KKFC Chettalli
(Football Club)
Logo
ಪ್ರಾಸ್ತಾವಿಕ
ಕೆ.ಎಫ್ ಸಿ ಚೆಟ್ಟಳ್ಳಿ ಇವರ ವತಿಯಿಂದ 6ನೇ ವರ್ಷದ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ನ ಸಂಯೋಗದಿಂದ ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ 9+3 ಆಟಗಾರರ ಕಾಲ್ಚೆಂಡು ಪಂದ್ಯಾಟವನ್ನು ದಿನಾಂಕ 24.01.2019 ರಿಂದ 27.01.2019ರ ವರೆಗೆ ನಡೆಯಲಿದೆ. ಈ ಪಂದ್ಯಾಟದ ಉದ್ಘಾಟನೆಯನ್ನು ದಿನಾಂಕ 24.01.19ರ ಬೆಳಗ್ಗೆ 9 ಗಂಟೆಗೆ ಕೊಡಗು ಜಿಲ್ಲಾ ಗೌಡ ಸಮಾಜದ ಅಧ್ಯಕ್ಷ ಪಿ.ಪಿ ಜಯಾನಂದ ರವರು ಧ್ವಜಾರೋಹಣ ನೆರವೆರಿಸಲಿದ್ದು ಇಂಜಿನಿಯರ್ ಹಾಗು ಬಿಜೆಪಿ ಯೂತ್ ಲೀಡರ್ ತೇಲಪಂಡ ಶಿವಕುಮಾರ್ ನಾಣಯ್ಯ ನವರು ಪಂದ್ಯಾಟವನ್ನು ಉದ್ಗಾಟಿಸಲಿದ್ದಾರೆ. ಉದ್ಘಾಟನಾ ಸಮಾರಂಭದ ಅತಿಥಿಗಳಾಗಿ ಚೆಟ್ಟಳ್ಳಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಕೆ.ತಿಲಕ ,ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವತ್ಸಲಾ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಸುನಿತಾ ಮಂಜುನಾಥ್, ಕೆ.ಕೆ.ಎಫ್ .ಸಿ ಅಧ್ಯಕ್ಷರಾದ ಮಹಮ್ಮದ್ ರಫಿ, ಉಪಾಧ್ಯಕ್ಷರಾದ ಶಶಿಕುಮಾರ್, ಗೌರವಾಧ್ಯಕ್ಷರಾದ ರೆಮಂಡ್ ಸೆರಾವೋ, ಕಾರ್ಯದರ್ಶಿಯಾದ ಜುಬೈರ್ ಅವರು ಪಾಲ್ಗೊಳ್ಳಲಿದ್ದಾರೆ. ದಿನಾಂಕ 27.01.2018 ರಂದು ಸಮಾರೋಪ ಸಮಾರಂಭ ಮಧ್ಯಾಹ್ನದ ನಂತರ 3.30 ಗೆ ನಡೆಯಲಿದೆ. ಐಎನ್ ಟಿಯುಸಿ ರಾಜ್ಯ ಉಪಾಧ್ಯಕ್ಷರಾದ ನಾಪಂಡ ಮುತ್ತಪ್ಪ ಹಾಗು ನಾಪಂಡ ಮುದ್ದಪ್ಪ ,ಮಂಜುನಾಥ್ ಪಿಡಬ್ಯುಡಿ ಕಂಟ್ರಾಕ್ಟರ್ ಚೆಟ್ಟಳ್ಳಿ , ವಾಸುದೇವ ಎಸ್ ಎನ್ ಡಿ ಪಿ ಅಧ್ಯಕ್ಷರು ಮಡಿಕೇರಿ, ಚಂದ್ರನ್ ನಿವ್ರತ್ತ ಇಂಡಿಯ ಆರ್ಮಿ ,ರಿತೇಶ್ , ಶೇಖರ್ ಹೋಂ ನೀಡ್ಸ್ ಮಡಿಕೇರಿ, ಗೌತಮ್ ರಾಮ್ ಪ್ರಸಾದ್ ಪ್ರಸಾದ್ ವೈನ್ಸ್ ಚೆಟ್ಟಳ್ಳಿ , ಮೋಹನ್ ಅಯ್ಯಪ್ಪ ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷರು ಹಾಗೂ ಇನ್ನಿತರ ಮುಖ್ಯ ಗಣ್ಯರುಗಳು ದಾನಿಗಳು ಭಾಗವಹಿಸಲಿದ್ದು ಪ್ರಥಮ ಬಹುಮಾನ ಆಕರ್ಷಕ ಟ್ರೋಫಿ ಹಾಗೂ 25.000,ರ ನಗದು ವೈಯುಕ್ತಿಕ ಟ್ರೋಫಿಗಳು ದ್ವಿತೀಯ ಬಹುಮಾನ 15.000,ರ ವೈಯುಕ್ತಿಕ ಟ್ರೋಫಿಗಳು ತೃತೀಯ ಬಹುಮಾನ ಟ್ರೋಫಿ ಹಾಗೂ ಮಹಿಳೆಯರ ಪ್ರದರ್ಶನ ಪಂದ್ಯಾಟವನ್ನು ನಡೆಸಲಾಗುತ್ತದೆ ಈ ಪಂದ್ಯಾಟಕ್ಕೆ ಮೊದಲು ನೋಂದಾಯಿಸಿದ 30.ತಂಡಗಳಿಗೆ ಮಾತ್ರ ಅವಕಾಶವಿದ್ದು ದಿನಾಂಕ 17.01.2019 ರ ಒಳಗೆ ತಮ್ಮ ತಂಡದ ಹೆಸರನ್ನು ನೋಂದಾಯಿಸಲು ಕೊನೆಯ ದಿನಾಂಕವಾಗಿದ್ದು ಹೆಚ್ಚಿನ ಮಾಹಿತಿಗಾಗಿ ವಿನೋದ್ 8277560862 , ಹಾಗೂ ಲತೀಫ್ 9480494700 ಇವರನ್ನು ಸಂಪರ್ಕಿಸಬೇಕಾಗಿ ವಿನಂತಿ
2018
ಚೆಟ್ಟಳ್ಳಿಯ ಕೆಕೆಎಫ್ಸಿ ಫಟ್ಬಾಲ್ ಕ್ಲಬ್ ವತಿಯಿಂದ 5ನೇ ವರ್ಷದ ಜಿಲ್ಲಾಮಟ್ಟದ Football ಪಂದ್ಯಾವಳಿ.
