ಶ್ರೀ ಕರವಲೆ ಭಗವತಿ ದಸರಾ ಉತ್ಸವ ಸಮಿತಿ
ಮಡಿಕೇರಿ, ಕೊಡಗು
ಸಂದರ್ಶನ
ಪ್ರಾಸ್ತಾವಿಕ
ಐತಿಹಾಸಿಕ ಮಡಿಕೇರಿ ದಸರಾ ಉತ್ಸವದ 10ನೇಯ ಮಂಟಪವಾಗಿ ಕೊಡಗಿನ ಪ್ರಮುಖ ಶಕ್ತಿ ದೇವತೆಯಾದ ಶ್ರೀ ಕರವಲೆ ಭಗವತಿ ಮಹಿಷ ಮರ್ದಿನಿ ದಸರಾ ಉತ್ಸವ ಸಮಿತಿಯು ಕಳೆದ 26ವರ್ಷಗಳಿಂದ ದಸರಾ ಉತ್ಸವದಲ್ಲಿ ಪಾಲ್ಗೊಂಡು ದಶಮಂಟಪದ ಸಮಿತಿಗೆ ಕಾರಣಿಭೂತವಾಗಿದೆ. ಇದೀಗ 27ನೇ ವರ್ಷದ ದಸರಾ ಉತ್ಸವದ ಸಂಭ್ರದಲಿದ್ದೆ.
ಹಿನ್ನಲೆ – ಇತಿಹಾಸ
ಮಹಿಷ ಮರ್ಧಿನಿ ದೇವಿಯು ಕೊಡಗಿನಲ್ಲಿಯೇ ಪ್ರಸಿದ್ಧವಾಗಿರುವಂತಹ ದೇವತೆ. ಕುಂದುರು ಮೊಟ್ಟೆ ಶ್ರೀ ಚೌಟಿ ಮಾರಿಯಮ್ಮ ದೇವಿಗೂ ಮತ್ತು ಮಹಿಷ ಮರ್ಧಿನಿ ದೇವಿಗೂ ನಿಕಟ ಸಂಬಂಧವಿದೆ ಎಂಬುದು ಪ್ರತೀತಿ. ಮಡಿಕೇರಿಯಿಂದ ಅಬ್ಬಿ ಜಲಪಾತಕ್ಕೆ ಹೋಗುವ ಮಾರ್ಗದಲ್ಲಿರುವ ಭಗವತಿ ನಗರದಲ್ಲಿ ಈ ಪುರಾತನ ದೇಗುಲವಿದೆ. ಶ್ರೀ ಮಹಿಷ ಮರ್ಧಿನಿ ಮತ್ತು ಭಗವತಿ ತಾಯಿ ಇಬ್ಬರು ಜೊತೆಯಲ್ಲಿ ಸ್ಥಾಪಿತರಾಗಿದ್ದಾರೆ. ಇಲ್ಲಿನ ಗ್ರಾಮಸ್ಥರ ಹೇಳಿಕೆ ಪ್ರಕಾರ ಈ ದೇಗುಲದಲ್ಲಿ ಈ ಹಿಂದೆ ಮಹಿಷ ಮರ್ಧಿನಿ ದೇವಿ ಮಾತ್ರವಿದ್ದು, 2 ಶತಮಾನಗಳ ಹಿಂದೆ ಕರವಲೆ ಬಾಡಗದ 2 ಕುಟುಂಬಸ್ಥರು ಗಾಳಿಬೀಡು ಎಂಬಲ್ಲಿದ್ದ ಭಗವತಿ ದೇವಿಯನ್ನು ರಾತ್ರಿಯ ವೇಳೆ ತಂದು ಮಹಿಷ ಮರ್ಧಿನಿ ದೇಗುಲದಲ್ಲಿ ಅಂದರೆ ಮಹಿಷ ಮರ್ಧಿನಿ ದೇವಿಯ ವಿಗ್ರಹವಿರುವ ಎಡಭಾಗದಲ್ಲಿ ಭಗವತಿ ದೇವಿಯನ್ನು ಪ್ರತಿಷ್ಠಾಪಿಸಿದರು. ವರ್ಷಂಪ್ರತಿ ಮಾರ್ಚ್ ತಿಂಗಳಿನಲ್ಲಿ ವಾರ್ಷಿಕ ಪೂಜಾ ಮಹೋತ್ಸವವು ನಡೆಯುತ್ತದೆ. ಈ ಸಂದರ್ಭ ದೇವಿಯ ವಿಗ್ರಹವನ್ನು ಬ್ರಾಹ್ಮಣ ಅರ್ಚಕರು ತಲೆಯ ಮೇಲೆ ಹೊತ್ತು ನಾಡಿನವರ ದುಡಿಕೊಟ್ಟ್ ಪಾಟ್ ಹಾಗೂ ಚೆಂಡೆಯೊಂದಿಗೆ ಪ್ರದಕ್ಷಿಣೆ ಬರುತ್ತಾರೆ. ಮಾರನೆಯ ದಿನ ನಾಡಿನ ಭಕ್ತಾಧಿಗಳಿಂದ ಎತ್ತು ಪೋರಾಟದೊಂದಿಗೆ ದೊಡ್ಡ ಹಬ್ಬ ಪ್ರಾರಂಭವಾಗುತ್ತದೆ. ಈ ಸ್ಥಳದ ವಿಶೇಷವೆಂದರೆ ಭಗವತಿ ದೇವಿಯು ಗಾಳಿಬೀಡಿನಿಂದ ಬಂದ ಕಾರಣ ಭಗವತಿಯ ಆದಿ ಸ್ಥಳದಿಂದ ಹರಿದುಬರುವಂತಹ ನೀರಿನಿಂದಲೇ ತಾಯಿಯ ಜಳಕ ವಾಗಬೇಕೆಂಬುದು ಪ್ರತೀತಿ. ಇಲ್ಲಿ ವಾರ್ಷಿಕ ಉತ್ಸವದಲ್ಲಿ ಅಯ್ಯಪ್ಪ, ಸುಬ್ರಮಣ್ಯ, ಅಜ್ಜಪ್ಪ, ವಿಷ್ಣು ಮೂರ್ತಿ, ಪಡುಮಟ್ಟೆ ಚಾಮುಂಡಿ, ಭದ್ರಕಾಳಿ, ಮೈತಲಪ್ಪ ಗುಡಿಗಳಿವೆ. ಸುಮಾರು ಹದಿನೆಂಟು ವರ್ಷಗಳಿಂದ ಮಡಿಕೇರಿ ದಸರಾ ಮಹೋತ್ಸವದಲ್ಲಿ ದಶಮಂಟಪಗಳಲ್ಲಿ 10ನೇ ಮಂಟಪವಾಗಿ ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಲಿದೆ
ಶ್ರೀ ಕರವಲೆ ಮಹಿಷಿಮರ್ದಿನಿ ಭಗವತಿ ದೇವಸ್ಥಾನ ವ್ಯವಸ್ಥಾಪನ ಸಮಿತಿ
ನಾಡತಕ್ಕರು : ಪೊನ್ನಪ್ಪಂಡ ಕುಟುಂಬಸ್ಥರು
ದೇವತಕ್ಕರು: ಪಾಂಡಿರ ಕುಟುಂಬಸ್ಥರು
ಮುಕ್ಕಾಟಿ: ಸುಬ್ಬಮ್ಮಂಡ ಕುಟುಂಬಸ್ಥರು
ಕೊಡೆ ಮುಕ್ಕಾಟಿ: ಚೆಟ್ಟಿರ ಕುಟುಂಬಸ್ಥರು
ಒಕ್ಕ:
ತೆಕ್ಕಡ ಕುಟುಂಬಸ್ಥರು
ಬೊಳ್ಳೇರ ಕುಟುಂಬಸ್ಥರು
ಪುದಿಯತಂಡ ಕುಟುಂಬಸ್ಥರು
ಅರಿಯಂಡ ಕುಟುಂಬಸ್ಥರು
ಬೆದ್‍ಕಂಡ ಕುಟುಂಬಸ್ಥರು
ಮುದ್ದಂಡ ಕುಟುಂಬಸ್ಥರು
ನಾಪಂಡ ಕುಟುಂಬಸ್ಥರು
ಮಿನ್ನಂಡ ಕುಟುಂಬಸ್ಥರು
ಉದಿಯಂಡ ಕುಟುಂಬಸ್ಥರು
ಮತ್ತು ಮಲೆಯರು ಕುಟುಂಬಸ್ಥರು
ಮಂಟಪದ ವಿವರಗಳು – 2022
27 ನೇ ವರ್ಷದ ಆಚರಣೆ
ಕಥೆ: ಗಣಪತಿಯಿಂದ ಗಜಾಸುರನ ವಧೆ
ತೀರ್ಪಿನ ಸಮಯ : 2.30 A.M
ಸ್ಥಳ: ಸಿಂದೂರು ಬಟ್ಟೆ ಮಳಿಗೆ ಮುಂಭಾಗ
ಅಧ್ಯಕ್ಷರು: ಉದಿಯಂಡ ನೀರಜ್ ಬೋಪಣ್ಣ
ಕಥಾ ನಿರ್ವಹಣೆ: ಸಮತಿ ಸದಸ್ಯರು
ಲೈಟಿಂಗ್ ಬೋರ್ಡ್ : ತಮಿಳುನಾಡಿನ ಜೇಮ್ಸ್
ಒಟ್ಟು ಕಲಾಕೃತಿಗಳು: 21
