ಮಣ್ಣು ಪರೀಕ್ಷೆಯ ಮಹತ್ವ ಮತ್ತು ವಿಧಾನ
ಮಣ್ಣು ಪ್ರಕೃತಿದತ್ತವಾದ ನಿಸರ್ಗದ ಅಮೂಲ್ಯ ಸಂಪತ್ತು. ಸಸ್ಯಗಳಿಗೆ ಪೆÇೀಷಕಾಂಶಗಳನ್ನು ಒದಗಿಸುವ ಶಕ್ತಿಗೆ ಮಣ್ಣಿನ ಫಲವತ್ತತೆ ಎನ್ನುತ್ತೇವೆ. ಒಂದೇ ಕ್ಷೇತ್ರದಲ್ಲಿ ನಿರಂತರವಾಗಿ ಬೆಳೆ ಬೆಳೆಸುವುದರಿಂದ ಮಣ್ಣಿನಲ್ಲಿರುವ ಪೆÇೀಷಕಾಂಶಗಳ ಲಭ್ಯತೆಯ ಪ್ರಮಾಣ ಕ್ಷೀಣಿಸುತ್ತದೆ. ಪೆÇೀಷಕಾಂಶಗಳ ಲಭ್ಯತೆಯು ಮಣ್ಣಿನ ಭೌತಿಕ ಹಾಗು ಕೆಲವು ರಾಸಾಯನಿಕ ಕ್ರಿಯೆಗಳನ್ನು ಅವಲಂಬಿಸಿರುತ್ತದೆ. ಸಸ್ಯದ ಬೆಳೆವಣಿಗೆ ಮತ್ತು ವಯಸ್ಸಿನ ಆಧಾರದ ಮೇಲೆ ಪೆÇೀಷಕಾಂಶಗಳು ನಿರ್ಧಿಷ್ಟ ಪ್ರಮಾಣದಲ್ಲಿ ಬೇಕಾಗುತ್ತದೆ. ಆದುದರಿಂದ ಫಲವತ್ತಾದ ಮಣ್ಣು ಎಂದರೆ ಈ ಎಲ್ಲಾ ಪೆÇೀಷಕಾಂಷಗಳನ್ನು ಸಸ್ಯಗಳಿಗೆ ಬೇಕಾಗುವ ಪ್ರಮಾಣದಲ್ಲಿ ಮತ್ತು ಬೇಕಾಗುವ ರೂಪದಲ್ಲಿ ಅವುಗಳ ಬೆಳವಣಿಗೆಯ ಹಂತದಲ್ಲಿ ಪೂರೈಸುವಂತಿರಬೇಕು.
ಕೃಷಿಯಲ್ಲಿ ಮಣ್ಣಿನ ಗುಣಧರ್ಮಗಳನ್ನು ತಿಳಿಯಲು ಮಣ್ಣು ಪರೀಕ್ಷೆ ಅತ್ಯವಶ್ಯಕ. ಮಾದರಿ ಮಣ್ಣನ್ನು ಸಾಂಪ್ರದಾಯಿಕವಾಗಿ ಭೌತಿಕ, ರಾಸಾಯನಿಕ ಅಥಾವ ಜೈವಿಕ ಗುಣಧರ್ಮಗಳ ವಿಶ್ಲೇಷಣೆ ಮಾಡುವ ಕ್ರಮವನ್ನು ಮಣ್ಣು ಪರೀಕ್ಷೆ ಎನ್ನುತ್ತೇವೆ.
ಮಣ್ಣು ಪರೀಕ್ಷೆಯ ಉದ್ಧೇಶಗಳು
• ಮಣ್ಣಿನಲ್ಲಿರುವ ಪೆÇೀಷಕಾಂಶಗಳ ಲಭ್ಯತೆಯ ಪ್ರಮಾಣವನ್ನು ತಿಳಿಯಲು.
• ಮಣ್ಣಿನ ರಸಸಾರದ ಮಟ್ಟವನ್ನು ಅರಿತು ಮಣ್ಣಿನ ಗುಣದರ್ಮವಾದ ಆಮ್ಲೀಯ, ತಟಸ್ಥ ಅಥಾವ ಕ್ಷಾರೀಯ ಎಂದು ಅರಿತು ಸೂಕ್ತವಾದ ಸುಧಾರಕಗಳ ಉಪಯೋಗದ ಪ್ರಮಾಣ ತಿಳಿಯಲು.
