಗದು ಬಲಿವಾಡ 50-00
  • ಬಲಿವಾಡ ರಶೀದಿ 5-00
  • ಮಂಗಳಾರತಿ 3-00
  • ಸತ್ಯನಾರಾಯಣ ಪೂಜೆ 1200-00
  • ಅನ್ನಸಂತರ್ಪಣೆ 50-00
  • (ಒಂದು ಎಲೆಗೆ)
  • ಕುಂಕುಮಾರ್ಚನೆ 25-00
  • ಗರಿಕೆ ಹೋಮ 250-00
  • ಗಣಪತಿ ಹೋಮ 500-00
  • ಹೂನಿನ ಪೂಜೆ 50-00
  • ಕಲಶ ಸ್ನಾನ 10-00
  • ವಾಹನ ಪೂಜೆ 50-00 ,100-00
  • ನಿತ್ಯ ಪೂಜೆ 200-00
  • (ಒಂದು ಹೊತ್ತಿನ) ತ್ರಿಮಧುರ ನೈವೇದ್ಯ 60-00
  • ಕ್ಷೀರಾಭಿಷೇಕ 50-00
  • ಬಿಲ್ವಾರ್ಚನೆ 50-00
  • ಪಂಚಾಮೃತ ಅಭಿಷೇಕ 50-00
  • ಕ್ಷೀರ ಪಾಯಸ 75-00
  • ನಾಗ ತಂಬಿಲ 250-00(ನಾಗರ ಪಂಚಮಿಯಂದು)
  • ನಾಗ ತಂಬಿಲ 500-00
  • (ಇತರ ದಿನದಂದ) ಸರ್ವಸೇವೆ 125-00
  • ರಂಗಪೂಜೆ 2501-00
  • ತೀರ್ಥ ಬಾಟ್ಲಿ 10-00
  • ಎಳ್ಳಣ್ಣೆ(100 ML) 30-00
  • ಪಂಚಮಿ ಪೂಜೆ 150-00
  • ನಾಗನಿಗೆ ಹಾಲು 10-00
  • ಗಣಪತಿ ಪೂಜೆ 60-00
  • ದತ್ತಿ ಪೂಜೆ 1001-00
  • ಏಕಾದಶ ರುದ್ರಾಭಿಷೇಕ 750-00
  • ಸ್ಥಳ ಕಾಣಿಕೆಗಳು :ರಾಹು ಜಪ 50-00
  • ಕೇತು ಜಪ 50-00
  • ಶನಿ ಜಪ 50-00
  • ಮೃತ್ಯುಂಜಯ ಹೋಮ 1000-00
  • ನವಗ್ರಹ ಶಾಂತಿ ಹೋಮ 1000-00
  • ದುರ್ಗಾ ಪೂಜೆ 250-00
  • ಮೃತ್ಯುಂಜಯ ಜಪ 150-00
  • ಬಣಲೆ ಸೇರಿ ಸರಸ್ವತಿ ಪೂಜೆ 250-00
  • ತುಲಾಭಾರ 501-00 (ದೇವರ ದರ್ಶನ ಬಲಿ ದಿನ ಮಾತ್ರ)
  • ಪ್ರಾರ್ಥನ ಕಾಣಿಕೆ 200-00
  • ಶುಭ ಕಾರ್ಯಗಳಿಗೆ 500-00

ಪೆರಾಜೆಯ ಶ್ರೀ ಶಾಸ್ತಾವು ದೇವಸ್ಥಾನದ ಕಾಲಾವಧಿ ಜಾತ್ರೋತ್ಸವಕ್ಕೆ ಶುಭಕೋರುವವರು

ಚಂದ್ರಕಲಾ ಬಾಲಚಂದ್ರ: ಅಧ್ಯಕ್ಷರು

ಕೆ ಜಯಲಕ್ಷ್ಮಿ ಧರಣೀಧರ: ಉಪಾಧ್ಯಕ್ಷರು

ಸುರೇಶ್‌ ಪೆರುಮುಂಡಾ:  ಸದಸ್ಯರು

ಪೂರ್ಣಿಮಾ ಉದಯಕುಮಾರ: ಸದಸ್ಯರು

ನಂಜಪ್ಪ ನಿಡ್ಯಮಲೆ:      ಸದಸ್ಯರು

ಉದಯಚಂದ್ರ ಕುಂಬಳಚೇರಿ: ಸದಸ್ಯರು

ಕನಕಾಂಭಿಕೆ  : ಸದಸ್ಯರು

ಆಶಾ ಕೊಳಮಗಯಾ: ಸದಸ್ಯರು

ವಸಂತಿ :

ಚಂದ್ರಿಕಾ .ಕೆ.ಎ. : 

ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

Comments are closed.