ಕೊಡೇಂದೇರ ಪಿ. ಗಣಪತಿ( ಬಾಂಡ್ ಗಣಪತಿ), ಸಹಕಾರಿಗಳು: ಹಾತೂರು – Hathur
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ವಿರಾಜಪೇಟೆ-ಗೋಣಿಕೊಪ್ಪಲು ಹೆದ್ದಾರಿಯಲ್ಲಿನ ಮಾರ್ಗದಲ್ಲಿ ಸಿಗುವ ಹಾತೂರು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿನ ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕೊಡೇಂದೇರ ಪಿ. ಗಣಪತಿ( ಬಾಂಡ್ ಗಣಪತಿ) ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬಾಂಡ್ ಗಣಪತಿಯವರ ತಂದೆ ದಿವಂಗತ ಕೊಡೇಂದೇರ ಸಿ. ಪೂವಯ್ಯನವರು 1991 ರಿಂದ 1997 ರವರಗೆ ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ತಂದೆಯವರ ಸಹಕಾರ ಕ್ಷೇತ್ರದಲ್ಲಿನ ಉತ್ತಮವಾದ ಸೇವೆಯನ್ನು ಮನಗಂಡ ಬಾಂಡ್ ಗಣಪತಿಯವರ ಸಾಮಾಜಿಕ ಸೇವೆಯನ್ನು ಮಾಡುವ ಅಭಿಲಾಷೆಯಿಂದ ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು.
ಸಾಮಾಜಿಕ ಸೇವೆ ಮಾಡುವ ನಿಟ್ಟಿನಲ್ಲಿ 2005ರಲ್ಲಿ ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡ ಬಾಂಡ್ ಗಣಪತಿಯವರು ಗ್ರಾಮ ಪಂಚಾಯಿತಿಯ ಸದಸ್ಯರಾಗಿ ಐದು ವರ್ಷಗಳ ಕಾಲ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದರು. ತದ ನಂತರ ಅಂದಿನ ದಿನಮಾನಗಳಲ್ಲಿ ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸದಸ್ಯರು ಹಾಗೂ ರೈತರಿಗೆ ಬೇಕಾದ ಸೌಲಭ್ಯಗಳನ್ನು ನೀಡಲು ಅಂದಿನ ಆಡಳಿತವು ವಿಫಲವಾಗಿತ್ತು.
ಆ ಮೂಲಕ ಸಂಘವು ನಷ್ಟದ ಹಾದಿಯಲ್ಲಿ ಸಾಗುವ ಸಂದರ್ಭದಲ್ಲಿ ಸಂಘದ ಕಾರ್ಯ ವ್ಯಾಪ್ತಿಯ ಬಾಂಡ್ ಗಣಪತಿಯವರ ಹಿತೈಷಿಗಳು ಹಾಗೂ ಗ್ರಾಮಸ್ಥರ ಕೋರಿಕೆಯ ಮೇರೆಗೆ ಸಂಘವನ್ನು ನಷ್ಟದಿಂದ ಪಾರು ಮಾಡಿ ಪ್ರಗತಿಯತ್ತ ಕೊಂಡೊಯ್ಯಲು 2008ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸಂಘದ ಚುನಾವಣೆಯಲ್ಲಿ ಜಯಗಳಿಸಿ ಮೊದಲ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಗೊಂಡು ಕಾರ್ಯನಿರ್ವಹಿಸಿದ್ದರು. I ನಿಟ್ಟಿನಲ್ಲಿ ಸಹಕಾರ ರಂಗದಲ್ಲಿ ತಮ್ಮನ್ನು ಪೂರ್ಣ ಮಟ್ಟದಲ್ಲಿ ತೊಡಗಿಸಿಕೊಂಡರು.
2013ರಲ್ಲಿ ನಡೆದ ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ 2ನೇ ಬಾರಿಗೆ ಆಯ್ಕೆಗೊಂಡು ಅಧ್ಯಕ್ಷರಾದರು. ನಂತರ 2018ರ ಚುನಾವಣೆಯಲ್ಲಿ ಮರಳಿ ಆಯ್ಕೆಗೊಂಡು ಅಧ್ಯಕ್ಷರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ. 1991ರಲ್ಲಿ ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯತ್ವ ಪಡೆದ ಬಾಂಡ್ ಗಣಪತಿಯವರು ಸರಿ ಸುಮಾರು 31 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.