• ಬೆಳೆಗಳಿಗೆ ಒದಗಿಸುವ ಗೊಬ್ಬರಗಳ ಪ್ರಮಾಣ ತಿಳಿದು ರಸಗೊಬ್ಬರಗಳ ಸದುಪಯೋಗ ಹಾಗೂ ಮಿತವ್ಯಯ ಸಾಧಿಸಲು.
ಮಣ್ಣು ಪರೀಕ್ಷೇ ಕ್ರಮವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದು
1. ಮಣ್ಣಿನ ಮಾದರಿಗಳ ಸಂಗ್ರಹಣೆ
2. ಮಣ್ಣಿನ ಮಾದರಿಗಳ ವಿಶ್ಲೇಷಣೆ.
3. ಹುಳಿ, ಸವಳು ಮತ್ತು ಕ್ಷಾರಮಣ್ಣುಗಳ ಸುದಾರಣೆ ಶಿಪಾರಸ್ಸು.
4. ರಸಗೊಬ್ಬರಗಳ ಶಿಫಾರಸ್ಸು ಮತ್ತು ಸಲಹೆ.
ಮಣ್ಣಿನ ಮಾದರಿ ಸಂಗ್ರಹಣೆ
ಒಂದು ಜಮೀನಿನ ಮಣ್ಣನ್ನು ಪರೀಕ್ಷೆಗೆ ಒಳಪಡಿಸಬೇಕಾದಾಗ ಆ ಜಮೀನಿನಲ್ಲಿರುವ ಎಲ್ಲಾ ಮಣ್ಣನ್ನು ಸಂಗ್ರಹಿಸುವುದು ಮತ್ತು ವಿಶ್ಲೇಷಣೆ ಮಾಡುವುದು ಅಸಾಧ್ಯ.. ತೋಟಗಾರಿಕಾ ಬೆಳೆಯ ಬೇರುಗಳು ಹರಡಿರುವ ಮಣ್ಣಿನ ಎಲ್ಲಾ ಭಾಗದ ಮಾಹಿತಿಯು ಅವಶ್ಯಕವಾದರೂ ಮಣ್ಣು ಪರೀಕ್ಷೆಗೆ ಸಾಧಾರಣವಾಗಿ ಮೇಲ್ಪದರದ ಮಣ್ಣನ್ನೇ ಉಪಯೋಗಿಸುತ್ತಾರೆ ಏಕೆಂದರೆ ಬಹುತೇಕ ಎಲ್ಲಾ ಬೆಳೆಗಳ ಬೇರಿನ ಸಾಂದ್ರತೆಯು ಮಣ್ಣಿನ ಮೇಲ್ಪದರದಲ್ಲಿಯೇ ಯಥೇಚ್ಛವಾಗಿರುತ್ತದೆ. ಎಲ್ಲಾ ಬೆಳೆಗಳಿಗೆ ಹಾಕುವ ಗೊಬ್ಬರ, ರಸಗೊಬ್ಬರ, ಸುಣ್ಣ ಹಾಗು ಇತರ ರಸಾಯನಿಕಗಳನ್ನು ಮೇಲ್ಪದರದಲ್ಲಿಯೇ ಬೆರೆಸುತ್ತೇವೆ. ಪೋಷಕಾಂಶಗಳ ಮಟ್ಟದ ಬದಲಾವಣೆಯು ಮೇಲ್ಪದರದಲ್ಲಿ ಶೀಘ್ರವಾಗಿ ಆಗುತ್ತದೆ. ಕೆಳಪದರದಲ್ಲಿ ಈ ಬದಲಾವಣೆಯು ತುಂಬಾ ಕಡಿಮೆಯಾಗಿರುತ್ತದೆ. ಉಪಯೋಗಕರವಾದ ಸೂಕ್ಷ್ಮಾಣು ಜೀವಿಗಳ ಚಟುವಟಿಕೆಗಳು ಸಹ ಮೇಲ್ಪದರದಲ್ಲಿ ಹೆಚ್ಚಾಗಿರುತ್ತದೆ.
