MTF ಯೋಜನೆಯನ್ನು ಮುಂದುವರೆಸಲು ಅನುಮೋದನೆ ದೊರೆತಿದ್ದು, 25 ಎಕರೆ ಒಳಗಿನ ಎಲ್ಲಾ ಸಣ್ಣ ಕಾಫಿ ಬೆಳೆಗಾರರು ಕೆಳಕಂಡ ಕೆಲಸಗಳಿಗೆ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು 2023 ರ ಅಕ್ಟೋಬರ್ , 31 ಕೊನೆಯ ದಿನವಾಗಿದೆ. ಆದ್ದರಿಂದ ಅರ್ಹ ಬೆಳೆಗಾರರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಕೋರಿದೆ.
1. ರಿಪ್ಲಾಂಟೇಶನ್ – 25 ವರ್ಷಕ್ಕೂ ಮೀರಿದ ಎತ್ತರದ ಅರೇಬಿಕಾ ಹಾಗೂ 15 ವರ್ಷ ಮೀರಿದ ಕುಬ್ಜ ಅರೇಬಿಕಾ ತಳಿಗಳು ಹಾಗೂ 40 ವರ್ಷ ಮೀರಿದ ರೊಬಸ್ಟಾ ಅನುತ್ಪಾದಕ ತೋಟಗಳಲ್ಲಿ, ಗಿಡಗಳನ್ನು ತೆಗೆದು ಹೊಸ ಗಿಡಗಳನ್ನು ಹಾಕಲು (ಮರುನಾಟಿ)
2. ಕೆರೆ/ಬಾವಿ
3. ನೀರಾವರಿ ವ್ಯವಸ್ಥೆ
ಸಹಾಯಧನವು ಕೆಳಕಂಡ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ:
1. 25 ಎಕರೆ ಒಳಗಿನ ವೈಯಕ್ತಿಕ ಸಣ್ಣ ಬೆಳೆಗಾರರಿಗೆ ಮಾತ್ರ ಅನ್ವಯವಾಗುವುದು
2. ಯಾಂತ್ರೀಕರಣ ಹೊರತುಪಡಿಸಿ, ಕಳೆದ ಹತ್ತು ವರ್ಷಗಳಲ್ಲಿ 2012-13 ರಿಂದ ಕಾಫಿ ಮಂಡಳಿಯಿಂದ ಯಾವುದೇ ಸಹಾಯಧನ ಪಡೆದಿರಬಾರದು.
3. ಸಾಮಾನ್ಯ ವರ್ಗದ ಬೆಳೆಗಾರರಿಗೆ ಸಹಾಯಧನ ಶೇ. 40. ಪರಿಶಿಷ್ಟ ಜಾತಿ ಮತ್ತು ಪಂಗಡದ ಬೆಳೆಗಾರರಿಗೆ ಸಹಾಯಧನ ಶೇ. 50.
4. ಮೇಲಿನ ಯಾವುದೇ ಒಂದು ಕೆಲಸಕ್ಕೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ.
ಅಗತ್ಯವಿರುವ ದಾಖಲೆಗಳು:
a. ಅರ್ಜಿ (ಕಾಫಿ ಮಂಡಳಿಯ ಕಛೇರಿಯಲ್ಲಿ ಲಭ್ಯ) ಅಥವಾ www.indiacoffee.org ವೆಬ್ ಸೈಟ್ ನೋಡಬಹುದು
b. ಸಹಿ ಮಾಡಿದ ಪಾಸ್ ಪೋರ್ಟ್ ಅಳತೆಯ ಫೋಟೊ
c. ಹಿಡುವಳಿದಾರರ ಹೆಸರಲ್ಲಿ ಇರುವ ಎಲ್ಲಾ ಕಾಫಿ ತೋಟಗಳ ಪಹಣಿಗಳು (RTC)
d. ಸ್ವಯಂ ಸಹಿ ಮಾಡಿದ ಅಂದಾಜು ನಕ್ಷೆ ಹಾಗೂ ಚಕ್ಕುಬಂದಿ
e. ಖಾತಾ ನಕಲು/ಮ್ಯುಟೇಶನ್/ಪಟ್ಟೆ ಪುಸ್ತಕ
f. ಕೆಲಸಗಳಿಗೆ ತಗಲುವ ಅಂದಾಜು ವೆಚ್ಛ ಹಾಗೂ ಪ್ಲಾನ್
g. ಸ್ಪ್ರಿಂಕ್ಲರ್ / ಡ್ರಿಪ್ ನೀರಾವರಿ ಉಪಕರಣಗಳಿಗೆ ಕೊಟೇಶನ್
h. ಎಲ್ಲಾ ದಾಖಲಾತಿಗಳ ಮೂಲ ಪ್ರತಿ, ಸ್ಕ್ಯಾನ್ ಮಾಡಿದ ದಾಖಲಾತಿಗಳು
i. ಮೊದಲು ಬಂದವರಿಗೆ ಮೊದಲ ಆಧ್ಯತೆ
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕಾಫಿ ಮಂಡಳಿಯ ಕಛೇರಿಯನ್ನು ಸಂಪರ್ಕಿಸುವುದು:
MUKHARIB D S
Junior Liaison officer & Scientist Agronomy
Balele and Gonikoppal
Coffee Board
South kodagu-571213
M-9449063057