2008ರಲ್ಲಿ ನಾನು ಅಧ್ಯಕ್ಷನಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕೆ.ಸಿ.ಸಿ. ಸಾಲದ ವ್ಯವಸ್ಥೆ, ರೈತರಿಗೆ 150 ಟನ್ ಗೊಬ್ಬರ ವಿತರಣೆ ಹಾಗೂ ಪಡಿತರ ವಿತರಣಾ ವ್ಯವಸ್ಥೆ ಮಾತ್ರವಿದ್ದು, ಬೇರೆ ಸೌಲಭ್ಯಗಳಿರಲಿಲ್ಲ ಎಂದ ಬಾಂಡ್ ಗಣಪತಿಯವರು, ಹಾಗೆ ಸಂಘವು ನಷ್ಟದ ಹಾದಿಯಲ್ಲಿರುವ ಸಂದರ್ಭದಲ್ಲಿ ದೂರದೃಷ್ಟಿಯನ್ನು ಹೊಂದಿ ಸಂಘದ ಸದಸ್ಯರಿಂದ ನಿರಖು ಠೇವಣಿ ಸಂಗ್ರಹ ಮಾಡುವ ಮೂಲಕ ಸಂಘಕ್ಕೆ ಸ್ವಂತ ಬಂಡವಾಳ ಕ್ರೋಡಿಕರಣ ಮಾಡಿ ಸದ್ಯರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡುವ ನಿಟ್ಟಿನಲ್ಲಿ ಹೆಜ್ಜೆಯಿಡಲಾಯಿತು ಎಂದು ತಿಳಿಸಿದರು.
ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ಸಂದರ್ಭ ಬಾಂಡ್ ಗಣಪತಿಯವರು ಮೊದಲ ಬಾರಿಗೆ ಆಭರಣ ಸಾಲ, ಜಾಂಇನು ಸಾಲ, ಗೊಬ್ಬರ ಸಾಲ, ಪಿಗ್ಮಿ ಆಧಾರಿತ ಓ.ಡಿ. ಸಾಲ, ವಾಹನ ಸಾಲ, ಆಸಾಮಿ ಸಾಲ, ಸ್ವಸಹಾಯ ಸಂಘಗಳಿಗೆ ಸಾಲ ಹಾಗೂ ಮುಂತಾದ
ರೀತಿಯ ಸಾಲಗಲ ಮುಖಾಂತರ ವರ್ಷದಿಂದ ವರ್ಷಕ್ಕೆ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಿವಿಧ ರೀತಿಯ ಸೌಲಭ್ಯಗಳನ್ನು ನೀಡುವಲ್ಲಿ ಮುಂದಡಿಯಿಟ್ಟರು. ಹಾಗೆ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ 1000 ಟನ್ ಸಾಮರ್ಥ್ಯದ ಗೋದಾಮು ನಿರ್ಮಿಸಿ ಸಂಘದ ಸದಸ್ಯರ ಕಾಫಿ, ಕರಿಮೆಣಸು ಹಾಗೂ ಭತ್ತ ದಾಸ್ತಾನು ಮಾಡಿ ಅಡಮಾನ ಸಾಲವನ್ನು ಪ್ರಾಂಭಿಸಿದರು.
