KKFC Chettalli Football Club

KKFC Chettalli
(Football Club)

Logo

ಪ್ರಾಸ್ತಾವಿಕ

ಚೆಟ್ಟಳ್ಳಿಯ ಕೆಕೆಎಫ್ಸಿ ಫಟ್ಬಾಲ್ ಕ್ಲಬ್ ವತಿಯಿಂದ 5ನೇ ವರ್ಷದ ಜಿಲ್ಲಾಮಟ್ಟದ Football ಪಂದ್ಯಾವಳಿ.
ಚೆಟ್ಟಳ್ಳಿಯ ಕೆಕೆಎಫ್ಸಿ ಫಟ್ಬಾಲ್ ಕ್ಲಬ್ ವತಿಯಿಂದ 5ನೇ ವರ್ಷದ ಜಿಲ್ಲಾಮಟ್ಟದ ಫÀÅಟ್ಬಾಲ್ ಪಂದ್ಯಾವಳಿ 2018 ಫೆ. 8 ರಿಂದ 11 ರವರೆಗೆ ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ನಡೆಯಿತು.
ಪ್ರತಿಷ್ಠಿತ ಸಂಸ್ಥೆಯಾದ ಕೆ ಕೆ ಎಫ್ ಸಿ ಪುಟ್ಬಾಲ್ ಪಂದ್ಯಾಟಕ್ಕೆ ಜಿಲ್ಲಾ ಪಂಚಾಯತ್ ಸದಸ್ಯರಾದ ಸುನಿತಾ ಮಂಜುನಾಥ್ ದೀಪ ಬೆಳಗಿಸೂವುದರ ಮೂಲಕ ಚಾಲನೆ ನೀಡಿದರು. ಸಂಸ್ಥೆಯ ಅಧ್ಯಕ್ಷರಾದ ಗ್ರಾಮ ಪಂಚಾಯತಿ ಸದಸ್ಯರಾದ ಮೊಹಮ್ಮದ್ ರಫಿ ಅಧ್ಯಕ್ಷ ತೆ ವಹಿಸಿದರು .
ಸುನಿತಾ ಮಂಜುನಾಥ್ ಮಾತನಾಡಿ ಕೆ ಕೆ ಎಫ್ ಸಿ ಫುಟ್ಬಾಲ್ ಸಂಸ್ಥೆಯು ಕಳೆದ ಐದು ವರ್ಷಗಳಿಂದ ಕ್ರೀಡಾ ಕ್ಷೇತ್ರಗಳು ಮಾತ್ರವಲ್ಲದೇ ಸಮಾಜಸೇಯಲ್ಲಿ ತೊಡಗಿಕೊಂಡಿರುವುದನ್ನು ಶ್ಲಾಘಿಸಿದರು. ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಧ್ವಜ ರೋಹಣ ನೆರವೇರಿಸಿ ಮಾತನಾಡಿದ ಗ್ರಾಮ ಪಂಚಾಯತಿ ಅದ್ಯಕ್ಷರಾದ ವತ್ಸಲ ಉತ್ತಮ ರೀತಿಯಲ್ಲಿ ಪಂದ್ಯಾಡವನ್ನು ಆಯೋಜಿಸಿದಕ್ಕೆ ಶಾಘ್ಲಿಸಿದರು.
ಸಂಘದ ಅಧ್ಯಕ್ಷರಾದ ರಫಿ ಮಾತನಾಡಿ ಎಲ್ಲಾ ತಂಡದವರು ಭಾಗವಹಿಸಿ ಪಂದ್ಯಾಟವನ್ನು ಯಶಸ್ಸುಗೊಳಿಸಬೇಕಾಗಿ ಕೋರಿದರು. ಚೆಟ್ಟಳ್ಳಿ ಪ್ರೌಢಶಾಲಾ ದೈಹಿಕ ಶಿಕ್ಷಕರಾದ ಮಾಚಯ್ಯ ಮಾತನಾಡಿ ಸಂಸ್ಥೆಯು ಕ್ರೀಡೆಯಲ್ಲೂ, ಸಮಾಜಸೇಯಲ್ಲೂ ತೊಡಗಿಕೊಂಡು ಒಂದು ಸಂಸ್ಥೆ ಯಾವ ರೀತಿಯಲ್ಲಿ ಇರಬೇಕು ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಕೆ ಕೆ ಎಫ್ ಸಿ ಎಂದು ಹೇಳಿದರು.
ಸಂಘದ ಸಲಹೆಗಾರರಾದ ಶಶಿಕುಮಾರ್ ಮಾತನಾಡಿದರು .
ಈ ಸಂದರ್ಭ ವೇದಿಕೆಯಲ್ಲಿ ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದಾಧಿಕಾರಿಯಾದ ಅಹ್ಮದ್ ಶಹಬ್ ದಾನಿಗಳಾದ ಮಂಜುನಾಥ್, ಸಂಘದ ಪಧಾದಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಪಂದ್ಯಾವಳಿಯ ಪ್ರಥಮ ಪಂದ್ಯಾಟವು ಬ್ಲೂ ಸ್ಟಾರ್ ಚೆಟ್ಟಳ್ಳಿ ತಂಡವನ್ನು ರಂಗ ಸಮುದ್ರ ತಂಡವು 1.0 ಗೋಳುಗಳಿಂದ ಮಣಿಸಿತು.

Leave a Reply

Your email address will not be published. Required fields are marked *