ಕಲಾ ಕೃತಿನಿರ್ಮಾಣ: ಸ್ಪರ್ಶ ಆರ್ಟ್ಸ್ ಮತ್ತು ಸತ್ಯ ದಯಾ ಮಂಗಳೂರು
ಧ್ವನಿವರ್ಧಕ : ಬೆಂಗಳೂರಿನ ಪ್ರೀತಿ ಸೌಂಡ್ಸ್ ಸಂಸ್ಥೆ
ಸ್ಟುಡಿಯೋ ಲೈಟ್ : ಮಡಿಕೇರಿಯ ಸಂದ ಲೈಟ್ ತಂಡ
ಟ್ರ್ಯಾಕ್ಟರ್ ಸೆಟ್ಟಿಂಗ್ : ಮಡಿಕೇರಿಯ ಶೋಮ್ಯಾನ್ ಕ್ರಿಯೇಷನ್ಸ್ ಬಿಪಿನ್ ಆ್ಯಂಥೋನಿ ತಂಡ
ಸ್ಪೆಷಲ್ ಎಫೆಕ್ಸ್ :
ಒಟ್ಟು ವೆಚ್ಚ: 18 ಲಕ್ಷ
ಫ್ಲಾಟ್‍ಫಾರಂ ಸೆಟ್ಟಿಂಗ್: ಸಮತಿ ಸದಸ್ಯರು
ಒಟ್ಟು ಸದಸ್ಯರು: 100
ಚಿತ್ರಶಾಲೆ
ಶ್ರೀ ಕರವಲೆ ಭಗವತಿ ದಸರಾ ಉತ್ಸವ ಸಮಿತಿಯ ಬಗೆಗಿನ ಹೆಚ್ಚಿನ ಮಾಹಿತಿ ಲಭ್ಯವಿದ್ದಲ್ಲಿ ನಮ್ಮ ವಾಟ್ಸಪ್ ನಂ. 94830 47519 ಅಥವಾ ನಮ್ಮ ಇ-ಮೇಲ್ searchcoorg@gmail.com ವಿಳಾಸಕ್ಕೆ ಕಳಿಹಿಸಿಕೊಡಿ.
ಮಂಟಪದ ವಿವರಗಳು – 2021
26ನೇ ವರ್ಷದ ಆಚರಣೆ
ಕಥೆ: “ಈಶ್ವರ ಪಾರ್ವತಿ ಕಥಾ ಸಾರಾಂಶ ಕಲಾಕೃತಿ”
ಅಧ್ಯಕ್ಷರು:
ಕಥಾ ನಿರ್ವಹಣೆ:
ಸೌಂಡ್ಸ್ & ಸ್ಟುಡಿಯೋ:
ಆರ್ಚ್ ಲೈಟಿಂಗ್ ಬೋರ್ಡ್:
ಒಟ್ಟು ಕಲಾ ಕೃತಿಗಳು:
ಒಟ್ಟು ವೆಚ್ಚ:
ಒಟ್ಟು ಸದಸ್ಯರು:
ಚಲನವಲನ:
ಪ್ಲಾಟ್ ಫಾಮ್ ಮತ್ತು ಟ್ಯ್ರಾಕ್ಟರ್ ಸೆಟ್ಟಿಂಗ್:
ಕಲಾಕೃತಿ ನಿರ್ಮಾಣ:
ಮಂಟಪದ ವಿವರಗಳು – 2019
24ನೇ ವರ್ಷದ ಆಚರಣೆ
ಕಥೆ: “ಭ್ರಮರಾಂಭಿಕೆಯಿಂದ ಅರುಣಾಸುರನ ವಧೆ”
ಅಧ್ಯಕ್ಷರು: ಅರೆಯಂಡ ಪ್ರಸನ್ನ ಪಳಂಗಪ್ಪ
ಕಥಾ ನಿರ್ವಹಣೆ: ಟೀಂ ಭಗವತಿ
ಸೌಂಡ್ಸ್ & ಸ್ಟುಡಿಯೋ: ಬೆಂಗಳೂರು
ಆರ್ಚ್ ಲೈಟಿಂಗ್ ಬೋರ್ಡ್: ಅಣೈ ಲೈಟಿಂಗ್ಸ್, ಬೆಂಗಳೂರು
ಒಟ್ಟು ಕಲಾ ಕೃತಿಗಳು: 12
ಒಟ್ಟು ವೆಚ್ಚ: 12 ಲಕ್ಷ
ಒಟ್ಟು ಸದಸ್ಯರು: 250
ಚಲನವಲನ: ಟೀಂ ಭಗವತಿ
ಪ್ಲಾಟ್ ಫಾಮ್ ಮತ್ತು ಟ್ಯ್ರಾಕ್ಟರ್ ಸೆಟ್ಟಿಂಗ್: ಟೀಂ ಭಗವತಿ
ಕಲಾಕೃತಿ ನಿರ್ಮಾಣ: ಶೋ ಮ್ಯಾನ್ ಕ್ರಿಯೇಶನ್ಸ್ ಮತ್ತು ತಂಡ, ಮಡಿಕೇರಿ.
ಮಂಟಪದ ವಿವರಗಳು – 2018
23ನೇ ವರ್ಷದ ಆಚರಣೆ
ಕಥೆ: ಶ್ರೀ ದೇವಿ ಮಹಾತ್ಮೆ
ಅಧ್ಯಕ್ಷರು: ಅರೆಯಂಡ ಪ್ರಸನ್ನ ಪಳಂಗಪ್ಪ
ಸೌಂಡ್ಸ್, ಸ್ಟುಡಿಯೋ, ಆರ್ಚ್ ಲೈಟಿಂಗ್ ಬೋರ್ಡ್: ಫ್ಯೂಚರ್ ಪವರ್ ಎಎಲ್‍ಸಿ ಗ್ರೂಫ್ ಮಡಿಕೇರಿ
ಒಟ್ಟು ಕಲಾ ಕೃತಿಗಳು: 7
ಒಟ್ಟು ವೆಚ್ಚ: 5 ಲಕ್ಷ
ಒಟ್ಟು ಸದಸ್ಯರು: 200
ಪ್ಲಾಟ್ ಫಾಮ್ ಮತ್ತು ಟ್ಯ್ರಾಕ್ಟರ್ ಸೆಟ್ಟಿಂಗ್: ಮಣಿ ಮತ್ತು ತಂಡ
2017
ಮಂಟಪದ ವಿವರಗಳು – 2017
ಅಧ್ಯಕ್ಷರು: ಸಜನ್ ಪೂಣಚ್ಚ
ಕಥೆ: ಭುದೇವಿಯಿಂದ ನರಕಾಸುರನ ಸಂಹಾರ
ಆರ್ಚ್ ಲೈಟಿಂಗ್ಸ್ ಬೋರ್ಡ್: ಜೇಮ್ಸ್, ದಿಂಡ್‍ಕಲ್
ಒಟ್ಟು ಕಲಾಕೃತಿಗಳು: 16
ಒಟ್ಟು ವೆಚ್ಚ: 14 ಲಕ್ಷ
ಕಥಾ ನಿರ್ವಹಣೆ: ಟೀಂ ಭಗವತಿ ಯುವ ಶಕ್ತಿ ಬಾಯ್ಸ್
ಸ್ಟುಡಿಯೋ ಸೆಟ್ಟಿಂಗ್ಸ್: ಸಂಗೀತ ಸೌಂಡ್ಸ್ ಆ್ಯಂಡ್ ಲೈಟ್ಸ್, ಬೆಂಗಳೂರು.
ಫ್ಲಾಟ್‍ಫಾರಂ ಸೆಟ್ಟಿಂಗ್: ಟೀಂ ಭಗವತಿ ಯುವ ಶಕ್ತಿ ಬಾಯ್ಸ್
ಟ್ರ್ಯಾಕ್ಟರ್ ಸೆಟ್ಟಿಂಗ್ಸ್: ಟೀಂ ಭಗವತಿ ಯುವ ಶಕ್ತಿ ಬಾಯ್ಸ್
ಚಲನವಲನ: ಟೀಂ ಭಗವತಿ ಯುವ ಶಕ್ತಿ ಬಾಯ್ಸ್
ಸೌಂಡ್ಸ್: ಸಂಗೀತ ಸೌಂಡ್ಸ್ ಆ್ಯಂಡ್ ಲೈಟ್ಸ್, ಬೆಂಗಳೂರು.
ಕಲಾಕೃತಿ ನಿರ್ಮಾಣ: ಟೀಂ ಭಗವತಿ ಯುವ ಶಕ್ತಿ ಬಾಯ್ಸ್
ಒಟ್ಟು ಸದಸ್ಯರು: 250
ಸಂದರ್ಶನ