ಮಲ್ಲಿಗೆ Jasmine

ಮಲ್ಲಿಗೆ

ವಾಣಿಜ್ಯ ಹೂ ಬೆಳೆಗಳಲ್ಲಿ ಮಲ್ಲಿಗೆ ಮುಖ್ಯವಾದುದು. ಮಧುರ ಪರಿಮಳ ಬೀರುವ ಮಲ್ಲಿಗೆ ಮನೆಯ ಅಂಗಳದಲ್ಲಿದ್ದರಂತೋ ಇಡೀ ವಾತಾವರಣಕ್ಕೆ ಒಂದು ಶೋಭೆ. ಮಲ್ಲಿಗೆಯನ್ನು ಬಡವ ಬಲ್ಲಿದ, ಹೆಣ್ಣು-ಗಂಡು, ದೊಡ್ಡವರು, ಚಿಕ್ಕವರು ಎಂಬ ಬೇಧ ಭಾವವಿಲ್ಲದೆ ಮುಡಿಯಲು, ಪೂಜೆಗೆ, ಅತಿಥಿ ಸತ್ಕಾರಕ್ಕೆ, ಸಭಾಂಗಣ ಅಲಂಕಾರಕ್ಕೆ ಉಪಯೋಗಿಸಲಾಗುತ್ತದೆ. ಇದಲ್ಲದೆ ಮಲ್ಲಿಗೆ ಹೂವನ್ನು ಸಂಸ್ಕರಿಸಿ ಸುಗಂಧ ತೈಲ ಉತ್ಪಾದನೆಯಲ್ಲೂ ಬಳಸಲಾಗುತ್ತದೆ. ಇದರಿಂದಲೇ ಮಲ್ಲಿಗೆಯನ್ನು “ಪುಷ್ಪಗಳ ರಾಣಿ” ಎಂದು ಕರೆಯುತ್ತಾರೆ.
ಕರ್ನಾಟಕದಲ್ಲಿ ವಿವಿಧ ಜಾತಿಯ ಮಲ್ಲಿಗೆ ಪ್ರಭೇದಗಳು ಬಳಕೆಯಲ್ಲಿದ್ದರು, ಕರ್ನಾಟಕದ ಕರಾವಳಿ ಪ್ರದೇಶಕ್ಕೆ ಸೀಮಿತವಾದಂತೆ ವಿವಿಧ ಮಲ್ಲಿಗೆಯನ್ನು 10153 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದು 3720 ಟನ್ ಹೂಗಳನ್ನು ಉತ್ಪಾದಿಸಲಾಗುತ್ತಿದೆ. ಉಡುಪಿ ಮಲ್ಲಿಗೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 32 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದು 64 ಟನ್ ಹೂಗಳನ್ನು ಉತ್ಪಾದಿಸಲಾಗುತ್ತಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ರೈತರು ಮೊಗ್ಗುಗಳನ್ನು ಬಿಡಿಸಿ ಚೆಂಡುಗಳನ್ನು ಕಟ್ಟಿ ಸ್ಥಳೀಯ ಮಾರುಕಟ್ಟೆಗೆ ಮತ್ತು ವಿಮಾನ ಮೂಲಕ ಮುಂಬಯಿ, ದೆಹಲಿ, ಅಹಮದಾಬಾದ್ ನಗರಗಳಿಗೆ ಮತ್ತು ಸೌದಿ ದೇಶಗಳಿಗೆ ಕಳುಹಿಸುತ್ತಾರೆ. ಮಲ್ಲಿಗೆ ಬೇಸಾಯ ಕರಾವಳಿ ಪ್ರದೇಶದ ಸಣ್ಣ ಹಿಡುವಳಿದಾರರಿಗೆ ಒಂದು ವರ ಎನ್ನಬಹುದು.

ನಮ್ಮ ವಾಟ್ಸಾಪ್‌ ಕಮ್ಯುನಿಟಿ ಲಿಂಕ್‌ https://chat.whatsapp.com/EicYYbrXCeEBY3KGWiZnRy ಜೋಯ್ನ್‌ ಆಗಿ. ನಮ್ಮ ವಾಟ್ಸಾಪ್‌ ಚಾನಲ್‌ ಲಿಂಕ್‌ https://whatsapp.com/channel/0029VaAKi709sBICmL0sGV2m ಫಾಲೋ ಮಾಡಿ.

ಉಡುಪಿ ಮಲ್ಲಿಗೆಯ ಗುಣಲಕ್ಷಣಗಳು
ಉಡುಪಿ ಮಲ್ಲಿಗೆಯ ವೈಜ್ಞಾನಿಕ ಹೆಸರು ಜಾಸ್ಮಿನಿಯಮ್ ಸಾಂಬ್ಯಾಕ್ ಆನಿಯಾನಮ್. ಸಾಮಾನ್ಯವಾಗಿ ಇದು ಪೆÇದೆಯಾಕಾರದಲ್ಲಿ ಬೆಳೆಯುವ ತಳಿಯಾಗಿದ್ದು ಎಲೆಗಳು ಅಂಡಾಕಾರ ಅಥವಾ ಹೃದಯಾಕಾರವಿರುತ್ತದೆ. ಸುಗಂಧದ ಅಂಶ ಕಡಿಮೆ ಪ್ರಮಾಣದಲ್ಲಿ ಇರುವುದರಿಂದ ಹೂಗಳು ಬೇಗ ಬಾಡುವುದಿಲ್ಲ. ಇದರ ಮೊಗ್ಗುಗಳು ಕೊಯ್ಲು ಮಾಡಿದ 10-12 ಗಂಟೆಗಳವರೆಗೂ ಅರಳುವುದಿಲ್ಲ ಮತ್ತು ಬಾಡುವುದಿಲ್ಲ. ಹಾಗಾಗಿ ದೂರದ ನಗರಗಳಿಗೆ ಹೂಗಳನ್ನು ಕಳುಹಿಸುವುದು ಸುಲಭ. ಈ ತಳಿಯ ಗಿಡಗಳು ಮಾರ್ಚ್‍ನಿಂದ ಸೆಪ್ಟೆಂಬರ್ ಮತ್ತು ಡಿಸೆಂಬರ್ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ಅತೀ ಹೆಚ್ಚು ಹೂ ಬಿಡುತ್ತವೆ. ಉಳಿದ ಅವಧಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹೂ ಬಿಡುವುದನ್ನು ಕಾಣಬಹುದು.