ಮಣ್ಣು ಮಾದರಿಯನ್ನು ಯಾವಾಗ ತೆಗೆಯಬೇಕು
1. ಜಮೀನಿನ ಬೆಳೆ ಕಟಾವು ಆದನಂತರ.
2. ತೋಟಗಾರಿಕಾ ಬೆಳೆಗಳಲ್ಲಿ ಪಸಲು ಚೆನ್ನಾಗಿ ಬಲಿತ ನಂತರ.
3. ಜಮೀನಿಗೆ ರಸಗೊಬ್ಬರ, ಸುಣ್ಣ ಹಾಕುವ ಮೊದಲು.
4. ರಸಗೊಬ್ಬರ ಹಾಕಿದ ಕನಿಷ್ಠ 3 ತಿಂಗಳ ನಂತರ.
5. ಬದುಗಳ ಪಕ್ಕದಲ್ಲಿ, ದೋಡ್ಡ ಮರಗಳ ಕೆಳಗೆ, ಕಾಲುದಾರಿಯ ಪಕ್ಕದಲ್ಲಿ, ತಿಪ್ಪೆಗುಂಡಿಯ ಸಮೀಪ ಅಥಾವ ಗೊಬ್ಬರ ರಾಶಿ ಮಾಡಿದ ಸ್ಥಳಗಳಿಂದ, ನೀರು ನಿಂತ ಸ್ಥಳಗಳಿಂದ ಮಾದರಿಯನ್ನು ಸಂಗ್ರಹಿಸಬಾರದು.
ಮಾದರಿ ಸಂಗ್ರಹಿಸುವ ವಿದಾನ
1. ಜಮೀನಿನಲ್ಲಿ ಮೊದಲು ತಿರುಗಾಡಿ ಭೂಮಿಯ ಇಳಿಜಾರು, ಬಣ್ಣ. ಕಣಗಳ ವಿನ್ಯಾಸ. ನಿರ್ವಹಣೆ ಪದ್ದತಿಗಳಲ್ಲಿ ಇರುವ ವ್ಯತ್ಯಾಸವನ್ನು ಪರಿಶೀಲಿಸಿ ಏಕರೀತಿಯ ತುಂಡುಗಳನ್ನಾಗಿ ವಿಂಗಡಿಸಬೇಕು.
2. ಮಣ್ಣಿನ ಮಾದರಿ ತೆಗೆಯಲು ಗುದ್ದಲಿ, ಹಾರೆ, ಪಿಕಾಸಿ ಬಳಸಬಹುದು.
3. ಜಮೀನಿನ ಮಾದರಿಯನ್ನು ಅನುಸರಿಸಿ ಸಾದಾರಣ 2-3 ಎಕರೆಗೆ ಒಂದು ಸಂಚಿತ ಮಾದರಿಯನ್ನು ಸಂಗ್ರಹಿಸಬೇಕು.
4. ಮಣ್ಣಿನ ಮಾದರಿ ಸಂಗ್ರಹಿಸುವ ಮೊದಲು ಮಣ್ಣು ಸಂಗ್ರಹಿಸುವ ಭೂಮಿಯ ಮೇಲ್ಪಾಗದಲ್ಲಿರುವ ಕಲ್ಲು, ಕಸ, ಕಡ್ಡಿ, ಹುಲ್ಲು ಇತ್ಯಾದಿ ತೆಗೆದು ಸ್ವಚ್ಚಗೊಳಿಸಬೇಕು.
5. ನಂತರ ಆಕಾರದಲ್ಲಿ ಗದ್ದೆ ಇತ್ಯಾದಿಗಳಲ್ಲಿ 6 ಅಂಗುಲ ಆಳ, ತೋಟಗಾರಿಕಾ ಬೆಳೆಗಳಲ್ಲಿ 12 ಅಂಗುಲ ಆಳದಲ್ಲಿ ಗುಂಡಿ ತೋಡಿ ಒಳಗಿರುವ ಎಲ್ಲಾ ಮಣ್ಣನ್ನು ಹೊರಹಾಕಬೇಕು. ನಂತರ ಭೂಮಿಯ ಮೇಲ್ಬಾಗದಿಂದ ತಳದವರೆಗೆ ಒಂದು ಭಾಗದಿಂದ ಒಂದು ಇಂಚು ದಪ್ಪದಲ್ಲಿ ಮಣ್ಣನ್ನು ಕೆರೆದು ತೆಗೆಯಬೇಕು ಇದನ್ನು ಶುದ್ದವಾದ ಬಾಣಲೆ ಅಥವಾ ಬಕೆಟ್‍ನಲ್ಲಿ ಸಂಗ್ರಹಿಸಬೇಕು.