ಚೆಟ್ಟಳ್ಳಿಯ ಕೆಕೆಎಫ್ಸಿ ಫಟ್ಬಾಲ್ ಕ್ಲಬ್ ವತಿಯಿಂದ 5ನೇ ವರ್ಷದ ಜಿಲ್ಲಾಮಟ್ಟದ ಫÀÅಟ್ಬಾಲ್ ಪಂದ್ಯಾವಳಿ 2018 ಫೆ. 8 ರಿಂದ 11 ರವರೆಗೆ ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ನಡೆಯಿತು.
ಪ್ರತಿಷ್ಠಿತ ಸಂಸ್ಥೆಯಾದ ಕೆ ಕೆ ಎಫ್ ಸಿ ಪುಟ್ಬಾಲ್ ಪಂದ್ಯಾಟಕ್ಕೆ ಜಿಲ್ಲಾ ಪಂಚಾಯತ್ ಸದಸ್ಯರಾದ ಸುನಿತಾ ಮಂಜುನಾಥ್ ದೀಪ ಬೆಳಗಿಸೂವುದರ ಮೂಲಕ ಚಾಲನೆ ನೀಡಿದರು. ಸಂಸ್ಥೆಯ ಅಧ್ಯಕ್ಷರಾದ ಗ್ರಾಮ ಪಂಚಾಯತಿ ಸದಸ್ಯರಾದ ಮೊಹಮ್ಮದ್ ರಫಿ ಅಧ್ಯಕ್ಷ ತೆ ವಹಿಸಿದರು .
ಸುನಿತಾ ಮಂಜುನಾಥ್ ಮಾತನಾಡಿ ಕೆ ಕೆ ಎಫ್ ಸಿ ಫುಟ್ಬಾಲ್ ಸಂಸ್ಥೆಯು ಕಳೆದ ಐದು ವರ್ಷಗಳಿಂದ ಕ್ರೀಡಾ ಕ್ಷೇತ್ರಗಳು ಮಾತ್ರವಲ್ಲದೇ ಸಮಾಜಸೇಯಲ್ಲಿ ತೊಡಗಿಕೊಂಡಿರುವುದನ್ನು ಶ್ಲಾಘಿಸಿದರು. ಮುಂದಿನ ದಿನಗಳಲ್ಲಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಧ್ವಜ ರೋಹಣ ನೆರವೇರಿಸಿ ಮಾತನಾಡಿದ ಗ್ರಾಮ ಪಂಚಾಯತಿ ಅದ್ಯಕ್ಷರಾದ ವತ್ಸಲ ಉತ್ತಮ ರೀತಿಯಲ್ಲಿ ಪಂದ್ಯಾಡವನ್ನು ಆಯೋಜಿಸಿದಕ್ಕೆ ಶಾಘ್ಲಿಸಿದರು.
ಸಂಘದ ಅಧ್ಯಕ್ಷರಾದ ರಫಿ ಮಾತನಾಡಿ ಎಲ್ಲಾ ತಂಡದವರು ಭಾಗವಹಿಸಿ ಪಂದ್ಯಾಟವನ್ನು ಯಶಸ್ಸುಗೊಳಿಸಬೇಕಾಗಿ ಕೋರಿದರು. ಚೆಟ್ಟಳ್ಳಿ ಪ್ರೌಢಶಾಲಾ ದೈಹಿಕ ಶಿಕ್ಷಕರಾದ ಮಾಚಯ್ಯ ಮಾತನಾಡಿ ಸಂಸ್ಥೆಯು ಕ್ರೀಡೆಯಲ್ಲೂ, ಸಮಾಜಸೇಯಲ್ಲೂ ತೊಡಗಿಕೊಂಡು ಒಂದು ಸಂಸ್ಥೆ ಯಾವ ರೀತಿಯಲ್ಲಿ ಇರಬೇಕು ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಕೆ ಕೆ ಎಫ್ ಸಿ ಎಂದು ಹೇಳಿದರು.
ಸಂಘದ ಸಲಹೆಗಾರರಾದ ಶಶಿಕುಮಾರ್ ಮಾತನಾಡಿದರು .
ಈ ಸಂದರ್ಭ ವೇದಿಕೆಯಲ್ಲಿ ಚೆಟ್ಟಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದಾಧಿಕಾರಿಯಾದ ಅಹ್ಮದ್ ಶಹಬ್ ದಾನಿಗಳಾದ ಮಂಜುನಾಥ್, ಸಂಘದ ಪಧಾದಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಪಂದ್ಯಾವಳಿಯ ಪ್ರಥಮ ಪಂದ್ಯಾಟವು ಬ್ಲೂ ಸ್ಟಾರ್ ಚೆಟ್ಟಳ್ಳಿ ತಂಡವನ್ನು ರಂಗ ಸಮುದ್ರ ತಂಡವು 1.0 ಗೋಳುಗಳಿಂದ ಮಣಿಸಿತು.
ಸಂದರ್ಶನ: