ಪಾಲಚಂಡ ಅಚ್ಚಯ್ಯ(ಟ್ಯೂಟು), ಸಹಕಾರಿಗಳು: ನೆಲ್ಲಿಹುದಿಕೇರಿ – Nellihudikeri
ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ನೆಲ್ಲಿಹುದಿಕೇರಿಯ ಬೆಟ್ಟದಕಾಡು ಗ್ರಾಮದವರಾದ ಪಾಲಚಂಡ ಅಚ್ಚಯ್ಯ(ಟ್ಯೂಟು)ನವರು ಅಭ್ಯತ್‌ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಾಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪಾಲಚಂಡ ಅಚ್ಚಯ್ಯ(ಟ್ಯೂಟು)ನವರು ಕಳೆದ ಎರಡೂವರೆ ವರ್ಷಗಳಿಂದ ಅಧ್ಯಕ್ಷರಾಗಿ ಅಭ್ಯತ್‌ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರೀಯುತರು ಅದಕ್ಕೂ ಮುನ್ನ ಉಪಾಧ್ಯಕ್ಷರಾಗಿಯೂ ನಿರ್ದೇಶಕರಾಗಿಯೂ ಕರ್ತವ್ಯ ಮಾಡಿರುತ್ತಾರೆ. ಕಳೆದ 20 ವರ್ಷಗಳಿಂದ ಸಂಘದ ಸದಸ್ಯರಾಗಿದ್ದಾರೆ.
ಅಭ್ಯತ್‌ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2019 ಮತ್ತು 20 ರ ವಾರ್ಷಿಕ ವರ್ಷದಲ್ಲಿ 45 ಲಕ್ಷಗಳ ಲಾಭಾಂಶದಲ್ಲಿದೆ. ಠೇವಣಿ ಸಂಗ್ರಹ ಅಧಿಕವಾಗಿದ್ದು, ಗೊಬ್ಬರ ವ್ಯಾಪಾರದಲ್ಲಿ 40ಲಕ್ಷ ಲಾಭ, 2019-20ರಲ್ಲಿ ಬ್ಯಾಂಕಿನ ವ್ಯವಹಾರ 108 ಕೋಟಿಯಷ್ಟು ತಲುಪಿದೆ ಎಂದು ಪಾಲಚಂಡ ಅಚ್ಚಯ್ಯ(ಟ್ಯೂಟು)ನವರು ತಿಳಿಸಿದರು.
3400 ಎಸ್.ಬಿ. ಅಕೌಂಟ್ ಹೋಲ್ಡರ್‌ಸ್‌ಗಳು ಇದ್ದು, ಲಾಕರ್ ವ್ಯವಸ್ಥೆಯೂ ಇದೆ. ಈ ಮೊದಲು ಡಿ.ಸಿ.ಸಿ. ಬ್ಯಾಂಕಿನಲ್ಲಿ ಸಂಘಕ್ಕೆ 60 ಲಕ್ಷ ಸಾಲವಿತ್ತು, ಈಗ ಅದನ್ನು ಮುಗಿಸಿ 60 ಲಕ್ಷವನ್ನು ಡಿ.ಸಿ.ಸಿ. ಬ್ಯಾಂಕಿನಲ್ಲಿ ಠೇವಣಿ ಇಡಲಾಗಿದೆ ಎಂದು ಪಾಲಚಂಡ ಅಚ್ಚಯ್ಯ(ಟ್ಯೂಟು)ನವರು ತಿಳಿಸಿದರು.
ಅಭ್ಯತ್‌ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ವಿರಾಜಪೇಟೆಯ ಫೆಡರೇಷನ್ ನಲ್ಲಿ ಮತ್ತು ಮಡಿಕೇರಿಯ ಜನತಾ ಬಜಾರ್ ಪ್ರತಿನಿಧಿಯಾಗಿದೆ. ಅಭ್ಯತ್‌ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳು ಉತ್ತಮ ಸಹಕಾರವನ್ನು ನೀಡುತ್ತಿದ್ದು, ಇದರಿಂದಾಗಿ ಸಹಕಾರ ಸಂಘ ಅತ್ಯುತ್ತಮ ಸಹಕಾರ ಸಂಘವಾಗಿ ರೂಪುಗೊಂಡಿದೆ. ಹಾಗಾಗಿ ಅಭ್ಯತ್ ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸತತವಾಗಿ ಎರಡು ವರ್ಷ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ಪಾಲಚಂಡ ಅಚ್ಚಯ್ಯ(ಟ್ಯೂಟು)ನವರು ತಿಳಿಸಿದರು.