6. ಇದೇ ರೀತಿ ಜಮೀನಿನ ಬೇರೆ ಬೇರೆ ಬಾಗಗಳಲ್ಲಿ ಸುಮಾರು 10-12 ಕಡೆಗಳಲ್ಲಿ ಉಪಮಾದರಿಯನ್ನು ತೆಗೆದು ಅದರಲ್ಲಿರುವ ಕಲ್ಲು, ಬೇರು, ಇತ್ಯಾದಿಗಳನ್ನು ತೆಗೆದು, ಚೆನ್ನಾಗಿ ಮಿಶ್ರಮಾಡಬೇಕು. ಹೀಗೆ ಸಂಗ್ರಹಿಸಿದ ಮಾದರಿಯ ತೂಕವು ಸುಮಾರು 8-10 ಕೆ.ಜಿ. ಇರಬಹುದು, ಆದರೆ ಮಣ್ಣಿನ ವಿಶ್ಲೇಷಣೆ ಕೇವಲ 1/2 ಕೆ.ಜಿ. ಮಣ್ಣು ಸಾಕಾಗುವುದರಿಂದ ಕ್ವಾರ್ಟರಿಂಗ್ ತಂತ್ರಜ್ಞಾನ ಬಳಸಿ ಅವಶ್ಯಕ ಮಣ್ಣನ್ನು ತೆಗೆಯಬೇಕು.
7. ಕ್ವಾರ್ಟರಿಂಗ್ ತಂತ್ರಜ್ಞಾನವೆಂದರೆ ಸಂಗ್ರಹಿಸಿದ ಎಲ್ಲಾ ಉಪಮಾದರಿಗಳನ್ನು ಚೆನ್ನಾಗಿ ಮಿಶ್ರಣಮಾಡಿ ತೇವಾಂಶವಿದ್ದರೆ ಒಂದರೆಡು ದಿನ ನೆರಳಿನಲ್ಲಿ ಒಣಗಿಸಿ ಅಗಲವಾದ ಪಾಲಿಥಿನ್ ಹಾಳೆ ಅಥಾವ ಬಟ್ಟೆಯ ಮೇಲೆ ವೃತ್ತಾಕಾರವಾಗಿ ಅಥಾವ ಚೌಕಾಕಾರವಾಗಿ 1 ಅಂಗುಲ ದಪ್ಪದಲ್ಲಿ ಹರಡಿ, ಕೈಯಿಂದಲೆ ಒಂದು ಅಧಿಕ ಚಿಹ್ನೆ ಹಾಕಿ(+) ನಾಲ್ಕು ಭಾಗಗಳಾಗಿ ಮಾಡಬೇಕು ವಿರುದ್ದ ದಿಕ್ಕಿನ ಯಾವುದೇ ಎರಡು ಭಾಗಗಳನ್ನು ತೆಗೆದುಹಾಕಬೇಕು. ಉಳಿದ ಮಣ್ಣನ್ನು ಮತ್ತೆ ಬೆರೆಸಿ ಇದೇ ರೀತಿಯಾಗಿ 3-4 ಬಾರಿ ಪುನರಾವರ್ತಿಸಿ ಕೊನೆಗೆ 1/2 ಕೆ.ಜಿ. ಮಣ್ಣನ್ನು ಸಂಗ್ರಹಿಬೇಕು.