ಹವಾಗುಣ ಮತ್ತು ಸ್ಥಳ
ಉಡುಪಿ ಮಲ್ಲಿಗೆ ಕರಾವಳಿಯ ಎಲ್ಲಾ ಪ್ರದೇಶಕ್ಕೂ ಹೊಂದಿಕೊಂಡು ಬೆಳೆಯುವ ಶಕ್ತಿ ಹೊಂದಿದೆ. ಮಲ್ಲಿಗೆಯನ್ನು ಸಮತಟ್ಟಾದ ಹಾಗೂ ಬೆಟ್ಟ ಪ್ರದೇಶದ ಇಳಿಜಾರು ಪ್ರದೇಶಗಳಲ್ಲೂ ಸಹ ಬೆಳೆಯಬಹುದು. ಉತ್ತರ ಮತ್ತು ಪೂರ್ವ ದಿಕ್ಕಿನಿಂದ ಬೀಳುವ ಸೂರ್ಯನ ಬೆಳಕು ಗಿಡದ ಬೆಳವಣಿಗೆಗೆ ಸಹಕಾರಿ. ದಿನಪೂರ್ತಿ ಸೂರ್ಯನ ಬೆಳಕು ಮಲ್ಲಿಗೆ ಪೆÇದೆಯ ಮೇಲೆ ಬಿದ್ದರೆ ಗಿಡದ ಬೆಳವಣಿಗೆ ಉತ್ತಮವಾಗಿರುತ್ತದೆ. ಗಿಡ ನೆಡುವ ಮುಂಚೆ ಆಯ್ಕೆ ಮಾಡಿಕೊಂಡ ಸ್ಥಳದಲ್ಲಿ ಬೆಳೆದಿರುವ ಕಳೆ ಮತ್ತು ಇತರೆ ಅನಾವಶ್ಯಕ ಗಿಡಗಳು ಮತ್ತು ವಸ್ತುಗಳನ್ನು ತೆಗೆದು ಸ್ವಚ್ಛಮಾಡಬೇಕು.

ಮಣ್ಣು
ಮಲ್ಲಿಗೆ ಸಾಮಾನ್ಯವಾಗಿ ಸಾವಯವ ಪದಾರ್ಥಗಳಿಂದ ಕೂಡಿದ ಶ್ರೀಮಂತವಾದ ಭೂಮಿಯಲ್ಲಿ ಸಮೃದ್ಧವಾಗಿ ಬೆಳೆಯುತ್ತದೆ. ಮರಳು ಮಿಶ್ರಿತ, ಕೆಂಪುಗೋಡು, ಮರಳು ಮಿಶ್ರಿತ ಗೋಡು ಮಣ್ಣುಗಳಲ್ಲಿ ಸಹ ಬೆಳೆಬಹುದು. ಬೆಳೆಯುವ ಜಾಗದಲ್ಲಿ ಯಾವುದೇ ಕಾರಣಕ್ಕೂ ನೀರು ನಿಲ್ಲದಂತಿದ್ದು ನೀರು ಬಸಿದು ಹೋಗುವಂತಿರಬೇಕು. ಬೇರಿನ ಭಾಗದಲ್ಲಿ ನೀರು ಹೆಚ್ಚು ಕಾಲ ನಿಂತರೆ ಗಿಡಗಳು ಸಾಯುತ್ತವೆ. ಅತೀ ಜೇಡಿ ಮಣ್ಣು ಮತ್ತು ಅಧಿಕ ಮರಳು ಮಿಶ್ರಿತ ಮಣ್ಣುಗಳಿದ್ದರೆ ಅವು ಬೆಳೆಗೆ ಯೋಗ್ಯವಲ್ಲ. ಜಂಬಿಟ್ಟಿಗೆ ಮಣ್ಣಿನಲ್ಲಿ ಹೆಚ್ಚು ಸಾವಯವ ಗೊಬ್ಬರ ಮಿಶ್ರಣ ಮಾಡಿ ಸಹ ಬೆಳೆಯಬಹುದು.

ಸಸ್ಯಾಭಿವೃದ್ಧಿ
ಕಾಂಡದ ತುದಿ ಭಾಗವನ್ನು ಉಪಯೋಗಿಸಿಕೊಂಡು ವೃದ್ಧಿ ಮಾಡಬಹುದು. ಚೆನ್ನಾಗಿ ಬಲಿತು ಮೃದುವಾಗಿರುವ 12 ರಿಂದ 15 ಸೆಂ. ಮೀ. ಉದ್ದವಿರುವ ಕಾಂಡದ ಮೇಲ್ಭಾಗವನ್ನು ಕತ್ತರಿಸಿಕೊಂಡು ಮರಳು ಮತ್ತು ಸ್ವಲ್ಪ ಪ್ರಮಾಣದಲ್ಲಿ ಚೆನ್ನಾಗಿ ಕೊಳೆತ ಕಾಂಪೆÇೀಸ್ಟ್ ಮಿಶ್ರಣ ಮಾಡಿ ತಯಾರಿಸಿದ ಪಾತಿಯಲ್ಲಿ ಕಾಂಡದ ತುಂಡುಗಳನ್ನು 45o ಓರೆಯಾಗಿ ನೆಡಬೇಕು. ಕಾಂಡದ ತುಂಡುಗಳನ್ನು ನೆಡುವ ಮುಂಚೆ ಕತ್ತರಿಸಿದ ಭಾಗವನ್ನು 2000-2500 ಪಿ.ಪಿ.ಎಂ. ಇಂಡೋಲ್ ಬ್ಯೂಟ್ರಿಕ್ ಆಮ್ಲದಲ್ಲಿ (Iಃಂ) 30 ಸೆಕೆಂಡ್‍ಗಳ ಕಾಲ ಅದ್ದಿ ತೆಗೆದು ನಾಟಿ ಮಾಡಿದ್ದಲ್ಲಿ ಹೆಚ್ಚು ಬೇರು ಪಡೆಯಲು ಸಾಧ್ಯವಾಗುತ್ತದೆ. ಈ ವಿಧಾನದಲ್ಲಿ ಕಾಂಡದ ತುಂಡುಗಳನ್ನು ಪಾತಿಗಳಲ್ಲಿ ಅಥವಾ ಸಣ್ಣ ಪ್ಲಾಸ್ಟಿಕ್ ತೊಟ್ಟಿಯಲ್ಲಿ ನಡೆಸಬಹುದಾಗಿದೆ.

ಬೇಸಾಯ ಸಾಮಾಗ್ರಿಗಳು : (ಪ್ರತಿ ಎಕರೆಗೆ)
ಅಂತರ
(ಸಾಲಿನಿಂದ ಸಾಲಿಗೆ x ಗಿಡದಿಂದ ಗಿಡಕ್ಕೆ)
1. ಗಿಡಗಳು 1.5 ಮೀ x 1.5 ಮೀ 1777
ಅಥವಾ
(2.4 ಮೀ. x 2.4 ಮೀ.) 694

2. ಸಾವಯವ ಗೊಬ್ಬರ (ಪ್ರತೀ ಗಿಡಕ್ಕೆ/ಪ್ರತೀ ವರ್ಷ) 20 ಕಿ. ಗ್ರಾಂ.
3. ರಾಸಯನಿಕ ಗೊಬ್ಬರ (ಪ್ರತೀ ಗಿಡಕ್ಕೆ ಗ್ರಾಂ.ಗಳಲ್ಲಿ)

1ವರ್ಷದ ಗಿಡಗಳಿಗೆ 2 ವರ್ಷದ ಗಿಡಗಳಿಗೆ 3 ವರ್ಷದ ನಂತರ
ಅ) ಯುರಿಯಾ ಅಥವಾ ನೆಲಗಡಲೆ ಹಿಂಡಿ
ಆ) ಶಿಲಾ ರಂಜಕ
ಇ) ಮ್ಯೂರಿಟ್ ಆಫ್
ಪೆÇಟ್ಯಾಷ್ 65
430
240
100 130
860
480
200 260
1290
960
400

ಸೂಚನೆ: ಸಾರಜನಕವನ್ನು ನೆಲಗಡಲೆ ಹಿಂಡಿಯ ರೂಪದಲ್ಲಿ ಕೊಡುವಾಗ ನೆಲಗಡಲೆ ಹಿಂಡಿಯನ್ನು ನೀರು ಮತ್ತು ಸೆಗಣಿ ಜೊತೆ ಮಿಶ್ರ ಮಾಡಿ ಒಂದು ವಾರಗಳ ಕಾಲ ಕೊಳೆಸಿ ಗಿಡಗಳಿಗೆ ಪ್ರತಿ ತಿಂಗಳು ಸಮಕಂತುಗಳಲ್ಲಿ ನೀಡಬೇಕು.
ಭೂಮಿ ಸಿದ್ಧತೆ
ಆಯ್ಕೆ ಮಾಡಿಕೊಂಡ ಪ್ರದೇಶವನ್ನು ಸ್ವಚ್ಛ ಮಾಡಿಕೊಂಡು ನಂತರ ಸೂಕ್ತ ಅಂತರದಲ್ಲಿ 2 ಅಡಿ ಆಳದ ಗುಣಿಗಳನ್ನು ತೆಗೆದು ಬಿಸಿಲಿಗೆ ಬಿಡಬೇಕು. ಉಡುಪಿ ಮಲ್ಲಿಗೆಗೆ ಅಂತರ 5 ಅಡಿ x 5 ಅಡಿ ಶಿಫಾರಸ್ಸು ಇದ್ದರೂ ಕರಾವಳಿ ಪ್ರದೇಶದಲ್ಲಿ ಗಿಡದ ಬೆಳವಣಿಗೆ ಚೆನ್ನಾಗಿರುವುದರಿಂದ ರೈತರು ಸಾಲಿನಿಂದ ಸಾಲಿಗೆ ಮತ್ತು ಗಿಡದಿಂದ ಗಿಡಕ್ಕೆ 8 ಅಡಿ ಅಂತರವನ್ನು ನೀಡುವುದು ವಾಡಿಕೆ. ಗುಣಿ ತೆಗೆದ ಒಂದೆರಡು ವಾರಗಳ ನಂತರ ಮೇಲ್ಮಣ್ಣಿನ ಜೊತೆ 20 ಕಿ. ಗ್ರಾಂ. ನಷ್ಟು ಚೆನ್ನಾಗಿ ಕೊಳೆತ ಪುಡಿಯಾದ ಹಸುವಿನ ಅಥವಾ ಎಲೆಗೊಬ್ಬರವನ್ನು ಮಿಶ್ರ ಮಾಡಿ ತುಂಬಬೇಕು. ಗುಣಿಗಳನ್ನು ತುಂಬಿದ ನಂತರ ಪ್ರತೀ ಗುಣಿಗೆ ನೀರು ಕೊಟ್ಟಲ್ಲಿ ಮಿಶ್ರಣ ಚೆನ್ನಾಗಿ ಕುಳಿತುಕೊಳ್ಳುತ್ತದೆ. ಗುಣಿಗೆ ತಲಾ 3-5 ಗ್ರಾಂ. ಹೆಪ್ಟಾಕ್ಲೋರ್ ಪುಡಿ ಉದುರಿದರೆ ಗೆದ್ದಲ ಬಾದೆ ಇರುವುದಿಲ್ಲ.
ಈ ಮೇಲಿನ ಎಲ್ಲಾ ಕಾರ್ಯಗಳು ಮುಗಿದ ನಂತರ ಪ್ಲಾಸ್ಟಿಕ್ ತೊಟ್ಟಿಯಲ್ಲಿ ಬೆಳೆಸಿದ ಮಲ್ಲಿಗೆ ಗಿಡವನ್ನು ತೊಟ್ಟಿಯಿಂದ ಹೊರತೆಗೆದು ಗುಣಿಯ ಮಧ್ಯಭಾಗದಲ್ಲಿ ನೆಟ್ಟು ಆಸರೆಯನ್ನು ಕೊಡಬೇಕು. ನಾಟಿಯನ್ನು ಸಂಜೆಯ ತಂಪು ಹೊತ್ತಿನಲ್ಲಿ ಮಾಡುವುದು ಸೂಕ್ತ. ಶಿಫಾರಸ್ಸು ಮಾಡಿದ ರಸಗೊಬ್ಬರಗಳನ್ನು 2 ಸಮಕಂತುಗಳಲ್ಲಿ ಮಾರ್ಚ್ – ಎಪ್ರೀಲ್ ಮತ್ತು ಸಪ್ಟೆಂಬರ್ – ಅಕ್ಟೋಬರ್ ತಿಂಗಳಲ್ಲಿ ಕೊಡಿ.

ನೀರು ನಿರ್ವಹಣೆ
ಉಡುಪಿ ಮಲ್ಲಿಗೆ ವರ್ಷ ಪೂರ್ತಿ ಹೂ ಕೊಡುವುದರಿಂದ ಪ್ರತಿ ದಿನ ಅಥವಾ 2-3 ದಿನಗಳಿಗೊಮ್ಮೆ ಹದವರಿತು ನೀರು ಕೊಡುವುದು ಸೂಕ್ತ. ಪ್ರತೀ ಬಾರಿ ಗೊಬ್ಬರ ಕೊಡುವಾಗ ಗಿಡಗಳಿಗೆ ನೀರು ಕೊಡಬೇಕು. ಹೂ ಬಿಡುವ ಅವಧಿಯಲ್ಲಿ ಪ್ರತೀ ದಿನ ಸ್ವಲ್ಪ ಪ್ರಮಾಣದಲ್ಲಿ ನೀರು ಕೊಡುವುದು ಒಳ್ಳೆಯದು.
ಮಲ್ಲಿಗೆಗೆ ನೀರನ್ನು ಹನಿನೀರಾವರಿ ಮುಖಾಂತರ ನೀಡುವಾಗ ಪ್ರತಿ ಗಿಡಕ್ಕೆ ಪ್ರತೀ ದಿನ 6-8 ಲೀ. ನಷ್ಟು ಕೊಡಬೇಕು. ಮಳೆಗಾಲದಲ್ಲಿ ಸರಾಗವಾಗಿ ನೀರು ಬಸಿದು ಹೋಗಲು ಸೂಕ್ತ ಆಳದ ಬಸಿಗಾಲುವೆಗಳನ್ನು ನಿರ್ಮಿಸಬೇಕು.

ಮಧ್ಯಂತರ ಬೇಸಾಯ
1. ಕಳೆ ತೆಗೆಯುವಿಕೆ: ಕಳೆಗಳು ಭೂಮಿಯ ಮೇಲ್ಪದರದಲ್ಲಿರುವ ಸಾರಾಂಶವನ್ನು ಹೀರುವುದರಿಂದ ವರ್ಷಕ್ಕೆ ಎರಡು ಬಾರಿ ಬಳ್ಳಿಯ ಸುತ್ತ ಸಣ್ಣದಾಗಿ ಅಗತೆ ಮಾಡಿ ಕಳೆಗಳನ್ನು ನಿಯಂತ್ರಿಸಬಹುದು. ಇದರಿಂದ ಕಳೆಗಳು ಮಲ್ಲಿಗೆ ಗಿಡಗಳ ಜೊತೆ ಆಹಾರ ಪೈಪೆÇೀಟಿ ನಡೆಸುವುದನ್ನು ತಪ್ಪಿಸಬಹುದು.
2. ಮಣ್ಣಿನ ಸಂರಕ್ಷಣೆ: ಇಳಿಜಾರು ಪ್ರದೇಶಗಳಲ್ಲಿ ಬೆಳೆದಾಗ ನೀರಿನಿಂದ ಮೇಲ್ಮಣ್ಣು ಕೊಚ್ಚಿ ಹೋಗದಂತೆ ಅಡ್ಡ ಬದುಗಳನ್ನು ಹಾಕಿ ಮಣ್ಣು ಸವಕಳಿಯನ್ನು ತಡೆಯಬಹುದು. ಬೇಸಿಗೆಯಲ್ಲಿ ಬೇರುಗಳು ಒಣಗದಂತೆ ಬುಡದಲ್ಲಿ ತರಗೆಲೆಗಳನ್ನು ಹರಡಿದರೆ ಭೂಮಿಯ ತೇವಾಂಶವನ್ನು ಕಾಪಾಡುತ್ತದೆ ಮತ್ತು ತರಗೆಲೆ ಕಾಲಕ್ರಮೇಣ ಸಾವಯವ ಗೊಬ್ಬರವಾಗಿ ಪರಿವರ್ತನೆಯಾಗಿ ಗಿಡಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ.
3. ಸುಣ್ಣದ ಬಳಕೆ: ಕರಾವಳಿಯ ಮಣ್ಣು ಹುಳಿಯಾಗಿರುವುದರಿಂದ ಮಣ್ಣಿನ ರಸಸಾರವನ್ನು ಸರಿಯಾದ ಪ್ರಮಾಣದಲ್ಲಿಡಲು ಹಾಗೂ ಗಿಡಗಳಿಗೆ ಒದಗಿದ ಪೆÇೀಷಕಾಂಶಗಳು ಬಳ್ಳಿಗೆ ದೊರಕಲು ಪ್ರತೀ ವರ್ಷ ರಸಗೊಬ್ಬರಗಳನ್ನು ಕೊಡುವ ಮುಂಚೆ ಪ್ರತೀ ಗಿಡದ (ಮೂರು ವರ್ಷದ) ಬುಡಕ್ಕೆ 250-500 ಗ್ರಾಂ. ಪುಡಿ ಸುಣ್ಣವನ್ನು ಮಣ್ಣಿನಲ್ಲಿ ಬೆರೆಸುವುದರಿಂದ ಮಣ್ಣಿನ ರಸಸಾರವನ್ನು ತಹಬದಿಗೆ ತರಲು ಸಾಧ್ಯವಾಗುತ್ತದೆ.
4. ಮೊಗ್ಗು ಚಿವುಟುವುದು: ಮಲ್ಲಿಗೆ ಗಿಡಗಳು ನಾಟಿ ಮಾಡಿದ ಹೊಸ ಚಿಗುರಿನ ಜೊತೆ ಹೂಗಳನ್ನು ಬಿಡುತ್ತವೆ. ಆದರೆ ಗಿಡ ಚೆನ್ನಾಗಿ ಬೆಳೆಯುವ ಮುಂಚೆಯೇ ಹೂಗಳನ್ನು ಅರಳಲು ಬಿಟ್ಟರೆ ಗಿಡಗಳ ಬೆಳವಣಿಗೆ ಕುಂಠಿತವಾಗುತ್ತದೆ. ಆದ್ದರಿಂದ ಗಿಡ ನೆಟ್ಟ 6 ತಿಂಗಳವರೆಗೆ ಮೊಗ್ಗುಗಳನ್ನು ಚಿವುಟಿ ಹಾಕಬೇಕು.
5. ಬಳ್ಳಿಯ ಸ್ವಚ್ಛತೆ ಮತ್ತು ಸವರುವಿಕೆ: ಪ್ರತೀ ವರ್ಷ ಬಳ್ಳಿಯನ್ನು ಸ್ವಚ್ಛ ಮಾಡುವುದು ಮುಖ್ಯ. ರೋಗ ಮತ್ತು ಕೀಟ ಬಾಧೆಗೆ ತುತ್ತಾದ ಗೆಲ್ಲುಗಳು, ಒಣಗಿರುವ, ಒತ್ತಾಗಿ ಬೆಳೆದ ಗೆಲ್ಲುಗಳನ್ನು ಸವರಿ ಗಿಡಕ್ಕೆ ಚೆನ್ನಾಗಿ ಗಾಳಿ, ಬೆಳಕು ಆಡುವ ಹಾಗೆ ನೋಡಿಕೊಳ್ಳಬೇಕು. ಗಿಡದಲ್ಲಿ ಆಗಾಗ ಮೂಡುವ ನೀರು ಕಂದುಗಳನ್ನು (ಹಬ್ಬುವ ಗೆಲ್ಲುಗಳು) ಕತ್ತರಿಸಿ ತೆಗೆಯುತ್ತಿರಬೇಕು. ಸಾಮಾನ್ಯವಾಗಿ ಮಲ್ಲಿಗೆ ಬಳ್ಳಿಯನ್ನು ಸವರುವಾಗ ಭೂಮಿಯಿಂದ 2 ಅಡಿ ಎತ್ತರದಲ್ಲಿ ಗೆಲ್ಲುಗಳನ್ನು ಕತ್ತರಿಸಿ ತೆಗೆಯಬೇಕು. ಗೆಲ್ಲುಗಳನ್ನು ಕತ್ತರಿಸಿದ ನಂತರ ಕತ್ತರಿಸಿದ ಭಾಗಕ್ಕೆ ಬೋರ್ಡೋ ಮುಲಾಮು ಹಚ್ಚಿ ಉಪಚರಿಸಬೇಕು. ಉಡುಪಿ ಮಲ್ಲಿಗೆಗೆ ವರ್ಷದ ಎಲ್ಲಾ ತಿಂಗಳುಗಳಲ್ಲಿ ಬೇಡಿಕೆ ಇರುವುದರಿಂದ ಒಂದೇ ಬಾರಿ ಎಲ್ಲಾ ಗಿಡಗಳನ್ನು ಸವರಿದರೆ ಹೂ ಪಡೆಯಲು ಒಂದು ತಿಂಗಳು ಕಾಯಬೇಕಾಗುತ್ತದೆ. ಆದ್ದರಿಂದ ರೈತರು ಒಂದೇ ಬಾರಿ ಗಿಡಗಳನ್ನು ಸವರುವ ಬದಲು ಗಿಡ ನೆಟ್ಟ 3 ವರ್ಷಗಳ ನಂತರ ಪ್ರತೀ ವರ್ಷ 5 ರಿಂದ 10 ಗಿಡಗಳಂತೆ ಹಂತ ಹಂತವಾಗಿ ಸವರುವುದು ಒಳ್ಳೆಯದು. ಈ ವಿಧಾನದಲ್ಲಿ ಸವರಿದ ಗಿಡಗಳಿಂದ ಬಲಿಷ್ಟವಾದ ಮತ್ತು ಆರೋಗ್ಯಯುತವಾದ ಗೆಲ್ಲುಗಳು ಉತ್ಪತ್ತಿಯಾಗಿ ಹೂಗಳ ಗುಣಮಟ್ಟ ಸಹ ಉತ್ತಮವಾಗಿರುತ್ತದೆ. ಅಲ್ಲದೆ ಗಿಡಗಳಿಗೆ ಉತ್ತಮ ಆಕಾರವನ್ನು ಕೊಡಲು ಸಾಧ್ಯವಾಗುತ್ತದೆ. ಗಿಡಗಳ ಸವರುವಿಕೆಯಿಂದ ಗಿಡಗಳು ಪುನಶ್ಚೇತನಗೊಂಡು ಹೊಸ ಚಿಗುರೊಡೆದು ಹೆಚ್ಚು ಹೂ ಬಿಡಲು ಪ್ರಾರಂಭಿಸುತ್ತವೆ. ಉಡುಪಿ ಮಲ್ಲಿಗೆಯನ್ನು ಸವರಲು ಸೂಕ್ತ ಕಾಲ ಎಂದರೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳು.

ಸಸ್ಯಸಂರಕ್ಷಣೆ
ರೋಗಗಳು: ಉಡುಪಿ ಮಲ್ಲಿಗೆಗೆ ಕಾಡುವ ಪ್ರಮುಖ ರೋಗಗಳೆಂದರೆ ಎಲೆ ಚುಕ್ಕೆ ರೋಗ, ಸೊರಗು ರೋಗ, ತುಕ್ಕು ರೋಗ ಮತ್ತು ಬೂದಿ ರೋಗ.
ಎಲೆಚುಕ್ಕೆ ರೋಗ:
ಇದು ಉಡುಪಿ ಮಲ್ಲೆಗೆಗೆ ಬರುವ ಪ್ರಮುಖ ರೋಗ. ಈ ರೋಗವು ಉಷ್ಣಾಂಶದಲ್ಲಿ ವ್ಯತ್ಯಾಸವಾದರೆ ಮತ್ತು ತೇವಾಂಶದ ವಾತಾವರಣ ಇದ್ದರೆ ಕಂಡು ಬರುತ್ತದೆ. ಈ ರೋಗಕ್ಕೆ ತುತ್ತಾದ ಗಿಡಗಳಲ್ಲಿ ಆರಂಭದಲ್ಲಿ ಎಲೆಗಳ ಮೇಲೆ ಸಣ್ಣ ಸಣ್ಣದಾದ ಚುಕ್ಕೆಗಳು ಕಂಡು ಬರುತ್ತವೆ. ರೋಗದ ಬಾದೆ ತೀವ್ರವಾದಾಗ ಈ ಚುಕ್ಕೆಗಳು ದೊಡ್ಡದಾಗಿ ವಿಲೀನಗೊಂಡು ಮಚ್ಚೆಗಳಾಗಿ ಎಲೆಗಳು ಒಣಗಿ ಉದುರುತ್ತವೆ. ಈ ಚುಕ್ಕೆಗಳ ಮಧ್ಯಭಾಗದಲ್ಲಿ ಬಿಳುಪಾಗಿದ್ದು ಸುತ್ತಲೂ ಕಪ್ಪು ಅಥವಾ ಕಂದು ಬಣ್ಣದಿಂದ ಕೂಡಿರುತ್ತದೆ.
ಹತೋಟಿ: ತೋಟವನ್ನು ಶುಚಿಯಾಗಿ ಇಡಬೇಕು. ರೋಗದ ಹತೋಟಿಗೆ ಪ್ರತೀ ಲೀಟರ್ ನೀರಿಗೆ 1 ಗ್ರಾಂ. ಕಾರ್ಬೆಂಡೆಜಿಮ್ ಅಥವಾ 3 ಗ್ರಾಂ. ತಾಮ್ರದ ಆಕ್ಸಿಕ್ಲೋರೈಡನ್ನು ಬೆರೆಸಿ ಗಿಡಗಳಿಗೆ ಸಿಂಪಡಿಸಬೇಕು.
ಸೊರಗು ರೋಗ
ಈ ರೋಗವು ಮಣ್ಣುಜನ್ಯವಾಗಿದ್ದು, ತೇವಾಂಶ ಜಾಸ್ತಿ ಇರುವ ಪ್ರದೇಶಗಳಲ್ಲಿ ಕಂಡು ಬರುತ್ತದೆ. ಈ ರೋಗದ ಮುಖ್ಯ ಲಕ್ಷಣಗಳೆಂದರೆ ಆರಂಭದಲ್ಲಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತಾ ಹೋಗುತ್ತವೆ. ರೋಗ ತೀವ್ರವಾದಾಗ ಎಲೆಗಳೆಲ್ಲ ಒಣಗಿ ಉದುರಿ ಹೋಗುತ್ತವೆ. ನಂತರ ಗಿಡ ಸಂಪೂರ್ಣವಾಗಿ ಸೊರಗಿ ಸಾಯುತ್ತವೆ. ಇಂತಹ ಸೊರಗಿದ ಗಿಡದ ಬೇರನ್ನು ಕಿತ್ತು ನೋಡಿದಾಗ ಬೇರಿನಲ್ಲಿ ಕಂದು ಬಣ್ಣದ ಮಚ್ಚೆಯನ್ನು ಕಾಣಬಹುದು.
ಹತೋಟಿ: ಭೂಮಿಯಲ್ಲಿ ನೀರು ಚೆನ್ನಾಗಿ ಬಸಿದು ಹೋಗುವ ಹಾಗೆ ನೋಡಿಕೊಳ್ಳಬೇಕು. ರೋಗಕ್ಕೆ ತುತ್ತಾದ ಗಿಡದ ಬುಡಕ್ಕೆ 1 ಗ್ರಾಂ. ಕಾರ್ಬೆಂಡೆಜಿಮ್ ಶಿಲೀಂದ್ರನಾಶಕವನ್ನು ಒಂದು ಲೀಟರ್ ನೀರಿನಲ್ಲಿ ಬೆರೆಸಿ ಪ್ರತೀ ಗಿಡದ ಬುಡಭಾಗಕ್ಕೆ ಎರಡರಿಂದ ಐದು ಲೀಟರ್‍ನಷ್ಟು ಹಾಕಬೇಕು.

ಕೀಟಗಳು: ಸಾಮಾನ್ಯವಾಗಿ ಈ ಕೆಳಕಂಡ ಕೀಟಗಳು ಹಾನಿ ಮಾಡುತ್ತವೆ. ಅವುಗಳೆಂದರೆ
1. ಬಿಳಿನೊಣ: ಬಿಳಿನೊಣಗಳು ಎಲೆಗಳ ಕೆಳಗೆ ಮುತ್ತಿ ರಸವನ್ನು ಹೀರುತ್ತವೆ. ಇದರಿಂದ ಗಿಡಗಳ ಬೆಳವಣಿಗೆಯು ಕುಗ್ಗುತ್ತದೆ. ಇವುಗಳು ಎಲೆಗಳ ಮೇಲೆ ಸಿಹಿ ದ್ರವವನ್ನು ಸ್ರವಿಸುವುದರಿಂದ ಅದರ ಮೇಲೆ ಕಪ್ಪು ಬೂಷ್ಟು ಬೆಳೆಯುತ್ತದೆ. ಇದರಿಂದ ದ್ಯುತಿಸಂಶ್ಲೇಷಣೆ ಕ್ರಿಯೆಗೆ ಅಡ್ಡಿಯುಂಟಾಗಿ ಇಳುವರಿಯಲ್ಲಿ ಕುಂಠಿತವಾಗುತ್ತದೆ.
ಹತೋಟಿ ಕ್ರಮ: ಈ ಕ್ಭಿಟದ ಬಾಧೆ ಕಂಡೊಡನೆ 2.0 ಮಿ.ಲೀ. ಆಕ್ಸಿಡೆಮೆಟಾನ್ ಮಿಥೈಲ್ 25 ಇ.ಸಿ. ಅಥವಾ 2 ಮಿ. ಲೀ. ಮೆಲಾಥಿಯನ್ 50 ಇ. ಸಿ ಮತ್ತು 3 ಗ್ರಾಂ. ನೀರಿನಲ್ಲಿ ಕರಗುವ ಗಂಧಕ ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
2. ಎಲೆ ಮತ್ತು ಮೊಗ್ಗು ತಿನ್ನುವ ಹುಳು: ಹಸಿರು ಮರಿ ಕೀಡೆಯು ಎಳೆಯ ಎಲೆಗಳನ್ನು ಮಡಚಿ ಹಸಿರು ಭಾಗವನ್ನು ತಿನ್ನುತ್ತದೆ. ಅಲ್ಲದೆ, ಕೆಲವು ಸಂದರ್ಭದಲ್ಲಿ ಮೊಗ್ಗುಗಳನ್ನು ಒಟ್ಟುಗೂಡಿಸಿ ಹೆಣೆದು ತಿನ್ನುವುದನ್ನು ಕೂಡಾ ಕಾಣಬಹುದು.
ಹತೋಟಿ ಕ್ರಮ: 1.5 ಮಿ. ಲೀ. ಮೊನೋಕ್ರೊಟೋಫಾಸ್ 36 ಎಸ್.ಎಲ್ ಕೀಟನಾಶಕವನ್ನು ಪ್ರತೀ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
3. ಕೆಂಪು ಶಲ್ಕ ಕೀಟ: ಈ ಕೀಟವು ಬೆಳೆದ ರೆಂಬೆಯ ಮೇಲೆ ಮೆತ್ತಿ ಕೊಂಡಿರುತ್ತವೆ. ಪ್ರೌಢ ಮತ್ತು ಮರಿ ಕೀಟವೆರಡೂ ರಸ ಹೀರುವುದರಿಂದ ಗಿಡದ ಬೆಳವಣಿಗೆಯು ಕುಂಠಿತವಾಗುತ್ತದೆ. ಮಳೆಗಾಲದ ಮುಂಚೆ ಮತ್ತು ಮಳೆಗಾಲದ ನಂತರ ಇದರ ತೀವ್ರತೆಯನ್ನು ಕಾಣಬಹುದು.
ಹತೋಟಿ ಕ್ರಮ: ಪ್ರತೀ ಒಂದು ಲೀಟರ್ ನೀರಿನಲ್ಲಿ 2 ಮಿ.ಲೀ. ಮೆಲಾಥಿಯಾನ್ 50 ಇ.ಸಿ. ಮತ್ತು 3 ಗ್ರಾಂ. ನೀರಿನಲ್ಲಿ ಕರಗುವ ಗಂಧಕವನ್ನು ಬೆರೆಸಿ ಬಾಧೆ ಕಂಡು ಬಂದಾಗ ಸಿಂಪಡಿಸಬೇಕು.