ನೆಲ್ಲಿಹುದಿಕೇರಿಯಲ್ಲಿ ಪೆಟ್ರೋಲ್ ಬಂಕ್‌ಅನ್ನು ಪ್ರಾರಂಭಿಸುವ ಕಾರ್ಯಪ್ರಗತಿಯಲ್ಲಿದ್ದು, ಕಾಫಿ-ಕಾಳುಮೆಣಸು ಶೇಖರಣೆಗೆ ಗೋದಾಮು ನಿರ್ಮಿಸಲಾಗುತ್ತಿದ್ದು, ಅವುಗಳ ಸಂಸ್ಕರಣೆಗಾಗಿ ಕ್ರಿಯಾ ಯೋಜನೆಯನ್ನು ರೂಪಿಸಲಾಗಿದೆ ಎಂದು ಪಾಲಚಂಡ ಅಚ್ಚಯ್ಯ(ಟ್ಯೂಟು)ನವರು ತಿಳಿಸಿದರು.
ಯುವಕರು ಸಹಕಾರ ಸಂಘಗಳಲ್ಲಿ ಸೇವಾ ಮನೋಭಾವದಿಂದ ಮುಂದೆ ಬಂದು ಸೇವೆ ಸಲ್ಲಿಸುವಂತಾದಲ್ಲಿ ಸಹಕಾರ ಸಂಘಗಳು ಇನ್ನಷ್ಟು ಸದೃಢವಾಗುತ್ತದೆ ಎಂದು ಪಾಲಚಂಡ ಅಚ್ಚಯ್ಯ(ಟ್ಯೂಟು)ನವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ರಾಜಕೀಯವಾಗಿ ಬಿ.ಜೆ.ಪಿ.ಯ ಜಿಲ್ಲಾ ಸಮಿತಿಯಲ್ಲಿ ಸೇವೆ, ಕಳೆದ ಹದಿನೈದು ವರ್ಷಗಳಿಂದ ಬಿ.ಜೆ.ಪಿ. ಸ್ಥಾನೀಯ ಸಮಿತಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನೆಲ್ಲಿಹುದಿಕೇರಿಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 15ವರ್ಷಗಳಿಂದ ಅಧ್ಯಕ್ಷರಾಗಿ, ಸಿದ್ದಾಪುರದಲ್ಲಿರುವ ಕೊಡವ ಕಲ್ಚರಲ್ ಅಸೋಸಿಯೇಷನ್ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಂದೆ ಪಿ.ಡಿ.ಚಿಯಣ್ಣ ಮತ್ತು ತಾಯಿ ಸಿ.ಬಿ ಮುತ್ತಮ್ಮ ಹಾಗೂ ಪತ್ನಿ ಪ್ರಿನ್ಸಿ ಪೂವಮ್ಮ ಹಾಗೂ ಮಗ ಹೇಮಂತ್ ಅಚ್ಚಯ್ಯನೊಂದಿಗೆ ನೆಲ್ಲಿಹುದಿಕೇರಿಯ ಬೆಟ್ಟದಕಾಡು ಗ್ರಾಮದಲ್ಲಿ ನೆಲೆಸಿದ್ದಾರೆ.
ಸಹಕಾರ, ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾಮಾಜಿಕ ಸೇವೆಯನ್ನು ಸಲ್ಲಿಸುತ್ತಿರುವ. ಪಾಲಚಂಡ ಅಚ್ಚಯ್ಯ(ಟ್ಯೂಟು)ನವರ ಮುಂದಿನ ಭವಿಷ್ಯವು ಉಜ್ವಲವಾಗಲಿ ಎಂದು “ಸರ್ಚ್ ಕೂರ್ಗ್ ಮೀಡಿಯಾ” ಹಾರೈಸುತ್ತದೆ.
ಸಂದರ್ಶನದ ದಿನಾಂಕ: 20-01-2021
Search Coorg Media
Coorg’s Largest Online Media Network