ಡಿ.ಸಿ.ಸಿ. ಬ್ಯಾಂಕಿನಿಂದ ಕೊಡಲ್ಪಡುತ್ತಿದ್ದ ಮಧ್ಯಮಾವಧಿ ಸಾಲವನ್ನು ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದಲೇ 2010ರಲ್ಲಿ ಪ್ರಾರಂಭಿಸಿ 2019ರಿಂದ 10 ವರ್ಷಗಳ ಕಾಲದ ದೀರ್ಘಾವಧಿ ಸಾಲವಾಗಿ ಪರಿವರ್ತಿಸಲಾಗಹಿದೆ ಎಂದ ಬಾಂಡ್ ಗಣಪತಿಯವರು, ಸಂಘದ ಸದಸ್ಯರಿಗೆ ಅನುಕೂಲವಾಗುವ ದೃಷ್ಠಿಯಿಂದ ಲಾಕರ್ ವ್ಯವಸ್ಥೆ, ಸಂಘದ ಸಂಪೂರ್ಣ ವಹಿವಾಟನ್ನು ಡಿಜಿಟಲೈಸೇಷನ್ ಮಾಡಲಾಗಿದೆ ಎಂದರು. ಅಂದಾಜು 22 ಲಕ್ಷ ವೆಚ್ಚದಲ್ಲಿ ಗೊಬ್ಬರ ಗೋದಾಮು ನಿರ್ಮಾಣ,, ಕೃಷಿ ಪರಿಕರಗಳ ಮಾರಾಟ ಮಳಿಗೆ, ಕೀಟನಾಶಕ ಮಾರಾಟ ಮಳಿಗೆ , 2019-20 ರಲ್ಲಿ ಸುಮಾರು 22 ಲಕ್ಷ ವೆಚ್ಚದಲ್ಲಿ ಆಡಳಿತ ಮಂಡಳಿ ಕಛೇರಿ ಹಾಗೂ ಸಭಾಂಗಣ ನಿರ್ಮಾಣ, 37 ಲಕ್ಷ ಅಂದಾಜು ವೆಚ್ಚದಲ್ಲಿ ಆತ್ಮನಿರ್ಭರ ಭಾರತ್ ಮಲ್ಟಿ ಸರ್ವಿಸ್ ಸೆಂಟರ್ ಗೋದಾಮು ನಿರ್ಮಾಣ ಮಾಡಲು ನೀಲಿ ನಕ್ಷೆ ತಯಾರಿ ಮಾಡಲಾಗಿದ್ದು, ಡಿಸಿಸಿ ಬ್ಯಾಂಕ್ ಹಾಗೂ ಅಪೆಕ್ಸ್ ಬ್ಯಾಂಕ್ ಮೂಲಕ ನಬಾರ್ಡ್‌ಗೆ ಪ್ರಸ್ಥಾವನೆ ಸಲ್ಲಿಸಲಾಗಿದೆ. ಇದರಲ್ಲಿ 1000 ಟನ್ ಸಾಮರ್ಥ್ಯದ ಗೊಬ್ಬರ ದಾಸ್ತಾನು ಮಾಡು ವ್ಯವಸ್ಥೆ ಇದೆ ಎಂದು ಈ ಸಂದರ್ಭದಲ್ಲಿ ಬಾಂಡ್ ಗಣಪತಿ ತಿಳಿಸಿದರು.
ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣವು 1 ಎಕರೆ 50 ಸೆಂಟಿನಷ್ಟಿದ್ದು, ಅದರಲ್ಲಿ 1 ಎಕರೆ ಕಾಫಿ ತೋಟ ಮತ್ತು 50 ಸೆಂಟಿನಷ್ಟು ಜಾಗ ದಲ್ಲಿ ಸಂಘದ ಆಡಳಿತ ಕಛೇರಿ, ಸಭಾಂಗಣ, ಕೃಷಿ ಪರಿಕರಗಳ ಮಳಿಗೆ ಹಾಗೂ ಗೋದಾಮು ಇದೆ ಎಂದ ಬಾಂಡ್ ಗಣಪತಿಯವರು, ಸಂಘದ ಸುತ್ತ 10 ಲಕ್ಷದ ಅನುದಾನದಲ್ಲಿ ಕೊಡಗು ಜಿಲ್ಲಾ ಪಂಚಾಯಿತಿ ವತಿಯಿಂದ ಡಾಂಬರು ರಸ್ತೆ ನಿರ್ಮಿಸಲಾಗಿದೆ ಎಂದರು. ಹಾಗೆ ಸಂಘದ ಸುತ್ತ ಆವರಣಗೊಡೆಯನ್ನು ನಿರ್ಮಿಸಿದ್ದು ಸಂಘದ ಆವರಣದೊಳಗಿನ ಅತಿಕ್ರಮ ಪ್ರವೇಶ ನಿಶಿದ್ಧವಾಗಿದೆ ಎಂದು ತಿಳಿಸಿದರು. ಅಪೆಕ್ಸ್ ಬಾಂಕಿನಿಂದ 15 ಲಕ್ಷ ಸಹಾಯದನವನ್ನು ಸಂಘವು ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಬಾಂಡ್ ಗಣಪತಿ ಈ ಸಂದರ್ಭದಲ್ಲಿ ತಿಳಿಸಿದರು.
ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗಲು ಸದಸ್ಯರಿಗೆ ನೀಡಲಾದ ಸಾಲಗಳ ಶೇಕಡ 99% ರಷ್ಟು ಸಕಾಲ ಮರುಪಾವತಿ, ಗೊಬ್ಬರ ಮಾರಾವು 2021ರ ಏಪ್ರಿಲ್ ನಿಂದ ಜೂನ್ 30ರವರಗೆ ಅಂದರೆ ಕೇವಲ 90 ದಿನಗಳಲ್ಲಿ 1257 ಟನ್ ನಷ್ಟು ದಾಖಲೆಯ ಗೊಬ್ಬರ ಮಾರಾಟವಾಗಿರುದು ಕಾರಣವಾಗಿದೆ. 2020-21 ನೇ ಸಾಲಿನಲ್ಲಿ 35 ಲಕ್ಷ ನಿವ್ವಳ ಲಾಭದ ನಿರಿಕ್ಷೇಯಲ್ಲಿದ್ದೇವೆ ಎಂದ ಬಾಂಡ್ ಗಣಪತಿ,
ಮುಂದಿನ ದಿನಮಾನಗಳಲ್ಲಿ ಸಂಘದ ಸದಸ್ಯರು ಹಾಗೂ ರೈತರಿಗೆ ಮನೆಕಟ್ಟಲು ಸಾಲ, ಮನೆ ದುರಸ್ಥಿ ಮಾಡಲು ಸಾಲ, ಗೃಹಪಯೋಗಿ ಬಳಕೆ ಸಾಲಗಳನ್ನು ಕೊಡುವುವ ಮೂಲಕ ಸಂಘದ ಸದಸ್ಯರಿಗೆ ಇನ್ನಷ್ಷು ಸೌಲಭ್ಯಗಳನ್ನು ನೀಡಲಾಗುವುದು ಎಂದ ಬಾಂಡ್ ಗಣಪತಿಯವರು, ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಅಭಿವೃದ್ದಿಯತ್ತ ಕೊಂಡೊಯ್ಯೊಲು ಶ್ರಮವಹಿಸುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.
ಹಾತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಲಾಭವನ್ನು ಹೊಂದಿ ಪ್ರಗತಿಯತ್ತ ಸಾಗಲು ಸಂಘದ ಆಡಳಿತ ಮಂಡಳಿ, ಸದಸ್ಯರು, ಸಿಬ್ಬಂದಿಗಳು ಹಾಗೂ ಗ್ರಾಹಕರ ಸಹಕಾರ ಅತ್ಯುತ್ತಮವಾಗಿ ದೊರಕುತಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದ ಬಾಂಡ್ ಗಣಪತಿ, ಸಹಕಾರ ಕ್ಷೇತ್ರಕ್ಕೆ ತನ್ನದೆ ಆದ ಇತಿಹಾಸವಿದ್ದು, ಪಾರದಶರ್ಕ ಆಡಳಿತ, ಸೇವಾ ಮನೋಭಾವನೆಯಿಂದ ಕೂಡಿದ ಸಹಕಾರಿಗಳು ಇದ್ದರೆ ಸಹಕಾರ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಎಂದರು. ಸರ
್ಕಾರದ ಹಸ್ತಕ್ಷೇಪ ಸಹಕಾರ ಸಂಘಗಳಲ್ಲಿ ಇರಬಾರದು ಹಾಗೆ ಸಹಕಾರ ಕ್ಷೇತ್ರವು ಸಹಕಾರ ಕ್ಷೇತ್ರವಾಗಿಯೇ ಉಳಿಯಬೇಕು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ಹೆಚ್ಚು ಯುವಶಕ್ತಿಯು ಪಾಲ್ಗೊಂಡು ಸೇವಾ ಮನೋಭಾವದಿಂದ ಸ್ವಾರ್ಥರಹಿತವಾಗಿ ಆತ್ಮತೃಪ್ತಿಯಿಂದ ಸೇವೆ ಸಲ್ಲಿಸಬೇಕು ಹಾಗೂ ಹಿರಿಯ ಸಹಕಾರಿಗಳಿಂದ ಸಲಹೆ ಸೂಚನೆಗಳನ್ನು ಪಡೆದು ಸಹಕಾರ ಕ್ಷೇತ್ರದ ಪ್ರಗತಿಗೆ ತಮ್ಮನ್ನು ತೊಡಿಗಿಸಿಕೊಳ್ಳಬೇಕು ಎಂದು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ ಭಾವಿ ಯುವಶಕ್ತಿಗೆ ಬಾಂಡ್ ಗಣಪತಿಯವರು, ತಮ್ಮ ಸಂದೇಶವನ್ನು ಈ ಸಂದರ್ಭದಲ್ಲಿ ನೀಡಿದರು.
ಸಹಕಾರ ಕ್ಷೇತ್ರದ ಇನ್ನೊಂದು ಮಜಲಾದ ಕುಂದ ಈಚೂರು ಸಹಕಾರ ಧವಸ ಭಂಡಾರದಲ್ಲಿ 2003 ಸದಸ್ಯರಾಗಿ ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಗೋಣಿಕೊಪ್ಪಲು APCMS ನ 2010ರ ಚುನಾವಣೆಯಲ್ಲಿ ಆಯ್ಕೆಗೊಂಡು ನಿರ್ದೇಶಕರಾಗಿ ಕಾರ್ಯನಿರ್ವಹಣೆ. 2015ರಲ್ಲಿ ಆಯ್ಕೆಗೊಂಡು ನಿರ್ದೇಶಕರಾಗಿ ಕಾರ್ಯನಿರ್ವಹಣೆ. 2020ರಲ್ಲಿ ಚುನಾವಣೆಯಲ್ಲಿ ಆಯ್ಕೆಗೊಂಡು ಪ್ರಸ್ತುತ ನಿರ್ದೆಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೊಡಗು ಡಿಸಿಸಿ ಬ್ಯಾಂಕ್‌ನ ನಿರ್ದೇಶಕರಾಗಿ 2014ರಲ್ಲಿ ಆಯ್ಕೆಗೊಂಡು ಸೇವೆ. 2019ರ ಕೊಡಗು ಡಿಸಿಸಿ ಬ್ಯಾಂಕ್‌ನ ಚುನಾವಣೆಯಲ್ಲಿ ಆಯ್ಕೆಗೊಂಡು ಅಧ್ಯಕ್ಷರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದಾರೆ. 2015-20ರ ಸಾಲಿನ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್‌ನ ನಿರ್ದೇಶಕರಾಗಿ ಸೇವೆ. 2021-26ರ ಸಾಲಿನ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್‌ನ ನಿರ್ದೇಶಕರಾಗಿ ಪ್ರಸ್ತುತ ಸೇವೆ. ಕಳೆದ 6ವರ್ಷಗಳ ಅವಧಿಯಲ್ಲಿ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್‌ನ 1 ಕೋಟಿಗೂ ಸುಮಾರು ಸಹಾಯಧನವನ್ನು ಪಡೆದುಕೊಳ್ಳುವುದರ ಮೂಲಕ ಜಿಲ್ಲೆಯ ಸಹಕಾರ ಸಂಘಗಳಿಗೆ ಅನುಧಾನ ಹಂಚಿಕೆ ಮಾಡುವ ಮೂಲಕ ಕೊಡಗು ಜಿಲ್ಲಾ ಸಹಕಾರ ಸಂಗಗಳ ಅಭಿವೃದ್ಧಿಗೆ ದುಡಿದಿದ್ದಾರೆ.
ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಬಾಂಡ್ ಗಣಪತಿಯವರು, 2005 ರಿಂದ 2010 ರವರಗೆ ಬಿ.ಶೆಟ್ಟಿಗೇರಿ ಗ್ರಾಮಪಂಚಾಯಿತಿ ಸದಸ್ಯರಾಗಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 2011ರಲ್ಲಿ ಕೊಡಗು ಜಿಲ್ಲಾ ಪಂಚಾಯಿತಿಗೆ ಬಿಟ್ಟಂಗಾಲ ಕ್ಷೇತ್ರದಿಂದ ಆಯ್ಕೆ ನಂತರ ಕೊಡಗು ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸೇವೆ. ಬಿ.ಜೆ.ಪಿ.ಯ ಸಕ್ರೀಯ ಕಾರ್ಯಕರ್ತರಾಗಿದ್ದು, ಕೊಡಗು ಜಿಲ್ಲಾ ಬಿ.ಜೆ.ಪಿ. ಜಿಲ್ಲಾ ಸಮಿತಿಯ ವಿಶೇಷ ಆಹ್ವಾನಿತರಾಗಿದ್ದಾರೆ. ಕುಂದ ವಿಷ್ಣುಮೂರ್ತಿ ದೇವಾಲಯ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ ಸಾಮಾಜಿಕ ಕ್ಷೇತ್ರದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಮೂಲತಃ ಕೃಷಿಕರಾಗಿರುವ ಕೊಡೇಂದೇರ ಪಿ. ಗಣಪತಿ( ಬಾಂಡ್ ಗಣಪತಿ) ಯವರು, ದಿವಂಗತ ಕೆ.ಸಿ. ಪೂವಯ್ಯ ಹಾಗೂ ಪುಷ್ಪಾ ಪೂವಯ್ಯ ದಂಪತಿಯ ಹಿರಿಯ ಮಗನಾಗಿದ್ದಾರೆ. ಪತ್ನಿ ಗ್ರೇಷ್ಮಾ ಗಣಪತಿ ಗೃಹಿಣಿಯಾಗಿದ್ದಾರೆ. ಮಗಳು ದೀಯಾ ಗಣಪತಿ ಇಂಜಿನಿಯರಿಂಗ್ ವ್ಯಾಸಂಗ ನಿರತರಾಗಿದ್ದಾರೆ. ಮಗ ಧ್ಯಾನ್ ಗಣಪತಿ ಪಶು ವೈದ್ಯಕೀಯಾ ಪಧವಿ ವ್ಯಾಸಂಗ ನಿರತರಾಗಿದ್ದಾರೆ. ಬಾಂಡ್ ಗಣಪತಿಯವರು ಪ್ರಸ್ತುತ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದ ಗ್ರಾಮದಲ್ಲಿ ಕುಟುಂಬ ಸಮೇತ ನೆಲೆಸಿದ್ದಾರೆ.
ಕೊಡಗಿನ ಮಣ್ಣಿನಲ್ಲಿ ಹುಟ್ಟಿ ಕೊಡಗಿಗೆ ದ್ರೋಹವಾಗದ ರೀತಿಯಲ್ಲಿ ಸಹಕಾರ ಮನೋಭಾವದಿಂದ ತಾನು ಪರರಿಗೆ ಪರರು ತನಗೆ ಎಂಬ ಧ್ಯೇಯ ವಾಕ್ಯದಂತೆ ಪ್ರಾಮಾಣಿಕ ಪಾರದರ್ಶಕ ಸ್ವಾರ್ಥ ರಹಿತ ಆಡಳಿತ ನಡೆಸುವ ಆಧ್ಯತೆಯೊಂದಿಗೆ ತಮ್ಮನ್ನು ತೊಡಗಿಸಿಕೊಂಡಿರುವ ಕೊಡೇಂದೇರ ಪಿ. ಗಣಪತಿ( ಬಾಂಡ್ ಗಣಪತಿ) ಯವರ ಸಹಕಾರ, ಸಾಮಾಜಿಕ ಹಾಗೂ ರಾಜಕೀಯ ಸೇವೆಯು ಹೀಗೆ ನಿರಂತರವಾಗಿ
ಮುಂದುವರೆಯಲಿ ಎಂದು “ಸರ್ಚ್ ಕೂರ್ಗ್ ಮೀಡಿಯಾ” ವು ಹಾರೈಸುತ್ತದೆ.
ಸಂದರ್ಶನದ ದಿನಾಂಕ: 14-08-2021
Search Coorg Media
Coorg’s Largest Online Media Network