ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನ ಕಲ್ಲುಗುಂಡಿ ಒತ್ತೆಕೋಲ-2022
ದಿನಾಂಕ 27-03-2022ರಿಂದ 30-03-2022ರ ತನಕ
ಕಲ್ಲುಗುಂಡಿ: ಒಂದು ಶತಮಾನಕ್ಕೂ ಅಧಿಕ ವರ್ಷಗಳ ಇತಿಹಾಸ ಹೊಂದಿರುವ ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಮಾರ್ಚ್ 27ರಿಂದ ಒತ್ತೆಕೋಲ ನಡೆಯಲಿದೆ. ಎಂದು ದೈವಸ್ಥಾನದ ಆಡಳಿತ ಮಂಡಳಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ಇಲ್ಲಿನ ಶ್ರೀ ಮಹಾವಿಷ್ಣು ಮೂರ್ತಿ ದೈವದ ಒತ್ತೆಕೋಲಕ್ಕೆ ಕಳೆದ ಮಾರ್ಚ್ 14ರಂದು ಮೂಹೂರ್ತದ ಕೊಳ್ಳಿ ಕಡಿಯುವ ಕಾರ್ಯಕ್ರಮ ನಡೆಯಿತು. ದೈವದ ಪೂಜಾರಿಗಳು ಸೇರಿದಂತೆ ಹಲವಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಾ.27, 29ರಂದು ಒತ್ತೆಕೋಲ ನಡೆಯಲಿದೆ. ಈ ಸಲ ಒತ್ತೆಕೋಲ ಒಟ್ಟು 5 ದಿನಗಳ ಕಾಲ ನಡೆಯುತ್ತಿರುವುದು ವಿಶೇಷ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಅತೀ ಎತ್ತರದ ದೊಡ್ಡ ಮೇಲೇರಿಯನ್ನು ಹಾಕಿ ವಿಷ್ಣುಮೂರ್ತಿ ದೈವ ಅಗ್ನಿ ಸೇವೆ ನಡೆಸುವ ಕಲ್ಲುಗುಂಡಿ ಒತ್ತೆಕೋಲ ಪ್ರಸಿದ್ಧವಾದುದು ಮತ್ತು ಅಪರೂಪವಾದುದು. ಎತ್ತರವಾದ ಮೇಲೆರಿಯ ಮೇಲೆ ನಡೆಸುವ ಕೆಂಡ ಸೇವೆಯೂ ಇಲ್ಲಿ ವಿಸ್ಮಯವನ್ನು ಸೃಷ್ಠಿಸುತ್ತದೆ.
ಶ್ರೀ ರಕ್ತೇಶ್ವರಿ ದೈವ ಮತ್ತು ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೈವದ ಕೋಲ ಹಾಗೂ ಶ್ರೀ ಮಹಾವಿಷ್ಣುಮೂರ್ತಿ ದೈವದ ಬೈಲುಕೋಲ, ಪೊಟ್ಟ ಮತ್ತು ಗುಳಿಗ ಪಂಜುರ್ಲಿ ಮತ್ತು ಕಲ್ಲುರ್ಟಿ ಹಾಗೂ ಗುಳಿಗ ದೈವಗಳ ಕೋಲ
ಕಾರ್ಯಕ್ರಮದ ವಿವರ:
ತಾರೀಕು. 27-03-2022 ನೇ ಆದಿತ್ಯವಾರ
ಬೆಳಿಗ್ಗೆ 6.00 ಗಂಟೆಗೆ ಗಣಹೋಮ(ದೈವಸ್ಥಾನದಲ್ಲಿ). ರಾತ್ರಿ 7.30 ಗಂಟೆಗೆ ದೈವಸ್ಥಾನದಿಂದ ಶ್ರೀ ರಕ್ತೇಶ್ವರಿ, ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೈವಗಳ ಭಂಡಾರ ಹೊರಡುವುದು, ರಾತ್ರಿ 8.30 ಗಂಟೆಗೆ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೈವದ ಕೋಲ, ಪ್ರಸಾದ ವಿತರಣೆ(ಒತ್ತೆಕೋಲದ ಗದ್ದೆಯಲ್ಲಿ) ರಾತ್ರಿ 10.00 ಗಂಟೆಗೆ ಶ್ರೀ ರಕ್ತೇಶ್ವರಿ ದೈವದ ಕೋಲ, ಪ್ರಸಾದ ವಿತರಣೆ(ಒತ್ತೆಕೋಲದ ಗದ್ದೆಯಲ್ಲಿ)
ತಾರೀಕು. 28-03-2022 ನೇ ಸೋಮವಾರದಂದು
ರಾತ್ರಿ 7.00 ಗಂಟೆಗೆ ಶ್ರೀ ಮಹಾವಿಷ್ಣುಮೂರ್ತಿ ದೈವಸ್ತಾನದಿಂದ ಭಂಡಾರ ಹೊರಡುವುದು. ರಾತ್ರಿ 9.00 ಗಂಟೆಗೆ ಮೇಲೇರಿಗೆ ಅಗ್ನಿಸ್ಪರ್ಶ, ಮಹಾ ಅನ್ನ ಸಂತರ್ಪಣೆ. ರಾತ್ರಿ 12.30 ಗಂಟೆಗೆ ಕುಲ್ಚಾಟ ಹೊರಡುವುದು
ತಾರೀಕು. 29-03-2022 ನೇ ಮಂಗಳವಾರದಂದು:
ಬೆಳಿಗ್ಗೆ 6.00 ಗಂಟೆಗೆ ಅಗ್ನಿ ಪ್ರವೇಶ. 8.00 ಗಂಟೆಗೆ ಪ್ರಸಾದ ವಿತರಣೆ. 9.00 ಗಂಟೆಗೆ ಮಾರಿಕಳ ಪ್ರವೇಶ. ಮಾರಿಕಳದಿಂದ ಬಂದ ನಂತರ ಹರಿಕೆಗಳ ಸುರಿಗೆಗಳನ್ನು ಒಪ್ಪಿಸುವುದು ನಂತ್ರ ಪ್ರಸಾದ ವಿತರಣೆ ಮುಂದುವರೆಯುವುದು. ರಾತ್ರಿ 8.00 ಗಂಟೆಯಿಂದ ಶ್ರೀ ಮಹಾವಿಷ್ಣುಮೂರ್ತಿ ದೈವದ ತೊಡಂಗಲ್(ದೈವಸ್ಥಾನದಲ್ಲಿ) ರಾತ್ರಿ 9.00 ಗಂಟೆಯಿಂದ ಪೊಟ್ಟ ದೈವದ ಕೋಲ ಮತ್ತು ಪ್ರಸಾದ ವಿತರಣೆ(ದೈವಸ್ಥಾನದಲ್ಲಿ)
ತಾರೀಕು. 30-03-2022 ನೇ ಬುಧವಾರದಂದು:
ಬೆಳಿಗ್ಗೆ 8.30 ರಿಂದ ಶ್ರೀ ಮಹಾವಿಷ್ಣುಮೂರ್ತಿ ದೈವದ ಬೈಲು ಕೋಲ ಮತ್ತು ಗುಳಿಗ ದೈವದ ಕೋಲ ಮತ್ತು ಪ್ರಸಾದ ವಿತರಣೆ. ಸಂಜೆ 5.30 ಗಂಟೆಯಿಂದ ಪಂಜುರ್ಲಿ ಮತ್ತು ಕಲ್ಲುರ್ಟಿ ಹಾಗೂ ಗುಳಿಗ ದೈವಗಳ ಕೋಲ ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ( ಕಿಲಾರು ಕಟ್ಟೆ ಬಳಿ)