ಕೊಯ್ಲು ಮತ್ತು ಇಳುವರಿ:
ಮಲ್ಲಿಗೆ ಗಿಡಗಳನ್ನು ನಾಟಿ ಮಾಡಿದ 6ನೇ ತಿಂಗಳ ನಂತರ ಹೂ ಕೊಯ್ಲು ಮಾಡಲು ಪ್ರಾರಂಭಿಸಬಹುದು. ನಾಟಿ ಮಾಡಿದನಿಂದಲೇ ಕ್ರಮವರಿತು ಕೃಷಿ ಮಾಡಿದರೆ ಮೊದಲ ವರ್ಷವೇ ಆರ್ಥಿಕ ಲಾಭ ಪಡೆಯಬಹುದು. ಗಿಡ ನೆಟ್ಟ 3 ವರ್ಷಗಳ ನಂತರ ಆರ್ಥಿಕ ಇಳುವರಿ ಪ್ರಾರಂಭವಾಗಿ ಸುಮಾರು 15 ರಿಂದ 20 ವರ್ಷಗಳವರೆಗೆ ಇಳುವರಿ ದೊರೆಯುುವುದು. ಎಲ್ಲಾ ಬೇಸಾಯ ಕ್ರಮಗಳನ್ನು ಅನುಸರಿಸಿದರೆ ಪ್ರತಿ ಒಂದು ಗಿಡದಲ್ಲಿ ಮೊದಲನೇ ವರ್ಷ 0.5 ಕಿ.ಗ್ರಾಂ. ಎರಡನೇ ವರ್ಷ 1.5 ಕಿ. ಗ್ರಾಂ. 3ನೇ ವರ್ಷ 2.5 ಕಿ. ಗ್ರಾಂ. ಹಾಗೂ 4ನೇ ವರ್ಷ 3 ಕಿ. ಗ್ರಾಂ. ಹೂವಿನ ಇಳುವರಿ ಪಡೆಯಬಹುದು. ಮಲ್ಲಿಗೆ ಮೊಗ್ಗುಗಳು ಅರಳುವ ಮುಂಚೆ ಹೂ ಬಿಡಿಸಿ, ಸ್ಥಳೀಯ ಮಾರುಕಟ್ಟೆಯ ನಿಯಮಾನುಸಾರವಾಗಿ ಮಾಲೆ ಕಟ್ಟಿ ಮಾರುಕಟ್ಟೆಗೆ ಕಳುಹಿಸಬಹುದು.

 

ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.

About ಸರ್ಚ್‌ ಕೂರ್ಗ್‌ ಮೀಡಿಯಾ

"ಸರ್ಚ್‌ ಕೂರ್ಗ್‌ ಮೀಡಿಯಾ" ವಿಶ್ಲೇಷಣಾತ್ಮಕ ಪತ್ರಿಕೋದ್ಯಮದಲ್ಲಿ‌ ಕೃಷಿ, ಸಹಕಾರ, ಪರಿಸರ, ವಿಜ್ಞಾನ ಮತ್ತು ಗ್ರಾಮೀಣ ಜೀವನವನ್ನು ಕೇಂದ್ರೀಕರಿಸುವ ಆನ್‌ಲೈನ್‌ ಮಾಧ್ಯಮವಾಗಿ ಅಸಂಖ್ಯ ಚಂದಾದಾರರೊಂದಿಗೆ, ಅತಿದೊಡ್ಡ ಹಾಗೂ ಅತಿ ವಿಸ್ತಾರವಾದ ಕೊಡಗಿನ ಜನಪ್ರಿಯ ಮಾಧ್ಯಮವಾಗಿದೆ. www.searchcoorg.com  ಹಾಗೂ Search Coorg App ಮುಖಾಂತರ ಕಾರ್ಯನಿರ್ವಹಿಸುತ್ತಿದೆ.
0 0 votes
Article Rating
Subscribe
Notify of
guest
0 Comments
Inline Feedbacks
View all comments