ಮಣ್ಣು ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸುವ ವಿಧಾನ
ಸಂಗ್ರಹಿಸಿದ ಮಣ್ಣಿನ ಮಾದರಿಯನ್ನು ಸೂಕ್ತ ಅಳತೆಯ ಬಟ್ಟೆ/ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ, ಚೀಲದೊಳಗೆ ವಿವರಗಳನ್ನು ಒಳಗೊಂಡ ಗುರುತಿನ ಚೀಟಿಯನ್ನು ಇಡಬೇಕು. ಗುರುತಿನ ಚೀಟಿಯಲ್ಲಿ ರೈತನ ವಿಳಾಸ, ಪೋನ್ ನಂಬರ್, ಮಣ್ಣಿನ ಮಾದರಿಯ ಅನುಕ್ರಮ ಸಂಖ್ಯೆ, ಸರ್ವೆನಂಬರ್ ಅಥಾವ ಜಮೀನಿನ ಗುರುತು, ಮಾದರಿ ತೆಗೆದ ಆಳ, ಬೆಳೆಯುತ್ತಿರುವ ಬೆಳೆ, ಕಳೆದ ಮೂರು ವರ್ಷದ ಸರಾಸರಿ ಇಳುವರಿ, ಬಳಸಿದ ಗೊಬ್ಬರ ಇನ್ನಿತರ ವಿವರಗಳನ್ನು ನೀಡಿ ಮಣ್ಣು ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಬೇಕು.
ಮಣ್ಣು ಪರೀಕ್ಷಾ ಕೇಂದ್ರದಲ್ಲಿ ಮಣ್ಣಿನ ರಸಸಾರ ಪ್ರಧಾನ ಪೋಷಕಾಂಶಗಳಾದ ಸಾರಜನಕ, ರಂಜಕ ಹಾಗು ಪೊಟ್ಯಾಷ್ ದೊರೆಯುವ ಪ್ರಮಾಣವನ್ನು ನಿರ್ಧರಿಸಲಾಗುವುದು. ಇವುಗಳ ಆದಾರದ ಮೇಲೆ ಮಣ್ಣನ್ನು ಹುಳಿ/ಕ್ಷಾರೀಯ, ಕಡಿಮೆ, ಮದ್ಯಮ ಮತ್ತು ಅಧಿಕ ಪಲವತ್ತತೆ ಎಂದು ವಿಂಗಡಿಲಾಗುವುದು.
ಮಣ್ಣು ಪರೀಕ್ಷೆಯ ಆಧಾರದ ಮೇಲೆ ಸಮಾಸ್ಯಾತ್ಮಕ ಮಣ್ಣುಗಳಾದ ಹುಳಿ ಮಣ್ಣಿಗೆ ಶಿಪಾರಸ್ಸು ಮಾಡಿರುವ ಪ್ರಮಾಣದಲ್ಲಿ ಸುಣ್ಣ ಹರಡಬೇಕು. ಕ್ಷಾರ ಮಣ್ಣಿಗೆ ಶಿಫಾರಸ್ಸು ಮಾಡಿರುವ ಪ್ರಮಾಣದಲ್ಲಿ ಜಿಪ್ಸಂ ಸೇರಿಸಬೇಕು.
ಪೋಷಕಾಂಶಗಳ ಫಲವತ್ತತೆಯ ಆಧಾರದ ಮೇಲೆ ಶಿಪಾರಸ್ಸು ಮಾಡಿದ ರಾಸಾಯನಿಕ ಗೊಬ್ಬರಗಳ ಪ್ರಮಾಣದಲ್ಲಿ ಬದಲಾವಣೆ ಮಾಡಬೇಕಾಗುತ್ತದೆ. ಪೋಷಕಾಂಶಗಳು ಮಧ್ಯಮ ಫಲವತ್ತತೆಗೆ ಸೇರಿದಲ್ಲಿ ಶಿಪಾರಸ್ಸಿನಲ್ಲಿ ಯಾವುದೇ ಬದಲಾವಣೆ ಅವಶ್ಯಕ ಇರುವುದಿಲ್ಲ. ಕಡಿಮೆ ಅಥವಾ ಹೆಚ್ಚು ಫಲವತ್ತತೆಯಾಗಿದಲ್ಲಿ ಗೊಬ್ಬರದ ಪ್ರಮಾಣದಲ್ಲಿ ಬದಲಾವಣೆ ಮಾಡಬೇಕಾಗುತ್ತದೆ. ಒಮ್ಮೆ ಮಣ್ಣು ಪರೀಕ್ಷೆ ಮಾಡಿರುವ ಶಿಫಾರಸನ್ನು ಮುಂದಿನ ಮೂರುವರ್ಷಗಳವರೆಗೆ ಬಳಸಬಹುದು.